LATEST NEWS
ಶಿರೂರು ಗುಡ್ಡ ಕುಸಿತ; ಮೂಳೆ ಸಿಕ್ಕಿದ್ದು ದನದ್ದು, ಮನುಷ್ಯನದಲ್ಲ
Published
2 months agoon
By
NEWS DESK2ಅಂಕೋಲಾ: ತಾಲೂಕಿನ ಶಿರೂರು ಗುಡ್ಡ ಕುಸಿತದ ಶೋಧ ಕಾರ್ಯಾಚರಣೆ ವೇಳೆ ಗಂಗಾವಳಿ ನದಿಯಲ್ಲಿ ಪತ್ತೆಯಾಗಿದ್ದ ಮೂಳೆ ದನದ ಮೂಳೆ ಎಂದು ವೈಜ್ಞಾನಿಕ ಪರೀಕ್ಷೆಯಿಂದ ದೃಢಪಟ್ಟಿದೆ.
ಭಾನುವಾರ ಸಂಜೆ ಕಾರ್ಯಾಚರಣೆಯಲ್ಲಿ ಮೂಳೆ ಪತ್ತೆಯಾಗಿದ್ದರಿಂದ ಇದು ಶಿರೂರು ದುರಂತದಲ್ಲಿ ಗಂಗಾವಳಿ ನದಿಯಲ್ಲಿ ಕಣ್ಮರೆಯಾಗಿರುವ ಮೂವರಲ್ಲಿ ಯಾರದಾದರೂ ಮೂಳೆ ಇರಬಹುದು ಎಂಬ ಜಿಜ್ಞಾಸೆಗೆ ಕಾರಣವಾಗಿತ್ತು.
ಆದರೆ ಇದೀಗ ಮೂಳೆ ಪರೀಕ್ಷೆ ನಡೆಸಿ ವರದಿ ನೀಡಲಾಗಿದ್ದು ದನದ ಮೂಳೆ ಎಂಬುದು ದೃಢಪಟ್ಟಿದೆ.
Baindooru
ಹೊಸ ಟ್ರೆಂಡ್‌ನ ಪ್ಯಾಂಟ್ ಧರಿಸಿದ ಯುವಕ; ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Published
31 minutes agoon
22/11/2024By
NEWS DESK2ಬೆಳ್ತಂಗಡಿ: ಯುವಕನೊಬ್ಬತನ್ನ ವಿನೂತನ ಶೈಲಿಯ ಜೀನ್ಸ್ ಪ್ಯಾಂಟ್ ಧರಿಸಿ ಬೆಳ್ತಂಗಡಿ ಸಂತೆಕಟ್ಟೆ ಮಾರುಕಟ್ಟೆಗೆ ಬಂದಾಗ ಮೂವರು ಸೇರಿ ಆತನನ್ನು ತಡೆದು ಎರಡು ಕೈಗಳನ್ನು ಲಾಕ್ ಮಾಡಿ ಪ್ಯಾಂಟ್ ಗೆ ಗೋಣಿಚೀಲದ ಸೂಜಿಯಿಂದ ಹೊಲಿದು ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರಿಂದ ನೋಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನ.22ರ ಶುಕ್ರವಾರ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಪಣಕಜೆ ನಿವಾಸಿ ಮುಹಮ್ಮದ್ ಹಾಯಿಫ್ ಎಂಬವರ ಪುತ್ರ ಶಾಹಿಲ್(21) ಆತ್ಮಹತ್ಯೆಗೆ ಯತ್ನಿಸಿದ ಯುವಕ.
ಈತನ ವಿಡಿಯೋ ವೈರಲ್ ಆಗುತ್ತಲೇ, ತನ್ನ ಸ್ನೇಹಿತರು ಯುವಕನಿಗೆ ವಿಡಿಯೋ ಕಳುಹಿಸಿದ್ದಾರೆ. ಇದರಿಂದ ಮನನೊಂದ ಸಂಜೆ ವೇಳೆಗೆ ಆತ್ಮಹತ್ಯೆಗೆ ಯತ್ನಿಸಿ ಜೀವಣ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾನೆ ಎಂದು ತಿಳಿದು ಬಂದಿದೆ.
ನವೀನ ಮಾದರಿಯ ಜೀನ್ಸ್ ಪ್ಯಾಂಟ್ ಹರಿದ ರೀತಿಯಲ್ಲಿತ್ತು. ಅದನ್ನು ಧರಿಸಿ ನ.21 ರಂದು ಮಧ್ಯಾಹ್ನ ಬೆಳ್ತಂಗಡಿ ನಗರದಲ್ಲಿರುವ ಸಂತೆಕಟ್ಟೆ ಮಾರುಕಟ್ಟೆಗೆ ಬಂದಿದ್ದ. ಮಾರುಕಟ್ಟೆಯಲ್ಲಿದ್ದ ಪಡ್ಡೆ ಹುಡುಗರ ತಂಡವೊಂದು ಆತನನ್ನು ಸಾರ್ವಜನಿಕವಾಗಿ ಎರಡು ಕೈಗಳನ್ನು ಹಿಂದಕ್ಕೆ ಹಿಡಿದು ಬಲವಂತದಿಂದ ಹಿಡಿದಿಟ್ಟು ಆತನ ಪ್ಯಾಂಟನ್ನು ಗೋಣಿ ಹೊಲಿಯುವ ಸೂಜಿಯಿಂದ ಹೊಲಿದು ಜತೆಗೆ ಮೊಬೈಲ್‌ನಲ್ಲಿ ವೀಡಿಯೊ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿ ಹರಿಯಬಿಟ್ಟಿದ್ದರು.
ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಪುತ್ರಬೈಲು ನಿವಾಸಿ ಶಬಿರ್, ಅನೀಶ್ ಪಣಕಜೆ, ಲಾಯಿಲ ಗ್ರಾಮದ ಆದರ್ಶ ನಗರದ ನಿವಾಸಿ ಸಲೀಂ ಎಂಬವರು ಸೇರಿ ಈ ದುಷ್ಕ್ರತ್ಯ ನಡೆಸಿದ್ದಾರೆ ಎನ್ನಲಾಗಿದೆ.
ವಿಡಿಯೋ ಮಾಡಿ ಟ್ರೋಲ್ ಮಾಡಿದರಿಂದ ಮಾನಸಿಕವಾಗಿ ನೊಂದ ಶಾಹಿಲ್ ನ.21 ರಂದು ಸಂಜೆ ಮನೆಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯಗೆ ಯತ್ನಿಸಿದ್ದು, ತಕ್ಷಣ ಮನೆಯವರು ಚಿಕಿತ್ಸೆಗಾಗಿ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಘಟಣೆ ಬಗ್ಗೆ ಸಾರ್ವಜನಿಕರು ಈ ಮೂವರನ್ನು ಪುಂಡರ ವಿರುದ್ಧ ಕಠಿನ ಕ್ರಮಕೈಗೊಳ್ಳಲು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.
Baindooru
ನಿಜ್ಜರ್ ಹತ್ಯೆಯಲ್ಲಿ ಮೋದಿ-ಅಜಿತ್ ದೋವಲ್ ಕೈವಾಡ; ವರದಿ ನಿರಾಕರಿಸಿದ ಕೆನಡಾ ಸರ್ಕಾರ
Published
44 minutes agoon
22/11/2024By
NEWS DESK4ಮಂಗಳೂರು/ ನವದೆಹಲಿ : ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹ*ತ್ಯೆಯಲ್ಲಿ ಪ್ರಧಾನಿ ಮೋದಿ, ರಾಷ್ಟ್ರೀಯ ಸಲಹೆಗಾರ ಅಜಿತ್ ದೋವಲ್ ಹಾಗೂ ವಿದೇಶಾಂಗ ಸಚಿವ ಜೈಶಂಕರ್ ಕೈವಾಡ ಇದೆ ಎಂಬ ವರದಿಯ ಬಗ್ಗೆ ತೀವ್ರ ಆಕ್ಷೇಪ ಬಂದ ಬೆನ್ನಲ್ಲೇ ಕೆನಡಾ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಈ ಆರೋಪಗಳಿಗೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದೆ.
ನಿಜ್ಜರ್ ಹ*ತ್ಯೆಯಲ್ಲಿ ಪ್ರಧಾನಿ ಮೋದಿ, ರಾಷ್ಟ್ರೀಯ ಸಲಹೆಗಾರ ಅಜಿತ್ ದೋವಲ್ ಹಾಗೂ ವಿದೇಶಾಂಗ ಸಚಿವ ಜೈಶಂಕರ್ ಕೆನಡಾದೊಳಗೆ ಯಾವುದೇ ಕ್ರಿ*ಮಿನಲ್ ಚಟುವಟಿಕೆಯಲ್ಲಿ ಶಾಮೀಲಾಗಿದ್ದಾರೆ ಎಂಬುದಕ್ಕೆ ಕೆನಡಾ ಸರ್ಕಾರದ ಬಳಿ ಯಾವುದೇ ಪುರಾವೆಗಳಿಲ್ಲ ಎಂದು ಸ್ಪಷ್ಟ ಪಡಿಸಿದೆ.
ಕೆನಡಾ ಸರ್ಕಾರ ಈ ಹೇಳಿಕೆ ನೀಡಿಲ್ಲ :
ಕೆನಡಾ ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ನಿಜ್ಜರ್ ಹ*ತ್ಯೆಗೆ ಭಾರತದ ನಾಯಕರೇ ಸಂಚು ರೂಪಿಸಿದ್ದರು ಎಂಬುದಾಗಿ ವರದಿಯಲ್ಲಿ ಆರೋಪ ಮಾಡಲಾಗಿತ್ತು. ಇದೀಗ ಎಚ್ಚೆತ್ತ ಕೆನಡಾ ಸರ್ಕಾರ ಪ್ರತಿಕ್ರಿಯೆ ನೀಡಿದೆ. ಮಾಧ್ಯಮಗಳ ಈ ವರದಿ ಊಹಾಪೋಹವಾಗಿದ್ದು, ತಪ್ಪಾದ ಆಧಾರದ ಮೇಲೆ ಬರೆಯಲಾಗಿದೆ. ಕೆನಡಾ ಸರ್ಕಾರ ಈ ಹೇಳಿಕೆ ನೀಡಿಲ್ಲ ಎಂದು ಹೇಳಿದೆ.
ಈ ವರದಿ ಕುರಿತು ಪ್ರಿವಿ ಕೌನ್ಸಿಲ್‌ನ ಡೆಪ್ಯುಟಿ ಕ್ಲರ್ಕ್ ಮತ್ತು ಪ್ರಧಾನ ಮಂತ್ರಿಯ ರಾಷ್ಟ್ರೀಯ ಭದ್ರತೆ ಮತ್ತು ಗುಪ್ತಚರ ಸಲಹೆಗಾರರಾದ ನಥಾಲಿ ಜಿ. ಡ್ರೂಯಿನ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ : ಸಜ್ಜಾಗುತ್ತಿದೆ OPEN AI; ಹಾಗಾದ್ರೆ ಬ್ರೌಸರ್, ಗೂಗಲ್ ಕ್ರೋಮ್ ಕಥೆ ಏನಾಗ್ಬೋದು ?
ಕಳೆದ ವರ್ಷ ಜೂನ್‌ನಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ನಡೆದಿತ್ತು. ಈ ವಿವಾದಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ಪ್ರಧಾನಿ ಮೋದಿ ಮತ್ತು ಎನ್‌ಎಸ್‌ಎ ದೋವಲ್ ಲಿಂಕ್ ಮಾಡುವ ಲೇಖನವನ್ನು ಕೆನಡಾದ ಪ್ರತಿಷ್ಠಿತ ಪತ್ರಿಕೆ ದಿ ಗ್ಲೋಬ್ ಅಂಡ್ ಮೇಲ್ ಪ್ರಕಟಿಸಿತ್ತು. ಪ್ರಧಾನಿ ಮೋದಿಯವರಿಗೆ ನಿಜ್ಜರ್ ಹತ್ಯೆಯ ಬಗ್ಗೆ ಗೊತ್ತಿತ್ತು ಎಂದು ಕೆನಡಾದ ಭದ್ರತಾ ಏಜೆನ್ಸಿಗಳು ನಂಬುತ್ತವೆ ಎಂಬುದಾಗಿ ಹೆಸರಿಸದ ಭದ್ರತಾ ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖ ಮಾಡಲಾಗಿತ್ತು. ಆದರೆ ಭಾರತ ಸರ್ಕಾರ ಈ ಆರೋಪವನ್ನು ನಿರಾಕರಿಸಿತ್ತು.
Baindooru
ಕದ್ರಿ ಪಾರ್ಕ್‌ನಲ್ಲಿ ‘ಕಲಾಪರ್ಬ’; ಯು.ಟಿ.ಖಾದರ್‌ನಿಂದ ಲಾಂಛನ ಬಿಡುಗಡೆ
Published
2 hours agoon
22/11/2024ಮಂಗಳೂರು : ಜನವರಿ 11 ಮತ್ತು 12 ರಂದು ಮಂಗಳೂರಿನ ಕದ್ರಿ ಪಾರ್ಕ್ ನಲ್ಲಿ ಶರಧಿ ಪ್ರತಿಷ್ಟಾನವು ಆಯೋಜಿಸುವ ‘ ಕಲಾ ಪರ್ಬ ‘ ಇದರ ಲಾಂಛನ ಮತ್ತು ಕರಪತ್ರವನ್ನು ಇಂದು ಕರ್ನಾಟಕ ವಿಧಾನ ಸಭಾಧ್ಯಕ್ಷರಾದ ಯು.ಟಿ. ಖಾದರ್ ರವರು ಬಿಡುಗಡೆ ಗೊಳಿಸಿದರು.
ಕಲಾವಿದರೆಲ್ಲರನ್ನೂ ಒಗ್ಗೂಡಿಸಿ ವಿವಿಧ ಕಲಾ ಪ್ರಕಾರಗಳನ್ನು ಒಂದೇ ಕಡೆ ಅಭಿವ್ಯಕ್ತ ಪಡಿಸುವ ಮತ್ತು ಇದರ ಮೂಲಕ ಕಲಾ ಕ್ಷೇತ್ರ ಇನ್ನಷ್ಟು ವಿಕಸನವಾಗುವ ಉದ್ದೇಶವನ್ನು ಇಟ್ಟುಕೊಂಡು ಈ ಕಲಾ ಪರ್ಬವನ್ನು ಆಯೋಜಿಸಲಾಗುತ್ತಿದೆ. ಇಲ್ಲಿ ಮೂರ್ತ – ಅಮೂರ್ತ, ಹಿರಿಯ – ಕಿರಿಯ ಎಂಬ ಯಾವುದೇ ಅಂತರ, ಬೇಧ ಇಲ್ಲದೇ ಎಲ್ಲಾ ಕಲಾವಿದರು ತಮ್ಮ ಕಲಾ ಪ್ರಕಾರಗಳನ್ನು ಕಲಾ ವೀಕ್ಷಕರಿಗೆ, ಕಲಾಭಿಮಾನಿಗಳಿಗೆ ಕಲಾಕೃತಿಗಳ ಪ್ರದರ್ಶನ, ಮಾರಾಟ ಮತ್ತು ಪ್ರಾತ್ಯಕ್ಷಿಕೆ ಮೂಲಕ ಪರಿಚಯಿಸುವುದು ಪ್ರಮುಖವಾಗಿರುತ್ತದೆ. ಚಿತ್ರ ಕಲೆ, ಶಿಲ್ಪಕಲೆ ಮತ್ತು ನೃತ್ಯ ಪ್ರಕಾರಗಳ ವಿವಿಧ ರೂಪಗಳ ಅಭಿವ್ಯಕ್ತ ಹರಿವು, ಸೆಳವುಗಳ ಮೂಲಕ ಮೇಳದ ರೂಪದಲ್ಲಿ ಇಲ್ಲಿ ಆಗುತ್ತಿರುವುದು ಕಲಾ ಸಂಭ್ರಮ ಮತ್ತು ಕಲಾ ಜಂಗಮ.
ಸುಮಾರು 200 ಮಳಿಗೆಗಳಲ್ಲಿ ಕಲಾಕೃತಿ, ಛಾಯಾ ಚಿತ್ರ 30 ಮಳಿಗೆಗಳಲ್ಲಿ ಶಿಲ್ಪ ಕಲಾ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ಇರುವುದು. ಕಲಾಕೃತಿಗಳನ್ನು ಮಿತ ದರದಲ್ಲಿ ಖರೀದಿಸುವವರಿಗೆ ಉತ್ತಮ ಅವಕಾಶವಿದು.
ಲಾಂಛನದ ಅರ್ಥ :
ಈ ಕಲಾಪರ್ಬದ ಲಾಂಛನವು ಒಂದು ಸಂದೇಶವನ್ನು ನೀಡುತ್ತಿದೆ. ಇಲ್ಲಿ ಒಂದು ಕ್ಯಾನ್ವಾಸ್ ನಲ್ಲಿ 3 ಬಣ್ಣಗಳ ಸಂಗಮ ( K ) ಇಲ್ಲಿ ಕ್ಯಾನ್ವಾಸ್ ಕಲಾಕೃತಿಯ ಪ್ರತೀಕವಾದರೂ ನಮ್ಮ ಸಮಾಜವೇ ಒಂದು ರೀತಿಯ ಕ್ಯಾನ್ವಾಸ್ ಎಂಬ ಚೌಕಟ್ಟು. ಈ ಬದುಕಿನ ಚೌಕಟ್ಟಿನ ಒಳಗೆ ಎಲ್ಲರದ್ದೂ ಒಂದು ರೀತಿಯ ಬಣ್ಣದ ಬದುಕು. ನಮ್ಮ ನಿತ್ಯ ದಿನಚರಿ, ಚಟುವಟಿಕೆಗಳಿಂದ ಸಮಾಜಕ್ಕೆ, ಪ್ರಕೃತಿಗೆ ಒಂದು ಕೊಡುಗೆಯನ್ನು ನೀಡಬೇಕಾದರೆ ನಮ್ಮ ಸೀಮಿತ ಚೌಕಟ್ಟಿನಿಂದ ವಾದ ಮತ್ತು ಪಾದಗಳನ್ನು ಹೊರಗಿಡಲೇ ಬೇಕು. ಇದರ ಪ್ರತಿ ರೂಪವಾಗಿ ಕ್ಯಾನ್ವಾಸ್ ನಿಂದ ಒಂದು ಕಡೆ ಕುಂಚ ( ವಾದ…ತತ್ವ, ಸಿದ್ದಾಂತ ) ಹೊರಗೆ ಬಂದಿರುತ್ತದೆ. ಇನ್ನೊಂದು ಕಡೆ ಹೆಜ್ಜೆ ( ಪಾದ…ನಡೆ, ನಡತೆ ) ಹೊರಗೆ ಬಂದಿರುತ್ತದೆ.
ಅಂದರೆ ಕಲಾಕ್ಷೇತ್ರದಲ್ಲಿ ಆಗಲಿ, ಸಮಾಜದಲ್ಲಾಗಲಿ ನಾವು ನಮ್ಮದೇ ಸೀಮಿತ ಬಣ್ಣ, ಬದುಕು ಎಂಬ ಚೌಕಟ್ಟಿನಲ್ಲಿ ಕಂಡು ಕೊಂಡದ್ದಕ್ಕಿಂತ, ನಾವು ಚೌಕಟ್ಟು ಮೀರಿ ಹೊರ ಆಯಾಮವನ್ನು ತಲುಪಲು ಪ್ರಯತ್ನಿಸಿದರೆ ( ಖಾಸಗಿ ಬದುಕಿನಿಂದ ಸಾಮಾಜಿಕ ಬದುಕಿಗೆ ) ಉತ್ತಮವಾದ ಕಲಾಕೃತಿಯನ್ನು ಮತ್ತು ಸಮಾಜವನ್ನು ರೂಪಿಸಬಹುದು ಎಂಬುದು ಈ ಲಾಂಛನದ ಒಳಾರ್ಥ.
ಅದೇ ರೀತಿ ಕರ ಪತ್ರದಲ್ಲಿ ಬಣ್ಣದ ಹುಡುಗಿಯೊಬ್ಬಳು ಸಂಭ್ರಮಿಸುತ್ತಿದ್ದಾಳೆ. ಆಕೆಯ ಮುಖ ಬಣ್ಣದ ಪಾಲೇಟ್ ಮತ್ತು ನೀರಿನ ಹೂಜಿ, ಕೈ, ಕಾಲುಗಳು ಕುಂಚ ( ಚಿತ್ರ ಕಲಾ ಮೇಳ ಆಗಿರುವುದರಿಂದ ) ಕೆಳಗಿನ ಪಾದದ ಕುಂಚಗಳಲ್ಲಿ ಹೆಜ್ಜೆ – ಗೆಜ್ಜೆ ( ಈ ಪರ್ಬದಲ್ಲಿ ನೃತ್ಯವೂ ಇರುವುದರಿಂದ ) ಉಟ್ಟ ಲಂಗವು ಶಿಲಾ ಹಾಸುಗಳ ಪ್ರತಿರೂಪ ( ಈ ಪರ್ಬದಲ್ಲಿ ಶಿಲ್ಪ ಕಲೆಯೂ ಇರುವುದರಿಂದ ) ಎದೆ ಭಾಗದಲ್ಲಿ ಕ್ಯಾಮೆರಾ ಲೆನ್ಸ್ ( ಈ ಪರ್ಬದಲ್ಲಿ ಛಾಯಾ ಚಿತ್ರ ಪ್ರದರ್ಶನವೂ ಇರುವುದರಿಂದ ) ಇದೆಲ್ಲರ ಪ್ರತೀಕವಾಗಿ ಈ ಚಿತ್ರವನ್ನು ರಚಿಸಲಾಗಿದೆ.
ಬನ್ನಿ ಕಲಾ ಪರ್ಬ ನಿಮ್ಮದೇ…ಬಣ್ಣದ ಲೋಕದಲ್ಲಿ ಸಂಭ್ರಮಿಸೋಣ. ನಿಮ್ಮ ಬೆಂಬಲವೇ ಈ ಪರ್ಬದ ಯಶಸ್ಸು
LATEST NEWS
ನಾಳೆ ಉಪಚುನಾವಣೆಯ ಮತಎಣಿಕೆ: ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
WATCH VIDEO : ಉಡುಪಿ : ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ಲಾರಿ ಪಲ್ಟಿ
ಶೀಘ್ರದಲ್ಲೇ ಉಬರ್ನಿಂದ ಶಟಲ್ ಬಸ್ ಸೇವೆ; ಯಾವಾಗ ಪ್ರಾರಂಭ?
ಉತ್ತರ ಕನ್ನಡದಲ್ಲಿ ಮಂಗನಬಾವು ಸೋಂಕು 125 ಕ್ಕೆ ಏರಿಕೆ
ಸದ್ದಿಲ್ಲದೇ ನಡೆಯಿತು ನಟಿ ರಕ್ಷಿತಾ ಸಹೋದರ ರಾಣಾ ಎಂಗೇಜ್ಮೆಂಟ್; ಪ್ರೇಮ್ ಇರಲಿಲ್ಲ ಯಾಕೆ?
ಧರ್ಮಸ್ಥಳದಲ್ಲಿ ಪೊಣ್ಣಂ ಪ್ರಭಾಕರ್ ವಿಶೇಷ ಪೂಜೆ
Trending
- LATEST NEWS2 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- LATEST NEWS4 days ago
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!
- BIG BOSS5 days ago
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
- LATEST NEWS2 days ago
ಡೇಟಿಂಗ್ಗೆ 11,650 ರೂ. , ಫೋಟೋಗೆ 760 ರೂ. ಕ್ಯಾಶ್ ರಿವಾರ್ಡ್: ಟೆಕ್ ಕಂಪನಿ