LATEST NEWS
30ನೇ ವರ್ಷದ ಪುತ್ತೂರು ಕೋಟಿ-ಚೆನ್ನಯ್ಯ ಜೋಡುಕರೆ ಕಂಬಳದ ಕರೆ ಮೂಹೂರ್ತಕ್ಕೆ ಚಾಲನೆ
ಪುತ್ತೂರು: ಪುತ್ತೂರು ಮಹತೋಭಾರ ಶ್ರೀ ದೇವರ ಎದುರಿನ ದೇವರಮಾರು ಕಂಬಳಗದ್ದೆಯಲ್ಲಿ ಜನವರಿ 28ರಂದು ನಡೆಯಲಿರುವ 30ನೇ ವರ್ಷದ ಕಂಬಳದ ಕರೆ ಮುಹೂರ್ತಕ್ಕೆ ಡಿ.12ರಂದು ಚಾಲನೆ ನೀಡಲಾಯಿತು.
ಮೊದಲಿಗೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥಿಸಿ , ನಂತರ ದೇವಸ್ಥಾನದ ಗದ್ದೆಯಲ್ಲಿರುವ ನಾಗನ ಕಟ್ಟೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಕರೆ ಮುಹೂರ್ತಕ್ಕೆ ಚಾಲನೆ ನೀಡಲಾಯಿತು.
ಪುತ್ತೂರು ಕೋಟಿ ಚೆನ್ನಯ್ಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್ ಚಂದ್ರಹಾಸ ಶೆಟ್ಟಿ, ಸಂಚಾಲಕ ಸುಧಾಕರ ಶೆಟ್ಟಿ ನೆಲ್ಲಿಕಟ್ಟೆ, ಪ್ರಧಾನ ಕಾರ್ಯದರ್ಶಿ ಪಿ ವಿ ದಿನೇಶ್ ಕುಲಾಲ್, ಕೋಶಾಧಿಕಾರಿ ಈಶ್ವರ ಭಟ್ ಪಂಜಿಗುಡ್ಡೆ, ಉಪಾಧ್ಯಕ್ಷರಾದ ಶಿವರಾಮ ಆಳ್ವ, ವಸಂತ ಕುಮಾರ್ ರೈ, ಜೋಕೀಂ ಡಿಸೋಜ, ಜಿನ್ನಪ್ಪ ಪೂಜಾರಿ ಮುರ, ನಿರಂಜನ್ ರೈ ಮಠಂತಬೆಟ್ಟು,
ಜೊತೆ ಕಾರ್ಯದರ್ಶಿ ಬಿ. ಪ್ರೇಮಾನಂದ ನಾೖಕ್ , ಪ್ರವೀಣ್ ಶೆಟ್ಟಿ ಅಳಕೆಮಜಲು, ವಿಕ್ರಮ್ ಶೆಟ್ಟಿ ಕೋಡಿಂಬಾಡಿ, ಸುಧಾಕರ ಶೆಟ್ಟಿಬೀಡಿನ ಮಜಲು, ರೋಶನ್ ರೈ ಬನ್ನೂರು, ಉಮಾಶಂಕರ್ ನಾೖಕ್ ಪಾಂಗಳಾಯಿ, ಕಿರಣ್ ಡಿಸೋಜ,ಕೆಮ್ಮಾಯಿ, ವಿಜಿತ್ ಬನ್ನೂರು, ಕೃಷ್ಣ ಪ್ರಸಾದ್ ಆಳ್ವ.
ಯತೀಶ್ ಶೆಟ್ಟಿ, ಕೋಡಿಂಬಾಡಿ,ಮಂಜುನಾಥ ಗೌಡ ತೆಂಕಿಲ,ಉಮೇಶ್ ಕರ್ಕೆರ,
ಜನಾರ್ದನ ಸಿ ಟಿ ಗುಡ್ಡೆ, ಸುದೇಶ್ ಕುಮಾರ್ ಚಿಕ್ಕಪುತ್ತೂರು.ಪ್ರಶಾಂತ್ ಮುರ, ಚಂದ್ರಶೇಖರ್ ಶೆಟ್ಟಿ. ಪಾಲ್ತಾಡ್, ಭವಿನ್ ಶೇಟ್, ಗಣೇಶ್ ರಾಜ್, ವಿಜಯ ಕುಮಾರ್ ಪೂಜಾರಿ ಕೋಡಿಂಬಾಡಿ, ಮುರಳೀಧರ ರೈ,ಮಠಂತಬೆಟ್ಟು, ಗಣೇಶ್ ಪೂಜಾರಿ ಕಾವು, ರಮೇಶ್ ಪೂಜಾರಿ ನೆಲ್ಲಿಕಟ್ಟೆ ಉಪಸ್ಥಿತರಿದ್ದರು.
ಈ ಕಂಬಳ ಕೂಟದ ಕಂಬಳದ ಇತಿಹಾಸದಲ್ಲೇ ಅತೀ ಹೆಚ್ಚು ಜನ ಸೇರುವ ಅತೀ ದೊಡ್ಡ ಕಂಬಳ ಕೂಟವೆಂದು ಪ್ರಖ್ಯಾತಿ ಪಡೆದಿದೆ.
DAKSHINA KANNADA
ಕಡಲ ಮಧ್ಯೆ ಸಿಲುಕಿದ ಮೀನುಗಾರಿಕಾ ಬೋಟ್- ಮೀನುಗಾರರನ್ನು ರಕ್ಷಿಸಿದ ಕೋಸ್ಟ್‌ಗಾರ್ಡ್
ಮಂಗಳೂರು: ಮಂಗಳೂರು ನಗರದ ಹಳೆ ಬಂದರು ಧಕ್ಕೆಯಿಂದ ಮೀನುಗಾರಿಕೆಗೆ ಹೋಗಿದ್ದ ಬೋಟೊಂದು 39 ನಾಟಿಕಲ್ ಮೈಲ್ ದೂರದ ಸಮುದ್ರದಲ್ಲಿ ತಾಂತ್ರಿಕ ಸಮಸ್ಯೆಗೆ ಸಿಲುಕಿದಾಗ ಅದರಲ್ಲಿದ್ದ ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್ ನೌಕೆ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ.
ತಿರುಚೆಂದೂರ್ ಮುರುಗನ್ ಹೆಸರಿನ ಬೋಟ್ ಸಮುದ್ರ ಮಧ್ಯೆ ತಾಂತ್ರಿಕ ಅಡಚಣೆಗೆ ಸಿಲುಕಿತ್ತು.
ಈ ಬಗ್ಗೆ ಬೋಟ್‌ನಿಂದ ಮುಂಬೈನ ತಟ ರಕ್ಷಣಾ ಕೇಂದ್ರಕ್ಕೆ ತುರ್ತು ಸಂದೇಶ ರವಾನಿಸಲಾಗಿತ್ತು.
ಈ ಸಂದೇಶ ಸ್ವೀಕರಿಸಿದ ಮುಂಬೈನ ಎಂಆರ್‌ಸಿಸಿ ಕೇಂದ್ರದ ಅಧಿಕಾರಿಗಳು ತಕ್ಷಣ ಕೋಸ್ಟ್‌ಗಾರ್ಡ್‌ಗೆ ಮಾಹಿತಿ ನೀಡಿದ್ದರು.
ಅದರಂತೆ ಕೋಸ್ಟ್‌ಗಾರ್ಡ್, ಮೀನುಗಾರಿಕಾ ಇಲಾಖೆ ಹಾಗೂ ಬೋಟ್ ಮಾಲಕರ ಸಹಕಾರದಲ್ಲಿ ಕಾರ್ಯಾಚರಣೆ ನಡೆಸಿದ ಕೋಸ್ಟ್ ಗಾರ್ಡ್‌ನ ಎರಡು ಇಂಟರ್‌ಸೆಪ್ಟರ್ ಬೋಟ್‌ಗಳು ತಾಂತ್ರಿಕ ತೊಂದರೆಗೆ ಸಿಲುಕಿದ ಬೋಟ್‌ನ್ನು ನವಮಂಗಳೂರು ಬಂದರು ತೀರಕ್ಕೆ ಎಳೆದು ತಂದು ರಕ್ಷಿಸಿವೆ ಎಂದು ಕೋಸ್ಟ್‌ಗಾರ್ಡ್ ತಿಳಿಸಿದೆ.
LATEST NEWS
Lucknow: ಪುತ್ರಿ ಮದುವೆ ಮಾಡಲು ಎಂದು ಲಾಕರ್ ನಲ್ಲಿಟ್ಟ 18 ಲಕ್ಷ ರೂ. ಗೆದ್ದಲು ಪಾಲು..!
ಲಕ್ನೋ: ಮಗಳ ಮದುವೆಗೆಂದು ತಾಯಿಯೊಬ್ಬರು ರೂಪಾಯಿ-ರೂಪಾಯಿ ಹಣವನ್ನು ಜೋಪಾನವಾಗಿ ಬ್ಯಾಂಕ್‌ನ ಲಾಕರ್‌ನಲ್ಲಿ ಕೂಡಿ ಇಟ್ಟ ಸುಮಾರು 18 ಲಕ್ಷ ರೂ. ಹಣವು ಗೆದ್ದಲು ಹಿಡಿದು ನಾಶವಾಗಿರುವ ಘಟನೆ ಉತ್ತರಪ್ರದೇಶದ ಮೊರಾದಾಬಾದ್‌ನಲ್ಲಿ ವರದಿಯಾಗಿದೆ.
ಮೊರಾದಾಬಾದ್ ನಿವಾಸಿ ಅಲ್ಕಾ ಪಠಾಕ್ ಅವರು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅಶಿಯಾನಾದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ 18 ಲಕ್ಷ ರೂ.ಗಳನ್ನು ಇಟ್ಟಿದ್ದರು.
ಇತ್ತೀಚಿಗೆ ಬ್ಯಾಂಕ್ ಸಿಬಂದಿ ಲಾಕರ್ ಅಗ್ರಿಮೆಂಟ್ ರಿನೀವಲ್‌ಗೆ ಎಂದು ಅಲ್ಕಾ ಅವರಿಗೆ ಕರೆ ಮಾಡಿ ಬರಲು ಹೇಳಿದ್ದಾರೆ.
ಈ ವೇಳೆ ಲಾಕರ್ ತೆರೆದರೆ ನೋಟುಗಳಿಗೆ ಗೆದ್ದಲು ಹಿಡಿದಿರುವುದು ಕಂಡು ಬಂದಿದೆ.
ಈ ಬಗ್ಗೆ ಬ್ಯಾಂಕ್‌ನ ಮುಖ್ಯ ಕಚೇರಿಗೆ ತಿಳಿಸಿರುವುದಾಗಿ ಸಿಬಂದಿ ಹೇಳಿದ್ದಾರೆ.
ತನಗಾದ ನಷ್ಟಕ್ಕೆ ಬ್ಯಾಂಕ್‌ನವರೇ ಪರಿಹಾರ ನೀಡಬೇಕೆಂದು ಮಹಿಳೆ ಪಟ್ಟು ಹಿಡಿದಿರುವುದು ವರದಿಯಾಗಿದೆ.
FILM
ವಯಸ್ಸಲ್ಲಿ ರಾಘವ್ ಚಡ್ಡಾ ಅವರಿಗಿಂತ ಸೀನಿಯರ್ ಪರಿಣಿತಿ ಚೋಪ್ರಾ…!
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಆಪ್ ಸಂಸದ ರಾಘವ್ ಚಡ್ಡಾ ಅವರ ವಯಸ್ಸಿನ ಅಂತರ ಈಗ ರಿವೀಲ್ ಆಗಿದೆ.
ಮುಂಬೈ: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಆಪ್ ಸಂಸದ ರಾಘವ್ ಚಡ್ಡಾ ಅವರ ವಯಸ್ಸಿನ ಅಂತರ ಈಗ ರಿವೀಲ್ ಆಗಿದ್ದು, ರಾಘವ್ ಚಡ್ಡಾ ಅವರಿಗಿಂತ ಪರಿಣಿತಿ ಚೋಪ್ರಾ ಸೀನಿಯರ್.
ಸೆಪ್ಟೆಂಬರ್ 24ರಂದು ಈ ಜೋಡಿ ಗ್ರ್ಯಾಂಡ್ ಆಗಿ ರಾಜಸ್ಥಾನದ ಉದಯಪುರದ ಲೀಲಾ ಪ್ಯಾಲೇಸ್‌ನಲ್ಲಿ ಸಪ್ತಪದಿ ತುಳಿದಿದ್ರು.
ರಾಘವ್ ಚಡ್ಡಾ ಅವರು 2022ರಲ್ಲಿ ಪಂಜಾಬ್‌ನಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆ ಆಗಿದ್ದಾರೆ.
33ನೇ ವಯಸ್ಸಿಗೆ ರಾಜ್ಯಸಭೆ ಪ್ರವೇಶಿಸಿದ ಅವರು, ಅತ್ಯಂತ ಕಿರಿಯ ರಾಜ್ಯಸಭಾ ಸದಸ್ಯ ಎಂಬ ಖ್ಯಾತಿಗೆ ಪಾತ್ರವಾಗಿದ್ದಾರೆ.
ಇನ್ನು ನಟಿ ಪರಿಣಿತಿ ಚೋಪ್ರಾ ಅವರು 2011ರಿಂದಲೂ ಬಾಲಿವುಡ್‌ನಲ್ಲಿ ಸಕ್ರಿಯರಾಗಿದ್ದಾರೆ.
‘ಶುದ್ಧ್ ದೇಸಿ ರೊಮ್ಯಾನ್ಸ್’, ‘ಹಸೀ ತೊ ಫಸೀ’, ‘ದಾವತ್ ಎ ಇಶ್ಕ್’, ‘ನಮಸ್ತೆ ಇಂಗ್ಲೆಂಡ್’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸದ್ಯ ಅಕ್ಷಯ್ ಕುಮಾರ್ ಜತೆ ಪರಿಣಿತಿ ನಟಿಸಿರುವ ‘ಮಿಷನ್ ರಾಣಿಗಂಜ್’ ಸಿನಿಮಾ ತೆರೆ ಕಾಣಬೇಕಿದೆ.
ಸದ್ಯಕ್ಕೆ ಪರಿಣಿತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ಅವರ ವಯಸ್ಸಿನ ಅಂತರದ ಸಾಕಷ್ಟು ಬಗ್ಗೆ ಚರ್ಚೆಯಾಗುತ್ತಿದೆ.
ಇಬ್ಬರಿಗೂ ಈಗ 35 ವರ್ಷ ವಯಸ್ಸಾಗಿದ್ದು, ನಟಿ ಪರಿಣಿತಿ ಚೋಪ್ರಾ ಅವರು 22 ಅಕ್ಟೋಬರ್ 1988ರಲ್ಲಿ ಜನಿಸಿದ್ದಾರೆ. ರಾಘವ್ ಚಡ್ಡಾ ಅವರು 11 ನವೆಂಬರ್ 1988ರಲ್ಲಿ ಜನಿಸಿದ್ದಾರೆ.
ವಿಶೇಷ ಎಂದರೆ ನಟಿ ಪರಿಣಿತಿ ಚೋಪ್ರಾ ಅವರು ರಾಘವ್ ಚಡ್ಡಾ ಅವರಿಗಿಂತ 20 ದಿನ ದೊಡ್ಡವರಾಗಿದ್ದಾರೆ.
ವಯಸ್ಸಿನ ಮಿತಿಯನ್ನು ಲೆಕ್ಕಿಸದೇ ಸ್ಟಾರ್ ನಟ ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಡುವುದು ಮಾಮೂಲು ಆಗಿದೆ.