LATEST NEWS
10 ರುಪೈ ತರೋ ಯೋಗ್ಯತೆ ಇಲ್ಲ ಅಂದವ್ರಿಗೆ ಅರ್ಧ ಗಂಟೇಲಿ 10 ಲಕ್ಷ ಕ್ಯಾಶ್ ಇಟ್ಟು ರೈತನಿಂದ ಕಾರಿಗೆ ಪಟ್ಟು
Published
3 years agoon
By
Adminತುಮಕೂರು: ಐದಾರ್ ಜನ ಫ್ರೆಂಡ್ಸ್ ಮೊನ್ನೆ ಶುಕ್ರವಾರ ಸಂಜೆ 6ಗಂಟೆಗೆ ತುಮಕೂರು ನಗರದ ಗುಬ್ಬಿ ಗೇಟ್ ಬಳಿ ಇರೋ ಶೋರೂಂಗೆ ಹೋಗಿದ್ರು.
ಆ ಟೈಮಲ್ಲಿ ಇವ್ರ ಭಾಷೆ, ವೇಷ-ಭೂಷಣ ನೋಡಿ 10 ರೂಪಾಯಿಗೆ ಯೋಗ್ಯತೆ ಇಲ್ಲ ನಿಮ್ಗೆ ಕಾರ್ ತಗೊಳ್ಳೋಕೆ ಬರ್ತೀರಾ ಅಂತ ಶೋರೂಮ್ ಸಿಬ್ಬಂದಿ ಅವಮಾನ ಮಾಡ್ಬಿಟ್ರಂತೆ.
ಈ ಟೈಮಲ್ಲಿ ಅರ್ಧ ಗಂಟೇಲಿ ದುಡ್ಡು ತರ್ತೀನಿ ಕಾರ್ ಕೊಡ್ತೀಯಾ ಅಂತ ಕೇಳಿದ್ದಾರೆ ಕೆಂಪೇಗೌಡ.
ಮೊದ್ಲು ತಗೊಂಡ್ ಬನ್ನಿ ಹೋಗ್ರೀ ಅಂದಿದ್ದಾರೆ ಶೋರೂಂ ಸಿಬ್ಬಂದಿ. ಜಸ್ಟ್ ಅರ್ಧ ಗಂಟೆ, 10 ಲಕ್ಷದೊಂದಿಗೆ ಶೋರೂಂನಲ್ಲಿ ಕೆಂಪೇಗೌಡ ಌಂಡ್ ಟೀಮ್ ಪ್ರತ್ಯಕ್ಷ.
ಆ ನಂತ್ರ ಆಗಿದ್ದೇ ಈ ಸೀನು. ಅರ್ಧ ಗಂಟೆಲಿ 10 ಲಕ್ಷದೊಂದಿಗೆ ಬಂದ ಕೆಂಪೇಗೌಡ ಮತ್ತಾತನ ಸ್ನೇಹಿತ್ರು ಶೋರೂಂ ಸಿಬ್ಬಂದಿಗೆ ಅಕ್ಷರಶಃ ಬೆವರಿಳಿಸಿಬಿಟ್ಟಿದ್ದಾರೆ.
ಹಣ ಹೊಂದಿಸ್ಕೊಂಡ್ ಬಂದ್ಮೇಲೆ ಕಾರ್ ಕೊಟ್ರಾ ಅಂದ್ರೆ ಖಂಡಿತಾ.. ಇಲ್ಲ..
ಮುಂದಿನ ಎರಡ್ಮೂರು ದಿನದಲ್ಲಿ ಕಾರ್ ಕೊಡ್ತೀವಿ ಅಂದಿದ್ದಾರೆ. ರಾತ್ರಿ 10.30ರವರೆಗೂ ಚರ್ಚೆ ನಡೆಯುತ್ತೆ. ಕೊನೆಗೆ ಗಲಾಟೆ ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆ ಮೆಟ್ಟಿಲೇರುತ್ತೆ.
ನಂತ್ರ ಅವಮಾನಿಸಿದ ಸಿಬ್ಬಂದಿಯಿಂದ ಗ್ರಾಹಕನಿಗೆ ತಪ್ಪಾಯಿತು ಎಂದು ಮುಚ್ಚಳಿಕೆ ಬರೆಸೋ ಮೂಲಕ ಪ್ರಕರಣ ಅಂತ್ಯ ಕಂಡಿದೆ.
ನಮ್ಮನ್ನು ನೋಡಿ ಕೇವಲವಾಗಿ ಮಾತನಾಡಿದರು. 10 ರೂಪಾಯಿ ತರಲು ಯೋಗ್ಯತೆ ಇಲ್ಲ ಎಂದು ಅವಮಾನಿಸಿದರು.
ಆಗ ನಾವು ಅರ್ಧಗಂಟೆಯಲ್ಲಿ 10 ಲಕ್ಷ ಹೊಂದಿಸಿ ತಂದು ಕೊಟ್ಟಿದ್ದೀವಿ. ಕಳೆದ ಜನವರಿ 4 ರಂದು ಶೋರೂಮ್ಗೆ ಹೋಗಿ ಗೂಡ್ಸ್ ವಾಹನ ತರಲು ಹೇಳಿಬರಲಾಗಿತ್ತು. ಅದರಂತೆ ಮೊನ್ನೆ ಎರಡು ಲಕ್ಷ ಹಣ ಕಟ್ಟಿ ವಾಹನ ತರಲು ಶೋರೂಮ್ಗೆ ಹೋಗಿದ್ವಿ.
ಎರಡು ಲಕ್ಷ ಹಣ ಕಟ್ತೀವಿ. ವಾಹನ ಕೊಡಿ ಅಂತಾ ಕೇಳಿದ್ದೀವಿ. ಆಗ ಶೋರೂಮ್ ಸಿಬ್ಬಂದಿ ಏಳು ಜನರು ಕೂಡ ತಮಾಷೆ ಮಾಡಲು ಬಂದಿದ್ದೀರಾ. ವಾಹನ ತಗೊಂಡು ಹೋಗೊದಕ್ಕೆ ಬಂದಿಲ್ಲ. ನಿಮ್ಮ ಯೋಗ್ಯತೆಗೆ 10 ರೂಪಾಯಿ ಇಲ್ಲ, ಸುಮ್ಮನೇ ಬಂದಿದ್ದೀರಾ ಅಂತಾ ಅವಮಾನ ಮಾಡಿದ್ದರು.
25 ನಿಮಿಷ ಸಮಯ ಕೇಳಿದ್ದೀವಿ. ಆಗಲೂ ಅವರು ಕಿಚಾಯಿಸಿದ್ದಾರೆ. ನಾವು ಹೇಳಿದ ಸಮಯಕ್ಕೆ ಹಣ ತಂದು ಕೊಟ್ಟಿದ್ದೀವಿ. ಆದರೆ ಅವರು ವಾಹನ ನೀಡಲಿಲ್ಲ. ನಾವು ರೈತರು ಅಂತಾ ಅವಮಾನ ಮಾಡಿದ್ದಾರೆ ಅಂತಾ ಬೇಸರ ಹೊರಹಾಕಿದ್ದಾರೆ.
LATEST NEWS
ವೈದ್ಯಕೀಯ ಸೀಟು ಕೊಡಿಸುವುದಾಗಿ ಹೇಳಿ ವಂಚನೆ; ಮೂವರು ಆರೋಪಿಗಳ ಬಂಧನ
Published
31 seconds agoon
22/01/2025By
NEWS DESK3ಉಡುಪಿ : ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಸಾಧನೆಯನ್ನು ಮಾಡುವ ನಿಟ್ಟಿನಲ್ಲಿ ಹೆಚ್ಚಿನ ವಿದ್ಯಾಭ್ಯಾಸವನ್ನು ಮಾಡಲು ಯುಕೆಯಲ್ಲಿ ಎಂ ಪಿಎಚ್ ಮಾಡಲು ಸೀಟು ತೆಗೆಸಿಕೊಡುವುದಾಗಿ ಹೇಳಿ ಮೂವರು ವಂಚನೆ ಮಾಡಿದ್ದಾರೆ ಎಂದು ಉಡುಪಿ ನಗರ ಠಾಣೆಯಲ್ಲಿ ಸಂತೋಷ ಎಂಬವರು ದೂರು ದಾಖಲಿಸಿದ್ದರು.
ವೈದ್ಯಕೀಯ ಸೀಟು ಪಡೆಯುವ ನಿಟ್ಟಿನಲ್ಲಿ ದುಬೈಗೆ ತೆರಳಿದ ಸಂತೋಷ್, ಅಫ್ತಾಬ್ ಅವರನ್ನು ಭೇಟಿ ಮಾಡಿದ್ದರು. ನಂತರ ಯುಕೆಯಲ್ಲಿ ಎಂಪಿಎಚ್ ವಿದ್ಯಾಭ್ಯಾಸಕ್ಕಾಗಿ ಸೀಟಿಗೆ 18 ಲಕ್ಷಕ್ಕೆ ಇಬ್ಬರ ನಡುವೆ ಒಪ್ಪಂದವಾಗಿದೆ.
ಅಫ್ತಾಬ್ ದುರುದಾರರಿಗೆ ಕರೆ ಮಾಡಿ M.PH ವಿದ್ಯಾಭ್ಯಾಸಕ್ಕಾಗಿ ಸೀಟನ್ನು ಖಾಯಂ ಮಾಡಲು ಮೊದಲಿಗೆ 8.5 ಲಕ್ಷವನ್ನು ನೀಡುವಂತೆ ಕೇಳಿದ್ದಾರೆ. ಇವರು ಎನ್‌ಆರ್‌ಎ ಖಾತೆಯನ್ನು ಹೊಂದಿರದ ಕಾರಣ ಹಣವನ್ನು ಜಮಾ ಮಾಡಲು ಅಫ್ತಾಬ್ ಆತನಿಗೆ ಪರಿಚಯವಿರುವ 2ನೇ ಆರೋಪಿ ಸುಮನ್ ಎಸ್ ಎಂಬುವವರನ್ನು ಭೇಟಿ ಆಗುವಂತೆ ತಿಳಿಸಿದ್ದಾನೆ.
ಇದನ್ನೂ ಓದಿ: ಅರೆಬೈಲ್ ಘಾಟ್‌ನಲ್ಲಿ ತರಕಾರಿ ತುಂಬಿದ್ದ ಲಾರಿ ಪಲ್ಟಿ: 9 ಜನರ ಸಾವು
ಸಂತೋಷ್ ಅವರು ಉಡುಪಿಗೆ ಆಗಮಿಸಿ ಸುಮನ್ ಎಸ್ ಅವರನ್ನು ಉಡುಪಿ ತಾಲ್ಲೂಕು ಮೂಡನಿಡಂಬೂರು ಗ್ರಾಮದ ಎಂಟಿಆರ್ ಹೋಟೆಲ್ ನ ಹತ್ತಿರ ಭೇಟಿಯಾಗಿ 8.5 ಲಕ್ಷ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಬಳಿಕ ಆರೋಪಿಗಳು ಸಂತೊಷ್ ಅವರ ಕರೆಯನ್ನು ಸ್ವೀಕರಿಸದೇ ಹಣವನ್ನು ಕೂಡಾ ಮರಳಿ ನೀಡದೇ ಮೋಸ ಮಾಡಿದ್ದಾರೆ ಎಂದು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಆರೋಪಿಗಳನ್ನು ಬಂಧಿಸಿ ಅವರಿಂದ 5 ಲಕ್ಷ ರೂಪಾಯಿ ಹಾಗೂ ಕಾರು, 2 ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.
ಚಂದ್ರನ ತಿಂಗಳ ಹದಿನಾಲ್ಕನೇ ದಿನ ಅಥವಾ ಅಮವಾಸ್ಯೆಯ ಹಿಂದಿನ ದಿನವನ್ನು ಶಿವರಾತ್ರಿ ಎಂದು ಕರೆಯಲಾಗುತ್ತದೆ, ಇದನ್ನು ಮಹಾದೇವನ ಅತ್ಯಂತ ನೆಚ್ಚಿನ ಹಬ್ಬವೆಂದು ಪರಿಗಣಿಸಲಾಗಿದ್ದು, ‘ಮಹಾಶಿವರಾತ್ರಿ’ ಎನ್ನಲಾಗುತ್ತದೆ.
ಮಹಾಶಿವರಾತ್ರಿಯನ್ನು ಫಾಲ್ಗುಣ ಮಾಸದಲ್ಲಿ ಆಚರಿಸಲಾಗುತ್ತದೆ. ಶಿವನ ಶ್ರೇಷ್ಠತೆಯನ್ನು ಪುರಾಣಗಳು, ವೇದಗಳು ಮತ್ತು ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ವಿವರಿಸಲಾಗಿದೆ. ಮಹಾಶಿವರಾತ್ರಿಯ ರಾತ್ರಿ ಶಿವನು ಲಿಂಗರೂಪದಲ್ಲಿ ನೆಲೆಸುತ್ತಾನೆ. ಈ ದಿನ ಶಿವನ ಆರಾಧನೆಯು ಎಲ್ಲಾ ತೊಂದರೆಗಳನ್ನು ನಾಶಪಡಿಸುತ್ತದೆ. ಆದ್ದರಿಂದ ಈ ವರುಷ (2025) ಮಹಾಶಿವರಾತ್ರಿ ಯಾವಾಗ ಮತ್ತು ಪೂಜೆಯ ಮಂಗಳಕರ ಸಮಯ ಯಾವುದು ಎಂಬುದನ್ನು ತಿಳಿಯೋಣ. ಕೌಟುಂಬಿಕ ಜೀವನ ಮತ್ತು ಲೌಕಿಕ ಮಹತ್ವಾಕಾಂಕ್ಷೆಗಳಲ್ಲಿ ಮುಳುಗಿರುವ ಜನರಿಗೆ ಮಹಾಶಿವರಾತ್ರಿಯನ್ನು ಆಚರಿಸುವ ಉದ್ದೇಶಗಳು ವಿಭಿನ್ನವಾಗಿವೆ. ಕೌಟುಂಬಿಕ ಜೀವನದಲ್ಲಿ ಮಗ್ನರಾಗಿರುವ ಜನರು ಮಹಾಶಿವರಾತ್ರಿಯನ್ನು ಶಿವನ ಮದುವೆಯ ಹಬ್ಬದಂತೆ ಆಚರಿಸುತ್ತಾರೆ. ಲೌಕಿಕ ಮಹತ್ವಾಕಾಂಕ್ಷೆಗಳಲ್ಲಿ ಮುಳುಗಿರುವ ಜನರು ಮಹಾಶಿವರಾತ್ರಿಯನ್ನು ಶಿವ ತನ್ನ ಶತ್ರುಗಳ ಮೇಲೆ ವಿಜಯ ಸಾಧಿಸಿದ ದಿನವೆಂದು ಆಚರಿಸುತ್ತಾರೆ.
ಮಹಾಶಿವರಾತ್ರಿ ದಿನಾಂಕ :
26 ಫೆಬ್ರವರಿ 2025 ರಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಈ ದಿನ ಶಿವ ಮತ್ತು ಆದಿಶಕ್ತಿಯ ದೈವಿಕ ಶಕ್ತಿಗಳು ಒಟ್ಟಿಗೆ ಸೇರುತ್ತವೆ. ಮಹಾಶಿವರಾತ್ರಿಗೆ ಸಂಬಂಧಿಸಿದಂತೆ ಅನೇಕ ಪೌರಾಣಿಕ ನಂಬಿಕೆಗಳಿವೆ. ಶಿವರಾತ್ರಿ ಮನುಷ್ಯನ ಆಧ್ಯಾತ್ಮಿಕ ಉತ್ತುಂಗವನ್ನು ತಲುಪಲು ಪ್ರಕೃತಿ ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
ಮುಹೂರ್ತ :
ನಿಶಿತಾ ಕಾಲ ಪೂಜೆ ಸಮಯ -ತಡರಾತ್ರಿ 12:09 ರಿಂದ ರಾತ್ರಿ 12:59 ವರೆಗೆ, ಫೆಬ್ರವರಿ 27
ಶಿವರಾತ್ರಿ ಪಾರಣ ಸಮಯ – 06:48 ಬೆಳಗ್ಗೆ – 08:54 ಬೆಳಗ್ಗೆ (27 ಫೆಬ್ರವರಿ)
ಫಾಲ್ಗುಣ ಕೃಷ್ಣ ಚತುರ್ದಶಿ ದಿನಾಂಕ ಪ್ರಾರಂಭವಾಗುತ್ತದೆ – 26 ಫೆಬ್ರವರಿ 2025, ತಡರಾತ್ರಿ 11.08
ಫಾಲ್ಗುಣ ಕೃಷ್ಣ ಚತುರ್ದಶಿ ದಿನಾಂಕ ಕೊನೆಗೊಳ್ಳುತ್ತದೆ – 27 ಫೆಬ್ರವರಿ 2025, ಬೆಳಿಗ್ಗೆ 8.54
ರಾತ್ರಿ ಪ್ರಥಮ ಪ್ರಹಾರ ಪೂಜೆ ಸಮಯ – 06:19 PM – 09:26 PM
ರಾತ್ರಿ ಎರಡನೇ ಪ್ರಹಾರ ಪೂಜೆ ಸಮಯ – 09:26 pm – 12:34 am
ರಾತ್ರಿ ತೃತೀಯ ಪ್ರಹಾರ ಪೂಜೆ ಸಮಯ – 12:34 am – 03:41 am
ರಾತ್ರಿ ಚತುರ್ಥಿ ಪ್ರಹಾರ ಪೂಜೆ ಸಮಯ – 03:41 am – 06:48 am
LATEST NEWS
ಅರೆಬೈಲ್ ಘಾಟ್‌ನಲ್ಲಿ ತರಕಾರಿ ತುಂಬಿದ್ದ ಲಾರಿ ಪಲ್ಟಿ: 9 ಜನರ ಸಾವು
Published
42 minutes agoon
22/01/2025By
NEWS DESK3ಮಂಗಳೂರು/ಕಾರವಾರ : ಯಲ್ಲಾಪುರ ತಾಲೂಕಿನ ಅರೆಬೈಲ್ ಘಟ್ಟದ ಸಮೀಪ ತರಕಾರಿ ತುಂಬಿದ್ದ ಲಾರಿ ಬುಧವಾರ ನಸುಕಿನ ಜಾವ ಪಲ್ಟಿಯಾಗಿ, ಅದರಲ್ಲಿದ್ದ 9 ಮಂದಿ ಮೃತಪಟ್ಟಿದ್ದಾರೆ.
ಲಾರಿಯಲ್ಲಿ ತರಕಾರಿ ದಾಸ್ತಾನಿನ ಜೊತೆಗೆ 25ಕ್ಕೂ ಹೆಚ್ಚು ವ್ಯಾಪಾರಿಗಳು ಪ್ರಯಾಣಿಸುತ್ತಿದ್ದರು. ಇವರೆಲ್ಲಾ ಕುಮಟಾದಲ್ಲಿ ನಡೆಯುವ ವಾರದ ಸಂತೆಗೆ ಹಾವೇರಿ ಜಿಲ್ಲೆಯ ಸವಣೂರಿನಿಂದ ಯಲ್ಲಾಪುರ ಮಾರ್ಗವಾಗಿ ತರಕಾರಿ ಸಾಗಿಸುವ ವೇಳೆ ಈ ದುರ್ಘಟನೆ ನಡೆದಿದೆ. ಮೃತರೆಲ್ಲರೂ ತರಕಾರಿ ವ್ಯಾಪಾರಿಗಳು ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ತಪ್ಪಿಸಿಕೊಳ್ಳಲು ಯತ್ನಿಸಿದ ಬ್ಯಾಂಕ್ ದರೋಡೆ ಆರೋಪಿ ಕಾಲಿಗೆ ಗುಂಡು..!
ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಕಂದಕಕ್ಕೆ ಲಾರಿ ಉರುಳಿದ ಪರಿಣಾಮ 9 ಮಂದಿ ಮೃತಪಟ್ಟಿದ್ದು, 8ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದೆ. ಅವರನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿದೆ ಎಂದು ಯಲ್ಲಾಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.
LATEST NEWS
ತಪ್ಪಿಸಿಕೊಳ್ಳಲು ಯತ್ನಿಸಿದ ಬ್ಯಾಂಕ್ ದರೋಡೆ ಆರೋಪಿ ಕಾಲಿಗೆ ಗುಂಡು..!
ಗೋವುಗಳ ಮೇಲಿನ ಪೈಶಾಚಿಕ ಕೃ*ತ್ಯ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ
ಬಾಣಂತನಕ್ಕೆ ಹೋಗಿ ಬಾಯ್ಫ್ರೆಂಡ್ ಜೊತೆ ಪರಾರಿಯಾದ ಖತರ್ನಾಕ್ ಲೇಡಿ
ಅಬ್ಬಬ್ಬಾ! 31 ಕೋಟಿಗೆ ಅಪಾರ್ಟ್ಮೆಂಟ್ ಖರೀದಿಸಿದ್ದ ಅಮಿತಾಬ್ ಬಚ್ಚನ್ ಮಾರಿದ್ದೆಷ್ಟು ರೇಟ್ಗೆ ಗೊತ್ತಾ!?
ಮಹಿಳಾ ನಾಗಸಾಧ್ವಿಗಳು ಮುಟ್ಟಿನ ಸಮಯದಲ್ಲಿ ಏನು ಮಾಡುತ್ತಾರೆ ಗೊತ್ತಾ ?
ಚೂರಿ ಇರಿತ ಪ್ರಕರಣ : ಆಸ್ಪತ್ರೆಯಿಂದ ಸೈಫ್ ಆಲಿ ಖಾನ್ ಬಿಡುಗಡೆ
Trending
- BIG BOSS2 days ago
ಬಿಗ್ ಬಾಸ್ ತೊರೆಯುವ ಬಗ್ಗೆ ಮತ್ತೊಮ್ಮೆ ಘೋಷಣೆ ಮಾಡಿದ ಕಿಚ್ಚ
- FILM2 days ago
ಕಾಂತಾರ ಚಿತ್ರತಂಡಕ್ಕೆ ಎಚ್ಚರಿಕೆ ಕೊಟ್ಟ ಗ್ರಾಮಸ್ಥರು
- DAKSHINA KANNADA6 days ago
ತುಳು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ‘ಗೋಲ್ಡನ್ ಮೂವೀಸ್’; ಕುದ್ರೋಳಿ ಕ್ಷೇತ್ರದಲ್ಲಿ ‘ಪ್ರೊಡಕ್ಷನ್ ನಂ 1’ಗೆ ಅದ್ದೂರಿ ಚಾಲನೆ
- DAKSHINA KANNADA16 hours ago
ತಪ್ಪಿಸಿಕೊಳ್ಳಲು ಯತ್ನಿಸಿದ ಬ್ಯಾಂಕ್ ದರೋಡೆ ಆರೋಪಿ ಕಾಲಿಗೆ ಗುಂಡು..!