Connect with us

    LATEST NEWS

    ದೀಪಾವಳಿಯಂದು ಈ ಜೀವಿಗಳನ್ನು ನೋಡಿದ್ರೆ ನಿಮ್ಮ ಲಕ್ ಚೇಂಜ್!

    Published

    on

    2024 ರ, ದೀಪಾವಳಿ ಹಬ್ಬವು ಅಕ್ಟೋಬರ್ 31 ರಂದು ಬಂದಿದೆ. ಈ ದಿನದಂದು ಕಾಣಿಸಿಕೊಳ್ಳುವ ಅನೇಕ ವಿಷಯಗಳು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಕೆಲವು ಜೀವಿಗಳನ್ನು ನೋಡುವುದರಿಂದ ಮುಂದಿನ ದಿನಗಳಲ್ಲಿ ನಿಮಗೆ ಹಣದ ಕೊರತೆಯಾಗುವುದಿಲ್ಲ ಎಂಬ ನಂಬಿಕೆಯಿದೆ.

    ದೀಪಾವಳಿಯ ರಾತ್ರಿ ಮನೆಯಲ್ಲಿ ಅಥವಾ ಮನೆಯ ಸುತ್ತಮುತ್ತ ಕೆಲವು ಜೀವಿಗಳು ಕಾಣಿಸಿಕೊಂಡರೆ, ಅದು ಲಕ್ಷ್ಮಿ ಆಗಮನದ ಸೂಚನೆಯಂದು ಪರಿಗಣಿಸಲಾಗುತ್ತದೆ. ಲಕ್ಷೀದೇವಿ ಸಂಪನ್ನಗೊಂಡು ನಿಮ್ಮನ್ನು ಆರ್ಥಿಕ ಸಮಸ್ಯೆಯಿಂದ ಮುಕ್ತಿ ನೀಡಿ ಸಂತೋಷ ನೀಡುತ್ತಾಳೆ ಎಂದು ಶಕುನ ಶಾಸ್ತ್ರ ಹೇಳುತ್ತೆ.

    ದೀಪಾವಳಿಯ ದಿನದಂದು ನೀವು ಮನೆಯಲ್ಲಿ ಹಲ್ಲಿಯನ್ನು ನೋಡಿದರೆ, ಶುಭ ಶಕುನ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಹಲ್ಲಿಯನ್ನು ಓಡಿಸಬೇಡಿ. ದೀಪಾವಳಿ ಹಬ್ಬದಂದು ಹಲ್ಲಿಯನ್ನು ನೋಡುವುದು ಮುಂದಿನ ದಿನಗಳಲ್ಲಿ ನಿಮಗೆ ಹಣದ ಕೊರತೆಯಾಗುವುದಿಲ್ಲ ಎಂಬುದನ್ನು ಸೂಚಿಸುತ್ತದೆ.

    ದೀಪಾವಳಿಯ ರಾತ್ರಿ ನೀವು ಗೂಬೆಯನ್ನು ನೋಡಿದರೆ, ಅದನ್ನು ತುಂಬಾ ಮಂಗಳಕರ ಎಂಬ ನಂಬಿಕೆಯಿದೆ. ಗೂಬೆಯನ್ನು ಲಕ್ಷ್ಮಿ ದೇವಿಯ ವಾಹನ ಎಂದೂ ಪರಿಗಣಿಸಲಾಗುತ್ತದೆ. ದೀಪಾವಳಿಯ ರಾತ್ರಿ ಗೂಬೆಯನ್ನು ಕಂಡರೆ ನಿಮ್ಮ ಮನೆಗೆ ಲಕ್ಷ್ಮಿ ದೇವಿ ಬರಲಿದ್ದಾಳೆ ಎಂದರ್ಥ.

     

     

    ಧರ್ಮಗ್ರಂಥಗಳ ಪ್ರಕಾರ ದೀಪಾವಳಿಯಂದು ನಿಮ್ಮ ಮನೆಯಲ್ಲಿ ಅಥವಾ ಮನೆಯ ಸುತ್ತಮುತ್ತ ಹೆಗ್ಗಣ ಕಂಡರೆ ಅದನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಜೊತೆಗೆ ನೀವು ತುಂಬಾ ಅದೃಷ್ಟವಂತರು ಮತ್ತು ಹಣಕ್ಕೆ ಸಂಬಂಧಿಸಿದ ನಿಮ್ಮ ಎಲ್ಲಾ ಸಮಸ್ಯೆಗಳು ಕೊನೆಗೊಳ್ಳಲಿವೆ ಎಂಬ ನಂಬಿಕೆಯಿದೆ.

     

    ಇದಲ್ಲದೇ ದೀಪಾವಳಿಯಂದು ಕೇಸರಿ ಬಣ್ಣದ ಹಸು, ಬೆಕ್ಕನ್ನು ನೋಡುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದನ್ನು ಲಕ್ಷ್ಮಿ ದೇವಿಯ ಆಗಮನದ ಸೂಚಕವೆಂದು ಪರಿಗಣಿಸಲಾಗಿದೆ.

    DAKSHINA KANNADA

    ಸುರತ್ಕಲ್ : ಸಮುದ್ರಪಾಲಾಗಿದ್ದ ಯುವಕನ ಶ*ವ ಪತ್ತೆ

    Published

    on

    ಸುರತ್ಕಲ್ : ಅಲೆಗಳ ಹೊಡೆತಕ್ಕೆ ಸಮುದ್ರಪಾಲಾಗಿದ್ದ ಯುವಕನ ಶವ ಸಸಿಹಿತ್ಲು ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ. ಬಂಟ್ವಾಳ ತಾಲೂಕಿನ ಬಿಸಿ ರೋಡ್ ನಿವಾಸಿ, 21 ವರ್ಷದ ಪ್ರಜ್ವಲ್ ಮೃ*ತ ಯುವಕ.

    ನಿನ್ನೆ ಸುರತ್ಕಲ್‌ ಸಮೀಪದ ಮುಕ್ಕ ರೆಡ್‌ ರಾಕ್‌ ಬಳಿಯ ಕಡಲ ಕಿನಾರೆಗೆ 8 ಜನ ಸ್ನೇಹಿತರು ವಿಹಾರಕ್ಕೆ ಬಂದಿದ್ದರು. ಸಮುದ್ರ ಕಿನಾರೆಯಲ್ಲಿ ಅಲೆಗಳ ಜೊತೆ ಆಟವಾಡುತ್ತಿದ್ದ ವೇಳೆ ಜೋರಾಗಿ ಅಪ್ಪಳಿಸಿದ ಅಲೆಯಲ್ಲಿ ಪ್ರಜ್ವಲ್ ಕೊಚ್ಚಿಕೊಂಡು ಹೋಗಿದ್ದ. ಅಲೆಗಳ ಹೊಡೆತದಿಂದ ತಪ್ಪಿಸಿಕೊಂಡ ಇತರ ಯುವಕರು ತಮ್ಮ ಜೀ*ವ ಉಳಿಸಿಕೊಂಡಿದ್ದರು.

    ಇದನ್ನೂ ಓದಿ : ಬಿಗ್ ಬಾಸ್ ಮನೆಯ ರಾಜಕೀಯ ವಿಚಾರಿಸಲು ನ್ಯೂಸ್ ಆ್ಯಂಕರ್ ರಾಧಾ ಹಿರೇಗೌಡರ್ ಎಂಟ್ರಿ

    ಈ ಬಗ್ಗೆ ಯುವಕನ ಸಂಬಂಧಿಕರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನಾಪತ್ತೆಯಾದ ಯುವಕನಿಗಾಗಿ ಶೋಧಕಾರ್ಯ ನಡೆಸಲಾಗಿತ್ತು. ಇಂದು ಯುವಕನ ಶ*ವ ಪತ್ತೆಯಾಗಿದೆ.

    Continue Reading

    LATEST NEWS

    ಮತ್ತೆ 85 ವಿಮಾನಗಳಿಗೆ ಬಾಂಬ್ ಬೆದರಿಕೆ

    Published

    on

    ನವದೆಹಲಿ: ಕಳೆದ ಕೆಲ ದಿನಗಳಿಂದ ಹಲವು ವಿಮಾನಗಳಿಗೆ ಬಾಂಬ್ ಬೆದರಿಕೆಯನ್ನು ಇಮೇಲ್, ಎಕ್ಸ್ ಮೂಲಕ ಹಾಕಲಾಗಿತ್ತು. ಇಂದು ಮತ್ತೆ ಸರಣಿ ಮುಂದುವರೆದಿದ್ದು ಹೊಸದಾಗಿ 85 ವಿಮಾನಗಳಿಗೆ ಬಾಂಬ್ ಬೆದರಿಕೆಯನ್ನು ಹಾಕಲಾಗಿದೆ.

    ಇಂದು ಇಂಡಿಗೊ, ಏರ್ ಇಂಡಿಯಾ, ವಿಸ್ತಾರಾ ಮತ್ತು ಅಕಾಸಾ ಏರ್ ಸೇರಿದಂತೆ 85 ವಿಮಾನಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಹೀಗಾಗಿ ಕೆಲ ವಿಮಾನಗಳ ಸಂಚಾರದಲ್ಲೂ ವ್ಯತ್ಯಯ ಉಂಟಾಗಿದೆ. ಬಾಂಬ್ ಬೆದರಿಕೆಯಿಂದಾಗಿ ವಿಮಾನಗಳನ್ನು ಬಾಂಬ್ ನಿಷ್ಕ್ರೀಯ ದಳದವರು ತಪಾಸಣೆಗೆ ಒಳಪಡಿಸುತ್ತಿದ್ದಾರೆ.

    Continue Reading

    LATEST NEWS

    ಹೆಣ್ಣು ಹೆತ್ತಿದಕ್ಕೆ ಅವಮಾನ; 3 ಹೆಣ್ಣು ಮಕ್ಕಳ ತ*ಬ್ಬಲಿಯಾಗಿಸಿ ಹೊರಟ ತಾಯಿ

    Published

    on

    ಮಂಗಳೂರು/ಕೊಪ್ಪಳ: ಮೂರು ಹೆಣ್ಣು ಹೆತ್ತಳು ಎನ್ನುವ ಕಾರಣಕ್ಕೆ ಪತಿ ಸೇರಿದಂತೆ ಪತಿಯ ಕುಟುಂಬಸ್ಥರು ನಿಂದಿಸಿದರು ಎನ್ನುವ ಕಾರಣಕ್ಕೆ ಮನನೊಂದು ಹನುಮವ್ವ ಆ*ತ್ಮಹತ್ಯೆ ಮಾಡಿಕೊಂಡು ಇ*ಹಲೋಕ ತ್ಯಜಿಸಿದ್ದಾರೆ.
    ತಾಯಿ ಎದೆಗವಚಿಕೊಂಡು ಹಾಲು ಉಣ್ಣಬೇಕಾದ ನಾಲ್ಕು ತಿಂಗಳು ಹೆಣ್ಣು ಕೂಸು ಈಗ ಅ*ನಾಥ. ಅಷ್ಟೇ ಅಲ್ಲ, ನಾಲ್ಕು, ಮೂರು ವರ್ಷದ ಇನ್ನೆರಡು ಹೆಣ್ಣು ಮಕ್ಕಳೂ ಸಹ ಅ*ನಾಥವಾಗಿವೆ.

    ಮುಖ್ಯ ಯುವತಿಯ ಪತಿ ಗಣೇಶ ಮಾಡಿದ ತಪ್ಪಿಗೆ ಜೈಲು ಸೇರಿದ್ದಾನೆ.

    ಈಗ ಮಕ್ಕಳು ತಂದೆ, ತಾಯಿ ಇಲ್ಲದೆ ಅ*ನಾಥವಾಗಿವೆ. ಇತರ ಐವರು ಆರೋಪಿಗಳು ನಾಪತ್ತೆಯಾಗಿದ್ದರು. ಬಳಿಕ ತೀವ್ರವಾದ ಕಾರ್ಯಾಚರಣೆಯ ವೇಳೆ ಒಬ್ಬೊಬ್ಬರೆ ಪತ್ತೆಯಾಗುತ್ತಿದ್ದಾರೆ.

    ಕೊ*ಲೆಯಾಗಿರುವ ಶಂಕೆ :

    ಮಗಳು ಆ*ತ್ಮಹತ್ಯೆ ಮಾಡಿಕೊಂಡಿರಲು ಸಾಧ್ಯವೇ ಇಲ್ಲ ಎಂದು ತಂದೆ ತಾಯಿ ಪೊಲೀಸರ ಹೇಳಿದ್ದು, ಕೊ*ಲೆಯಾಗಿರಬಹುದು ಏಂದು ಶಂಕಿಸಲಾಗಿದೆ. ಹೆಣ್ಣು ಮಕ್ಕಳನ್ನೇ ಹೆತ್ತಿರುವ ಕಾರಣಕ್ಕೆ ಗಂಡನ ಮನೆಯವರು ಹಿಂಸೆ ನೀಡುತ್ತಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.

    ಆ ಮೂವರು ಮಕ್ಕಳು ಗಣೇಶನ ಸಹೋದರನ ಮನೆಯಲ್ಲಿದ್ದಾರೆ ಎಂದು ಕೊಪ್ಪಳ ಗ್ರಾಮೀಣ ಠಾಣೆ ಸಿಪಿಐ ಡಿ. ಸುರೇಶ ತಿಳಿಸಿದ್ದಾರೆ.

    ಸಮಗ್ರ ತನಿಖೆಯಾಗಬೇಕು. ಆಕೆಯನ್ನು ಕೊಂದವರಿಗೆ ಶಿಕ್ಷೆಯಾಗಬೇಕು. ಹೆಣ್ಣು ಹೆರುವುದೇ ತಪ್ಪಾ, ಇಂಥವರಿಗೆ ದೇವರು ಶಿಕ್ಷೆ ನೀಡಲಿ ಎಂದು ಮೃತಳ ತಂದೆ ಬಸಪ್ಪ ಕೋರಿ ಹೇಳಿದ್ದಾರೆ. ಸದ್ಯ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Continue Reading

    LATEST NEWS

    Trending