Connect with us

    DAKSHINA KANNADA

    ಗುದನಾಳದಲ್ಲಿ ಅಕ್ರಮ ಚಿನ್ನ ಸಾಗಣೆ-ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಓರ್ವನ ಬಂಧನ..!

    Published

    on

    ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೋರ್ವ ಗುದನಾಳದಲ್ಲಿ ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದು ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾನೆ.  ಕಾಸರಗೋಡು ಮೂಲದ ನೌಶಾದ್ ತ್ರಿಕುಲಾಥ್ ಎಂಬವನೇ ಬಂಧಿತ ಆರೋಪಿ.ಈತ ದುಬೈನಿಂದ ಬರುತ್ತಿದ್ದ ಏರ್ ಇಂಡಿಯಾ ಫ್ಲೈಟ್ ಐಎಕ್ಸ್ 384 ನಿಂದ ಬಂದಿಳಿದಿದ್ದು, ಗುದನಾಳದಲ್ಲಿ ಬರೋಬ್ಬರಿ 37.29 ಲಕ್ಷ ಮೌಲ್ಯದ ಅಕ್ರಮ ಚಿನ್ನ ಹುದುಗಿಸಿ ತಂದಿದ್ದ ಎನ್ನಲಾಗಿದ್ದು, ಕಳ್ಳ ಸಾಗಾಣೆಗೆ ಯತ್ನಿಸಿದ ಈತ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾನೆ.  ಬಂಧಿತನಿಂದ 802ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    DAKSHINA KANNADA

    ಮೂಡಬಿದಿರೆ: ಲವ್ ಜಿಹಾದ್ ಯತ್ನ; ಬಜರಂಗದಳದ ಮಿಂಚಿನ ಕಾರ್ಯಾಚರಣೆ …!!

    Published

    on

    ಮೂಡುಬಿದಿರೆ : ಅನ್ಯಕೋಮಿನ ಯುವಕನ ಜೊತೆ ಜೈನ ವಿದ್ಯಾರ್ಥಿನಿಯ ಸುತ್ತಾಟ, ಚೆಲ್ಲಾಟಗಳನ್ನು ಮೂಡುಬಿದಿರೆ ಬಜರಂಗದಳ ಬೆಳಕಿಗೆ ಬಂದಿದೆ, ಬಳಿಕ, ಲವ್ ಜಿಹಾದ್‌ಗೆ ಜೈನ ಯುವತಿಯರನ್ನು ಟಾರ್ಗೆಟ್ ಮಾಡುತ್ತಿರುವ ಗಂಭೀರ ವಿಚಾರ ತಿಳಿದು ಬಂದಿದೆ.

    ಮೊದಲಿಗೆ ಯುವತಿಯನ್ನು ಬಲೆಗೆ ಬೀಳಿಸಲು ಯುವಕ ಸ್ಕೇಚ್ ಹಾಕುತ್ತಿದ್ದವನ ಹೆಸರು ಸೀನಾನ್ ಎಂದು ತಿಳಿದುಬಂದಿದೆ. ಯುವತಿಯನ್ನು ತೋಡಾರಿನಲ್ಲಿರುವ ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ, ಮೂಡುಬಿದಿರೆ ನಿವಾಸಿ ಎಂದು ಗುರುತಿಸಲಾಗಿದೆ.

    ಮೂಡುಬಿದಿರೆಯ ವಿದ್ಯಾಗಿರಿಯ ಕೆಫೆಯೊಂದರಲ್ಲಿ ಜೈನ ವಿದ್ಯಾರ್ಥಿನಿ ಜೊತೆ ಅನ್ಯಕೋಮಿನ ಯುವಕ ಚೆಲ್ಲಾಟವಾಡುತ್ತಿರುವ ವೇಳೆ ಬಜರಂಗದಳದ ಮಿಂಚಿನ ಕಾರ್ಯಾಚರಣೆ ನಡೆಸಿದೆ. ಈ ಸಮಯ ಸೀನಾನ್ ಸ್ಥಳದಿಂದ ಪರಾರಿಯಾಗಿದ್ದಾನೆ. ಇಬ್ಬರು ಕೆಫೆಯಲ್ಲಿ ಗ್ಲಾಸ್ ಅಳವಡಿಸಲಾಗಿರುವ ಸ್ಥಳದಲ್ಲಿ ಕೂತು ಮೈ-ಕೈಮುಟ್ಟಿಕೊಂಡು, ಚಕ್ಕಂದವಾಡುತ್ತಿದ್ದರು. ಸದ್ಯ ಇದೂ ಲವ್ ಜಿಹಾದ್ ಶಂಕೆ ವ್ಯಕ್ತವಾಗಿದ್ದು, ಸಾರ್ವಜನಿಕವಾಗಿ ಆಕ್ರೋಶ ಕೇಳಿಬಂದಿದೆ.

    ಈ ಸೀನಾನ್ ಡ್ರಗ್ ಪೆಡ್ಲರ್ ಮತ್ತು ಇತರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾನೆ, ಮುಂದಿನ ದಿನಗಳಲ್ಲಿ ಮೂಡುಬಿದಿರೆ ಭಾಗದ ಯುವತಿಯರು ಸ್ವಲ್ಪ ಜಾಗರೂಕರಾಗಿರಬೇಕು. ತಪ್ಪಿದಲ್ಲಿ ಲವ್ ಜಿಹಾದಿಗೆ ಬಲಿಯಾಗಿ ತಮ್ಮ ಜೀವನವನ್ನು ಸರ್ವನಾಶ ಮಾಡಿಕೊಳ್ಳಬಾರದು ಎಂದು ಬಜರಂಗದಳ ಪ್ರಮುಖರು ಕರೆ ನೀಡಿರುತ್ತಾರೆ.

    ಈಗಾಗಲೇ ಹಿಂದೂ ಸಮಾಜದ ಯುವತಿಯರು ಅನ್ಯಕೋಮಿನ ಯುವಕರ ನಾನಾ ವಿಧದ ಆಮಿಷಗಳಿಗೆ ಒಳಗಾಗಿ ಲವ್ ಜಿಹಾದ್ ಬಲೆಗೆ ಬಿದ್ದು, ಜೀವನ ಹಾಳು ಮಾಡಿಕೊಂಡಿರುವುದು ನಾವು ಪ್ರತಿದಿನ ಬೇರೆ ಬೇರೆ ಊರುಗಳಲ್ಲಿ ಕೇಳುತ್ತಿರುವ ವಿಚಾರವಾದರೂ ಇನ್ನೂ ಇತಂಹ ಜಿಗಾದ್ ಗೆ ಯುವತಿಯರು ಬಲಿಯಾಗುತ್ತಿರುವುದು ವಿಷಾದನೀಯವಾಗಿದೆ.

    Continue Reading

    DAKSHINA KANNADA

    ಮಂಗಳೂರು: ನಕಲಿ ಇ-ಚಲನ್‌ ಕಳುಹಿಸಿ ವ್ಯಕ್ತಿಗೆ 1.31 ಲಕ್ಷ ರೂಪಾಯಿ ವಂಚನೆ

    Published

    on

    ಮಂಗಳೂರು:  ಸಂಚಾರ ನಿಯಮ ಉಲ್ಲಂಘನೆಯ ಬಗ್ಗೆ ನಕಲಿ ಇ-ಚಲನ್ ಕಳುಹಿಸಿ ವ್ಯಕ್ತಿಯೊಬ್ಬರ ಖಾತೆಯಿಂದ 1.31 ಲಕ್ಷ ರೂಪಾಯಿ ಹಣವನ್ನು ವರ್ಗಾಯಿಸಿಕೊಂಡ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಘಟನೆಯ ವಿವರ :

    ನವೆಂಬರ್ 24ರಂದು ತನಗೆ ವಾಟ್ಸ್‌ಆ್ಯಪ್ ನಂಬರ್‌ವೊಂದರಿಂದ ಮೆಸೇಜ್ ಬಂದಿದ್ದು, ಅದನ್ನು ಡೌನ್‌ಲೋಡ್ ಮಾಡಿದ ಬಳಿಕ ಮೊಬೈಲ್‌ಗೆ 16 ಒಟಿಪಿಗಳು ಬಂದಿದೆ. ಬಳಿಕ ಫ್ಲಿಪ್‌ಕಾರ್ಟ್ ಹಾಗೂ ಅಮೆಜಾನ್‌ನಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ 30,400 ರೂ., ಡೆಬಿಟ್ ಕಾರ್ಡ್ ಮೂಲಕ 16,700 ರೂ. ಮತ್ತು ಪೇ ಲೇಟರ್‌ನಲ್ಲಿ 71,496 ರೂ. ಹಣ ವರ್ಗಾವಣೆಯಾದ ಬಗ್ಗೆ ಮೊಬೈಲ್‌ಗೆ ಮೆಸೇಜ್ ಬಂದಿತ್ತು. ತಕ್ಷಣ ಮೊಬೈಲ್ ಮೂಲಕ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್‌ನ್ನು ದೂರುದಾರರು ಬ್ಲಾಕ್ ಮಾಡಿದ್ದಾರೆ.

    ಯಾರೋ ಅಪರಿಚಿತರು ಎಪಿಕೆ ಫೈಲ್ ಮೂಲಕ ತನ್ನ ಡೆಬಿಟ್, ಕ್ರೆಡಿಟ್ ಕಾರ್ಡ್‌ನ ಮಾಹಿತಿ ಪಡೆದು ಫ್ಲಿಪ್‌ಕಾರ್ಟ್‌ನಲ್ಲಿ 39,398 ರೂ. ಮೌಲ್ಯದ ವನ್‌ಪ್ಲಸ್ ಮೊಬೈಲ್, 32,398 ರೂ. ಮೌಲ್ಯದ ಮೊಟೊರೊಲಾ ಎಜ್ ಮೊಬೈಲ್, 12,800 ರೂ. ಮೌಲ್ಯದ ಏರ್ ಪೋಡ್, 14,700 ರೂ., 29,400 ರೂ., 3,000 ರೂ. ಮೌಲ್ಯದ ಫ್ಲಿಪ್‌ಕಾರ್ಟ್ ವೋಚರ್‌ಗಳನ್ನು ಹೊಸದಿಲ್ಲಿಯ ವಿಳಾಸದಲ್ಲಿರುವ ವ್ಯಕ್ತಿಗೆ ಆರ್ಡರ್ ಮಾಡಿ 1,31,396 ರೂ. ವಂಚಿಸಿರುವುದಾಗಿ ಹಣ ಕಳೆದುಕೊಂಡ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.

     

    Continue Reading

    DAKSHINA KANNADA

    ಮಂಗಳೂರು : ಮತ್ತೆ ಡ್ರಗ್ ಸೀಜ್; ಎಂಡಿಎಂಎ ಮಾರಾಟ ಮಾಡುತ್ತಿದ್ದ ಮೂವರ ಬಂಧನ

    Published

    on

    ಮಂಗಳೂರು: ನಗರವನ್ನು ಡ್ರಗ್ ಮುಕ್ತ ನಗರ ಮಾಡುವ ನಿಟ್ಟಿನಲ್ಲಿ ಪೊಲೀಸ್ ಕಾರ್ಯಾಚರಣೆ ಆರಂಭವಾಗಿ ವರ್ಷಗಳ ಕಳೆದಿದೆ. ಮಾದಕ ವ್ಯಸನ ಹಾಗೂ ಮಾರಾಟದ ವಿಚಾರವಾಗಿ ಹಲವಾರು ಜನಜಾಗೃತಿ ಕಾರ್ಯಕ್ರಮಗಳನ್ನು ಇಲಾಖೆಯಿಂದ ಮಾಡಲಾಗಿದೆ. ಆದ್ರೆ ಈ ಡ್ರಗ್ ಜಾಲವನ್ನು ಬುಡ ಸಮೇತ ಕಿತ್ತು ಹಾಕಲು ಪೊಲೀಸ್ ಇಲಾಖೆಯಿಂದ ಸಾದ್ಯವಾಗುತ್ತಿಲ್ಲ.

    ಮಂಗಳೂರಿನಲ್ಲಿ ಮಾದಕ ವಸ್ತುವಿಗೆ ಡಿಮ್ಯಾಂಡ್ ಇರುವ ಹಿನ್ನೆಲೆಯಲ್ಲಿ ಡ್ರಗ್ ಮಾಫಿಯಾ ದಿನಕ್ಕೊಂದು ಹೊಸ ತಂತ್ರದ ಮೂಲಕ ಡ್ರಗ್ಸ್‌ ಮಂಗಳೂರಿಗೆ ತಲುಪಿಸುತ್ತಿದೆ. ಹಾಗಂತ ಪೊಲೀಸರು ಇಂತಹ ಆಸಾಮಿಗಳನ್ನು ಹಿಡಿದು ಜೈಲಿಗಟ್ಟುವುದು ಕೂಡಾ ನಿಂತಿಲ್ಲ. ಇದೀಗ ಪಜೀರು ಗ್ರಾಮದ ಕಂಬಳ ಪದವು ಎಂಬಲ್ಲಿ ಮತ್ತೆ ಮೂವರು ಡ್ರಗ್ ಸೆಲ್ಲರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು ಒಂದುವರೆ ಲಕ್ಷ ಮೌಲ್ಯದ ಎಂಡಿಎಂಎ ಡ್ರಗ್ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು ತಲಪಾಡಿಯ ಗೌತಮ್, ಕುಂಪಲದ ಕಾರ್ತಿಕ್ ಹಾಗೂ ತೊಕ್ಕೊಟ್ಟಿನ ನಿಖಿಲ್ ಎಂದು ಗುರುತಿಸಲಾಗಿದೆ.

    Continue Reading

    LATEST NEWS

    Trending