Connect with us

LATEST NEWS

ಭವಿಷ್ಯದಲ್ಲಿ ಮುಖ್ಯ ಮಾಂಸಾಹಾರವಾಗಲಿದೆ ಹೆಬ್ಬಾವು! ಯಾಕೆ ಗೊತ್ತಾ?

Published

on

ಮನುಷ್ಯನನ್ನೇ ಆಗಲಿ, ಪ್ರಾಣಿ, ಪಕ್ಷಿಗಳನ್ನೇ ಹಿಡಿದು ಸುತ್ತಿ, ತಿಂದು ಮುಗ್ಗಿಸುವ ಹೆಬ್ಬಾವು ಕಂಡರೆ ಎಂತವರಿಗಾದರೂ ಎದೆ ಝಲ್ ಅನ್ನದೇ ಇರದು. ಆದರೆ, ಇದೇ ಹೆಬ್ಬಾವು ನಮ್ಮ ಆಹಾರದ ತಟ್ಟೆಯಲ್ಲಿ ಬಂದು ಕೂರಲಿದೆಯಂತೆ! ಅಬ್ಬಾ! ಇವರು ಏನು ಹೇಳ್ತಿದ್ದಾರೆ ಅಂತ ಅಂತಿದ್ದೀರಾ? ಹೌದು, ಇದನ್ನು ಹೇಳಿರೋದು ಆಹಾರ ತಜ್ಞರು. ಅವರ ಪ್ರಕಾರ ಹೆಬ್ಬಾವು ಮುಂದೊಂದು ದಿನದಲ್ಲಿ ವಿವಿಧ ಬಗೆಯ ಖಾದ್ಯವಾಗಿ ಉಪಯೋಗವಾಗಲಿದೆ.

ಪರಿಸರ ವಿಜ್ಞಾನಿಗಳು ಕಡಿಮೆ ಹಸಿರುಮನೆ ಅನಿಲ ಮತ್ತು ಇಂಗಾಲದ ಹೊರಸೂಸುವಿಕೆ ಹೊಂದಿದ ಮಾಂಸದ ಅನ್ವೇಷಣೆಗೆ ಇಳಿದಿದ್ದಾರೆ. ಹೆಚ್ಚು ಬಳಕೆಯಾಗುವ ಸಾಂಪ್ರದಾಯಿಕ ಮಾಂಸಾಹಾರವಾದ ಗೋಮಾಂಸ, ಹಂದಿಮಾಂಸ ಮತ್ತು ಕೋಳಿ ಮಾಂಸದಲ್ಲಿ ಕಡಿಮೆ ಇಂಗಾಲ ಹೊರಸೂಸುವಿಕೆಗೆ ಸಂಬಂಧಿಸಿದಂತೆ ಹಲವು ಸಂಶೋಧನೆಗಳಾಗಿವೆ. ಆದರೆ ಇಲ್ಲಿ ತನಕ ನಡೆದಿರುವ ಆ ಎಲ್ಲ ಸಂಶೋಧನೆಗಳಿಗೆ ಹೋಲಿಸಿದರೆ ಹೆಬ್ಬಾವಿನ ಮಾಂಸವು ಕಡಿಮೆ ಇಂಗಾಲದ ಹೊರಸೂಸುವಿಕೆಯನ್ನು ಹೊಂದಿದೆ ಎಂಬುದು ವಿಜ್ಞಾನಿಗಳ ತರ್ಕ. ಹೀಗಾಗಿಯೇ ಅದು ಭವಿಷ್ಯದ ಜನಪ್ರಿಯ ಆಹಾರವಾಗಲಿದೆ ಎನ್ನುತ್ತಿದ್ದಾರೆ.

ಏಷ್ಯಾದ ಹೆಬ್ಬಾವು ಸಾಕಣೆ ಕೇಂದ್ರಗಳಲ್ಲಿ 12 ತಿಂಗಳ ಸಂಶೋಧನೆಯ ನಂತರ ಇಂತಹುದೊಂದು ಪ್ರಕಟಣೆ ಹೊರಬಿದ್ದಿದೆ. ಪೆಟಿಕ್ಯುಲೇಟೆಡ್ ಮತ್ತು ಬರ್ಮೀಸ್ ಎಂಬ ಎರಡು ಮುಖ್ಯ ರೀತಿಯ ಹೆಬ್ಬಾವುಗಳ ಮೇಲೆ ಪ್ರಯೋಗವನ್ನು ನಡೆಸಲಾಗಿತು. ಹೆಬ್ಬಾವುಗಳು ಬಹುಬೇಗ ಸಂತಾನೋತ್ಪತ್ತಿ ಮಾಡುವುದರಿಂದ ಇವುಗಳ ಸಾಕಾಣಿಕೆಯೂ ಲಾಭದಾಯಕ ಎಂಬುದ ಸಂಶೋಧಕರ ಉವಾಚ.

ಹೆಬ್ಬಾವು ಪ್ರಪಂಚದ ಅತಿ ದೊಡ್ಡ ಹಾವುಗಳಲ್ಲಿ ಒಂದಾಗಿದೆ. ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಏಷ್ಯಾ ಖಂಡಗಳಲ್ಲಿ ಹೆಬ್ಬಾವುಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಈ ಹಿಂದೆ ಹೇಳಿದ ಎರಡು ವರ್ಗಗಳಲ್ಲದೆ ಹೆಬ್ಬಾವು ಕುಟುಂಬದಲ್ಲಿ ಬಾಲ್ ಹೆಬ್ಬಾವು, ಕಾರ್ಪೆಟ್ ಹೆಬ್ಬಾವು, ಆಲಿವ್ ಹೆಬ್ಬಾವು ಮತ್ತು ಆಫ್ರಿಕನ್ ರಾಕ್ ಹೆಬ್ಬಾವುಗಳಂತಹ ಹಾವುಗಳೂ ಇವೆ.

ಹೆಬ್ಬಾವುಗಳನ್ನು 1980ರ ದಶಕದಲ್ಲಿ ಉತ್ತರ ಅಮೆರಿಕಾಕ್ಕೆ ಪರಿಚಯಿಸಲಾಯಿತು. ಇವು ನಂತರ ವಂಶೋತ್ಪತ್ತಿಯಾಗಿ ನಾನಾ ಕಡೆ ಕಾಣಸಿಗುವಂತಾಗಿದೆ. ಆಕ್ರಮಣಕಾರಿ ಜಾತಿಯೆಂದು ಅವುಗಳು ಪರಿಗಣಿತವಾಗಿದೆ.

 

LATEST NEWS

27ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಕೆಜಿಎಫ್ ಹೊಗಳಿದ್ದ ಯೂಟ್ಯೂಬರ್!

Published

on

ಮುಂಬೈ : ಖ್ಯಾತ ಯೂಟ್ಯೂಬರ್ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಪ್ರಖ್ಯಾತರಾಗಿರುವ ಅಬ್ರದೀಪ್ ಸಹಾ ಇಹಲೋಕ ತ್ಯಜಿಸಿದ್ದಾರೆ. ಅಂಗ್ರಿ ರ್‍ಯಾಂಟ್‌‌ಮ್ಯಾನ್‌ ಎಂದೇ ಖ್ಯಾತರಾಗಿರುವ ಅಬ್ರದೀಪ್ ಸಹಾ ತಮ್ಮ 27 ನೇ ವಯಸ್ಸಿಗೆ ಅಸುನೀಗಿದ್ದಾರೆ. ಅವರು ಏಪ್ರಿಲ್ 16 ರಂದು ವಿ*ಧಿವಶರಾಗಿದ್ದಾರೆ. ಅವರ ನಿ*ಧನದ ಸುದ್ದಿ ಅಭಿಮಾನಿಗಳಿಗೆ ಆಘಾತ ಉಂಟು ಮಾಡಿದೆ.

ಅಂಗ್ರಿ ರಾಂಟ್ ಮ್ಯಾನ್ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ. ಕಳೆದ ತಿಂಗಳು ಅಪರೇಷನ್ ಗೆ ಒಳಗಾಗಿದ್ದರು. ಅವರ ಸ್ಥಿತಿ ಗಂಭೀರವಾಗಿದೆ. ಐಸಿಯುವಿನಲ್ಲಿದ್ದಾರೆ ಎಂದು ಹೇಳಲಾಗಿತ್ತು. ಕಳೆದೊಂದು ತಿಂಗಳಿಂದ ಅಬ್ರದೀಪ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರಲಿಲ್ಲ. ಹಾಗಾಗಿ, ಈ ಸುದ್ದಿ ಖಚಿತ ಎಂದೇ ಹೇಳಲಾಗಿತ್ತು. 11 ದಿನಗಳ ಹಿಂದೆ ಅವರ ತಂದೆ ಅಭಿಮಾನಿಗಳಿಗೆ, ಐಸಿಯುನಲ್ಲಿ ರ್‍ಯಾಂಟ್‌‌ಮ್ಯಾನ್‌ ಚೇತರಿಸಿಕೊಳ್ಳುತ್ತಿದ್ದಾರೆ ಎಂದಿದ್ದರು.

ಇದನ್ನೂ ಓದಿ : ಬೆಂಗಳೂರಿನ ಖ್ಯಾತ ಯೂಟ್ಯೂಬರ್ ಬಂಧನ; ಮುಳುವಾಯ್ತು ಆ ಒಂದು ವೀಡಿಯೋ!

ಖ್ಯಾತಿ ಕೊಟ್ಟ ಕೆಜಿಎಫ್ :

ಕೋಲ್ಕತ್ತಾದವರಾದ ಆ್ಯಂಗ್ರಿ ರ್‍ಯಾಂಟ್‌‌ಮ್ಯಾನ್‌ ಫೆಬ್ರವರಿ 19, 1996 ರಂದು ಜನಿಸಿದರು. ‘ಆಂಗ್ರಿ ರಾಂಟ್‌ಮ್ಯಾನ್’ ಎಂಬ ಅವರ ಯೂಟ್ಯೂಬ್ ಚಾನೆಲ್ 481k ಚಂದಾದಾರರನ್ನು ಮತ್ತು Instagram ನಲ್ಲಿ 119k ಫಾಲೋವರ್ಸ್​ ಹೊಂದಿದ್ದರು. 2018ರ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಕೆಜಿಎಫ್‌ ಸಿನಿಮಾ ವಿಮರ್ಶೆ ಮಾಡುವ ಮೂಲಕ ಅಬ್ರದೀಪ್ ಸಹಾ ಖ್ಯಾತಿ ಗಳಿಸಿದರು.
ಕೆಜಿಎಫ್ ಸಿನಿಮಾವನ್ನು ಹೊಗಳಿದ್ದ ಅವರು, ಬಾಲಿವುಡ್ ಸಿನಿಮಾರಂಗವನ್ನು ತರಾಟೆಗೆ ತೆಗೆದುಕೊಂಡಿದ್ದರು. ಸಿನಿಮಾ ಹೇಗೆ ಮಾಡಬೇಕು ಎಂದು ದಕ್ಷಿಣ ಭಾರತೀಯ ಚಿತ್ರರಂಗ ನೋಡಿ ಕಲಿಯಿರಿ ಎಂದು ಹೇಳಿದ್ದರು. ಈ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

Continue Reading

DAKSHINA KANNADA

ರಾಜಕೀಯ ಲಾಭಕ್ಕಾಗಿ ಮಾತನಾಡುತ್ತಿರುವ ಬಿಜೆಪಿ ಜಿಲ್ಲಾಧ್ಯಕ್ಷ- ಬಿರುವೆರ್ ಕುಡ್ಲ ಉದಯ್ ಪೂಜಾರಿ

Published

on

ಮಂಗಳೂರು : ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ನರೇಂದ್ರ ಮೋದಿಯವರು ರೋಡ್ ಶೋ ನಡೆಸಿದ್ದರು. ಮುಂಬರುವ ಚುನಾವಣೆಯಲ್ಲಿ ದ.ಕ ಜಿಲ್ಲಾ ಅಭ್ಯರ್ಥಿ ಬ್ರಿಜೇಶ್ ಚೌಟ ಹಾಗೂ ಉಡುಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಪರ ಬ್ಯಾಟ್ ಬೀಸಿದ್ದರು. ಈ ವೇಳೆ ನಾರಾಯಣ ಗುರು ಸರ್ಕಲ್ ನಲ್ಲಿರುವ ಗುರುಗಳ ಮೂರ್ತಿಗೆ ಮಾಲಾರ್ಪಣೆ ಮಾಡಿದ್ದರು.

udaya poojary

ಆದರೆ ಈ ಸಂದರ್ಭ ಬಿಜೆಪಿ ಬೆಂಬಲಿಗರಾದ ಬಿರುವೆರ್‌ ಕುಡ್ಲ ಸಂಘಟನೆಯನ್ನು ಕಡೆಗಣಿಸಿರುವುದಕ್ಕೆ ಬಿರುವೆರ್ ಕುಡ್ಲ ಸಂಸ್ಥಾಪಕ ಉದಯ ಪೂಜಾರಿ ಬೇಸರ ವ್ಯಕ್ತಪಡಿಸಿದ್ದಾರೆ.

ನಾರಾಯಣ ಗುರು ವೃತ್ತ ನಿರ್ಮಾಣ ಮಾಡುವಾಗ ಸತೀಶ್‌ ಕುಂಪಲ ಎಲ್ಲಿದ್ದರು…?

ಮಂಗಳೂರಿನಲ್ಲಿ ನಾರಾಯಣ ಗುರು ವೃತ್ತವನ್ನು ಲೇಡಿಹಿಲ್ ಸರ್ಕಲ್‌ ಬಳಿ ನೂತನವಾಗಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ಸತೀಶ್‌ ಕುಂಪಲ ಎಲ್ಲಿದ್ದರು…? ನಾವು ಸರ್ಕಲ್‌ ಮಾಡಲು ಹೋರಾಟ ಮಾಡುವಾಗ ಅವರು ಎಲ್ಲಿದ್ದರು..? ಇಂದು ಕೇವಲ ತನ್ನ ರಾಜಕೀಯ ಲಾಭಕ್ಕಾಗಿ ಮಾತನಾಡುತ್ತಿದ್ದಾರೆ. ಅವರು ಬಿಲ್ಲವ ಎನ್ನುವ ಕಾರಣಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷರನ್ನಾಗಿ ಮಾಡಲಾಗಿದೆ. ಆದರೆ, ಅವರು ಬಿಲ್ಲವರಿಗೋಸ್ಕರ, ಬಿಲ್ಲವ ಸಮುದಾಯಕ್ಕೆ ಏನು ಕೊಡುಗೆ ನೀಡಿದ್ದಾರೆ ಎನ್ನುವುದನ್ನು ಮೊದಲು ಹೇಳಲಿ ಎಂದು ಉದಯ ಪೂಜಾರಿ ಹೇಳಿದ್ದಾರೆ.

ಇದನ್ನೂ ಓದಿ..;ಜೆಪಿಯಿಂದ ಬಿಲ್ಲವ ನಾಯಕ ಔಟ್..? ನಾರಾಯಣ ಗುರು ಹೈಜಾಕ್..!

ಬಿಲ್ಲವ ಸಂಘಟನೆಗಳ ಮನವಿ ಬಳಿಕ ನಾರಾಯಣ ಗುರು ವೃತ್ತ ನಿರ್ಮಾಣ

ನಾರಾಯಣ ಗುರು ವೃತ್ತ ನಿರ್ಮಾಣ ಮಾಡಿದ್ದು, ಬಿಜೆಪಿ ನಾಯಕರು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ ಬೆನ್ನಲ್ಲೇ ಬಿರುವೆರ್ ಕುಡ್ಲದ ಮುಖಂಡ ಉದಯ್‌ ಪೂಜಾರಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.  ಕಳೆದ 13 ವರ್ಷಗಳ ಹಿಂದೆ ನಾವು ಕಾಂಗ್ರೆಸ್ ಸರಕಾರ ಇದ್ದಾಗ ಅಲ್ಲಿ ನಾರಾಯಣ ಗುರು ವೃತ್ತ ಮಾಡಲು ಮನವಿ ಮಾಡಿದ್ದೆವು. ಸಂಸದ ನಳಿನ್‌ ಕುಮಾರ್ ಸಹಿತ ಎಲ್ಲಾ ಶಾಸಕರಿಗೂ ಮನವಿ ನೀಡಿದ್ದೆವು. ಸುಮಾರು 200 ಬಿಲ್ಲವ ಸಂಘಟನೆಗಳು ಮನವಿ ನೀಡಿದ ಬಳಿಕ ಅಲ್ಲಿ ನಾರಾಯಣ ಗುರು ವೃತ್ತ ಮಾಡಲಾಗಿದೆ ಎಂದು ಹೇಳಿದ್ರು.

ಬಿರುವೆರ್ ಕುಡ್ಲ ಸಂಘಟನೆ ದೂರವಿಟ್ಟಿದ್ದಕ್ಕೆ ಆಕ್ರೋಶ

ಆದರೆ, ಭಾನುವಾರದಂದು ಪ್ರಧಾನಿ ನರೇಂದ್ರ ಮೋದಿಯನ್ನು ಸ್ವಾಗತಿಸಲು ಉದ್ಯಮಿಗಳು, ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಕರೆದುಕೊಂಡು ಹೋಗಿದ್ದಾರೆ. ಆದರೆ ನಮ್ಮ ಸಂಘಟನೆಯನ್ನು ದೂರ ಇಟ್ಟಿರುವುದು ನಮಗೆ ಬೇಸರ ಮೂಡಿಸಿದೆ ಎಂದರು. ಕನಿಷ್ಠ ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಎಚ್ ಎಸ್ ಸಾಯಿರಾಂ ಅವರನ್ನಾದರೂ ಕರೆಯಬಹುದಿತ್ತು ಎಂದರು. ನಳಿನ್‌ ಕುಮಾರ್ ಕಟೀಲು, ವೇದವ್ಯಾಸ ಸಹಿತ ಹಲವು ಮಂದಿ ನಾಯಕರು ನಮ್ಮ ಕಷ್ಟಕ್ಕೆ ಸ್ಪಂದಿಸಿದ್ದವರು. ಆದರೆ ಇಂದು ಬಿಜೆಪಿಯಲ್ಲೇ ಎರಡು ಬಣ ಆಗಿದೆ. ಇದು ನಮಗೆ ಬೇಸರ ತರುವ ಕೆಲಸ ಎಂದರು. ಬಿಜೆಪಿ ನಡೆಯಿಂದ ನಮ್ಮ ಸಂಘಟನೆಗೆ ಬೇಸರವಾಗಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ನಾವು ಇಂಥವರಿಗೇ ಮತ ಚಲಾಯಿಸಿ ಎಂದು ಯಾರಿಗೂ ಹೇಳಲ್ಲ. ಯಾರು ಒಳ್ಳೆಯ ಅಭ್ಯರ್ಥಿ ಇದ್ದಾರೋ ಅವರಿಗೆ ಮತ ಹಾಕಿ ಎಂದರು.

Continue Reading

LATEST NEWS

ಬಿಡುವಿಲ್ಲದ ವೇಳೆಯೂ ಬಾಲರಾಮನ ‘ಸೂರ್ಯ ತಿಲಕ’ವನ್ನು ವೀಕ್ಷಿಸಿದ ಪ್ರಧಾನಿ…

Published

on

ಅಯೋಧ್ಯೆ: 500 ವರ್ಷಗಳ ಬಳಿಕ ಅಯೋಧ್ಯೆ ಶ್ರೀರಾಮನ ಜನ್ಮಸ್ಥಳದಲ್ಲಿ ನಡೆದ  ಐತಿಹಾಸಿಕ ಕ್ಷಣವನ್ನು ಪ್ರಧಾನಿ ನರೇಂದ್ರ ಮೋದಿಯವರು ಕಣ್ತುಂಬಿಕೊಂಡಿದ್ದಾರೆ. ಹೌದು, ಇಂದು ಶ್ರೀರಾಮನವಮಿ ದಿನದಂದು ಬಾಲರಾಮನ ಹಣೆಗೆ ಸೂರ್ಯರಶ್ಮಿಯ ಕಿರಣ ಸ್ಪರ್ಶಗೊಂಡಿದೆ. ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ಪ್ರಧಾನಿ ತನ್ನ ಬಿಡುವಿಲ್ಲದ ಸಮಯದಲ್ಲೂ ಈ ಐತಿಹಾಸಿಕ ಸುಂದರ ಕ್ಷಣವನ್ನು  ಕಣ್ತುಂಬಿಕೊಂಡಿದ್ದಾರೆ. ನರೇಂದ್ರ ಮೋದಿಯವರು ಅಯೋಧ್ಯೆಗೆ ಭೇಟಿ ನೀಡದೆ ಇದ್ದರೂ ದೃಶ್ಯವನ್ನು ಟ್ಯಾಬ್ ಮೂಲಕ ಕಣ್ತುಂಬಿಕೊಂಡಿದ್ದಾರೆ. ಇವರು ಅಸ್ಸಾಂ ನಲ್ಲಿನ ಬಿಜೆಪಿ ಸಮಾವೇಶದಲ್ಲಿ ಈ ವೇಳೆ ಭಾಗವಹಿಸಿದ್ದರು.

narendra modi

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ನಾನು ನಲ್ಬರಿಯಲ್ಲಿ ನಡೆದ ಚುನಾವಣಾ ರ್ಯಾಲಿಯ ನಂತರ ರಾಮ್ ಲಲ್ಲಾನನ್ನು ಸೂರ್ಯ ತಿಲಕ ಸ್ಪರ್ಶಿಸುವ ಕ್ಷಣವನ್ನು ವೀಕ್ಷಿಸಿದ್ದೇನೆ. ಕೋಟಿಗಟ್ಟಲೆ ಭಾರತೀಯರಂತೆ ನನಗೂ ಇದು ಅತ್ಯಂತ ಭಾವನಾತ್ಮಕ ಕ್ಷಣ. ಅಯೋಧ್ಯೆಯ ರಾಮನವಮಿಯು ಐತಿಹಾಸಿಕವಾಗಿದೆ. ಈ ಸೂರ್ಯ ತಿಲಕ ನಮ್ಮ ಜೀವನಕ್ಕೆ ಶಕ್ತಿಯನ್ನು ತರಲಿ ಮತ್ತು ನಮ್ಮ ರಾಷ್ಟ್ರವು ವೈಭವದ ಹೊಸ ಎತ್ತರವನ್ನು ಏರಲು ಪ್ರೇರೇಪಿಸಲಿ ಎಂದು ಹೇಳಿದ್ದಾರೆ.

narendra modi

READ MORE..; ಬಿಜೆಪಿಗೆ ಸವಾಲಾದ ಬಿರುವೆರ್..! ವರ್ಕೌಟ್‌ ಆಗಿಲ್ಲ ನಮೋ ಪ್ಲ್ಯಾನ್‌…!

Continue Reading

LATEST NEWS

Trending