Gulf
ಸೌದಿ ಡೆಡ್ಲಿ ಡಕಾರ್ ರ‍್ಯಾಲಿ ವೇಳೆ ಅಪಘಾತ- ಕೋಮಾದಲ್ಲಿ ಇಂಡಿಯನ್ ರೇಸರ್ ಸಂತೋಷ್..!
Published
4 years agoon
By
Adminಸೌದಿ ಡೆಡ್ಲಿ ಡಕಾರ್ ರ‍್ಯಾಲಿ ವೇಳೆ ಅಪಘಾತ- ಕೋಮಾದಲ್ಲಿ ಇಂಡಿಯನ್ ರೇಸರ್ ಸಂತೋಷ್..!
ರಿಯಾದ್ : ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ ಡಕಾರ್ 6 ರ‍್ಯಾಲಿ ವೇಳೆ ಅಪಘಾತದಿಂದ ಗಾಯಗೊಂಡಿರುವ ದೇಶದ ಹೆಸರಾಂತ ಮೋಟಾರ್ ಸೈಕಲ್ ರೇಸರ್ ಸಿಎಸ್ ಸಂತೋಷ್ ಅವರನ್ನು ರಿಯಾದ್ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಿದ ನಂತರ ಕೋಮಾ ಸ್ಥಿತಿಗೆ ಜಾರಿದ್ದಾರೆ.
ಹಿರೋ ಮೋಟೊ ಸ್ಫೋರ್ಟ್ಸ್ ಪ್ರತಿನಿಧಿಸುತ್ತಿದ್ದ 37 ವರ್ಷದ ಸಂತೋಷ್, ಬುಧವಾರ ಅಪಘಾತಕ್ಕೀಡಾಗಿದ್ದು, 24 ಗಂಟೆಗಳ ಕಾಲ ವೈದ್ಯಕೀಯ ನಿಗಾವಣೆಯಲ್ಲಿ ಇರಿಸಲಾಗಿದೆ.
2021ರ ಡಕಾರ್ ರ‍್ಯಾಲಿಯ ಇಂದಿನ ಹಂತದಲ್ಲಿ ವೇ ಪಾಯಿಂಟ್ 4ನ್ನು ದಾಟಿದ ನಂತರ ಅಘಘಾತ ನಡೆದಿದೆ.
ಇದೊಂದು ದುರದೃಷ್ಟಕರ ಘಟನೆಯಾಗಿದ್ದು, ರಿಯಾದ್ ಆಸ್ಪತ್ರೆಗೆ ಅವರನ್ನು ಕರೆದೊಯ್ಯಲಾಗಿದೆ. ಬೇಗನೆ ಚೇತರಿಸಿಕೊಂಡು ನಮ್ಮನ್ನು ಸೇರಲಿ ಎಂದು ಹಾರೈಸುವುದಾಗಿ ಹಿರೋ ಮೋಟೋ ಸ್ಪೋರ್ಟ್ ಟ್ವೀಟ್ ಮಾಡಿದೆ.
ವರದಿಗಳ ಪ್ರಕಾರ, ರಿಯಾದ್ ಆಸ್ಪತ್ರೆಗೆ ಕರೆದೊಯ್ಯುವ ಮುನ್ನ ಅರೆವೈದ್ಯಕೀಯ ಸಿಬ್ಬಂದಿ ಬಂದಾಗ ಸಂತೋಷ್ ಗೆ ಪ್ರಜ್ಞೆ ಇತ್ತೆಂದು ಹೇಳಿವೆ.
ಕಳೆದ ವರ್ಷ ಇಲ್ಲಿಯೇ ನಡೆದ ಡಕಾರ್ 2020 ಸಂದರ್ಭದಲ್ಲಿ ಹಿರೋ ಮೋಟೊ ಸ್ಫೋರ್ಟ್ ಸವಾರ ಪೌಲ್ ಗಾನ್ ಕಾಲ್ವೀಸ್ ಸಾವನ್ನಪ್ಪಿದ್ದರು.
2015ರಲ್ಲಿ ರೇಸ್ ಪೂರ್ಣಗೊಳಿಸಿದ ಮೊದಲ ಭಾರತೀಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಸಿಎಸ್ ಸಂತೋಷ್, ಮುಂದಿನ ಎರಡು ಆವೃತ್ತಿಗಳಲ್ಲಿ ಪ್ರಯತ್ನವನ್ನು ಪುನರಾವರ್ತಿಸಿದ್ದರು.
Gulf
ದುಬಾಯಿನಲ್ಲಿ ವರುಣಾರ್ಭಟ.. ಸಾಗರದಂತಾದ ರನ್ ವೇ, ನದಿಯಂತಾದ ರಸ್ತೆ, ಜನಜೀವನ ಅಸ್ತವ್ಯಸ್ಥ..!
Published
8 months agoon
17/04/2024By
NEWS DESK3ದುಬಾಯಿ: ಮಧ್ಯ ಪ್ರಾಚ್ಯ ದೇಶವಾದ ದುಬೈನಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು ನಿನ್ನೆ(ಎ.16) ಸುರಿದ ಧಾರಾಕಾರ ಮಳೆಯಿಂದ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದ್ದು ಜನ ಜೀವನ ಅಸ್ತವ್ಯಸ್ಥಗೊಂಡಿತ್ತು. ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ಯಲ್ಲಿ ನೀರು ನಿಂತ ಪರಿಣಾಮ ಅರ್ಧ ಗಂಟೆ ಕಾಲ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು.
ದುಬೈ ವಿಮಾನ ನಿಲ್ದಾಣಕ್ಕೆ ಬರಬೇಕಾಗಿದ್ದ ಕೆಲ ವಿಮಾನಗಳು ಮಾರ್ಗ ಬದಲಾಯಿಸಿ ಸಂಚರಿಸಿದವು. ಮಳೆಯ ಆರ್ಭಟಕ್ಕೆ ಕೆಲ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನಜೀವನ ಅಸ್ತವ್ಯಸ್ಥಗೊಂಡಿದೆ. ವಿಮಾನ ನಿಲ್ದಾಣದ ರನ್ ವೇ ಯಲ್ಲಿ ನೀರು ನಿಂತು ಸಾಗರದಂತಾಯಿತು ಹಾಗೂ ರಸ್ತೆಗಳು ನದಿಯಂತಾಗಿದ್ದವು. ದುಬೈ ವಿಮಾನ ನಿಲ್ದಾಣದಲ್ಲಿ ವಿಮಾನವೊಂದು ಪ್ರವಾಹದ ನೀರಿನ ನಡುವೆ ಸಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮನೆಗಳ ಮುಂದೆ ನಿಲ್ಲಿಸಿದ್ದ ಕಾರುಗಳು ನೀರಿನಲ್ಲಿ ಮುಳುಗಿ ಹೋಗಿದ್ದು ರಸ್ತೆ ಸಂಚಾರ ಕಷ್ಟ ಸಾಧ್ಯವಾಗಿತ್ತು.
ಮಂಗಳವಾರದಂದು ಕೇವಲ 12 ಗಂಟೆಗಳಲ್ಲಿ ವಿಮಾನ ನಿಲ್ದಾಣದಲ್ಲಿ ಸುಮಾರು 100 ಮಿಮೀ ಮಳೆಯಾಗಿದ್ದು ಒಟ್ಟು 24 ಗಂಟೆಗಳಲ್ಲಿ 160 ಮಿಮೀ ಮಳೆಯಾಗಿದ್ದು ಇದು ದಾಖಲೆಯ ಮಳೆ ಎನ್ನಲಾಗಿದೆ.
READ MORE..; ದಿನದಲ್ಲಿಎರಡು ಬಾರಿ ಕಣ್ಮರೆಯಾಗುತ್ತೆ ಈ ದೇವಾಲಯ..! ಇಲ್ಲಿಗೆ ಬಂದ್ರೆ ಆಗುತ್ತೆ ಪಾಪ ವಿಮೋಚನೆ!
bangalore
ಸದ್ದು ಮಾಡ್ತಾ ಇದೆ ‘ಕಾಂತಾರ ಚಾಪ್ಟರ್ 1’…! ಚಿತ್ರೀಕರಣಕ್ಕೂ ಮೊದಲೇ ಫುಲ್ ಡಿಮ್ಯಾಂಡ್..!
Published
9 months agoon
20/03/2024By
Adminಮುಂಬೈ : ರಿಷಬ್ ಶೆಟ್ಟಿ ( Rishab Shetty ) ನಿರ್ದೇಶನ ಮಾಡಿ ಅಭಿನಯಿಸಿರುವ ‘ಕಾಂತಾರ ಚಾಪ್ಟರ್ 1’ ( Kanthara Chapter 1 ) ಚಿತ್ರೀಕರಣ ಇನ್ನೂ ಆರಂಭವಾಗಿಲ್ಲ. ಆದ್ರೆ ಈ ಸಿನೆಮಾ ಚಿತ್ರೀಕರಣ ಆರಂಭಕ್ಕೂ ಮೊದಲೇ ಭಾರಿ ಸದ್ದು ಮಾಡಿದೆ. ಮುಂದಿನ ತಿಂಗಳು ಚಿತ್ರೀಕರಣ ಆರಂಭವಾಗಲಿದ್ದು ಭಾರೀ ನಿರೀಕ್ಷೆ ಹೊಂದಿದೆ. ವಿಶೇಷ ಅಂದ್ರೆ ಈ ಚಿತ್ರದ ಒಟಿಟಿ ಹಕ್ಕು ಕೋಟ್ಯಾಂತರ ರೂಪಾಯಿಗಳಿಗೆ ಮಾರಾಟವಾಗಿದೆ.
2022 ರಲ್ಲಿ ಕನ್ನಡ ಫಿಲ್ಮ ಇಂಡಸ್ಟ್ರೀ ಮಾತ್ರವಲ್ಲದೆ ಇಡೀ ದೇಶದಲ್ಲಿ ‘ಕಾಂತಾರ’ (Kanthara ) ಸದ್ದು ಮಾಡಿತ್ತು. ಬಾಕ್ಸ್ ಆಫೀಸ್ ದಾಖಲೆಯನ್ನು ಚಿಂದಿ ಉಡಾಯಿಸಿ ‘ಕಾಂತಾರ’ ಯಶಸ್ಸು ಗಳಿಸಿತ್ತು. ಈ ಯಶಸ್ಸಿನ ಬಳಿಕ ಪಾರ್ಟ್ 2 ತೆರೆಗೆ ಬರಲಿದೆ ಅನ್ನೋ ಸುದ್ದಿ ಅಭಿಮಾನಿಗಳು ಹಾಗೂ ಸಿನಿರಂಗದಲ್ಲೂ ಹರಿದಾಡಿತ್ತು. ನಿರೀಕ್ಷೆ ಹುಸಿಯಾಗದಂತೆ ರಿಶಬ್ ಶೆಟ್ಟಿ ‘ಕಾಂತಾರ ಚಾಪ್ಟರ್ 1’ ಪೋಸ್ಟರ್ ಬಿಡುಗಡೆ ಮಾಡಿದ್ದರು. ಕರಾವಳಿಯ ಪೌರಾಣಿಕ ಹಿನ್ನಲೆಯನ್ನು ಇಟ್ಟುಕೊಂಡು ‘ಕಾಂತಾರ ಚಾಪ್ಟರ್ 1’ ತೆರೆಗೆ ಬರಲಿದೆ ಅನ್ನೋದು ಪೋಸ್ಟರ್ ( poster )ನೋಡಿದ ಹಲವು ಫ್ಯಾನ್ಸ್ ಚರ್ಚೆ ಮಾಡಿದ್ದರು. ‘ಕಾಂತಾರ’ ಕಥೆ ನಡೆಯುವುದಕ್ಕೆ ಮುನ್ನ ಏನಾಗಿತ್ತು ಎನ್ನುವುದನ್ನು ರಿಷಬ್ ಶೆಟ್ಟಿ ಈ ಭಾಗದಲ್ಲಿ ವಿವರಿಸಲಿದ್ದಾರೆ. ಕ್ರಿ.ಶ. 301-400ರ ಕಾಲಘಟ್ಟದ ಕಥೆ ತೆರೆ ಮೇಲೆ ಅನಾವರಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಈ ಸಿನಿಮಾ ಪಂಜುರ್ಲಿ ದೈವ ಮತ್ತು ಗುಳಿಗ ದೈವಗಳ ಮೂಲದ ಕಥೆಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ. ‘ಕಾಂತಾರ’ ಸಿನೆಮಾದ ಒಟಿಟಿ ಹಕ್ಕನ್ನು ಅಮೇಜಾನ್ ಪ್ರೈಮ್ ಪಡೆದುಕೊಂಡಿತ್ತು. ಇದೀಗ ‘ಕಾಂತಾರ ಚಾಪ್ಟರ್ 1’ ಶೂಟಿಂಗ್ ಆರಂಭಕ್ಕೂ ಮೊದಲೇ ಅಮೇಜಾನ್ ಪ್ರೈಮ್ ಕೋಟ್ಯಾಂತರ ರೂಪಾಯಿಗಳಿಗೆ ಒಟಿಟಿ ಹಕ್ಕು ಪಡೆದುಕೊಂಡಿದೆ.
There is no calamity greater than lavish desires. Such a calamity caused by a petty king ignites a rage in the heart of God's chosen tribal leader.#Kantara available post-theatrical release. #AreYouReady #PrimeVideoPresents pic.twitter.com/KgEVHu1T6W
— prime video IN (@PrimeVideoIN) March 19, 2024
ಮುಂಬೈಯಲ್ಲಿ ಮಂಗಳವಾರ (ಮಾರ್ಚ್ 19) ನಡೆದ ಅಮೇಜಾನ್ ಪ್ರೈಂನ ಕಾರ್ಯಕ್ರಮವೊಂದರಲ್ಲಿ ಈ ವಿಚಾರವನ್ನು ಬಹಿರಂಗವಾಗಿದೆ. ಐಷಾರಾಮಿ ಆಸೆಗಳಿಗಿಂತ ದೊಡ್ಡ ವಿಪತ್ತು ಇನ್ನೊಂದಿಲ್ಲ. ಒಬ್ಬ ಕ್ಷುಲ್ಲಕ ರಾಜನಿಂದ ಉಂಟಾಗುವ ಇಂತಹ ವಿಪತ್ತು, ದೇವರು ಆಯ್ಕೆ ಮಾಡಿದ ಬುಡಕಟ್ಟು ನಾಯಕನ ಹೃದಯದಲ್ಲಿ ಕ್ರೋಧವನ್ನು ಪ್ರಚೋದಿಸುತ್ತದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ನಂತರ ಇಲ್ಲಿ ಪ್ರಸಾರವಾಗಲಿದೆʼʼ ಎಂದು ಪ್ರೈಂ ತನ್ನ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದೆ.
‘ಕಾಂತಾರ ಚಾಪ್ಟರ್ 1’ ಸಿನಿಮಾ ತೆರೆಕಂಡು ಒಂದೂವರೆ ತಿಂಗಳ ಬಳಿಕ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಪ್ಯಾನ್ ಇಂಡಿಯಾ ಸಿನೆಮಾ ಅಲ್ಲದೇ ಇದ್ರೂ ‘ಕಾಂತಾರʼ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ‘ಕಾಂತಾರ ಚಾಪ್ಟರ್ 1’ ಕನ್ನಡ ಜೊತೆಗೆ ವಿವಿಧ ಭಾಷೆಯಲ್ಲಿ ತೆರೆಗೆ ಬರಲಿದ್ದು, ಅಂದಾಜು 125 ಕೋಟಿ ಬಜೆಟ್‌ನಲ್ಲಿ ಸಿನೆಮಾ ತಯಾರಾಗುತ್ತಿದೆ.
‘ಕಾಂತಾರ ಚಾಪ್ಟರ್ 1’ ರಿಷಬ್ ಶೆಟ್ಟಿ ಹೇಳಿದ್ದೇನು?
ಅಮೇಜಾನ್ ಪ್ರೈಂನ (amazon prime ) ಕಾರ್ಯಕ್ರಮದಲ್ಲಿ ಮಾತನಾಡಿದ ರಿಷಬ್ ಶೆಟ್ಟಿ, ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇಂತಹ ಒಂದು ಸಿನೆಮಾ ನೀಡಬೇಕು ಅನ್ನೋದು ನನ್ನ ಕಾಲೇಜು ದಿನಗಳ ಕನಸಾಗಿತ್ತು. ‘ಕಾಂತಾರ’ ಸಿನೆಮಾಗೆ ಜನರು ಅಭೂತಪೂರ್ವ ಬೆಂಬಲ ನೀಡಿದ ಕಾರಣ ಈಗ ‘ಕಾಂತಾರ ಚಾಪ್ಟರ್ 1’ ಮಾಡಲು ಹೊರಟಿದ್ದೇವೆ. ನಮ್ಮ ಊರಿನಲ್ಲಿ ( ಕುಂದಾಪುರ ) ದೊಡ್ಡ ಸೆಟ್ಟ ಹಾಕುತ್ತಿದ್ದು, ಅಲ್ಲಿ ಶೀಘೃ ಚಿತ್ರೀಕರಣ ( shooting ) ಆರಂಭವಾಗಲಿದೆ ಎಂದು ಹೇಳಿದ್ದಾರೆ. ಚಿತ್ರದಲ್ಲಿ ಯಾರೆಲ್ಲಾ ನಟಿಸಲಿದ್ದಾರೆ ಅನ್ನೋದು ಇನ್ನೂ ಬಹಿರಂಗವಾಗಿಲ್ಲ. ‘ಕಾಂತಾರ’ದಲ್ಲಿ ನಟಿ ಸಪ್ತಮಿ ಗೌಡ (Sapthami Gowda ) ನಟಿಸಿದ್ದು ಇದರಲ್ಲೂ ಇರ್ತಾರಾ ಅನ್ನೋ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
bangalore
ಸದ್ದು ಮಾಡ್ತಿದೆ ‘ಟಾಕ್ಸಿಕ್’ ಸಿನೆಮಾ..! ರಾಕಿಂಗ್ ಸ್ಟಾರ್ ಜೊತೆ ಕಾಣಿಸಲಿದ್ದಾರಾ ಕರೀನಾ…?
Published
9 months agoon
17/03/2024By
Adminಮುಂಬೈ : ಸೌತ್ ಇಂಡಿಯಾ (South India ) ಸಿನೆಮಾದಲ್ಲಿ ಅಭಿನಯಿಸುವುದಿಲ್ಲ ಎಂದು ಹೇಳಿದ್ದ ಬಾಲಿವುಡ್(Bollywood) ನಟಿ ಕರೀನಾ ಕಪೂರ್ ಈಗ ಸೌತ್ ಇಂಡಿಯಾ ಸಿನೆಮಾದಲ್ಲಿ ನಟಿಸೋದಾಗಿ ಹೇಳಿದ್ದಾರೆ. ಇಂತಹ ಒಂದು ಸಂಗತಿಯನ್ನು ಸ್ವತಹ ಕರಿನಾ ಕಪೂರ್(Kareena Kapoor) ಅವರು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಸಿನೆಮಾದಲ್ಲಿ(PAN India ) ನಟಿಸುತ್ತಿದ್ದು, ಸೌತ್ ಇಂಡಿಯಾದ ಇಂಡಸ್ಟ್ರಿಯೊಂದು ಚಿತ್ರ ನಿರ್ಮಾಣ ಮಾಡುತ್ತಿದೆ. ಆದ್ರೆ ಶೂಟಿಂಗ್ ಎಲ್ಲಿ ಮಾಡ್ತೇನೆ ಅನ್ನೋದು ಗೊತ್ತಿಲ್ಲ ಅಂತ ಅವರು ಹೇಳಿಕೊಂಡಿದ್ದಾರೆ.
ಮಲೆಯಾಳಂ ಮೂಲದ ನಟಿ ನಿರ್ದೇಶಿಕಿ ಗಿತು ಮೋಹನ್‌ದಾಸ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರ ‘ಟಾಕ್ಸಿಕ್’ ಚಿತ್ರ ಆಗಿರಬಹುದು ಎಂದು ಅಭಿಮಾನಿಗಳು ಅಂದಾಜಿಸಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರೋ ‘ಟಾಕ್ಸಿಕ್’ ನಿರ್ಮಾಣ ಹಂತದಲ್ಲಿದ್ದು, ಈಗಾಗಲೇ ಪೋಸ್ಟರ್ ಬಿಡುಗಡೆ ಆಗಿದೆ. ಹೀಗಾಗಿ ಇದೇ ಸಿನೆಮಾ ಆಗಿರಬಹುದು ಅನ್ನೋದು ಅಭಿಮಾನಿಗಳ ಅನುಮಾನ. ‘ಟಾಕ್ಸಿಕ್’ (Toxic) ಸಿನೆಮಾದಲ್ಲಿ ಟಾಲಿವುಡ್ ಚೆಲುವೆ ಸಾಯಿ ಪಲ್ಲವಿ (Sai Pallavi) ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಜೊತೆಗೆ ಮಲೆಯಾಳಂ ನಟಿ ಸಂಯುಕ್ತಾ ಮೆನನ್(Samyuktha Menon) ಕೂಡಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಬಹುಬಾಷಾ ನಟಿ ರಾಶಿ ಖನ್ನಾ(Rashi Khanna) ಅವರೂ ಕೂಡಾ ಈ ಸಿನೆಮಾದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿದೆ. ಸುಮಾರು 170 ಕೋಟಿ ಬಜೆಟ್‌ನ ಯಶ್ ಚಿತ್ರವಾಗಿದ್ದು, ಡ್ರಗ್ ಮಾಫಿಯಾದ ಕಥಾ ಹಂದರವನ್ನು ಹೊಂದಿದೆ ಎಂದು ಹೇಳಲಾಗಿದೆ. ಆದ್ರೆ ಸಿನೆಮಾದ ಯಾವುದೇ ಸೀಕ್ರೆಟ್ ಬಿಟ್ಟು ಕೊಡದ ಚಿತ್ರ ತಂಡ, ಚಿತ್ರ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದು, 2025 ರಲ್ಲಿ ಪ್ಯಾನ್ ಇಂಡಿಯಾದಲ್ಲಿ ತೆರೆಗೆ ತರುವಲ್ಲಿ ಶ್ರಮಿಸ್ತಾ ಇದೆ.
ಇಂತಹ ಒಂದು ದೊಡ್ಡ ಬಜೆಟ್‌ನ ಸೌತ್ ಇಂಡಿಯಾ ಸಿನೆಮಾದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ನಟಿಸಲಿದ್ದಾರೆ ಅನ್ನೋದು ಈಗ ಭಾರಿ ಸುದ್ದಿಯಾಗಿದೆ. ಈ ಹಿಂದೆಯೂ ಯಶ್ ಚಿತ್ರದಲ್ಲಿ ಬಾಲಿವುಡ್ ಕಲಾವಿದರು ಕಾಣಿಸಿಕೊಂಡಿದ್ದು, ‘ಕೆಜಿಎಫ್ 2’ ನಲ್ಲಿ ರವಿನಾ ಟಂಡನ್ ಹಾಗೂ ಸಂಜಯ್ ದತ್ತ್ ಕಾಣಿಸಿಕೊಂಡಿದ್ದರು. ‘ಟ್ಯಾಕ್ಸಿಕ್’ ಚಿತ್ರವನ್ನು ಕೆವಿಎನ್ ಪ್ರೋಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ.ನಾರಾಯಣ ಅವರು ನಿರ್ಮಾಣ ಮಾಡುತ್ತಿದ್ದಾರೆ.