Connect with us

    DAKSHINA KANNADA

    Kadaba: ಸೈನಿಕನ ಪತ್ನಿಯ ಮೇಲೆ ನಾಲ್ವರಿಂದ ಹಲ್ಲೆ- ಆಸ್ಪತ್ರೆಗೆ ದಾಖಲು..!

    Published

    on

    ಸೈನಿಕನ ಪತ್ನಿಯ ಮೇಲೆ ಪಕ್ಕದ ಮನೆಯ ನಾಲ್ವರು ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಕಲ್ಲುಗುಡ್ಡೆ ಎಂಬಲ್ಲಿ  ನಡೆದಿದೆ. 

    ಕಡಬ: ಸೈನಿಕನ ಪತ್ನಿಯ ಮೇಲೆ ಪಕ್ಕದ ಮನೆಯ ನಾಲ್ವರು ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಕಲ್ಲುಗುಡ್ಡೆ ಎಂಬಲ್ಲಿ ನಡೆದಿದೆ.

    ಕಲ್ಲುಗುಡ್ಡೆಯ ಆರ್ಲ ನಿವಾಸಿ ಸೈನಿಕ ಅಝೀಝ್ ಅವರ ಪತ್ನಿ ಫೌಝಿಯಾ ಹಲ್ಲೆಗೊಳಗಾದವರು.

    ಜಾಗದ ತಕರಾರಿನ ವಿಚಾರದಲ್ಲಿ ಈ ಹಲ್ಲೆ ಕೃತ್ಯ ನಡೆದಿದೆ ಎಂದು ತಿಳಿದು ಬಂದಿದೆ.

    ಜಾಗದ ವಿಚಾರದಲ್ಲಿ ವಿನಾ: ಕಾರಣ ತಂಡವೊಂದು ಪ್ರತಿ ನಿತ್ಯ ಫೌಝಿಯಾ ಮನೆಯವರ ಜತೆ ಜಗಳ ನಡೆಸುತ್ತಿತ್ತು ಎಂದು ಆರೋಪಿಸಲಾಗಿದೆ.

    ಈ ಹಿನ್ನೆಲೆಯಲ್ಲಿ ಫೌಝಿಯಾ ಅವರು ಕಲ್ಲುಗುಡ್ಡೆಯಲ್ಲಿರುವ ತಂದೆಯ ಮನೆಗೆ ಹೋಗಿದ್ದರು.

    ನಿನ್ನೆ ಈ ತಂಡ ಫೌಝಿಯಾ ಅವರ ತಂದೆಯ ಮೇಲೆ ಹಲ್ಲೆಗೆ ಮುಂದಾಯಿತು.

    ಈ ಸಂದರ್ಭದಲ್ಲಿ ತಡೆಯಲು ಹೋಗಿದ್ದ ಫೌಝಿಯಾ ಮೇಲೆಯೂ ತಂಡ ಹಲ್ಲೆ ನಡೆಸಿತು.

    ಇದರಿಂದ ಫೌಝಿಯಾ ಗಾಯಗೊಂಡಿದ್ದು, ಅವರು ಕಡಬ ಸರಕಾರಿ ಆಸ್ಪತ್ರೆಗೆ ದಾಖಲಾಗಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ.

     

     

    DAKSHINA KANNADA

    ನೆಲ್ಯಾಡಿಯಲ್ಲಿ ವರುಣತಾಂಡವ ; 4 ಮನೆ, 2 ವಿದ್ಯುತ್ ಕಂಬಗಳಿಗೆ ಹಾನಿ

    Published

    on

    ಉಪ್ಪಿನಂಗಡಿ: ಕರಾವಳಿ ಭಾಗದಲ್ಲಿ ಮಳೆಗಾಲ ಜೂನ್ ತಿಂಗಳಿನಿಂದಲೇ ಆರಂಭವಾಗಿದೆ. ಆದರೆ ಮಳೆ ಮಾತ್ರ ಬೇಕೋ ಬೇಡವೋ ಎಂಬಂತೆ ಬರುತ್ತಿದೆ. ಇತ್ತ ಬಿಸಿಲಿದ್ದು, ಅತ್ತ ಕಣ್ಣು ಹಾಯಿಸುವಾಗ ಮಳೆ ಬರುತ್ತದೆ. ಯಾವ ಸಮಯದಲ್ಲಿ ಏನಾಗುವುದು ಎಂದು ಊಹಿಸಲೂ ಅಸಾದ್ಯ. ನಿನ್ನೆ ಉಪ್ಪಿನಂಗಡಿ ಸಮೀಪದ ನೆಲ್ಯಾಡಿಯ ಜನತಾ ಕಾಲನಿ ಪರಿಸರದಲ್ಲಿ ಬೀಸಿದ ಭಾರೀ ಮಳೆಗೆ 4 ಮನೆಗಳ ಛಾವಣಿ ಹಾನಿಗೀಡಾಗಿ 2 ವಿದ್ಯುತ್ ಕಂಬಗಳು ಮುರಿದಿದೆ.

    ನೆಲ್ಯಾಡಿಯ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಬಳಿ ಇರುವ ಕಾಲನಿಯ ನಿವಾಸಿಗರಾದ ಐತ್ತಪ್ಪ, ಐಸುಬು, ಬಾಬು ಆಚಾರಿ, ಲೋಕೇಶ್ ಅವರ ಮನೆಯ ಮೇಲ್ಛಾವಣಿಯು ಗಾಳಿಯ ವೇಗಕ್ಕೆ ಸಿಲುಕಿ ಹಾನಗೀಡಾಗಿದ್ದು, ಸಮೀಪದಲ್ಲಿದ್ದ ಎರಡು ವಿದ್ಯುತ್ ಕಂಬಗಳು ಮುರಿದಿದೆ. ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ , ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    Continue Reading

    DAKSHINA KANNADA

    ಅಬ್ಬರದ ಹೆಜ್ಜೆಯಿಟ್ಟುಕೊಂಡು ಬರುತ್ತಿದೆ ”ಕಲ್ಜಿಗ”

    Published

    on

    ಮಂಗಳೂರು: ಹಿಮಾನಿ ಫಿಲಂಸ್ ಬ್ಯಾನರ್‌ನಡಿ ನಿರ್ಮಾಣಗೊಂಡಿರುವ “ಕಲ್ಜಿಗ” ಕನ್ನಡ ಸಿನಿಮಾ ಸೆ.13 ರಂದು ರಾಜ್ಯಾದಂತ್ಯ ತೆರೆಕಾಣಲಿದೆ. ಕುತೂಹಲಕಾರಿಯಾಗಿರುವ ಶೀರ್ಷಿಕೆಯಲ್ಲೇ ಸೆಳೆತವೊಂದನ್ನು ಬಚ್ಚಿಟ್ಟುಕೊಂಡಿರುವ ಈ ಚಿತ್ರದ ಟ್ರೈಲರ್ ಭಾರತ್ ಮಾಲ್‌ನ ಭಾರತ್ ಸಿನಿಮಾಸ್ ನಲ್ಲಿ ಅನಾವರಣಗೊಂಡಿತ್ತು. ಚಿತ್ರದ ಟ್ರೈಲರ್ ಎ2 ಫಿಲ್ಮ್ ಯೂಟ್ಯೂಬ್‌ ಚಾನೆಲ್‌ನಲ್ಲಿ ಬೆಡುಗಡೆಯಾಗಿದ್ದು, ಜನರಿಂದ ಅದ್ಬುತ ಪ್ತತಿಕ್ರಿಯೆ ದೊರಕಿದೆ ಎಂದು ನಿರ್ದೇಶಕ ಸುಮನ್ ಸುವರ್ಣ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.

    ಶರತ್ ಕುಮಾರ್ ಎ.ಕೆ ಈ ಚಿತ್ರದ ನಿರ್ಮಾಪಕರಾಗಿದ್ದಾರೆ. “ಕಲ್ಜಿಗ” ದ ಕಥೆ ಚಿತ್ರಕಥೆ ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದು, ಹಂಸಲೇಖ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ನಟ ಅರ್ಜುನ್ ಕಾಪಿಕಾಡ್ ನಾಯಕನಾಗಿ ಹಾಗೂ ಸುಶ್ಮಿತಾ ಭಟ್ ನಾಯಕಿಯಾಗಿ ನಟಿಸಿದ್ದಾರೆ. ನಟರಾದ ಗೋಪಿನಾಥ್ ಭಟ್, ಜ್ಯೋತಿಷ್ ಶೆಟ್ಟಿ, ಮಾನಸಿ ಸುಧೀರ್, ವಿಜಯ್ ಶೋಭರಾಜ್ ಪಾವೂರ್, ಶ್ಲಾಘಾ ಸಾಲಿಗ್ರಾಮ ಮುಖ್ಯ ಭೂಮಿಕೆಯಲ್ಲಿದ್ದಾರೆ. ಪ್ರಸಾದ್ ಕೆ. ಶೆಟ್ಟಿ ಹಿನ್ನಲೆ ಸಂಗೀತ ನೀಡಿದ್ದಾರೆ.

    ಮಂಗಳೂರು, ಉಡುಪಿ ಸುತ್ತಮುತ್ತಲಿನ ಪ್ರದೆಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸೆ. 13 ರಂದು ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮಡಿಕೇರಿ, ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಮುಂಬಾಯಿ ಹಾಗೂ ಗಲ್ಫ್ ದೇಶಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಟ್ರೈಲರನ್ನು 14 ಲಕ್ಷಕ್ಕಿಂತಲೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಮಂಗಳೂರು ಕನ್ನಡ ಭಾಷಾ ಶೈಲಿಯಲ್ಲಿ ಚಿತ್ರ ತಯಾರಾಗಿದೆ. ಧರ್ಮದ ದಾರಿಯಲ್ಲಿ ಅಧರ್ಮದ ನೆರಳು ಬಿದ್ದ ಬಳಿಕ ಘಟಿಸುವ ರೋಚಕ ಕಥನ “ಕಲ್ಜಿಗ”ದಲ್ಲಿದೆ. ಸಚಿನ್ ಶಟ್ಟಿ ಛಾಯಗ್ರಹಣ, ಯಶ್ವಿನ್ ಕೆ. ಶೆಟ್ಟಿಗಾರ್‌ನ ಸಂಕಲನ ಈ ಚಿತ್ರಕ್ಕಿದೆ. ಕಾಂತಾರ ಖ್ಯಾತಿಯ ಸನಲ್ ಗುರು ಕ್ರಿಯೇಟಿವ್ ಹೆಡ್ ಆಗಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ರಾಧಾಕೃಷ್ಣ ಮಾಣಿಲ, ಪ್ರೊಡಕ್ಷನ್ ಮ್ಯಾನೇಜರ್ ಆಗಿ ಸಂದೀಪ್ ಶೆಟ್ಟಿ ಇದ್ದಾರೆ. ಗಿರ್ಗಿಟ್, ಸರ್ಕಸ್, ಗಮ್ಜಾಲ್ ಚಿತ್ರಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದ ಸುಮನ್ ಸುವರ್ಣ “ಕಲ್ಜಿಗ” ದ ಮೂಲಕ ಸ್ವತಂತ್ರ್ಯ ನಿರ್ದೇಶಕರಾಗಿದ್ದಾರೆ.

    Continue Reading

    DAKSHINA KANNADA

    ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಗೆ ಗೌರವ ಡಾಕ್ಟರೇಟ್ ಪ್ರದಾನ

    Published

    on

    ಮಂಗಳೂರು : ಕರಾವಳಿ ಮೂಲದ ಕನ್ನಡ ಚಲನ ಚಿತ್ರ ರಂಗದ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರಿಗೆ ಗೌರವ ಡಾಕ್ಟರೇಟ್ ಲಭಿಸಿದೆ.

    ಬೆಂಗಳೂರು ವಿವಿಯು ಈ ಗೌರವ ಡಾಕ್ಟರೇಟ್ ನೀಡಿ ಗುರುಕಿರಣ್ ಅವರನ್ನು ನೀಡಿ ಗೌರವಿಸಿದೆ. ಸೆಪ್ಟಂಬರ್ 10 ರಂದು ನಡೆದಿದ್ದ ವಿವಿ ಘಟಿಕೋತ್ಸವದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

    ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಬೆಂಗಳೂರು ವಿವಿಯ ಈ ಪ್ರಶಸ್ತಿಯಿಂದ  ಗುರು ಕಿರಣ್ ಇನ್ನು ಮುಂದೆ ಡಾಕ್ಟರ್ ಗುರುಕಿರಣ್ ಆಗಲಿದ್ದಾರೆ.

    Continue Reading

    LATEST NEWS

    Trending