Connect with us

DAKSHINA KANNADA

ಡಿ. 18 ರಂದು ಮಂಗಳೂರಿನಲ್ಲಿ ಜನಸ್ಪಂದನ ಕಾರ್ಯಕ್ರಮ

Published

on

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಡಿ.18 ರಂದು ಬೆಳಗ್ಗೆ 10 ಗಂಟೆಯಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಯಲಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಬೆಳಗ್ಗೆ 10.30ಕ್ಕೆ ಉದ್ಘಾಟನೆ ನೆರವೇರಲಿದ್ದು, ಶಾಸಕರಾದ ಡಿ. ವೇದವ್ಯಾಸ ಕಾಮತ್ ಮತ್ತು ಡಾ. ವೈ. ಭರತ್ ಶೆಟ್ಟಿ ಅವರು ನೇತೃತ್ವ ವಹಿಸಲಿದ್ದಾರೆ ಎಂದರು. ಪಾಲಿಕೆ ವ್ಯಾಪ್ತಿಯ ಸಮಸ್ಯೆಗಳಾದ ರಸ್ತೆ, ಚರಂಡಿ, ಒಳಚರಂಡಿ, ನೀರು, ನೀರಿನ ಬಿಲ್, ಉದ್ದಿಮೆ ಪರವಾನಗಿ, ಕಟ್ಟಡ/ಮಾರುಕಟ್ಟೆ/ವಾಣಿಜ್ಯ ಸಂಕೀರ್ಣ, ತ್ಯಾಜ್ಯ ವಿಲೇವಾರಿ, ಇ-ಖಾತ, ಕಟ್ಟಡ ತೆರಿಗೆ ಸಹಿತ ವಿವಿಧ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಕಂಡುಕೊಳ್ಳಬಹುದು. ಜನರೊಡನೆ ನೇರವಾಗಿ ಭಾಗವಹಿಸಿ ಅಹವಾಲು ಸ್ವೀಕರಿಸಿ, ಸಮಸ್ಯೆಗೆ ಪರಿಹಾರ ನೀಡಲಾಗುವುದು ಎಂದು ಅವರು ತಿಳಿಸಿದರು. ಪ್ರಥಮ ಹಂತದಲ್ಲಿ 10,000 ರೂ. ನಂತರ ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡುವವರಿಗೆ ಬಡ್ಡಿ ಸಹಾಯ ಧನ ಸೌಲಭ್ಯದೊಂದಿಗೆ ಸಾಲ ಮರುಪಾವತಿಸಿದ ಬಳಿಕ ದ್ವಿತೀಯ ಹಂತದಲ್ಲಿ 20,000 ರೂ., ನಂತರ ತೃತೀಯ ಹಂತದಲ್ಲಿ 50,000 ರೂ. ಬ್ಯಾಂಕ್ ಸಾಲ ಸೌಲಭ್ಯ ದೊರೆಯಲಿದೆ.

ಈ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ ನೀಡುವ ಸಾಲ ಸೌಲಭ್ಯವನ್ನು ಹಾಲು ಮತ್ತು ದಿನಪತ್ರಿಕೆ ವಿತರಕರು, ಡೋಬಿ ಮತ್ತು ಇಸ್ತ್ರಿ ಸೇವೆ, ಹಳೆಯ ಪಾತ್ರೆಗಳನ್ನು ವ್ಯಾಪಾರ ಮಾಡುವವರು, ಬಡಗಿ, ಚಮ್ಮಾರರು, ಬಿದಿರಿನ ಬುಟ್ಟಿ, ಬೊಂಬು ಬಾಸ್ಕೆಟ್, ಏಣಿ ವ್ಯಾಪಾರಸ್ಥರು, ಹೂವಿನ ಕುಂಡಗಳನ್ನು ಮಾಡುವವರು, ನೇಯ್ಗೆಗಾರರು, ಎಳನೀರು ಮಾರಾಟಗಾರರು, ಆಹಾರ ತಯಾರಿಸಿ ಮಾರಾಟ ಮಾಡುವವರು (ಕ್ಯಾಟರಿಂಗ್ ಸರ್ವಿಸ್)ಇತ್ಯಾದಿ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರಿಗೆ ಕೂಡ ವಿಸ್ತರಿಸಲಾಗಿದೆ. ಅರ್ಹರು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ವ್ಯಾಪಾರ ಮಾಡುವ ಫೋಟೋ ತರಬೇಕು ಎಂದು ಅವರು ವಿವರಿಸಿದರು ಆರೋಗ್ಯ ವಿಭಾಗ, ಇಂಜಿನಿಯರಿಂಗ್ ವಿಭಾಗ, ನಗರ ಯೋಜನೆ ಮತ್ತು ಕಂದಾಯ ವಿಭಾಗಗಳ ಅಹವಾಲು ಸ್ವೀಕಾರಕ್ಕೆ ಪ್ರತ್ಯೇಕ ಕೌಂಟರ್ ಇರಲಿದೆ. ಸ್ವೀಕರಿಸಿದ ಅಹವಾಲು, ಸಮಸ್ಯೆಗಳು ಆನ್‌ಲೈನ್‌ನಲ್ಲಿ ನೋಂದಣಿಯಾಗುತ್ತದೆ. ಅದರ ಪ್ರಕಾರ ಕೆಲವೊಂದು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಇತ್ಯರ್ಥಗೊಳಿಸಲಾಗುವುದು. ಇನ್ನುಳಿದವು 15 ದಿನಗಳೊಳಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಉಪಮೇಯರ್ ಸುನೀತ, ಸ್ಥಾಯಿ ಸಮಿತಿ ಅಧ್ಯಕ್ಷರಾದ ವರುಣ್ ಚೌಟ, ಭರತ್ ಕುಮಾರ್, ಲೋಹಿತ್ ಅಮೀನ್, ಗಣೇಶ್ ಇದ್ದರು.

Click to comment

Leave a Reply

Your email address will not be published. Required fields are marked *

DAKSHINA KANNADA

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ: ಮೇ 19, 20ರಂದು ಆರೆಂಜ್ ಅಲರ್ಟ್‌

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇದೇ 18 ರಿಂದ 21 ರವರೆಗೆ ಬಿರುಸಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದೇ 19 ಮತ್ತು 20 ರಂದು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಆರೆಂಜ್ ಅಲರ್ಟ್‌ ಇರುವ ದಿನಗಳಲ್ಲಿ ಮಿಂಚು, ಗುಡುಗು, ಸಿಡಿಲುಗಳಿಂದ ಕೂಡಿದ ಭಾರಿ ಮಳೆಯಾಗಲಿದೆ. ಜಿಲ್ಲೆಯ ಕೆಲವೆಡೆ 11.55 ಸೆಂ.ಮೀ ನಿಂದ 20.44 ಸೆಂ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಇದೇ 18 ಮತ್ತು 21ರಂದು ಜಿಲ್ಲೆಯಲ್ಲಿ ಹಳದಿ ಅಲರ್ಟ್‌ ಘೋಷಿಸಲಾಗಿದೆ. ಕೆಲವೆಡೆ 6.45 ಸೆಂ.ಮೀ ನಿಂದ 11.55 ಸೆಂ.ಮೀವರೆಗೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Continue Reading

DAKSHINA KANNADA

ಕಾರಿನಲ್ಲಿ ಮಗುವನ್ನು ಮರೆತು ಹೋದ ತಾಯಿ..! ಕಾರಿನಲ್ಲೇ ಮಗುವಿನ ಅಂತ್ಯ…!

Published

on

ಮಂಗಳೂರು ( ರಾಜಸ್ಥಾನ ) :  ಮಕ್ಕಳ ಬಗ್ಗೆ ಪೋಷಕರು ಎಷ್ಟು ಮುಂಜಾಗ್ರತೆ ವಹಿಸಿದರೂ ಸಾಲದು. ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕು. ಆದ್ರೆ, ತಂದೆ ಮತ್ತು ತಾಯಿಯ ನಿರ್ಲಕ್ಷಕ್ಕೆ ಮೂರು ವರ್ಷದ ಬಾಲಕಿ ಅಸುನೀಗಿದ್ದಾಳೆ. ಹೌದು, ಮಗು ಕಾರಿನಲ್ಲಿ ಉಸಿರುಗಟ್ಟಿ ಸಾ*ವನಪ್ಪಿದ ಘಟನೆ ರಾಜಸ್ಥಾನದ ಕೋಟದಲ್ಲಿ ನಡೆದಿದೆ. ಮೃ*ತ ಮಗುವನ್ನು ಕೋಟಾದ ಇಂದ್ರ ಕಾಲೋನಿಯ ನಿವಾಸಿ ಪ್ರದೀಪ್ ಅವರ ಮಗಳು ಗರ್ವಿ (3) ಎಂದು ಗುರುತಿಸಲಾಗಿದೆ.

ಮದುವೆ ಸಂಭ್ರಮದಲ್ಲಿ ಕಳೆದುಹೋದ ದಂಪತಿ :

ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಾಲಕಿ ತನ್ನ ಪೋಷಕರೊಂದಿಗೆ ಕಾರಿನಲ್ಲಿ ಬಂದಿದ್ದರು. ಈ ವೇಳೆ ತಾಯಿ ತನ್ನ ಇನ್ನೊಬ್ಬ ಮಗಳ ಜೊತೆ ಕಾರಿನಿಂದ ಇಳಿದಿದ್ದಾರೆ. ಆದರೆ, ಬಾಲಕಿ ಗರ್ವಿ ಮಾತ್ರ ಕಾರಿನಲ್ಲೇ ಇದ್ದಳು. ಇತ್ತ ತಂದೆ ಕಾರನ್ನು ಪಾರ್ಕ್ ಮಾಡಿ, ಮಗು ಗರ್ವಿ ಕೂಡ ಅವಳ ತಾಯಿಯ ಜೊತೆಗಿದ್ದಾಳೆ ಎಂದು ಭಾವಿಸಿ, ಕಾರನ್ನು ಲಾಕ್ ಮಾಡಿ ತೆರಳಿದ್ದರು.

ಮದುವೆ ಸಮಾರಂಭದಲ್ಲಿ ಗಂಡ ಹೆಂಡತಿ ಇಬ್ಬರು ಮೈಮರೆತಿದ್ದರು. ಬ್ಯುಸಿಯಲ್ಲಿ ಯಾರೂ ತಮ್ಮ ಇನ್ನೊಂದು ಮಗುವಿನ ಬಗ್ಗೆ ಆಲೋಚಿಸಲೇ ಇದೆ. ಸುಮಾರು ಎರಡು ಗಂಟೆಗಳ ಬಳಿಕ ಪೋಷಕರಿಗೆ ಮಗು ಇಲ್ಲದ ಬಗ್ಗೆ ತಿಳಿದು ಬಂದಿದೆ. ಈ ವೇಳೆ ಇಡೀ ಮದುವೆ ಸಭಾಂಗಣ ಹುಡುಕಾಡಿದ್ದಾರೆ. ಬಳಿಕ ಕಾರಿನ ಬಳಿ ಬಂದಾಗ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿತ್ತು. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಮಗು ಅಷ್ಟರಲ್ಲೇ ಸಾ*ವನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ. ತಮ್ಮ ಸಂಭ್ರಮದಲ್ಲಿ ಮೈಮರೆತ ತಂದೆ – ತಾಯಿಯಿಂದಾಗಿ ಪುಟ್ಟ ಜೀವವೊಂದು ಬ*ಲಿಯಾಗಿದೆ.

Continue Reading

DAKSHINA KANNADA

ಪುಷ್ಪ 2 ರಿಲೀಸ್ ಡೇಟ್ ಬದಲು…? ಸ್ಪಷ್ಟನೆ ನೀಡಿದ ಚಿತ್ರ ತಂಡ

Published

on

ಮಂಗಳೂರು  : ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನ ಬಹು ನಿರೀಕ್ಷಿತ ಪುಷ್ಪ 2 ಚಿತ್ರ ಯಾವಾಗ ತೆರೆಗೆ ಬರುತ್ತೆ ಅಂತ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ನಡುವೆ ಸಿನೆಮಾ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ. ಆಗಸ್ಟ್‌ 15 ರಂದು ನಿಗದಿಯಾಗಿದ್ದ ಬಿಡುಗಡೆಯ ದಿನವನ್ನು ಬದಲಾಯಿಸಲಾಗಿದೆ. ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದ್ದು ಅಭಿಮಾನಿಗಳು ನಿರಾಶೆಗೊಂಡಿದ್ದಾರೆ.

ಎಡಿಟಿಂಗ್ ಸಮಸ್ಯೆಯಿಂದ ಪುಷ್ಪ 2 ರಿಲೀಸ್ ವಿಳಂಬವಾಗಲಿದೆ ಎಂಬ ಊಹಾಪೋಹಗಳು ಹರಡಿದೆ. ಪತ್ರಿಕೆಯೊಂದು ಈ ಬಗ್ಗೆ ವರದಿ ಮಾಡಿದ್ದು, ಆಂಟೋನಿ ರೂಬೆನ್‌ ಪುಷ್ಪ 2 ತಂಡದಿಂದ ಹೊರಬಂದಿದ್ದಾರೆ ಎಂದು ಹೇಳಿತ್ತು.
ಆಂಟೋನಿ ರೂಬೆನ್‌ ಜಾಗಕ್ಕೆ ನವೀನ್ ನೂಲಿ ಬರಲಿದ್ದು, ಪುಷ್ಪ 2 ಬಿಡುಗಡೆ ವಿಳಂಬವಾಗಲಿದೆ ಎಂದು ಹೇಳಿತ್ತು. ಇದು ಎಲ್ಲೆಡೆ ಸುದ್ದಿಯಾಗಿದ್ದು, ಸಿನೆಮಾ ರಿಲೀಸ್‌ನ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.
ಆದ್ರೆ, ಇದೊಂದು ಸುಳ್ಳು ಸುದ್ದಿಯಾಗಿದ್ದು, ನಿಗದಿತ ದಿನಾಂಕ ಆಗಸ್ಟ್‌ 15 ರಂದೇ ಸಿನೆಮಾ ರಿಲೀಸ್ ಆಗಲಿದೆ ಎಂದು ಸಿನೆಮಾ ತಂಡ ಸ್ಪಷ್ಟನೆ ನೀಡಿದೆ. ಅಲ್ಲೂ ಅರ್ಜುನ್‌ ಅವರ ಭಾಗದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಈ ಜೂನ್ ಅಂತ್ಯಕ್ಕೆ ಚಿತ್ರೀಕರಣ ಪೂರ್ಣಗೊಳ್ಳಲಿದೆ. ಹೀಗಾಗಿ ಎಡಿಟಿಂಗ್ ಕೂಡಾ ನಿರಾಂತಕವಾಗಿ ನಡೆಯಲಿದ್ದು, ಈಗಾಗಲೇ ಟೀಸರ್‌ ಕೂಡಾ ಭಾರೀ ಸದ್ದು ಮಾಡಿದೆ. ರಿಲೀಸ್ ಜೊತೆಗೆ ಬಾಕ್ಸ್‌ ಆಫೀಸಿನಲ್ಲಿ ಚಿಂದಿ ಉಡಾಯಿಸಲಿರುವ ಪುಷ್ಪಾ 2 ನಿಗದಿಯಾದ ದಿನದಂತೆ ಬಿಡುಗಡೆ ಆಗಲಿದೆ ಅಂತ ಸ್ಪಷ್ಟನೆ ನೀಡಿದ್ದಾರೆ.

Continue Reading

LATEST NEWS

Trending