LATEST NEWS
ಸೈಬರ್ ಬೆದರಿಕೆ ಪಟ್ಟಿಗೆ ಸೇರ್ಪಡೆಯಾದ ಭಾರತ; ಕಾರಣ ಗೊತ್ತಾ ??
ಮಂಗಳೂರು/ಹೊಸದಿಲ್ಲಿ: ಕೆನಡಾ ದೇಶವು ಖಲಿಸ್ಥಾನಿ ಉಗ್ರ ಹದೀಪ್ ಸಿಂಗ್ ನಿಜ್ಜರ್ ಹತ್ಯೆ ವಿಚಾರವಾಗಿ ಭಾರತದ ವಿರುದ್ಧ ಆರೋಪ ಹೇರಿದ್ದು, ಇದೀಗ ತನ್ನ ಸೈಬರ್ ಬೆದರಿಕೆ ಪಟ್ಟಿಗೆ ಭಾರತವನ್ನು ಸೇರಿಸಿದೆ. ಕೆನಡಾ ಮೇಲೆ ಭಾರತವು ಸರ್ಕಾರಿ ಪ್ರಾಯೋಜಿತ ಹ್ಯಾಕಿಂಗ್ ಮತ್ತು ಸೈಬರ್ ಬೇಹುಗಾರಿಕೆಗೆ ಯತ್ನಿಸುತ್ತಿದೆ ಎಂಬುವುದಾಗಿ ಆರೋಪಿಸಲಾಗಿದೆ.
ನಿಜ್ಜರ್ ವಿಚಾರವಾಗಿ ಕೆನಡಾ ಮತ್ತು ಭಾರತದ ನಡುವೆ ಮೂಡಿರುವ ರಾಜತಾಂತ್ರಿಕ ಬಿಕ್ಕಟ್ಟು ಬಗೆಹರಿಯುವ ಮೊದಲೇ ಕೆನಡಾದ ಈ ನಡೆ ಉಭಯ ರಾಷ್ಟ್ರಗಳ ನಡುವೆ ಮತ್ತೂಂದು ಕಂದಕ ಮೂಡಿಸುವ ಸಾಧ್ಯತೆ ಇದೆ.
“ನ್ಯಾಶನಲ್ ಸೈಬರ್ ಥೆÅಟ್ ಅಸೆಸ್‌ಮೆಂಟ್ 2025-2026′ ವರದಿಯಲ್ಲಿ ಭಾರತದ ವಿರುದ್ಧ ಮೇಲ್ಕಂಡ ಆರೋಪವನ್ನು ಕೆನಡಾ ಸರಕಾರ ಮಾಡಿದೆ. ಕೆನಡಾದಲ್ಲಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳು ಎದುರಿಸುತ್ತಿರುವ ಸೈಬರ್ ಬೆದರಿಕೆಗಳ ಕುರಿತಾದ ಮಾಹಿತಿ ಇರುವ ಈ ವರದಿಯು ಯಾವ ರಾಷ್ಟ್ರಗಳು ಈ ಬೆದರಿಕೆಗಳನ್ನು ಪ್ರಾಯೋಜಿಸುತ್ತಿವೆ ಎನ್ನುವ ಪಟ್ಟಿಯನ್ನೂ ಒಳಗೊಂಡಿದೆ. ಇದರಲ್ಲಿ ಭಾರತಕ್ಕೆ 5ನೇ ಸ್ಥಾನ ನೀಡಲಾಗಿದೆ. ಉಳಿದಂತೆ ಮೊದಲ ಸ್ಥಾನದಲ್ಲಿ ಚೀನಾ, ನಂತರದಲ್ಲಿ ರಷ್ಯಾ, ಇರಾನ್ ಮತ್ತು ಉತ್ತರ ಕೊರಿಯಾದ ಹೆಸರುಗಳನ್ನು ಉಲ್ಲೇಖೀಸಲಾಗಿದೆ. ಈ ಹಿಂದೆ ಯಾವ ವರದಿಯಲ್ಲೂ ಭಾರತದ ಹೆಸರು ಇರಲಿಲ್ಲ.
ಭಾರತದ ವಾಗ್ದಾಳಿ; ಕೆನಡಾ ಕುತಂತ್ರ
ಭಾರತದ ಮೇಲಿನ ಕೆನಡಾದ ಆರೋಪವನ್ನು ಭಾರತ ತಿರಸ್ಕರಿಸಿದೆ. ಭಾರತದ ಕುರಿತು ಜಗತ್ತಿನ ರಾಷ್ಟ್ರಗಳು ಹೊಂದಿರುವ ಅಭಿಪ್ರಾಯವನ್ನು ಬದಲಿಸಿ, ಭಾರತದ ವರ್ಚಸ್ಸಿನ ಮೇಲೆ ದಾಳಿ ನಡೆಸಲು ಕೆನಡಾ ಈ ರೀತಿಯ ಹೊಸ ಕಾರ್ಯತಂತ್ರ ರೂಪಿಸಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣದೀರ್ ಜೈಸ್ವಾಲ್ ಹೇಳಿದ್ದಾರೆ. ಜತೆಗೆ ಈ ಹಿಂದೆಯೂ ಭಾರತದ ಮೇಲೆ ಜಾಗತಿಕ ಅಭಿಪ್ರಾಯ ಬದಲಿಸಲು ಪ್ರಯತ್ನಿಸಿದ್ದಾಗಿ ಕೆನಡಾದ ಹಿರಿಯ ಅಧಿಕಾರಿಗಳೇ ಒಪ್ಪಿಕೊಂಡಿದ್ದರು.
ಇದನ್ನೂ ಓದಿ: ಭಾರತೀಯ ನೌಕಾಪಡೆಗೆ ನಾಲ್ಕನೇ ಪರಮಾಣು ಜಲಾಂತರ್ಗಾಮಿ ನೌಕೆ ಸೇರ್ಪಡೆ
ಈಗಲೂ ಅಂಥದ್ದೇ ಪ್ರಯತ್ನ ಮಾಡಿದ್ದಾರೆ ಎಂದೂ ಹೇಳಿದ್ದಾರೆ. ಜತೆಗೆ ನೇರವಾಗಿ ಕೆನಡಾಗೆ ಚಾಟಿ ಬೀಸಿ, “ನೀವು ಮೊದಲಿಗೆ ನಮ್ಮ ವಿರುದ್ಧ ಆಧಾರರಹಿತ ಹೇಳಿಕೆ ನೀಡುತ್ತೀರಿ. ನಾವು ಅದನ್ನು ವಿರೋಧಿಸಿದಾಗ ನಮ್ಮ ವಿರುದ್ಧ ಇಂಥ ದೊಡ್ಡಮಟ್ಟದ ಆರೋಪ ಹೊರಿಸುತ್ತೀರಿ, ಇದು ಸರಿ ಅಲ್ಲ” ಎಂದು ಜೈಸ್ವಾಲ್ ಹೇಳಿದ್ದಾರೆ.
DAKSHINA KANNADA
ಮಂಗಳೂರು : ಹೊಸ ವಾಟರ್ ವೆುಟ್ರೋ ಕಲ್ಪನೆಗೆ ಮುಂದಾದ ಕೆಎಂಬಿ
ಮಂಗಳೂರು: ಕೊಚ್ಚಿನ್ ಮಾದರಿಯಲ್ಲಿ ವಾಟರ್ ಮೆಟ್ರೋ ವ್ಯವಸ್ಥೆ (ಎಂಡಬ್ಲ್ಯುಎಂಪಿ) ಮಂಗಳುರಿನಲ್ಲಿಯೂ ಕಲ್ಪಿಸುವುದಾಗಿ ಕರ್ನಾಟಕ ಮೆರಿಟೈಂ ಮಂಡಳಿ (ಕೆಎಂಬಿ)ಯು ಮುಂದಾಗಿದೆ.
ಈ ಕುರಿತು ವಿಸ್ತೃತ ಯೋಜನಾ ವರದಿ ಸಿದ್ಧ ಪಡಿಸಲು ಮಂಡಳಿ ಸಿದ್ಧತೆ ಮಾಡಿಕೊಂಡಿದೆ. ನೇತ್ರಾವತಿ, ಫಲ್ಗುಣಿ ನದಿಗಳನ್ನು ಬೆಸೆದು ಬಜಾಲ್‌ನಿಂದ ಮರವೂರಿನವರೆಗೆ ಈ ವಾಟರ್ ಮೆಟ್ರೋ ಜಾಲವನ್ನು ರೂಪಿಸುವುದು ಯೋಜನೆಯ ಸಾರ.
ಹಂತಹಂತವಾಗಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು. ಆರಂಭದಲ್ಲಿ ನೇತ್ರಾವತಿ, ಫಲ್ಗುಣಿ ನದಿಗಳ ಹಿನ್ನೀರನ್ನು ಬಳಸಿ ಸುಮಾರು 30 ಕಿ.ಮೀ. ವ್ಯಾಪ್ತಿಯಲ್ಲಿ ಈ ಜಾಲವನ್ನು ರೂಪಿಸಲಾಗುತ್ತದೆ. ಇದರಲ್ಲಿ 17ರಷ್ಟು ಮೆಟ್ರೋ ಸ್ಟೇಷನ್‌ಗಳು ಇರುತ್ತವೆ.
2024-25ರ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಈ ಯೋಜನೆಯನ್ನು ಪ್ರಕಟಿಸಿದ್ದರು. ವಿಸ್ತೃತ ಯೋಜನಾ ವರದಿ (ಡಿಪಿಆರ್)ನಲ್ಲಿ ಮೆಟ್ರೋ ಸ್ಟೇಷನ್‌ಗಳ ಬೇಡಿಕೆಯ ತಾಣಗಳು, ಭೂಮಿಯ ಲಭ್ಯತೆ, ಸಂಪರ್ಕ ಜಾಲ ಇತ್ಯಾದಿಗಳನ್ನು ಅಧ್ಯಯನ ಮಾಡಲಾಗುವುದು. ಮಂಗಳೂರಿನ ಹಳೆ ಬಂದರು ಪ್ರದೇಶದಲ್ಲಿ ಇರುವ ದಟ್ಟಣೆಯನ್ನು ಹಗುರಗೊಳಿಸುವುದಕ್ಕೆ ರೋಲ್ ಆನ್-ರೋಲ್ ಆಫ್ ಮಾದರಿಯಲ್ಲಿ ವಾಹನಗಳ ಸಾಗಾಟದ ಬಗ್ಗೆಯೂ ಇದರಲ್ಲಿ ಸಾಧ್ಯತೆಯ ಅಧ್ಯಯನ ಇರಲಿದೆ.
ದೇಶದ ಮೊದಲ ವಾಟರ್ ಮಟ್ರೋ ಆಗಿ ಕೊಚ್ಚಿನ್ ವಾಟರ್ ಮೆಟ್ರೋ ಕಳೆದ ವರ್ಷವಷ್ಟೇ ಉದ್ಘಾಟನೆಗೊಂಡಿತ್ತು. 78 ದೋಣಿಗಳು, 38 ಜೆಟ್ಟಿಗಳನ್ನು ಒಳಗೊಂಡು 10 ದ್ವೀಪಗಳನ್ನು ಸಂಪರ್ಕಿಸುವ ವ್ಯವಸ್ಥೆ ಇದಾಗಿದೆ. ಹವಾನಿಯಂತ್ರಿತ ದೋಣಿಗಳು ಜನರಿಗೆ ಕಡಿಮೆ ಖರ್ಚಿನ ಸುರಕ್ಷಿತ ಸಾರಿಗೆ ವ್ಯವಸ್ಥೆಯಾಗಿ ಮೆಚ್ಚುಗೆ ಪಡೆದಿವೆ.
LATEST NEWS
ಉಡುಪಿ: ಪಾರ್ಟಿ ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟ; ಅಪಾರ ಹಾನಿ
ಉಡುಪಿ: ಪಾರ್ಟಿ ಮಾಡುತ್ತಿದ್ದ ಸಂದರ್ಭ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಅಪಾರ ಪ್ರಮಾಣದ ಹಾನಿ ಉಂಟಾದ ದುರ್ಘಟನೆ ಉಡುಪಿ ಕಲ್ಸಂಕ ಸಮೀಪದ ಬಡಗುಪೇಟೆ ರಸ್ತೆಯ ಅಪಾರ್ಟ್ ಮೆಂಟ್ ನಲ್ಲಿ ಇಂದು (ನ.4) ರಾತ್ರಿ ಸಂಭವಿಸಿದೆ.
ಗ್ಯಾಸ್ ಸಿಲಿಂಡರ್ ಲೀಕ್ ಆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಮೂರು ಅಂತಸ್ತಿನ ಅಪಾರ್ಟ್ ಮೆಂಟ್ ನ ಮೂರನೇ ಮಹಡಿಯಲ್ಲಿ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರು ಪಾರ್ಟಿ ಮಾಡುತ್ತಿರುವಾಗ ಗ್ಯಾಸ್ ಸಿಲಿಂಡರ್ ಲೀಕ್ ಆಗಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕೊಠಡಿಯಲ್ಲಿ ಇದ್ದವರು ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ.
ಬಳಿಕ ಅಗ್ನಿ ಶಾಮಕ ಇಲಾಖೆಗೆ ಮಾಹಿತಿ ನೀಡಿದ್ದು, ತಕ್ಷಣವೇ ಸ್ಥಳಕ್ಕೆ ಬಂದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಸಂಭವನೀಯ ಅನಾಹುತ ತಪ್ಪಿಸಿದ್ದಾರೆ.
ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಮನೆಯಲ್ಲಿದ್ದ ಸೊತ್ತುಗಳು ಸುಟ್ಟು ಕರಕಲಾಗಿವೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.
LATEST NEWS
ಉಡುಪಿ : ಗಂಡ ಮಾತ್ರವಲ್ಲದೆ ಅಣ್ಣನಿಗೂ ಸ್ಲೋ ಪಾಯಿಸನ್ ಕೊಟ್ಟಿದ ಪ್ರತಿಮಾ!? ಬಾಲಕೃಷ್ಣನ ಕೇಸ್ ನಲ್ಲಿ ಮತ್ತೊಂದು ಟ್ವಿಸ್ಟ್..!
ಉಡುಪಿ : ಪ್ರಿಯಕರನ ಜೊತೆ ಸೇರಿ ಸ್ಲೋ ಪಾಯಿಸನ್ ಕೊಟ್ಟು ಪತಿಯನ್ನು ಕೊಂದ ಪ್ರಕರಣದಲ್ಲಿ ಪತ್ನಿ ಪ್ರತಿಮಾಳನ್ನು ಬಂಧಿಸಿದ್ದ ಘಟನೆ ಉಡುಪಿ ಅಜೆಕಾರಿನಲ್ಲಿ ನಡೆದಿತ್ತು.
ಪ್ರತಿಮಾಳಿಗೆ ಮಾರ್ಗದರ್ಶಕನಾಗಿದ್ದ ಎರಡನೇ ಆರೋಪಿ ದಿಲೀಪ್ ಹೆಗ್ಡೆಯನ್ನೂ ಅರೆಸ್ಟ್ ಮಾಡಲಾಗಿತ್ತು.
ದಿಲೀಪ್, ಕಾರ್ಕಳದ ಪ್ರತಿಷ್ಠಿತ ಲಾಡ್ಜ್ ಓನರ್ ನ ಮಗನಾಗಿದ್ದ ಕಾರಣ, ‘ಯಾವುದೇ ಆಮಿಷಕ್ಕೊಳಗಾಗದೆ ಸರಿಯಾದ ತನಿಖೆ ನಡೆಸಬೇಕು’ ಎಂದು ಡಿವೈಎಸ್ಪಿ ಗೆ ಮೇಲಿಂದ ಆದೇಶ ಬಂದಿತ್ತು.
ಸ್ಲೋ ಪಾಯ್ಸನ್ ಕೊಟ್ಟರೂ ಆಸ್ಪತ್ರೆಗಳಲ್ಲಿ ಯಾಕೆ ಗೊತ್ತಾಗಿಲ್ಲ?
ಮೃತ ಬಾಲಕೃಷ್ಣ ಪೂಜಾರಿಯ ಸಹೋದರ ಪ್ರಕಾಶ್ “ಸ್ಲೋ ಪಾಯ್ಸನ್ ಕೊಟ್ಟರೂ ಆಸ್ಪತ್ರೆಗಳಿಗೆ ಯಾಕೆ ಗೊತ್ತಾಗಿಲ್ಲ?” ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಮಣಿಪಾಲ, ಕೆಎಂಸಿ ಸೇರಿದಂತೆ ಒಟ್ಟು ಆರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದ್ದರೂ, ಯಾವ ಆಸ್ಪತ್ರೆಯಲ್ಲೂ ಸ್ಲೋ ಪಾಯಿಸನ್ ಕೊಟ್ಟ ಬಗ್ಗೆ ಮಾಹಿತಿ ತಿಳಿದಿಲ್ಲ. ಹಾಗಾಗಿ ಆಸ್ಪತ್ರೆಗಳನ್ನು ಕೂಡ ಆರೋಪಿ ಸ್ಥಾನದಲ್ಲಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಹೋದರನಿಗೂ ವಿಷಪ್ರಾಶನದ ಅನುಮಾನ
ಪ್ರತಿಮಾ ಸಹೋದರ ಸಂದೀಪ್ ಈ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದು, ಪ್ರತಿಮಾಳ ಕೃತ್ಯ ಬಯಲಿಗೆ ತಂದವನೇ ಸಂದೀಪ್. ವಾಯ್ಸ್ ರೆಕಾರ್ಡ್ ಮಾಡುವ ಮೂಲಕ ಸಂಚು ಬಯಲು ಮಾಡಿದ್ದು, ಈಗ “ನನಗೂ ಸಹೋದರಿ ಸ್ಲೋ ಪಾಯಿಸನ್ ಹಾಕಿರಬಹುದು” ಎಂದು ಹೇಳಿಕೆ ನೀಡಿದ್ದಾನೆ.
“ನನಗೆ ನರಗಳ ನೋವು ಕಾಣಿಸುತ್ತಿದೆ. ಸಹೋದರಿಯ ಅಕ್ರಮ ಸಂಬಂಧಕ್ಕೆ ನಾನು ಅಡ್ಡಿಯಾಗಿದ್ದೆ. ನಾನು ಕೂಡ ಹೆಲ್ತ್ ಚೆಕ್ ಅಪ್ ಮಾಡಿಸಿಕೊಳ್ಳಬೇಕು. ಎರಡು ಬಾರಿ ಆಕೆಯ ಮನೆಯಲ್ಲಿ ಊಟ ಮಾಡಿದ್ದೆ. ಆಕೆ ನನಗೂ ವಿಷ ಹಾಕಿರಬಹುದು ಎಂಬ ಸಂಶಯವಿದೆ. ನನ್ನ ಪ್ರತಿಮಾಗೆ ಹಾಗು ದಿಲೀಪ್ ಇಬ್ಬರಿಗೂ ಕಠಿಣ ಶಿಕ್ಷೆ ಆಗಬೇಕು” ಎಂದು ಹೇಳಿದ್ದಾರೆ.
ಎರಡು ತಿಂಗಳ ಹಿಂದೆ ಅಜೆಕಾರು ಠಾಣೆಯಲ್ಲಿ ಮಾತುಕತೆ ನಡೆದಿತ್ತು
ದಿಲೀಪ್ ಹೆಗ್ಡೆ ಜೊತೆಗಿನ ಒಡನಾಟ ಬಯಲಾದ ಬಳಿಕ ಮಾತುಕತೆ ವೇಳೆ ದಿಲೀಪ್ ತಂದೆ ಕೂಡ ಬಂದಿದ್ದು, ‘ಇನ್ನು ಮುಂದೆ ನನ್ನ ಮಗ ಆಕೆಯ ಜೊತೆ ಕಾಣಿಸಿಕೊಳ್ಳಲ್ಲ’ ಎಂದಿದ್ದರು. ಆದರೂ ಇಬ್ಬರ ನಡುವೆ ಒಡನಾಟ ನಿಲ್ಲದೆ ಮಾತುಕತೆ ನಡೆದ ಸಿಸಿಟಿವಿ ಫುಟೇಜ್ ಅಜೆಕಾರ ಠಾಣೆಯಲ್ಲಿ ಭದ್ರವಾಗಿದೆ. ಎಲ್ಲಾ ಸಾಕ್ಷಿಗಳ ಪರಿಗಣಿಸಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಬೇಕು” ಎಂದು ಸಂದೀಪ್ ಹೇಳಿಕೆ ನೀಡಿದ್ದಾರೆ.
ಶವದ ಮರಣೋತ್ತರ ಪರೀಕ್ಷೆ ವರದಿ
ಕೊಲೆ ಸಂಶಯದಿಂದ ಆರಂಭದಲ್ಲೇ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂ ಮಾಡಲಾಗಿತ್ತು. ಉಸಿರುಗಟ್ಟಿ ಸಾಯಿಸಿರುವುದು ಪೋಸ್ಟ್ಮಾರ್ಟಮ್ ರಿಪೋರ್ಟ್ ನಲ್ಲಿ ಸಾಬೀತಾಗಿದೆ. ಕೊಲೆಯಾಗಿ 6ನೇ ದಿನ ಮೂಳೆ ಸಂಗ್ರಹಿಸಿರುವ ಪೊಲೀಸರು ವಿಷ ಬಳಕೆಯ ರಾಸಾಯನಿಕ ಅಂಶ ಮೂಳೆಗಳಲ್ಲಿ ಪತ್ತೆ ಆಗಬೇಕೆಂದು ಅಜೆಕಾರು ಪೊಲೀಸರು ಕಾಯುತ್ತಿದ್ದಾರೆ.
- LATEST NEWS6 days ago
ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ಅಕ್ಕಿಯ ಜೊತೆಗೆ ಉಚಿತವಾಗಿ ಸಿಗಲಿವೆ ಈ 9 ವಸ್ತುಗಳು.!
- DAKSHINA KANNADA3 days ago
ಮಂಗಳೂರು: ನೇತ್ರಾವತಿ ಸೇತುವೆ ಬಳಿ ಭೀಕರ ಅ*ಪಘಾತ; ಓರ್ವ ಮೃ*ತ್ಯು, ಮತ್ತೋರ್ವ ಗಂಭೀರ
- kerala6 days ago
ಕಾಸರಗೋಡು : ‘ಮಗು’ ವನ್ನು ರಕ್ಷಿಸಿದ ‘ದೈವ’ನರ್ತಕ ; ವಿರೋಚಿತ ಕಥೆ !!
- LATEST NEWS7 days ago
ಮಹಿಳೆಯರೇ.. ನೀವು ಈ ಪಾನೀಯ ಕುಡಿದ್ರೆ 10 ವರ್ಷ ಸಣ್ಣ ಕಾಣೋದು ಗ್ಯಾರಂಟಿ.. !!