Saturday, August 20, 2022

ಪಠ್ಯಪುಸ್ತದಲ್ಲಿ ನಾರಾಯಣ ಗುರುಗಳ ಹೆಸರು ಸೇರಿಸದಿದ್ದರೆ ಕಾಂಗ್ರೆಸ್‌ನಿಂದ ಚಳುವಳಿ: ಮಾಜಿ ಶಾಸಕ ಲೋಬೋ ಎಚ್ಚರಿಕೆ

ಮಂಗಳೂರು: ಸಮಾಜ ಸುಧಾರಕ ನಾರಾಯಣ ಗುರುಗಳ ಇತಿಹಾಸವನ್ನು ಪಠ್ಯಪುಸ್ತದಲ್ಲಿ ಮತ್ತೆ ಸೇರಿಸದಿದ್ದಲ್ಲಿ ಕಾಂಗ್ರೆಸ್‌ನಿಂದ ಚಳುವಳಿ ಆರಂಭಿಸುತ್ತೇವೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಜೆ.ಆರ್‌.ಲೋಬೋ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.


ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್‌ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗ ಎಸ್‌ಎಸ್‌ಎಲ್‌ಸಿ ಪಠ್ಯಪುಸ್ತದಿಂದ ನಾರಾಯಣಗುರು ಹೆಸರು ಕೈ ಬಿಟ್ಟಿದ್ದಾರೆ.

ಈ ಹಿಂದೆ ಗಣರಾಜ್ಯೋತ್ಸವದಲ್ಲೂ ನಾರಾಯಣ ಗುರು ಸ್ತಬ್ಧ ಚಿತ್ರವನ್ನೂ ಸಹ ಉದ್ದೇಶಪೂರ್ವಕವಾಗಿ ಕೈಬಿಟ್ಟಿದ್ದಾರೆ ಎಂದು ಈಗ ಅನಿಸುತ್ತದೆ.

ನಾರಾಯಣ ಗುರು ಸಾಮಾನ್ಯರಲ್ಲಿ ಸಾಮಾನ್ಯರಲ್ಲ ಬದಲಾಗಿ ಅವರು ಧಾರ್ಮಿಕ ವ್ಯಕ್ತಿ. ಶಿಕ್ಷಣದಲ್ಲಿ ಅಂತವರ ಇತಿಹಾಸವನ್ನು ಸೇರಿಸದೇ ನಾವು ಯುವ ಸಮುದಾಯಕ್ಕೆ ಯಾವ ದಾರಿ ತೋರಿಸುತ್ತೇವೆ ಎಂದು ಪ್ರಶ್ನಿಸಿದರು.

ಶಿಕ್ಷಣ ಸಮಾಜದ ದಿಕ್ಕು ಬದಲಿಸುತ್ತದೆ. ಶಿಕ್ಷಣ ಎರಡು ಬಾಯಿಯ ಕತ್ತಿಯಂತೆ. ಅದರ ಮೂಲಕ ಸಮಾಜವನ್ನು ಕಟ್ಟಲು ಹಾಗೂ ಒಡೆಯಲು ಬಳಸಬಹುದು.

ನಾರಾಯಣ ಗುರುಗಳ ಪಠ್ಯವನ್ನು ಶಿಕ್ಷಣದಲ್ಲಿ ಸೇರಿಸುವ ಮೂಲಕ ಸಮಾಜ ಕಟ್ಟುವ ಕೆಲಸ ಮಾಡಬೇಕು ಎಂದರು.

ಇದರ ಜೊತೆಗೆ ಬಸವಣ್ಣ, ಪೆರಿಯಾರ್‌ ಪಠ್ಯವನ್ನು ಸಹ ಕೈಬಿಟ್ಟಿದ್ದಾರೆ.

ಅವರ ಇತಿಹಾಸವನ್ನು ಮತ್ತೆ ಪಠ್ಯಪುಸ್ತದಲ್ಲಿ ಸೇರಿಸದಿದ್ದಲ್ಲಿ ಕಾಂಗ್ರೆಸ್‌ನಿಂದ ಚಳುವಳಿ ಆರಂಭಿಸುತ್ತೇವೆ ಎಂದರು.

ಶಾಹುಲ್‌ ಹಮೀದ್‌, ರಮಾನಂದ್‌, ಪ್ರಕಾಶ್‌ ಸಾಲಿಯಾನ್‌, ಸುಧೀರ್‌, ಉಮೇಶ್‌ ದಂಡೆಕೇರಿ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here

Hot Topics