ಕಾಸರಗೋಡು: ಜಿಲ್ಲೆಯ ಕೊಡುಗೈ ದಾನಿ, ಕೀಳಿಂಗಾರು ಸಾಯಿರಾಂ ಭಟ್(85) ಅವರು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದು ಇಂದು ವಿಧಿವಶರಾಗಿದ್ದಾರೆ.
ಕುಂಬಳೆ ಸಮೀಪದ ಬದಿಯಡ್ಕ ನಿವಾಸಿಯಾಗಿದ್ದ ಇವರು 265 ಮನೆಗಳನ್ನು ಬಡಮಂದಿಗೆ ಕಟ್ಟಿಸಿಕೊಟ್ಟ ಮಹಾದಾನಿ. ಜಾಗವನ್ನು ತಾವೇ ಖುದ್ದಾಗಿ ಖರೀದಿಸಿ ಮನೆಗಳನ್ನು ತನ್ನದೇ ಖರ್ಚಿನಲ್ಲಿ ಕಟ್ಟಿಸಿ ಬಡವರಿಗೆ ದಾನ ಮಾಡಿದ್ದರು.
ಇದಲ್ಲದೇ ಬಡವರಿಗೆ ಕುಡಿಯುವ ನೀರಿಗಾಗಿ ಬಾವಿಯನ್ನು ಕೂಡಾ ಕಟ್ಟಿಸಿಕೊಟ್ಟಿದ್ದರು. ಪ್ರತೀ ವಾರ ಬಡವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ಶಿಬಿರಗಳನ್ನು ಏರ್ಪಡಿಸುತ್ತಿದ್ದರು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಹಿತ ಹಲವು ಮಂದಿ ಸಾಯಿರಾಂ ಭಟ್ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದರು. ಭಟ್ ಅವರ ನಿಧನಕ್ಕೆ ಹಲವು ಮಂದಿ ಸಂತಾಪ ವ್ಯಕ್ತಪಡಿಸಿದ್ದಾರೆ.