Connect with us

    LATEST NEWS

    ಇಂಡೋ – ಪಾಕ್ ಲವ್ ಸ್ಟೋರಿ; ಬಿಜೆಪಿ ಮುಖಂಡನ ಪುತ್ರನ ಆನ್ಲೈನ್ ಮದುವೆ

    Published

    on

    ಮಂಗಳೂರು/ ಉತ್ತರ ಪ್ರದೇಶ:  ಬಿಜೆಪಿ ನಾಯಕರೊಬ್ಬರ ಮಗ ಪಾಕಿಸ್ತಾನಿ ಹುಡುಗಿಯನ್ನು ಆನ್‌ಲೈನ್ “ನಿಕಾಹ್” ಮೂಲಕ ವಿವಾಹವಾದ ಘಟನೆ ಉತ್ತರ ಪ್ರದೇಶದ ಜೌನ್‌ ಪುರ್‌ ಜಿಲ್ಲೆಯಲ್ಲಿ ನಡೆದಿದೆ.

     

     

    ಭಾರತೀಯ ಜನತಾ ಪಕ್ಷದ (BJP) ಕಾರ್ಪೊರೇಟರ್ ತಹಸೀನ್ ಶಾಹಿದ್ ಅವರು ತಮ್ಮ ಹಿರಿಯ ಮಗ ಮೊಹಮ್ಮದ್ ಅಬ್ಬಾಸ್ ಹೈದರ್ ಮತ್ತು ಲಾಹೋರ್ ನಿವಾಸಿ ಆಂಡ್ಲೀಪ್ ಜಹ್ರಾ ಅವರೊಂದಿಗೆ ವಿವಾಹ ನಡೆದಿದೆ.

     

    ಎರಡು ನೆರೆಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ರಾಜಕೀಯ ಉದ್ವಿಗ್ನತೆಯಿಂದಾಗಿ ವರನಿಗೆ ವೀಸಾಗೆ ಅರ್ಜಿ ಸಲ್ಲಿಸಿದರೂ ಅದನ್ನು ಪಡೆಯಲು ಸಾಧ್ಯವಾಗಲಿಲ್ಲ.

     

    ವಧುವಿನ ತಾಯಿ ರಾಣಾ ಯಾಸ್ಮಿನ್ ಜೈದಿ ಅವರು ಅನಾರೋಗ್ಯಕ್ಕೆ ಒಳಗಾಗಿ ಪಾಕಿಸ್ತಾನದ ಐಸಿಯುಗೆ ಸೇರಿಸಿದ್ದು, ಪರಿಸ್ಥಿತಿ ಇನ್ನಷ್ಟು ಕಠಿಣವಾಗಿತ್ತು. ಈ ಹಿನ್ನೆಲೆಯಲ್ಲಿ ಮದುವೆ ಸಮಾರಂಭವನ್ನು ಆನ್‌ ಲೈನ್‌ನಲ್ಲಿ ನಡೆಸಲು ಶಾಹಿದ್ ನಿರ್ಧರಿಸಿದ್ದಾರೆ.

     

    ಶುಕ್ರವಾರ (ಅ.18) ರಾತ್ರಿ, ಅಬ್ಬಾಸ್ ಹೈದರ್ ಅವರು ಆನ್‌ಲೈನ್ “ನಿಕಾಹ್” ನಲ್ಲಿ ಭಾಗವಹಿಸಿದರು. ಲಾಹೋರ್‌ ನ ವಧುವಿನ ಕುಟುಂಬದವರು ಸಮಾರಂಭದಲ್ಲಿ ಭಾಗವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    LATEST NEWS

    ವಿವಾಹಕ್ಕೆ ಹೋಗುತ್ತಿದ್ದವರ ಬಸ್‌ ಪಲ್ಟಿ; 20ಕ್ಕೂ ಹೆಚ್ಚು ಮಂದಿಗೆ ಗಾಯ

    Published

    on

    ಮಂಗಳೂರು/ಕನಕಪುರ: ವಿವಾಹ ಸಮಾರಂಭಕ್ಕೆ ತೆರಳುತ್ತಿದ್ದವರು ಪ್ರಯಾಣಿಸುತ್ತಿದ್ದ ಬಸ್ಸೊಂದು ಉರುಳಿ ಬಿದ್ದು 20 ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಮಡಿವಾಳದ ಬಳಿ ರವಿವಾರ (ಅ.20) ನಡೆದಿದೆ.

    ಗಾಯಾಳುಗಳನ್ನು ಕನಕಪುರ ಐಪಿಪಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ.

    ತಗಡೆಗೌಡನದೊಡ್ಡಿ ಗ್ರಾಮದ ಜೋಡಿಯ ವಿವಾಹ ಕಾರ್ಯಕ್ರಮವು ಸಂಗಮದ ಬಳಿ ಇರುವ ಮಡಿವಾಳದಲ್ಲಿ ಆಯೋಜಿಸಲಾಗಿತ್ತು. ಎರಡು ಖಾಸಗಿ ಬಸ್ಸಿನಲ್ಲಿ ಜನರು ಹೋಗುತ್ತಿದ್ದರು. ಒಂದು ಬಸ್ಸು ಸಂಗಮದ ಎರಡನೇ ತಿರುವು ಕಾರಚ್ಚಲು ದಿಬ್ಬದ ಬಳಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿದೆ.

    ಈ ಕುರಿತ ಪ್ರಕರಣ ಸ್ಥಳೀಯ ಪೊಳೀಸ್ ಠಾಣೆಯಲ್ಲಿ ದಾಖಲಾಗಿದೆ.

    Continue Reading

    LATEST NEWS

    ವರುಣನಾರ್ಭಟಕ್ಕೆ ಬೆಚ್ಚಿ ಬಿದ್ದ ಮುಳ್ಳಯ್ಯನಗಿರಿ: ತೋಯ್ದು ತೊಪ್ಪಾದ ಪ್ರವಾಸಿಗರು

    Published

    on

    ಮಂಗಳುರು/ಚಿಕ್ಕಮಗಳೂರು: ಹಿಂಗಾರು ಮಳೆಯಬ್ಬರ ರಾಜ್ಯದಲ್ಲಿ ಜೋರಾಗಿಯೇ ಇದೆ. ವಿಶೇಷವಾಗಿ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಯಲ್ಲಿ ಇತಿಹಾಸದಲ್ಲಿ ಕಂಡು ಕೇಳರಿಯದ ಮಳೆ ಈ ಬಾರಿ ದಾಖಲಾಗಿದೆ. ಕರ್ನಾಟಕದ ಅತ್ಯಂತ ಎತ್ತರದ ಪ್ರದೇಶ ಮುಳ್ಳಯ್ಯನಗಿರಿಯ ದತ್ತಪೀಠದಲ್ಲಿ 2 ಅಡಿ ಮಳೆ ನೀರು ನಿಂತುಕೊಂಡಿದೆ.

     

    ಹಿಂಗಾರು ಮಳೆಗೆ ಪಶ್ಚಿಮಘಟ್ಟಗಳ ತಪ್ಪಲು ಅಲ್ಲೋಲ-ಕಲ್ಲೋಲವಾಗಿದೆ. ಕಳೆದ ದಿನ ಸುರಿದ ಭಾರೀ ಮಳೆಗೆ ದತ್ತಪೀಠದ ರಸ್ತೆಯಲ್ಲಿ 2 ಅಡಿ ಎತ್ತರದಲ್ಲಿ ಮಳೆ ನೀರು ಹರಿದಿದೆ. ಮಳೆರಾಯನ ಅಬ್ಬರಕ್ಕೆ ಪ್ರವಾಸಿಗರು ತೊಯ್ದು ತೊಪ್ಪೆಯಾಗಿದ್ದಾರೆ. ಮಳೆ ಮಧ್ಯೆ ಸಿಲುಕಿದ ಪ್ರವಾಸಿಗರು ಮುಳ್ಳಯ್ಯನಗಿರಿ ಸಹವಾಸವೇ ಬೇಡ ಎನ್ನುವಷ್ಟು ಬೆದರಿ ಹೋಗಿದ್ದಾರೆ.

     

    ಸಾವಿರಾರು ಅಡಿ ಆಳ ಇರುವ ಮುಗಿಲೆತ್ತರದ ಬೆಟ್ಟಗುಡ್ಡಗಳ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಮಳೆರಾಯನ ಅರ್ಭಟ ನಿಲ್ಲುತ್ತಲೇ ಇಲ್ಲ. ಎಷ್ಟೇ ಮಳೆ ಸುರಿದರೂ ನೀರು ಹರಿದು ಹೋಗುತ್ತದೆ. ಆದರೀಗ ಹಿಂಗಾರು ಮಳೆ ಅಬ್ಬರಕ್ಕೆ ಅಂತಹಾ ಪಶ್ಚಿಮ ಘಟ್ಟವೇ ಬೆದರಿ ಹೋಗಿದೆ. ಮುಗಿಲೆತ್ತರದ ಬೆಟ್ಟಗಳ ಮೇಲೆ 2 ಅಡಿ ನೀರು ನಿಂತಿದೆ.

    ಶಿವಮೊಗ್ಗದಲ್ಲೂ ನಿಲ್ಲದ ಮಳೆ:

    ಶಿವಮೊಗ್ಗದಲ್ಲೂ ಕಳೆದ ರಾತ್ರಿಯಿಂದ ಎಡಬಿಡದೆ ಧಾರಾಕಾರ ಮಳೆ ಸುರಿಯುತ್ತಿದೆ. ತಗ್ಗು ಪ್ರದೇಶದ ಮನೆಗಳಿಗೆ‌ ಮಳೆ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರದ ದೇವರಾಜು ಅರಸು ಬಡಾವಣೆಯ ಮನೆಗಳು ಜಲಾವೃತಗೊಂಡಿದ್ದು, ಆತಂಕದಲ್ಲಿ ಜನ ಜೀವನ ನಡೆಸುವಂತಾಗಿದೆ. ಅಲ್ಲದೆ ರಸ್ತೆಗಳಲ್ಲಿ ಮಳೆ ನೀರು ಉಕ್ಕಿ ಹರಿಯುತ್ತಿದ್ದು ರಸ್ತೆಗಳು ನದಿಗಳಂತಾಗಿವೆ.

    ಇಡೀ ರಾತ್ರಿ ಸುರಿದ ಮಳೆಗೆ ಜಿಲ್ಲೆಯಾದ್ಯಂತ ಇವತ್ತು ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಕಳೆದ ರಾತ್ರಿ 11 ಗಂಟೆ ಹೊತ್ತಿಗೆ ಆರಂಭವಾದ ಮಳೆ ಬಿಡುವು ನೀಡದೆ ಅಬ್ಬರಿಸುತ್ತಿದೆ. ಗುಡುಗು, ಮಿಂಚು ಸಹಿತ ಮಳೆ ಸುರಿಯುತ್ತಿದೆ. ಇವತ್ತು ಇಡೀ ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. “ಡಿಕೆ ಶಿವಕುಮಾರ್, ವಿಜಯೇಂದ್ರ ಹೊಂದಾಣಿಕೆ ರಾಜಕೀಯ: ಸ್ಫೋಟಕ ಹೇಳಿಕೆ ” ಸಾಗರ, ಹೊಸನಗರ, ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ ಮತ್ತು ಸೊರಬ ತಾಲೂಕುಗಳಲ್ಲಿ ಭಾರಿ ಮಳೆಯ ಅಲರ್ಟ್‌ ಇದೆ. ತೀರ್ಥಹಳ್ಳಿಯಲ್ಲಿ ಸಾಧಾರಣದಿಂದ ಭಾರಿ ಮಳೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ತಿಳಿಸಿದೆ.

    Continue Reading

    DAKSHINA KANNADA

    ರೈಲು ಸಂಚಾರದ ವೇಳೆ ಕೇಳಿಸಿದ ಭಾರೀ ಸದ್ದು; ಹಳಿಯಲ್ಲಿ ಜಲ್ಲಿ ರಾಶಿ ಪತ್ತೆ

    Published

    on

    ಮಂಗಳೂರು: ಮಂಗಳೂರಿನಿಂದ ಕೇರಳಕ್ಕೆ ಹೋಗುವ ಮಾರ್ಗದಲ್ಲಿ ಉಳ್ಳಾಲ ರೈಲು ನಿಲ್ದಾಣದ ಬಳಿ ರೈಲು ಹಳಿಯ ಮೇಲೆ ಜಲ್ಲಿಕಲ್ಲು ಸುರಿದಿರುವ ಘಟನೆ ಬೆಳಕಿಗೆ ಬಂದಿದೆ. ಶನಿವಾರ ತಡರಾತ್ರಿಯಲ್ಲಿ ಕೇರಳಕ್ಕೆ ತೆರಳುತ್ತಿದ್ದ ರೈಲು ಸಂಚರಿಸಿದ ವೇಳೆ ಭಾರಿ ಸದ್ದು ಕೇಳಿ ಬಂದಿತ್ತು. ಕೆಲ ಹೊತ್ತಿನ ಬಳಿಕ ಮತ್ತೊಂದು ರೈಲು ಸಂಚರಿಸುವಾಗಲೂ ಇದೇ ರೀತಿಯ ಸದ್ದು ಕೇಳಿಸಿತ್ತು.


    ಸ್ಥಳೀಯರು ಈ ಸದ್ದು ಕೇಳಿ ಭೂಕಂಪ ಇರಬಹುದು ಎಂದು ಮನೆಯಿಂದ ಹೊರ ಬಂದಿದ್ದರು. ಈ ವೇಳೆ ಕೆಲವರು ರೈಲು ಹೋದ ಸಮಯದಲ್ಲಿ ಈ ಸದ್ದು ಕೇಳಿಸಿದ್ದ ಕಾರಣ ಹಳಿಯಲ್ಲಿ ತಪಾಸಣೆ ನಡೆಸಿದ್ದಾರೆ. ತಪಾಸಣೆಯ ವೇಳೆ ಹಳಿಯ ಮೇಲೆ ಜಲ್ಲಿಕಲ್ಲು ಸುರಿದಿರುವುದು ಪತ್ತೆಯಾಗಿದ್ದು, ರೈಲ್ವೇ ಪೊಲೀಸರು ಹಾಗೂ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಘಟನೆಯಿಂದ ಯಾರೋ ಉದ್ದೇಶಪೂರ್ವಕವಾಗಿ ಹಳಿಗಳ ಮೇಲೆ ಜಲ್ಲಿ ಕಲ್ಲು ಸುರಿದಿರ ಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ.

    ಇತ್ತೀಚೆಗೆ ಹಲವು ರೈಲು ಅಪಘಾತಗಳು ಸಂಭವಿಸುತ್ತಿದ್ದು, ಇದೂ ಕೂಡ ಅಂತಹ ಒಂದು ಪ್ರಯತ್ನದ ಭಾಗವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ರೈಲ್ವೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Continue Reading

    LATEST NEWS

    Trending