LATEST NEWS
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
Published
20 hours agoon
By
NEWS DESK3ಮಂಗಳೂರು: ಎಲ್ಲಾ ರೀತಿಯ ಹಣ್ಣುಗಳಲ್ಲಿ ಒಂದಲ್ಲಾ ಒಂದು ವಿಶಿಷ್ಟವಾದ ಗುಣಗಳಿರುತ್ತವೆ. ಹಣ್ಣುಗಳು ಆರೋಗ್ಯಕ್ಕೆ ಬೇಕಾದ ಪೋಷಕಾಂಶಗಳು, ವಿಟಮಿನ್ ಗಳನ್ನು ನೀಡುತ್ತವೆ. ಅದರಲ್ಲೂ ಪ್ರಾಕೃತಿಕವಾಗಿ ಸಿಗುವ ಹಣ್ಣುಗಳು ಮನುಷ್ಯನ ದೇಹವನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತದೆ. ಕೆಲವು ಹಣ್ಣುಗಳು ನಮ್ಮ ಮನೆಯಲ್ಲೇ ಬೆಳೆದರು ನಾವು ತಿನ್ನುವುದಿಲ್ಲ. ನಮ್ಮ ಮನೆ ಹತ್ತಿರವೇ ಸಿಗುವ ಪಪ್ಪಾಯ ಹಣ್ಣನ್ನು ನಾವು ನಿರ್ಲಕ್ಷಿಸಿ ಬಿಡುತ್ತೇವೆ. ಅದರಲ್ಲೂ ಕಾಯಿ ಪಪ್ಪಾಯಿ ತಿನ್ನುವುದರಿಂದ ಎಷ್ಟೊಂದು ಪ್ರಯೋಜನ ಇದೆ ಗೊತ್ತಾ, ಅದರಲ್ಲಿರುವ ಪ್ರಯೋಜನಗಳನ್ನು ಕೇಳಿದರೆ ನಿಮಗೆ ಆಶ್ಚರ್ಯ ಆಗಬಹುದು.
ಕಾಯಿ ಪಪ್ಪಾಯಿಯಲ್ಲಿ ಅಡಗಿದೆ ಆರೋಗ್ಯಕರ ಲಕ್ಷಣಗಳು:
ಪಪ್ಪಾಯಿ ಹಣ್ಣಿನ ಸೇವನೆಯಿಂದ ಅನೇಕ ಪ್ರಯೋಜನಗಳು ಇವೆ. ಅದರಲ್ಲೂ ಕಾಯಿ ಪಪ್ಪಾಯಿ ಹಣ್ಣು ತಿಂದರೆ ಆರೋಗ್ಯಕ್ಕೆ ಇನ್ನೂ ಒಳ್ಳೆಯದು. ಪಪ್ಪಾಯಿ ಹಣ್ಣು ಎಲ್ಲರೂ ಇಷ್ಟ ಪಡುತ್ತಾರೆ. ಆದರೆ, ಕಾಯಿ ಪಪ್ಪಾಯಿಯನ್ನು ತಿನ್ನುವುದಕ್ಕೆ ಕಹಿ ಎಂದು ಹಿಂದೆ ಸರಿದು ಬಿಡುತ್ತಾರೆ. ಬೇವಿನ ಗಿಡ ಕಹಿಯಾದರು ಕೂಡ ಅದರಿಂದ ಒಳ್ಳೆಯ ಆರೋಗ್ಯ ಗುಣಲಕ್ಷಣಗಳು ಇರುವುದು ತಿಳಿದೇ ಇದೆ. ಅದೇ ರೀತಿ ಕಾಯಿ ಪಪ್ಪಾಯದಲ್ಲೂ ಆರೋಗ್ಯಕರ ಪ್ರಯೋಜನಗಳಿವೆ.
ಕಾಯಿ ಪಪ್ಪಾಯಿ ಹಣ್ಣನ್ನು ಸಾಂಬರು ಅಥವಾ ಜ್ಯೂಸ್ ಮಾಡಿ ಬೇಕಾದರೂ ಕುಡಿಯಬಹುದು. ಇದನ್ನು ಪ್ರತಿದಿನ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಕೆಲವರು ಹೊರಗಡೆಯ ಜಂಕ್ ಫುಡ್ ಆಹಾರ ತಿಂದು ದಪ್ಪವಾಗುವುದು ಸಾಮಾನ್ಯ. ಪಪ್ಪಾಯ ಕಾಯಿ ಹಣ್ಣನ್ನು ತಿನ್ನುವುದರಿಂದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಮೃದ್ದವಾದ ವಿಟಮಿನ್ ಹಾಗೂ ಮಿನರಲ್ಸ್ ಗಳು ಸಿಗುತ್ತವೆ.
ದೇಹದಲ್ಲಿ. ಗಾಯಗಳಿದ್ದರೆ ವಾಸಿಯಾಗುತ್ತದೆ ಮತ್ತು ಮಲಬದ್ದತೆ ನಿವಾರಣೆಯಾಗುತ್ತದೆ.
ಇದನ್ನೂ ಓದಿ: ರುಚಿ ಕಳೆದುಕೊಂಡ ನಾಲಿಗೆ! ತುಂಬಾನೇ ಡೇಂಜರ್.. ದೊಡ್ಡ ಕಾಯಿಲೆ ಬಂದಿರಬಹುದು ಹುಷಾರ್!
ಈ ಎಲ್ಲಾ ಲಾಭಗಳನ್ನು ಕಾಯಿ ಪಪ್ಪಾಯಿ ಹಣ್ಣನ್ನು ತಿನ್ನುವುದರಿಂದ ಪಡೆಯಬಹುದು. ಹಣ್ಣುಗಳ ಸೇವನೆಯಿಂದ ಆರೋಗ್ಯ ವೃದ್ದಿಗೆ ಕಾರಣವಾಗುತ್ತದೆ. ಹಾಗಾಗಿ ಹೊರಗಿನ ಜಂಕ್ ಫುಡ್ ಗೆ ಮಾರುಹೋಗುವ ಬದಲು, ಹಣ್ಣು-ಹಂಪಲು ತಿನ್ನುವ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು.
LATEST NEWS
ಮುಖ್ಯಮಂತ್ರಿಯೊಡನೆ ಲವ್; ಮದುವೆಯಾಗದೆ ತಾಯಿಯಾದ ಆ ನಟಿ ಯಾರು ಗೊತ್ತಾ ?
Published
8 minutes agoon
21/11/2024ಜಯಲಲಿತಾ. ಪ್ರಸ್ತುತ ಯುವ ಜನಾಂಗಕ್ಕೆ ಹೆಸರು ಹೆಚ್ಚು ತಿಳಿದಿಲ್ಲ ಆದರೆ, ಜಯಲಲಿತಾ ನಾಲ್ಕೈದು ದಶಕಗಳ ಹಿಂದೆ ಪೂರ್ತಿ ಸಂಚಲನ ಮೂಡಿಸಿದ್ದ ನಟಿ. ಸ್ಟಾರ್ ಹೀರೋಗಳು ಈಕೆಯೊಂದಿಗೆ ಸಿನಿಮಾಗಳನ್ನು ಮಾಡಲು ಬಕ ಪಕ್ಷಿಗಳಂತೆ ಕಾಯುತ್ತಿದ್ದರು. ಒಂದು ಕಾಲದಲ್ಲಿ ಇಡೀ ಇಂಡಸ್ಟ್ರೀಯನ್ನೇ ಆಳಿದ್ದು ಜಯಲಲಿತಾ ಎಂದರೂ ತಪ್ಪಾಗಲಾರದು.
ಜಯಲಲಿತಾ ಸಿನಿಮಾ ಬಂತೆಂದರೆ ಜನ ಗಾಡಿ ಕಟ್ಟಿಕೊಂಡು ನೋಡಲು ಹೋಗುತ್ತಿದ್ದರು. 1965 ರಲ್ಲಿ ‘ಮನುಷ್ಯಲು ಮಮತಾಲು’ ಚಿತ್ರದ ಮೂಲಕ ಜಯಲಲಿತಾ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಸಿನಿಮಾದಲ್ಲಿ ಅಕ್ಕಿನೇನಿ ನಾಗೇಶ್ವರ ರಾವ್ ನಾಯಕ ಮತ್ತು ಸಾವಿತ್ರಿ ಮುಖ್ಯ ನಾಯಕಿ. ಜಯಲಲಿತಾ ಎರಡನೇ ನಾಯಕಿಯಾಗಿ ಇಂದಿರಾ ಪಾತ್ರವನ್ನು ನಿರ್ವಹಿಸಿದ್ದಾರೆ. ಮೊದಲ ಸಿನಿಮಾದಲ್ಲೇ ಇನ್ನಿಲ್ಲದ ಜನಪ್ರಿಯತೆ ಗಳಿಸಿದ ನಟಿ ನಂತರ ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂ ಭಾಷೆಗಳಲ್ಲಿ ನಟಿಸಿದರು.
ಸಿನಿಮಾದಲ್ಲಿ ಮಾತ್ರವಲ್ಲ, ರಾಜಕೀಯದಲ್ಲೂ ಮಿಂಚಿದ್ದ ಜಯಲಲಿತಾ ಅವರ ಹೆಸರು ನೆನಪಾದಾಗ ಎಲ್ಲರಿಗೂ ನೆನಪಾಗುವುದು ಎಂಜಿಆರ್. ಎಂಜಿಆರ್ ಜಯಲಲಿತಾ ಅವರ ಆತ್ಮೀಯ ಗೆಳೆಯರಲ್ಲಿ ಒಬ್ಬರು. ಜಯಲಲಿತಾ ರಾಜಕೀಯ ಪ್ರವೇಶಕ್ಕೆ ಎಂಜಿಆರ್ ಮುಖ್ಯ ಕಾರಣ. ಅವರ ಕರೆಯ ಮೇರೆಗೆ ಜಯಲಲಿತಾ ಎಐಎಡಿಎಂಕೆ ಪಕ್ಷಕ್ಕೆ ಸೇರ್ಪಡೆಯಾದರು.
ಬಳಿಕ ಈ ಮೊದಲೇ ಮದುವೆಯಾಗಿದ್ದ ಎಂಜಿಆರ್ ಮೇಲಿನ ಪ್ರೀತಿಯನ್ನು ಜಯಲಲಿತಾ ಬಹಿರಂಗಪಡಿಸಿದರು. ಆದರೆ, ಎಂಜಿಆರ್ ಜಯಲಲಿತಾ ಅವರಿಗೆ ಪತ್ನಿ ಸ್ಥಾನಮಾನ ನೀಡಲಿಲ್ಲ. ಆ ನಂತರ ಜಯಲಲಿತಾ ಅವರು ತಮ್ಮ ಕುಟುಂಬದ ಸ್ನೇಹಿತನ ಮಗ ಅರುಣ್ ಕುಮಾರ್ ಅವರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಜಯಲಲಿತಾ ಮದುವೆಯಾಗಿರಲಿಲ್ಲ.
ಜಯಲಲಿತಾ ತಮ್ಮ ಸೋದರಳಿಯ ಸುಧಾಕರನ್ ಅವರನ್ನು ದತ್ತು ತೆಗೆದುಕೊಂಡು ಅವರ ಸಾಕು ತಾಯಿಯಾದರು. ನಟಿಗೆ 5000 ಕೋಟಿಗೂ ಹೆಚ್ಚು ಇದೆ ಎನ್ನಲಾಗಿದೆ. ಅಧಿಕಾರಿಗಳು ನಡೆಸಿದ ಶೋಧದಲ್ಲಿ ಜಯಲಲಿತಾ ಅವರ ಬಳಿ 10,500 ದುಬಾರಿ ಸೀರೆಗಳು, 750 ಜೋಡಿ ಚಪ್ಪಲಿಗಳು, 800 ಕೆಜಿ ಬೆಳ್ಳಿ ಮತ್ತು 28 ಕೆಜಿ ಚಿನ್ನವಿದೆ ಎಂದು ಹೇಳಲಾಗಿದೆ. 2016ರಲ್ಲಿ ಮತ್ತೊಮ್ಮೆ ಅವರ ಆಸ್ತಿಯನ್ನು ತನಿಖೆಗೆ ಒಳಪಡಿಸಿದಾಗ 1250 ಕೆಜಿ ಬೆಳ್ಳಿ ಹಾಗೂ 21 ಕೆಜಿ ಚಿನ್ನ ಪತ್ತೆಯಾಗಿತ್ತು.
LATEST NEWS
ಮದುವೆ ವಿರೋಧ ; ಶಾಲಾ ಆವರಣದಲ್ಲೇ ಶಿಕ್ಷಕಿಯ ಬ*ರ್ಬರ ಹ*ತ್ಯೆ
Published
40 minutes agoon
21/11/2024ಮಂಗಳೂರು/ತಮಿಳುನಾಡು: ಮದುವೆ ಪ್ರಸ್ತಾಪ ನಿರಾಕರಿಸಿದ ಶಿಕ್ಷಕಿಯನ್ನು ಪ್ರಿಯಕರ ಶಾಲೆಗೆ ನುಗ್ಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲೇ ಚಾ*ಕುವಿನಿಂದ ಇ*ರಿದು ಕೊ*ಲೆಗೈದ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಂಜಾವೂರು ಜಿಲ್ಲೆಯ ಮಲ್ಲಿಪಟ್ಟಣಂ ಸರ್ಕಾರಿ ಸೆಕೆಂಡರಿ ಶಾಲೆಯಲ್ಲಿ ನಿನ್ನೆ (ನ.20) ಈ ಘಟನೆ ನಡೆದಿದ್ದು, 26 ವರ್ಷದ ಶಿಕ್ಷಕಿ ರಮಣಿ ಹ*ತ್ಯೆಯಾಗಿದ್ದಾರೆ.
ಕೊ*ಲೆಗೈದ ಮದನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ರಮಣಿ ಮತ್ತು ಮದನ್ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಗೆ ರಮಣಿ ಮನೆಯಲ್ಲಿ ನಿರಾಕರಿಸಿದ್ದಾರೆ. ಇದರಿಂದ ಎರಡೂ ಕುಟುಂಬಗಳ ನಡುವೆ ಅಸಮಾಧಾನ ಉಂಟಾಗಿದ್ದು, ರಮಣಿ ಮನೆಯವರ ವಿರೋಧ ಕಟ್ಟಿಕೊಳ್ಳಲು ಬಯಸದೇ ನೇರವಾಗಿ ನಿರಾಕರಿಸಿದ್ದಾರೆ.
ಮದನ್ ಏಕಾಏಕಿ ಶಾಲೆಯ ಶಿಕ್ಷಕರ ಸ್ಟಾಫ್ ಕೊಠಡಿಯ ಹೊರಗೆ ರಮಣಿ ಅವರಿಗೆ ಮನ ಬಂದಂತೆ ಚಾ*ಕುವಿನಿಂದ ಇರಿದಿದ್ದಾನೆ. ಕೂಡಲೇ ಶಿಕ್ಷಕಿಯನ್ನು ರಕ್ಷಿಸಲು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರಯತ್ನಿಸಿದ್ದು, ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ತೀ*ವ್ರ ರ*ಕ್ತಸ್ರಾವದಿಂದ ಆಕೆ ದಾರಿ ಮಧ್ಯದಲ್ಲೇ ಮೃ*ತಪಟ್ಟಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೂಡಲೇ ಮದನ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
LATEST NEWS
ವಿಟ್ಲ: ಮನೆಯಲ್ಲಿ ಒಂಟಿಯಾಗಿದ್ದ ವ್ಯಕ್ತಿ ಮೃ*ತಪಟ್ಟ ಸ್ಥಿತಿಯಲ್ಲಿ ಪತ್ತೆ
Published
49 minutes agoon
21/11/2024By
NEWS DESK2ವಿಟ್ಲ: ಮನೆಯಲ್ಲಿ ಒಂಟಿಯಾಗಿದ್ದ ವ್ಯಕ್ತಿಯೊಬ್ಬರು ಮೃ*ತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ವಿಟ್ಲದ ಕನ್ಯಾನದ ಪಂಜಿಗದ್ದೆ ದೇಲಂತಬೆಟ್ಟು ಎಂಬಲ್ಲಿ ನಡೆದಿದೆ.
ಮೌರಿಸ್ ಡಿಸೋಜ(61) ಮೃ*ತಪಟ್ಟವರು.
ಮೌರಿಸ್ ಮನೆಯಲ್ಲಿ ಒಬ್ಬರೇ ವಾಸವಿದ್ದರು. ಇಂದು ಬೆಳಗ್ಗೆ ಕೆಲಸದವರು ಗಮನಿಸಿದಾಗ ಮೌರಿಸ್ ಮೃ*ತಪಟ್ಟಿರುವುದು ಬೆಳಕಿಗೆ ಬಂದಿದೆ. ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೌರಿಸ್ ಡಿಸೋಜ ಎರಡು ದಿನಗಳ ಹಿಂದೆಯೇ ಮೃ*ತಪಟ್ಟಿದ್ದು, ಒಂಟಿಯಾಗಿದ್ದರಿಂದ ಯಾರಿಗೂ ಇದು ತಿಳಿದುಬಂದಿಲ್ಲ.
LATEST NEWS
ಕಡಬ: ಕಾಲೇಜಿಗೆ ಬೈಕ್ ತಂದಿದ್ದಕ್ಕೆ, ವಿದ್ಯಾರ್ಥಿಗಳಿಗೆ ರಕ್ತ ಹೆಪ್ಪುಗಟ್ಟುವ ಹಾಗೆ ಥಳಿಸಿದ ಉಪನ್ಯಾಸಕ!
ಉಳ್ಳಾಲ: ಯುವತಿಯ ಮಾ*ನಭಂಗ ಯತ್ನ..!
ಕೋಟ: ಹೆಜ್ಜೇನು ದಾಳಿಗೆ ಇಬ್ಬರ ಸ್ಥಿತಿ ಗಂಭೀರ
ಮಾಜಿ ಸಚಿವ ‘ಮನೋಹರ್ ತಹಶೀಲ್ದಾರ್’ ನಿ*ಧನ
ಡೇಟಿಂಗ್ಗೆ 11,650 ರೂ. , ಫೋಟೋಗೆ 760 ರೂ. ಕ್ಯಾಶ್ ರಿವಾರ್ಡ್: ಟೆಕ್ ಕಂಪನಿ
ಬಿಸಿ ನೀರಿದ್ದ ಬಕೆಟ್ ಗೆ ಬಿದ್ದು 5 ವರ್ಷದ ಮಗು ಸಾ*ವು!
Trending
- LATEST NEWS3 days ago
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!
- BIG BOSS4 days ago
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
- LATEST NEWS19 hours ago
ಡೇಟಿಂಗ್ಗೆ 11,650 ರೂ. , ಫೋಟೋಗೆ 760 ರೂ. ಕ್ಯಾಶ್ ರಿವಾರ್ಡ್: ಟೆಕ್ ಕಂಪನಿ
- LATEST NEWS7 days ago
ಬಂಟ್ವಾಳ: ಬ್ಯಾಂಕ್ಗೆ ಹೋಗಿ ಹಣ ಪಡೆದು ಮನೆಗೆ ಬಂದ ವ್ಯಕ್ತಿ ಕಾಣೆ; ದೂರು ದಾಖಲು