Connect with us

LATEST NEWS

ಸಾವರ್ಕರ್‌ರನ್ನು ವಿರೋಧಿಸುವವರನ್ನು ಸಹಿಸಲು ಅಸಾಧ್ಯ-ಸಚಿವ ಸುನಿಲ್

Published

on

ಉಡುಪಿ: ‘ಸಾವರ್ಕರ್ ಭಾವಚಿತ್ರಕ್ಕೆ ಆಕ್ಷೇಪಣೆ ವ್ಯಕ್ತಪಡಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಎರಡು ಕರಿನೀರಿನ ಶಿಕ್ಷೆಯನ್ನು ಅನುಭವಿಸಿದ ದೊಡ್ಡ ಹೋರಾಟಗಾರ. ಸಾವರ್ಕರ್ ಕುರಿತಂತೆ ಗೊತ್ತಾಗಬೇಕಾದರೆ ಅಂಡಮಾನ್‌ನ ಜೈಲಿನ ಪರಿಸ್ಥಿತಿ ನೋಡಿದಾಗ ಸಾವರ್ಕರ್ ಎಷ್ಟು ದೊಡ್ಡ ಹೋರಾಟಗಾರ ಅನ್ನೋದು ಗೊತ್ತಾಗುತ್ತೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹೇಳಿದರು.


ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಫೋಟೋ ಹಾಕುವುದನ್ನು ಖಂಡಿಸಿದ ಘಟನೆಹೆ ಸಂಬಂಧಿಸಿ ಪ್ರತಿಕ್ರಿಯಿಸಿ ಮಾತನಾಡಿ ‘ಇವತ್ತು ಇವರ ಕುರಿತಂತೆ ಆಕ್ಷೇಪಣೆ ಮಾಡ್ತಾರೆ ಅಂದ್ರೆ ಅದು ಸಹಿಸಲು ಅಸಾಧ್ಯ.

ಮತ್ತು ಆ ಆಕ್ಷೇಪಣೆ ಸ್ವಾತಂತ್ರ್ಯಕ್ಕೆ ಮಾಡಿದಂತೆ. ಸಾವರ್ಕರ್ ದೇಶದ ದೇಶಭಕ್ತ, ಸ್ವಾತಂತ್ರ್ಯ ಸೇನಾನಿ. ಇವರನ್ನು ಇಡೀ ಸಮಾಜ ಗೌರವಿಸಬೇಕು. ಮತ್ತು ಅವರನ್ನು ಪುರಸ್ಕರಿಸಬೇಕು.

ಪಿಎಫ್‌ಐ ಸಂಘಟನೆಗಳು ಸಾವರ್ಕರ್‌ನ್ನು ವಿರೋಧಿಸುತ್ತದೆ ಅಂತ ಹೇಳಿದ್ರೆ ಇಡೀ ರಾಜ್ಯದಲ್ಲಿ ಎಲ್ಲೂ ಕೂಡಾ ಅವರ ಪೋಸ್ಟರ್‌ಗಳನ್ನು ತೆಗೆಯಲು ಸಾಧ್ಯವಿಲ್ಲ ಎನ್ನುವುದನ್ನು ನಾನು ಮತ್ತೆ ಮತ್ತೆ ಸ್ಪಷ್ಟ ಪಡಿಸ್ತೇನೆ. ಇದೊಂದು ವ್ಯವಸ್ಥಿತವಾದ ಷಡ್ಯಂತ್ರ.

ಅಶಾಂತಿಯನ್ನು ಸೃಷ್ಠಿಸುವ ಕೆಲಸ ಇವತ್ತು ಪಿಎಫ್‌ಐ ಮಾಡುತ್ತಿದೆ. ಯಾವುದೋ ಸಣ್ಣ ಘಟನೆಯನ್ನು ಹಿಡಿದುಕೊಂಡು ಅದು ಈ ರೀತಿ ಮಾಡುತ್ತಿದೆ. ಈಗಾಗಲೇ ಪೊಲೀಸ್ ಇಲಾಖೆ, ಗೃಹ ಇಲಾಖೆ ಅಂತಹ ಘಟನೆಯನ್ನು ನಿಯಂತ್ರಿಸುತ್ತಿದೆ.

ಇವತ್ತು ಸುರತ್ಕಲ್, ಶಿವಮೊಗ್ಗದಲ್ಲಿ ನಡೆದ ಘಟನೆಗಳನ್ನು ನೋಡಿದ್ರೆ ನನಗೆ ಅನಿಸುತ್ತದೆ ಇದೊಂದು ಪೂರ್ವಯೋಜಿತವಾಗಿ ಸಾವರ್ಕರ್ ಮತ್ತು ಟಿಪ್ಪುವನ್ನು ಬಳಸಿಕೊಳ್ಳುವ ಪ್ರಯತ್ನ ಆಗುತ್ತಿದೆ. ಈ ಬಗ್ಗೆ ಸಿಎಂ, ಗೃಹಮಂತ್ರಿಯವರು ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುತ್ತೇನೆ’ ಎಂದು ಹೇಳಿದರು.

DAKSHINA KANNADA

ಎರಡು ಲಾರಿಗಳ ಮಧ್ಯೆ ಅಪಘಾತ; ಚಾಲಕ ಗಂಭೀರ

Published

on

ಮಂಗಳೂರು: ಬೈಕಂಪಾಡಿ ಹೋಟೆಲ್ ಶ್ರೀ ದ್ವಾರದ ಬಳಿ ಲಾರಿಗಳೆರಡರ ನಡುವೆ ಅಪಘಾತ ಸಂಭವಿಸಿ ಲಾರಿ ಚಾಲಕ ಗಂಭಿರ ಗಾಯಗೊಂಡ ಘಟನೆ ನಡೆದಿದೆ. ಒಂದು ಲಾರಿಯೊಂದು ಗ್ರಾನೈಟ್ ಅಂಗಡಿಯೊಳಗೆ ನುಗ್ಗಿದ್ದು, ಅಪಾರ ಮೌಲ್ಯದ ಗ್ರಾನೈಟ್‌ ಹಾನಿಗೊಂಡಿದೆ.

ಮುಂದೆ ಓದಿ..; ಪುತ್ತೂರು : ಧರೆಗುರುಳಿದ ಬೃಹದಾಕಾರದ ಮರ; ಮಾವಿನಕಾಯಿಗಾಗಿ ಮುಗಿಬಿದ್ದ ಜನ!

accident

ಲಾರಿ ಸಾಗಾಟ ಮಾಡುತ್ತಿದ್ದ ಲಾರಿ ಅಪಘಾತದಿಂದ ನಜ್ಜುಗುಜ್ಜಾಗಿದೆ. ಇನ್ನು ಇದೇ ಭಾಗದಲ್ಲಿ ನಿತ್ಯವೂ ಮಹಿಳೆಯರು ಮೀನ ಮಾರಾಟ ಮಾಡುತ್ತಿದ್ದರು. ಅದೃಷ್ಟವಶಾತ್ ಇದೀಗ ಭಾರೀ ಅನಾಹುತ ತಪ್ಪಿದೆ.

 

Continue Reading

LATEST NEWS

60ನೇ ವಯಸ್ಸಿಗೆ “ಮಿಸ್ ಯುನಿವರ್ಸ್” ಕಿರೀಟ ಮುಡಿಗೇರಿಸಿಕೊಂಡ ಈಕೆ ಯಾರು ಗೊತ್ತಾ? ಈಕೆಯ ಸೌಂದರ್ಯಕ್ಕೆ ಬೆರಗಾದ್ರು ಜನ..!!

Published

on

ಹೆಚ್ಚಾಗಿ ಮಿಸ್​ ವರ್ಲ್ಡ್​​​, ಮಿಸ್​​ ಯುನಿವರ್ಸ್ ಇನ್ನೂ ಮುಂತಾದ ಸೌಂದರ್ಯ ಸ್ಪರ್ಧೆಯಲ್ಲಿ ಹದಿಹರೆಯದ ಸುಂದರಿಯರೇ ಭಾಗವಹಿಸುತ್ತಾರೆ. ಆದರೆ ಅಲೆಜಾಂಡ್ರಾ ಮಾರಿಸಾ ರೋಡ್ರಿಗಸ್ ಎಂಬ ಮಹಿಳೆ ತನ್ನ 60ನೇ ವಯಸ್ಸಿನಲ್ಲಿ ಮಿಸ್ ಯುನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾಳೆ.

ವೃತ್ತಿಯಲ್ಲಿ ವಕೀಲ ಮತ್ತು ಪತ್ರಕರ್ತೆಯಾಗಿರೋ ಅಲೆಜಾಂಡ್ರಾ ಅವರು 60ನೇ ವಯಸ್ಸಿನಲ್ಲಿ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದ ಮೊದಲ ಮಹಿಳೆ ಎಂಬ ದಾಖಲೆ ಪಡೆದುಕೊಂಡಿದ್ದಾರೆ. ಅರ್ಜೆಂಟೀನಾದ ಬ್ಯೂನಸ್ ಐರಿಸ್​​ನ ರಾಜಧಾನಿ ಲಾ ಪ್ಲಾಟಾದಲ್ಲಿ ನಡೆದ 2024ರ ಮಿಸ್‌ ಯೂನಿವರ್ಸ್ ಬ್ಯೂನಸ್ ಐರಿಸ್ ಸ್ಪರ್ಧೆಯಲ್ಲಿ ಗೆದ್ದು ಇಡೀ ಜಗತ್ತೆ ತಿರುಗಿ ನೋಡುವಂತೆ ಮಾಡಿದ್ದಾಳೆ.

ಇನ್ನೂ 60ನೇ ವಯಸ್ಸಿನಲ್ಲಿಯೂ ಈಕೆಯ ಸೌಂದರ್ಯ ಕಂಡು ನೆಟ್ಟಿಗರು ಫುಲ್​ ಶಾಕ್​ ಆಗಿದ್ದಾರೆ. ಅನೇಕರು ಆಕೆ ಮಿಸ್​​ ಯುನಿವರ್ಸ್​​ ಕಿರೀಟ ಪಡೆದುಕೊಂಡಿರೋದಕ್ಕೆ ಶುಭಾಶಯ ತಿಳಿಸುತ್ತಿದ್ದು ಇನ್ನೂ ಕೆಲವರು ಕಮೆಂಟ್ಸ್‌ಗಳನ್ನು ಹಾಕುತ್ತಿದ್ದಾರೆ.

Continue Reading

LATEST NEWS

ಪುತ್ತೂರು : ಧರೆಗುರುಳಿದ ಬೃಹದಾಕಾರದ ಮರ; ಮಾವಿನಕಾಯಿಗಾಗಿ ಮುಗಿಬಿದ್ದ ಜನ!

Published

on

ಪುತ್ತೂರು :  ಬೊಳ್ವಾರ್ ಬಸ್ ತಂಗುದಾಣದ ಪಕ್ಕದಲ್ಲಿದ್ದ ಬೃಹದಾಕಾರದ ಮರವೊಂದು ಉರುಳಿ ಬಿದ್ದಿದೆ. ಪರಿಣಾಮ ಹಲವು ವಾಹನಗಳು ಜಖಂಗೊಂಡಿವೆ. ವಾಹನ ಮಾಲಕರು ವಾಹನಗಳನ್ನು ಹೊರತೆಗೆಯಲು ಹರಸಾಹಸ ಪಡುವಂತಾಯಿತು.

ಬಿದ್ದ ಮರದಲ್ಲಿದ್ದ ಮಾವಿನಕಾಯಿಗಳನ್ನು ಕೊಯ್ಯಲು ಜನ ಮುಗಿಬಿದ್ದ ಘಟನೆಯೂ ನಡೆಯಿತು. ಬಳಿಕ ಸ್ಥಳೀಯರು ಮರದ ಕೊಂಬೆಗಳನ್ನು ಕಡಿದು ತೆರವುಗೊಳಿಸಿದರು.

ಮರ ಬೀಳುವ ಸಂದರ್ಭ ಯಾರೂ ಇಲ್ಲದ ಪರಿಣಾಮ ಭಾರೀ ದುರಂತವೊಂದು ತಪ್ಪಿದೆ.

ಇದನ್ನೂ ಓದಿ : ಚಾಲಕನ ನಿಯಂತ್ರಣ ತಪ್ಪಿ ಇನೋವಾ ಕಾರು ಪಲ್ಟಿ; ಯುವತಿ ಸಾವು!

Continue Reading

LATEST NEWS

Trending