Connect with us

    DAKSHINA KANNADA

    ಮಮ್ತಾಜ್ ಅಲಿ ಜೀವಂತವಿದ್ದಾರಾ ? ಮುಳುಗುತಜ್ಙ ಈಶ್ವರ ಮಲ್ಪೆ ತಂಡದವರು ದೇಹ ಪತ್ತೆ ಹಚ್ಚಿದ್ರಾ ? ಇಲ್ಲಿದೆ ಸಂಪೂರ್ಣ ಮಾಹಿತಿ… !

    Published

    on

    ಮಂಗಳೂರು: ಮೋಯಿದ್ದೀನ್ ಬಾವ ಅವರ ಸಹೋದರ ಮಮ್ತಾಜ್ ಅಲಿ ನಾಪತ್ತೆಯಾಗಿದ್ದಾರೆ. ಕೂಳೂರು ಸೇತುವೆಯ ಮೇಲೆ ಕಾರು ಪತ್ತೆಯಾಗಿರುವ ಹಿನ್ನಲೆಯಲ್ಲಿ ನದಿಯಲ್ಲಿ ಶೋಧ ಕಾರ್ಯಚರಣೆ ತೀವ್ರವಾಗಿ ಮುಂದುವರಿಯುತ್ತಿವೆ.


    ಮುಳುಗುತಜ್ಙ ಈಶ್ವರ ಮಲ್ಪೆ ತಂಡ ಸಹಿತ ರಕ್ಷಣಾ ತಂಡಗಳು ಶೋಧ ಕಾರ್ಯದಲ್ಲಿ ನಿರತರವಾಗಿವೆ. ಮಾಜಿ ಶಾಸಕ ಮೋಯಿದ್ದೀನ್ ಬಾವ ಕೂಡ ಸ್ಥಳದಲ್ಲಿದ್ದು, ಪರಿಶೀಲಿಸುತ್ತಿದ್ದಾರೆ.
    ಒಂದು ಹಂತದ ಹುಡುಕಾಟ ನಡೆಸಿದ ತಂಡ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ, “ನಾವು ಏಳು ಜನ ಆಳಕ್ಕೆ ಮುಳುಗಿ ಕಾರ್ಯಾಚರಣೆ ನಡೆಸಿದ್ದೇವೆ. ಆದರೆ, ಎಲ್ಲೂ ಕೂಡ ದೇಹ ಪತ್ತೆಯಾಗಿಲ್ಲ” ಎಮದರು.
    “ಸದ್ಯಕ್ಕೆ 100 ಮೀ. ಸುತ್ತಾಟ ಹುಡುಕಾಟ ನಡೆಸಲಾಗಿದೆ. ಸೇತುವೆ ಕಾಮಗಾರಿ ನಡೆಯುತ್ತಿದ್ದು, ಕೆಳಗೆ ಕಬ್ಬಿಣದ ಸರಳು, ಸಿಮೆಂಟ್ ಚೀಲಗಳಿವೆ. ಆಳದಲ್ಲಿ ಕತ್ತಲಿರುವುದರಿಂದ ಕಾರ್ಯಾಚರಣೆಗೆ ತೊಡಕಾಗಿದೆ” ಎಂದರು.


    ಮುಂದುವರೆದು ಮಾತನಾಡಿ, “ಇಲ್ಲಿ ಬಿದ್ದಿದ್ದರೆ ಇಲ್ಲೇ ಸಿಗಬೇಕು. ಇಷ್ಡು ಬೇಗ ಸಮುದ್ರ ಸೇರುವುದಿಲ್ಲ. ಎಲ್ಲಾ ತಂಡಗಳು ಕಾರ್ಯಾಚರಣೆಯನ್ನು ಮತ್ತೆ ಮುಂದುವರೆಸುತ್ತಿದ್ದೇವೆ. ಅವರು ಜೀವಂತವಾಗಿ ಇರಲಿ ಎಂದು ಆಶಿಸುತ್ತೇವೆ” ಎಂದರು.
    ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜೆಡಿಎಸ್ ರಾಜ್ಯಾಧ್ಯಕ್ಷ ಅಲಿ ಅವರ ಸಹೋದರ ಬಿ.ಎಂ. ಫಾರೂಕ್, ಐವನ್ ಡಿಸೋಜ ಭೇಟಿ ನೀಡಿದ್ದಾರೆ.

    DAKSHINA KANNADA

    ಎಂ.ಆರ್.ಪಿ.ಎಲ್ ಮತ್ತು ಮಾಂಡೋವಿ ಮೋಟರ್ಸ್ ಸಂಯೋಜನೆಯಲ್ಲಿ ಎಂ.ಆರ್.ಪಿ.ಎಲ್ ಹೈಕ್ಯೂ ಮೈಲೇಜ್ ಚಾಲೆಂಜ್ ಕಾರ್ಯಕ್ರಮ

    Published

    on

    ಮಂಗಳೂರು; ಎಂ.ಆರ್.ಪಿ.ಎಲ್ ಮತ್ತು ಮಾಂಡೋವಿ ಮೋರ್ಸ್ನ ಸಂಯುಕ್ತ ಆಶ್ರಯದಲ್ಲಿ ಎಂ.ಆರ್.ಪಿ.ಎಲ್ ಹೈಕ್ಯೂ ಮೈಲೇಜ್ ಚಾಲೆಂಜ್ ಕಾರ್ಯಕ್ರಮ ಕದ್ರಿಯ ಪೆಟ್ರೋಲ್ ಪಂಪ್ ನಲ್ಲಿ ನಡೆಯಿತು. ಎಂ.ಆರ್.ಪಿ.ಎಲ್ ನ ಗ್ರೂಪ್ ಜನರಲ್ ಮ್ಯಾನೇಜರ್ ಸುಭಾಷ್ ಪೈ ಚಾಲನೆ ನೀಡಿ ಮಾತನಾಡಿ, ಒ.ಎನ್.ಜಿ.ಸಿ ಯ ಅಂಗ ಸಂಸ್ಥೆಯಾದ ಎಂ.ಆರ್.ಪಿ ಎಲ್ ಉತ್ತಮ ಗುಣಮಟ್ಟದ ಇಂಧನವನ್ನು ರಾಜ್ಯದಲ್ಲಿ ಮಾತ್ರವಲ್ಲ ದೇಶದ ಜನತೆಗೆ ನೀಡುತ್ತಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿವೆ. ಕರ್ನಾಟಕದಲ್ಲಿ ಅತೀ ದೊಡ್ಡ ಸಂಸ್ಥೆ ಎಂ.ಆರ್.ಪಿ.ಎಲ್ ಆಗಿದ್ದು, ಒಂದು ಮಾದರಿ ಸಂಸ್ಥೆಯಾಗಿದೆ. ಈ ಕಾರ್ಯಕ್ರಮದಿಂದ ಜನರಲ್ಲಿ ಇಂಧನದ ಸಂರಕ್ಷಣೆ ಮತ್ತು ವಾಹನ ಚಾಲನೆಯಲ್ಲಿ ಜಾಗೃತಿ ಉಂಟಾಗುತ್ತದೆ, ಸಂಸ್ಥೆ ಸಾಮಾಜಿಕ ಕಾರ್ಯಗಳಲ್ಲಿ ಕೂಡ ತೊಡಗಿಸಿಕೊಂಡಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿದೆ” ಎಂದರು.


    ಮುಖ್ಯ ಪ್ರಾದೇಶಿಕ ವ್ಯವಸ್ಥಾಪಕರಾದ ಸ್ವಾಮಿ ಪ್ರಸಾದ್ ಮಾತನಾಡಿ, “ದಕ್ಷಿಣ ಬಾರತದಲ್ಲಿ ಎಂ.ಆರ್.ಪಿ ಎಲ್ ನ 111 ಪೆಟೋಲ್ ಪಂಪ್ ಚಾಲನೆಯಲ್ಲಿದ್ದು ಗ್ರಾಹಕರಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ, ಮುಂದಿನ ದಿನದಲ್ಲಿ ಅಂಧ್ರ ಪ್ರದೇಶಕ್ಕೆ ಕೂಡ ನಮ್ಮ ಪೆಟ್ರೋಲ್ ಪಂಪ್ ಗಳು ಕಾಲಿಡಲಿದೆ ಸಂಸ್ಥೆಯ ಇಂಧನ ಕ್ವಾಲಿಟಿಯನ್ನು ಗಮನಿಸಿದ ಗ್ರಾಹಕರು ಮತ್ತೆ ಮತ್ತೆ ನಮ್ಮ ಸಂಸ್ಥೆಯ ಇಂಧನವನ್ನು ಬಳಸುತ್ತಿದ್ದಾರೆ, ಗ್ರಾಹಕರು ನಮ್ಮ ಸೇವೆಯನ್ನು ಕೂಡ ಶ್ಲಾಘಿಸುತ್ತಿದ್ದಾರೆ” ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.


    ಕಾರ್ಯಕ್ರಮದಲ್ಲಿ ಸುಮಾರು 4೦ ವಾಹನ ಮಾಲಕರು ಪಾಲ್ಗೊಂಡಿದ್ದರು. ಎಂ.ಆರ್.ಪಿ.ಎಲ್ ನ ಮ್ಯಾನೇಜರ್ ಕಾಶಿನಾಥ್, ಮಂಗಳೂರು ಸ್ಪೋರ್ಸ್ ಅಸೋಶಿಯೇಶನ್ ನ ಸುಧೀರ್, ಮಾಂಡೋವಿ ಮೋಟರ್ಸ್ ನ ಎ,ಜಿ.ಎಂ ಕೃಷ್ಣ ಶೆಟ್ಟಿ, ವರ್ಕ್ ಶಾಪ್ ಮ್ಯಾನೇಜರ್ ಗ್ರೇಷಿಯನ್ ಪಿಂಟೋ, ಸೇಲ್ಸ್ ಮ್ಯಾನೇಜರ್ ಮುರಳೀಧರ್, ಎಂ.ಆರ್.ಪಿ.ಎಲ್ ನ ಹೈಕ್ಯೂ ಡೀಲರ್ ರಾಘವೇಂದ್ರ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.

    Continue Reading

    DAKSHINA KANNADA

    ಉಪನ್ಯಾಸಕನಿಂದ ದ್ವೇಷದ ಉಪನ್ಯಾಸ.!? ಅರುಣ್ ಉಳ್ಳಾಲ ವಿರುದ್ದ ಕೇಸ್.!

    Published

    on

    ಮಂಗಳೂರು : ಆಗ್ನೆಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ದುಡಿಯುತ್ತಿರುವ ಉಪನ್ಯಾಸಕ ಅರುಣ್ ಉಳ್ಳಾಲ ವಿರುದ್ದ ಮಂಗಳೂರು ಸೆನ್‌ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಉಳ್ಳಾಲದ ಕಾಪಿಕಾಡು ಉಮಾಮಹೇಶ್ವರಿ ದೇವಸ್ಥಾನದ ನವರಾತ್ರಿ ಉತ್ಸವದಲ್ಲಿ ಮಾಡಿದ ದ್ವೇಷದ ಭಾಷಣಕ್ಕೆ ಸಂಬಂಧಿಸಿ ಈ ದೂರು ದಾಖಲಾಗಿದೆ.

    ಕಾರ್ಯಕ್ರಮದಲ್ಲಿ ಹಿಂದೂ ಧಾರ್ಮಿಕ ಉಪನ್ಯಾಸ ನೀಡುತ್ತಿದ್ದ ಅರುಣ್ ಉಳ್ಳಾಲ ಅವರು ಕ್ರೈಸ್ತರು ಹಾಗೂ ಮುಸ್ಲಿಂರ ವಿರುದ್ಧ ದ್ವೇಷ ಭಾಷಣ ಮಾಡಿದ್ದರು. ಹಿಂದೂಗಳು ಹಿಂದೂಗಳಿಗೆ ಸೇರಿದ ಶಾಲೆಗೆ ಮಕ್ಕಳನ್ನು ಸೇರಿಸಬೇಕು. ಹಿಂದೂಗಳಿಗೆ ಸೇರಿದ ಹಾಲ್‌ಗಳಲ್ಲೇ ಮದುವೆ ಆಗಬೇಕು ಎಂಬಿತ್ಯಾದಿ ರೀತಿಯ ಮಾತುಗಳನ್ನು ಆಡಿದ್ದರು.

    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಸಾರ್ವಜನಿಕವಾಗಿ ತೀವ್ರ ಟೀಕೆಗೆ ಗುರಿಯಾಗಿತ್ತು. ಕ್ರಿಶ್ಚಿಯನ್ ಸಂಸ್ಥೆಯಲ್ಲೇ ವಿದ್ಯಾಭ್ಯಾಸ ಮಾಡಿ, ಕ್ರಿಶ್ಚಿಯನ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಅರುಣ್ ಉಳ್ಳಾಲ ಅವರ ಈ ಹೇಳಿಕೆ ಎಷ್ಟು ಸರಿ? ಎಂದು ಜನರು ಪ್ರಶ್ನೆ ಮಾಡಿದ್ದರು.  ಅರುಣ್ ಉಳ್ಳಾಲ ಅವರು ಕೆಲಸ ಮಾಡುತ್ತಿರುವ ಆಗ್ನೆಸ್ ಕಾಲೇಜು ಆಡಳಿತ ಮಂಡಳಿ ಇವರನ್ನು ಕೆಲಸದಿಂದ ವಜಾ ಮಾಡಬೇಕೆಂಬ ಒತ್ತಾಯ ಕೂಡ ಮಾಡಲಾಗಿದೆ.  ಇದೀಗ ಅರುಣ್ ಉಳ್ಳಾಲರ ಭಾಷಣ ವಿವಾದವಾಗುತ್ತಿದ್ದಂತೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಇದನ್ನೂ ಓದಿ : ಸಂಸದ ಕೋಟ ಹೆಸರಿನಲ್ಲಿ ನಕಲಿ ಖಾತೆ; ಹಣಕ್ಕೆ ಬೇಡಿಕೆ ಇಟ್ಟ ಕಿಡಿಗೇಡಿಗಳು

    ಅರುಣ್ ಉಳ್ಳಾಲ ಅವರ ವಿರುದ್ಧ ಸೆನ್‌ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ವಿಹೆಚ್‌ಪಿ ಮುಖಂಡ ಶರಣ್ ಪಂಪ್‌ವೆಲ್‌ ಅರುಣ್ ಗೆ  ಬೆಂಬಲ ಸೂಚಿಸಿದ್ದಾರೆ. ನಾವು ನಿಮ್ಮ ಜೊತೆಗೆ ಇದ್ದೇವೆ ಎಂಬ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    Continue Reading

    DAKSHINA KANNADA

    ಪುತ್ತೂರು: ಪಿಕಪ್ ಗುದ್ದಿ ರಿಕ್ಷಾ ಪಲ್ಟಿ – ಹಲವರಿಗೆ ಗಾಯ

    Published

    on

    ಪುತ್ತೂರು: ನಿಧಾನವಾಗಿ ಚಲಿಸುತ್ತಿದ್ದ ರಿಕ್ಷಾಕ್ಕೆ ಹಿಂದಿನಿಂದ ಪಿಕಪ್ ಡಿಕ್ಕಿಯಾಗಿ ಹಲವರಿಗೆ ಗಾಯವಾದ ಘಟನೆ ಪುತ್ತೂರು ಉಪ್ಪಿನಂಗಡಿ ರಸ್ತೆಯ ಪಡೀಲ್ ಜಂಕ್ಷನ್‌ನಲ್ಲಿ ನಡೆದಿರುವುದು ತಿಳಿದು ಬಂದಿದೆ.

     

    ಇದನ್ನೂ ಓದಿ; ಉಳ್ಳಾಲ: ನಾಪತ್ತೆಯಾದ ವ್ಯಕ್ತಿ ಪಾಳು ಬಿದ್ದ ಬಾವಿಯಲ್ಲಿ ಶವವಾಗಿ ಪತ್ತೆ…!

    ಉಪ್ಪಿನಂಗಡಿ ಕಡೆಗೆ ಹೋಗುತ್ತಿದ್ದ ಪಿಕಪ್ ಎದುರಿನ ರಿಕ್ಷಾಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ರಿಕ್ಷಾ ಪಲ್ಟಿಯಾಗಿದ್ದು, ಗಾಯಾಳುಗಳನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    Trending