Connect with us

FILM

ಜೈಲಿನಿಂದಲೇ ಪ್ರೇಯಸಿಗೆ ಮತ್ತೆ ಪತ್ರ ಬರೆದು ‘ಐ ಮಿಸ್ ಯೂ’ ಎಂದ ವಂಚಕ ಸುಕೇಶ್

Published

on

ಮುಂಬೈ : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ವಂಚಕ ಸುಕೇಶ್ ಚಂದ್ರಶೇಖರ್ ಮತ್ತೆ ಸುದ್ದಿಯಾಗಿದ್ದಾನೆ.
ಪ್ರೇಯಸಿ, ಬಾಲಿವುಡ್ ನಟಿ ಜಾಕ್ವೇಲಿನ್ ಫರ್ನಾಂಡಿಸ್‌ಗೆ ಜೈಲಿನಿಂದಲೇ ಮತ್ತೆ ಪತ್ರ ಬರೆದು ಪ್ರೇಯಸಿಯನ್ನು ಸಂಕಷ್ಟಕ್ಕೆ ನಿಲ್ಲಿಸಿದ್ದಾನೆ.


ಕ್ರಿಸ್‌ಮಸ್‌ ಹಬ್ಬದ ಹಿನ್ನೆಲೆಯಲ್ಲಿ ನಟಿ ಜಾಕ್ವೇಲಿನ್‌ಗೆ ಮತ್ತೆ ಪತ್ರ ಬರೆದಿರುವ ಸುಕೇಶ್ ಆಕೆಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾನೆ.


‘ಬೇಬಿ ನನಗೆ ನಿನ್ನ ಬಗ್ಗೆ ಖುಷಿ ಇದೆ. ನೀನು ಚಿತ್ರರಂಗಕ್ಕೆ ನೀಡಿದ ಕೊಡುಗೆ ಆಧರಿಸಿ DIAFA ಅವಾರ್ಡ್ ನೀಡಲಾಗಿದೆ. ಇದಕ್ಕೆ ನಿನಗೆ ಅಭಿನಂದನೆ. ನನಗೆ ಎಷ್ಟು ಖುಷಿ ಆಗಿದೆ ಎಂದು ಹೇಳಲು ಸಾಧ್ಯವೇ ಇಲ್ಲ. ನೀನು ನಿಜವಾಗಲೂ ಗ್ರೇಟ್ ಪರ್ಫಾರ್ಮರ್. ನೀನು ಬಿಳಿ ಗೌನ್​ನಲ್ಲಿ ಅದ್ಭುತವಾಗಿ ಕಾಣಿಸುತ್ತೀಯ’ ‘ರೆಡ್ ಅರೇಬಿಕ್ ಡ್ರೆಸ್ ಹಾಗೂ ಪಿಂಕ್ ಬಣ್ಣದ ಸೀರೆಯಲ್ಲಿ ನೀನು ಸಖತ್ ಆಗಿ ಕಾಣಿಸುತ್ತೀಯ. ನೀನು ನನ್ನ ಹಾರ್ಟ್ ಕದ್ದಿದ್ದೀಯಾ. ಈ ಜಗತ್ತಿನಲ್ಲಿರುವ ಏಕೈಕ ಜೀವಂತ ಏಂಜಲ್ ನೀನು. ಸೋ ಬ್ಯೂಟಿಫುಲ್ ಸೋ ಸ್ಟನ್ನಿಂಗ್. ಜಸ್ಟ್ ಲುಕಿಂಗ್ ಲೈಕ್ ಎ ವಾವ್’ ಎಂದು ಸುಕೇಶ್ ಪತ್ರದಲ್ಲಿ ಉಲ್ಲೇಖಿಸಿದ್ದಾನೆ.

FILM

ಜೊತೆಯಾಗಿ ಕಾಣಿಸಿಕೊಂಡ ಸೂಪರ್ ಸ್ಟಾರ್ – ಬಿಗ್ ಬಿ; ಸ್ಟೈಲಿಶ್ ಫೋಟೋ ವೈರಲ್

Published

on

ಬೆಂಗಳೂರು : ಸೂಪರ್ ಸ್ಟಾರ್ ರಜನಿಕಾಂತ್ 170 ನೇ ಸಿನಿಮಾ ‘ವೆಟ್ಟೈಯಾನ್‘ ಈಗಾಗಲೇ ನಿರೀಕ್ಷೆ ಹೆಚ್ಚಿಸಿದೆ. ಈಗಾಗಲೇ ಟೀಸರ್ ಬಹಳ ಸದ್ದು ಮಾಡಿದೆ. ಅಲ್ಲದೇ ಈ ಚಿತ್ರದಲ್ಲಿ ಸೂಪರ್ ಸ್ಟಾರ್ – ಬಿಗ್ ಬಿ ಜೊತೆಯಾಗ್ತಿರೋದು ವಿಶೇಷ. ಅದೂ 33 ವರ್ಷಗಳ ಬಳಿಕ. ಹಾಗಾಗಿ ಸಹಜವಾಗಿಯೇ ಚಿತ್ರದ ಕುರಿತು ನಿರೀಕ್ಷೆ ಹೆಚ್ಚಿದೆ.

ವೈರಲ್ ಆಯ್ತು ಫೋಟೋ :


ಇಬ್ಬರು ಸಿನಿ ದಿಗ್ಗಜರು ಜೊತೆಯಾಗೋದು ಅಂದ್ರೆ ಕೇಳ್ಬೇಕಾ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗುತ್ತದೆ. ಈ ಚಿತ್ರದ ಅಪ್ಡೇಟ್ಸ್ ಗಾಗಿ ರಜನಿಕಾಂತ್ ಹಾಗೂ ಅಮಿತಾಭ್ ಬಚ್ಚನ್ ಅಭಿಮಾನಿಗಳು ಕಾಯುತ್ತಿರೋದು ಸುಳ್ಳಲ್ಲ. ಇದೀಗಲೈಕಾ ಪ್ರೊಡಕ್ಷನ್ ಸಂಸ್ಥೆ ರಜನಿಕಾಂತ್ ಹಾಗೂ ಅಮಿತಾಭ್ ಬಚ್ಚನ್ ಒಟ್ಟಿಗೆ ಇರೋ ಫೋಟೋಗಳನ್ನು ಪೋಸ್ಟ್ ಮಾಡಿದೆ.


‘ಭಾರತೀಯ ಸಿನಿಮಾ ರಂಗದ ದಿಗ್ಗಜರು. ರಜನಿಕಾಂತ್ ಹಾಗೂ ಅಮಿತಾಭ್ ಬಚ್ಚನ್ ಮುಂಬೈನ ವೆಟ್ಟೈಯನ್ ಸಿನಿಮಾ ಸೆಟ್​ನಲ್ಲಿ ಎಂದು ಲೈಕಾ ಪ್ರೊಡಕ್ಷನ್ಸ್ ಟ್ವೀಟ್ ಮಾಡಿದೆ.

ಇದನ್ನೂ ಓದಿ : ಬಾಲಿವುಡ್ ಜನಪ್ರಿಯ ನಿರೂಪಕಿ ಭಾರತಿ ಸಿಂಗ್ ಆಸ್ಪತ್ರೆ ದಾಖಲು..!

ಈ ಫೋಟೋಗಳಲ್ಲಿ ರಜನಿಕಾಂತ್ ಹಾಗೂ ಅಮಿತಾಭ್ ಇಬ್ಬರೂ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ನೆಟ್ಟಿಗರು ಈ ಫೋಟೋಗಳನ್ನು ನೆಚ್ಚಿಕೊಂಡಿದ್ದು, ಕಮೆಂಟ್ಸ್ ಹರಿದು ಬರುತ್ತಿದೆ.

Continue Reading

FILM

ಟಿ ಆರ್ ಪಿ ಪಟ್ಟಿಯಲ್ಲಿ ಯಾವ ಧಾರಾವಾಹಿಗೆ ಸಿಕ್ಕಿದೆ ಮೊದಲ ಸ್ಥಾನ?

Published

on

ಬೆಂಗಳೂರು : ‘ಕಿರುತೆರೆ’ ಜನರ ನೆಚ್ಚಿನ ಮನರಂಜನಾ ತಾಣ. ಇಲ್ಲಿ ಸಾವಿರಾರು ಧಾರಾವಾಹಿಗಳು, ರಿಯಾಲಿಟಿ ಶೋ ಗಳದೇ ದರ್ಬಾರು. ಮನೆಮಂದಿಯೆಲ್ಲಾ ಕಿರುತೆರೆಯನ್ನು ನೆಚ್ಚಿಕೊಂಡಿದ್ದಾರೆ. ದೈನಂದಿನ ದಿನಚರಿಯಲ್ಲಿ ಧಾರಾವಾಹಿಗಳೂ ಸೇರಿಕೊಂಡಿವೆ. ತಮ್ಮ ನೆಚ್ಚಿನ ಧಾರಾವಾಹಿಗಳನ್ನು ನೋಡಲು ಕಾಯುತ್ತಿರುತ್ತಾರೆ.

ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಎಲ್ಲರೂ ಧಾರಾವಾಹಿ ಪ್ರಿಯರು. ಮಧ್ಯಾಹ್ನ, ರಾತ್ರಿ ಪ್ರಸಾರವಾಗುವ ಧಾರಾವಾಹಿಗಳನ್ನು ಬಿಡದೆ ನೋಡುವ ವರ್ಗವಿದೆ. ಆಯಾ ಧಾರಾವಾಹಿಗೆ ಆಯಾ ವೀಕ್ಷಕ ವರ್ಗವಿದೆ. ಹೀಗಿರುವ ಯಾವ ಧಾರಾವಾಹಿ ಎಷ್ಟು ಟಿ ಆರ್ ಪಿ ಹೊಂದಿದೆ ಅನ್ನೋ ಡಿಟೇಲ್ಸ್ ಇಲ್ಲಿದೆ.

ಟಾಪ್ 5 ಧಾರಾವಾಹಿಗಳು :

ಪುಟ್ಟಕ್ಕನ ಮಕ್ಕಳು


ಮೂವರು ಹೆಣ್ಣುಮಕ್ಕಳ ತಾಯಿಯಾಗಿ ಕಷ್ಟ ಕಾರ್ಪಣ್ಯಗಳಿಂದ ಬೆಂದಿರುವ ಮಹಿಳೆಯ ಪ್ರಧಾನ ಕಥೆ ಒಳಗೊಂಡಿರುವ ಧಾರಾವಾಹಿ ‘ಪುಟ್ಟಕ್ಕನ ಮಕ್ಕಳು’. ಹಿರಿಯ ನಟಿ ಉಮಾಶ್ರೀ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ 17ನೇ ವಾರದ ಟಿಆರ್​ಪಿ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ವೀಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿಯಾಗಿ ಹೊರಹೊಮ್ಮಿದೆ. ಹಿರಿಯ ನಟಿ ಉಮಾಶ್ರೀ, ಹಿರಿಯ ನಟ ರಮೇಶ್‌ ಪಂಡಿತ್‌, ಸಂಜನಾ ಬುರ್ಲಿ, ಧನುಷ್ ಎನ್​ಎಸ್ ಮೊದಲಾದವರು ಪಾತ್ರವಾಗಿದೆ.

ಲಕ್ಷ್ಮೀ ನಿವಾಸ

ಇತ್ತೀಚೆಗೆ ಆರಂಭಗೊಂಡ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದೀಗ ಟಿಆರ್‌ಪಿ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮೊದ ಮೊದಲು ಮೊದಲ ಸ್ಥಾನದಲ್ಲಿದ್ದ ಲಕ್ಷ್ಮೀ ನಿವಾಸ ಧಾರಾವಾಹಿ ಈ ವಾರ ಕೆಲವೇ ಕೆಲವು ಪಾಯಿಂಟ್‌ ಅಂತರದಲ್ಲಿ ಎರಡನೇ ಸ್ಥಾನದದಲ್ಲಿದೆ. ಕೌಟುಂಬಿಕ ಕಥಾಹಂದರವುಳ್ಳ ಈ ಧಾರಾವಾಹಿ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನವಿರಾದ ಪ್ರೇಮಕಥೆ, ಸಂಸಾರದ ತಲ್ಲಣಗಳಿವೆ.

ಸೀತಾ ರಾಮ


ನವಿರಾದ ಪ್ರೇಮಕಥೆ ಇರುವ ಸೀತಾ ರಾಮ ಧಾರಾವಾಹಿ ಮೂರನೇ ಸ್ಥಾನದಲ್ಲಿದೆ. ಜನಮನ ಗೆದ್ದಿರುವ ಈ ಧಾರಾವಾಹಿಯಲ್ಲಿ ಪುಟಾಣಿ ಸಿಹಿ ಎಲ್ಲರಿಗೂ ಅಚ್ಚುಮೆಚ್ಚು. ದಿನದಿಂದ ದಿನಕ್ಕೆ ಸೀತಾ ರಾಮ ಧಾರಾವಾಹಿ ಕುತೂಹಲ ಪೂರ್ಣವಾಗಿ ಸಾಗುತ್ತಿದೆ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ವೈಷ್ಣವಿ ಗೌಡ, ಗಗನ್ ಚಿನ್ನಪ್ಪ, ರೀತು ಸಿಂಗ್ ಮೊದಲಾದವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : ಅಭಿಮಾನಿಗಳಿಗೆ ಹೊಸ ಸಿನಿಮಾದ ಗುಡ್ ನ್ಯೂಸ್ ಕೊಟ್ಟ ಶಾರುಖ್

ಶ್ರಾವಣಿ ಸುಬ್ರಮಣ್ಯ


ಇತ್ತೀಚೆಗೆ ಆರಂಭಗೊಂಡ ವಿಭಿನ್ನ ಕಥಾ ಹಂದರ ಹೊಂದಿರುವ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಟಿಆರ್​ಪಿ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮಿನಿಸ್ಟರ್‌ ಮಗಳು ಶ್ರಾವಣಿಯ ತರಲೆ, ಮಿನಿಸ್ಟರ್‌ ಬಲಗೈ ಬಂಟ ಸುಬ್ರಮಣ್ಯನ ಕಥೆ ಧಾರಾವಾಹಿಯಲ್ಲಿದೆ. ಮಗಳನ್ನು ದ್ವೇಷಿಸುವ ತಂದೆ, ತಂದೆಯನ್ನು ಪ್ರೀತಿಸುವ ಮಗಳು, ಒಂದಷ್ಟು ಸಸ್ಪೆನ್ಸ್ ಧಾರಾವಾಹಿಯ ಜೀವಾಳ.

ರಾಮಾಚಾರಿ :


ವಿಭಿನ್ನ ಕತೆಯನ್ನೊಳಗೊಂಡ ರಾಮಾಚಾರಿ ಆರಂಭದಿಂದಲೂ ಜನಮನ ಗೆದ್ದಿತ್ತು. ಟಿಆರ್​ಪಿ ಪಟ್ಟಿಯಲ್ಲಿ ರಾಮಾಚಾರಿ ಐದನೇ ಸ್ಥಾನದಲ್ಲಿದೆ. ಸದ್ಯ ಧಾರಾವಾಹಿ ಬೇರೆಯೇ ಆದ ಆಯಾಮಕ್ಕೆ ಹೊರಳಿದೆ. ರಾಮಾಚಾರಿಗೊಬ್ಬ ತಮ್ಮನೂ ಎಂಟ್ರಿ ಕೊಟ್ಟಾಗಿದೆ. ಅಣ್ಣ-ತಮ್ಮ ಹಾಗೂ ಚಾರು ಒಂದಾಗಿ ಶತ್ರುಗಳ ವಿರುದ್ಧ ಗೆಲ್ಲುವ ಹೋರಾಟಕ್ಕೆ ಇಳಿದಿದ್ದಾರೆ.

Continue Reading

FILM

ಅಭಿಮಾನಿಗಳಿಗೆ ಹೊಸ ಸಿನಿಮಾದ ಗುಡ್ ನ್ಯೂಸ್ ಕೊಟ್ಟ ಶಾರುಖ್

Published

on

ಮುಂಬೈ : ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಪಠಾಣ್, ಜವಾನ್, ಡಂಕಿ ಸಿನಿಮಾದ ನಂತರ ಹೊಸ ಸಿನಿಮಾ ಘೋಷಣೆ ಮಾಡದೇ ಉಳಿದಿದ್ದ ಅವರು, ಅಭಿಮಾನಿಗಳಿಗೆ ಹೊಸ ಚಿತ್ರದ ಅಪ್ ಡೇಟ್ ನೀಡಿದ್ದಾರೆ. ತಮ್ಮ ಹೊಸ ಸಿನಿಮಾ ಜುಲೈ ಅಥವಾ ಆಗಸ್ಟ್ ನಿಂದ ಶುರುವಾಗಲಿದೆ ಎಂದಿದ್ದಾರೆ. ಉಳಿದಂತೆ ಅವರು ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

 

ಈ ನಡುವೆ ಶಾರುಖ್ ಖಾನ್ ಕುರಿತಾಗಿ ದಕ್ಷಿಣದ ಹೆಸರಾಂತ ನಟ ಕಮಲ್ ಹಾಸನ್ ಅಚ್ಚರಿಯ ಮಾತುಗಳನ್ನು ಆಡಿದ್ದಾರೆ.  ಪುತ್ರಿ ಶ್ರುತಿ ಹಾಸನ್ ಜೊತೆಗಿನ ಮಾತುಕತೆಯಲ್ಲಿ ಶಾರುಕ್ ಆಸೆಗಳನ್ನು ಅವರು ರಿವೀಲ್ ಮಾಡಿದ್ದಾರೆ.

ತಂದೆಗೆ ಇನ್ನೂ ಏನಾದರೂ ಆಸೆಗಳು ಉಳಿದಿದ್ದವಾ? ಎಂದು ಶ್ರುತಿ ಕೇಳ್ತಾರೆ. ಆಗ ಯಾವುದೇ ಆಸೆಗಳು ಇಲ್ಲ ಎಂದು ಹೇಳುವ ಕಮಲ್ ಹಾಸನ್, ಈ ಸಮಯದಲ್ಲಿ ಶಾರುಖ್ ಆಸೆಯನ್ನು ಹೊರ ಹಾಕುತ್ತಾರೆ. ಮಣಿರತ್ನಂ ಜೊತೆ ಸಿನಿಮಾ ಮಾಡಬೇಕು ಎನ್ನುವುದು ಶಾರುಖ್ ಆಸೆ. ಅದಕ್ಕಾಗಿ ಅವರು ಪ್ರೈವೆಟ್ ಜೆಟ್ ತಗೆದುಕೊಳ್ಳೊ ಕನಸು ಕಂಡಿದ್ದಾರೆ ಎಂದಿದ್ದಾರೆ ಕಮಲ್.

ಶಾರುಖ್ ಅವರಿಗೆ ವಿಮಾನ ಖರೀದಿಸುವ ಮತ್ತು ಮಣಿರತ್ನಂ ಸಿನಿಮಾದಲ್ಲಿ ನಟಿಸುವ ಆಸೆಯನ್ನು ವ್ಯಕ್ತ ಪಡಿಸಿರುವ ವಿಚಾರ ಅವರ ಅಭಿಮಾನಿಗಳಲ್ಲಿ ಸಹಜವಾಗಿಯೇ ಅಚ್ಚರಿ ತರಿಸಿದೆ. ವಿಮಾನ ಏನೋ ಖರೀದಿಸಬಹುದು. ಆದರೆ, ಮಣಿರತ್ನಂ ಅವರನ್ನು ಖರೀದಿಸೋಕೆ ಆಗಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

Continue Reading

LATEST NEWS

Trending