Connect with us

Ancient Mangaluru

ಐಡಿಯಲ್‌ ಐಸ್‌ಕ್ರೀಂ ಸವಿಯದವರು ಯಾರಿದ್ದಾರೆ..!

Published

on

ಸಾಮಾನ್ಯವಾಗಿ ಮಂಗಳೂರಿಗರ ಮನೆಗೆ ಸಂಬಂಧಿಕರು, ಸ್ನೇಹಿತರು ಬಂದರೆ ಮೊದಲು ಹೋಗುವುದು ಮಂಗಳೂರಿನ ಸುಂದರ ಬೀಚ್‌ಗಳಿಗೆ. ನಂತರದ ಸ್ಪಾಟ್‌ ಐಸ್‌ಕ್ರೀಂ ಪಾರ್ಲರ್‌. ಅದರಲ್ಲೂ ಐಡಿಯಲ್‌ ಐಸ್‌ಕ್ರೀಂಗೆ ಅಂದ್ರೇ ತಪ್ಪಾಗಲಾರದು.

ಮಂಗಳೂರಿಗೆ ಬಂದವ ಐಡಿಲ್ ಐಸ್ ಕ್ರೀಂ ಸವಿಯದೇ ವಾಪಾಸ್ ಹೋದರೆ ಛೇ,, ಮಂಗಳೂರಿಗೆ ಹೋಗಿ ಐಡಿಯಲ್ ಐಸ್ ಕ್ರೀಂ ತಿನ್ನದೇ ಬಂದಿದ್ಯಾ ಎಂದು ಆಶ್ಚರ್ಯ ವ್ಯಕ್ತಪಡಿಸಿ ಅವರನ್ನ ಮೂರ್ಖರ ಪಟ್ಟಿಗೆ ಸೇರಿಸಲಾಗುತ್ತಿತ್ತು..! ಐಡಿಯಲ್ ‘ಗಡ್‌ಬಡ್’ ದಶಕಗಳಿಂದ ದೇಶಾದ್ಯಂತ ಚಿರಪರಿಚಿತವಾಗಿದೆ.

ಹತ್ತಾರು ಪ್ರಖ್ಯಾತ ಐಸ್ ಕ್ರೀಂ ಕಂಪೆನಿಗಳಿಗೆ ಸಡ್ಡು ಹೊಡೆದು ಬೆಳೆದು ನಿಂತಿರುವ ಕರಾವಳಿ ಮಾತ್ರವಲ್ಲ ದೇಶ ವಿದೇಶಗಳಲ್ಲಿ ಮನೆ ಮಾತರಾಗಿರುವ ಐಡಿಯಲ್ ಐಸ್ ಕ್ರೀಮ್ ನ ರೂವಾರಿ ಎಸ್. ಪ್ರಭಾಕರ ಕಾಮತ್, ಮೂಲತಃ ಹೊಲಿಗೆ ಸಾಮಗ್ರಿ ಮತ್ತು ಪಟಾಕಿಗಳ ವ್ಯಾಪಾರಸ್ಥರು ಇವರು. ಆಯಾಯ ಸೀಸನ್‌ ಗಳ ಈ ಉದ್ಯಮದಲ್ಲಿ ಏರುಪೇರು ಸಾಮಾನ್ಯವಾಗಿತ್ತು. ಆಗ ಏನಾದರೂ ಹೆಚ್ಚು ಬೇಡಿಕೆಯಿರುವ ಹೊಸ ಉದ್ಯಮದ ಬಗ್ಗೆ ಪ್ರಭಾಕರ್ ಕಾಮತ್ ಆಲೋಚಿಸಿದರು. ಇದರ ಫಲವೇ ಐಸ್‌ಕ್ರೀಂ ಪಾರ್ಲರ್.

ಆದರೆ ಎಲ್ಲವನ್ನು ಕೂಲಂಕುಶವಾಗಿ ಆಲೋಚಿಸಿ ಹೆಜ್ಜೆ ಇಡುವ ಹೊತ್ತಿಗೆ ಸಾಕಷ್ಟು ಸ್ಪರ್ಧೆ ಆರಂಭವಾಗಿತ್ತು. ಅದಕ್ಕಾಗಿ ಅವರು ಪಟ್ಟ ಪಾಡು ಅಸ್ಟಿಷ್ಟಲ್ಲ.ಆರಂಭದಲ್ಲಿ ಈ ಸ್ಪರ್ಧೆಯನ್ನು ಎದುರಿಸಲು ಮನೆಯಲ್ಲೇ ಬಗೆಬಗೆಯ ಐಸ್‌ಕ್ರೀಂ ತಯಾರು ಮಾಡಿ ಅಕ್ಕ ಪಕ್ಕದ ಮನೆಯವರಿಗೆ ಹಂಚಿ ಅವರಿಂದ ಹಿಮ್ಮಾಹಿತಿ ಪಡೆದರು. ಕೊನೆಗೆ ಮೇ, 1975ರಲ್ಲಿ ಮಾರ್ಕೆಟ್ ರಸ್ತೆಯಲ್ಲಿ 14 ಸ್ವಾದಗಳ ಐಸ್‌ಕ್ರೀಂ, ಪಾರ್ಲರನ್ನು ಆರಂಭಿಸಿಯೇ ಬಿಟ್ಟರು. ಆರಂಭದಲ್ಲಿ ತುಸು ಕಷ್ವಾದರೂ ಎರಡು ವರ್ಷಗಳಲ್ಲಿ ಪಾರ್ಲರ್ ಪ್ರಖ್ಯಾತವಾಯಿತು. ಬೇಡಿಕೆ ಹೆಚ್ಚಾಯಿತು. ಪ್ರಸ್ತುತ ಮಂಗಳೂರು ನಗರದಲ್ಲಿ ಐಡಿಯಲ್ ಐಸ್ ಕ್ರೀಮ್ ನ 5 ಶಾಖೆಗಳಿವೆ. ಕರ್ನಾಟಕ ಮಾತ್ರವಲ್ಲದೆ ನೆರೆಯ ಕೇರಳ ಮತ್ತು ಗೋವಾದಲ್ಲೂ ಐಡಿಯಲ್ ಐಸ್ ಕ್ರೀಂ ವಿತರಣೆಯಾಗುತ್ತಿದೆ.


ಪ್ರಸ್ತುತ ಐಡಿಯಲ್ ಐಸ್ ಕ್ರೀಂ ಗುಚ್ಚದಲ್ಲಿ ಹತ್ತಾರು ಬಗೆಯ ವಿವಿಧ ಸ್ವಾದಗಳ ಐಸ್ ಕ್ರೀಂ ಗಳು ಲಭ್ಯವಿದ್ದರೂ, ಐಡಿಯಲ್ ಸಂಸ್ಥೆಗೆ ಹೆಸರನ್ನು ತಂದುಕೊಟ್ಟ ಕೀರ್ತಿ ಗಡ್ಬಡ್‌ ಗೆ ಸಲ್ಲುತ್ತದೆ. ಗಡ್ಬಡ್ ಸವಿಯಲೆಂದೇ ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ, ನೆರೆಯ ಕಾಸರಗೋಡು ಮಾತ್ರವಲ್ಲದೇ ದೂರದ ಬೆಂಗಳೂರು, ಮುಂಬಾಯಿಗಳಿಂದಲೂ ಐಸ್ ಕ್ರೀಂ ಪ್ರಿಯರು ಐಡಿಯಲ್ ಗೆ ಬರುತ್ತಿದ್ದರು. ಅಂದಹಾಗೇ ಈ ಶಬ್ದದ ಹಿಂದೆ ಒಂದು ರೋಚಕ ಕಥೆ ಇದೆ. ಗಡಿಬಿಡಿ ಧಾರವಾಡದ ಭಾಷೆಯಲ್ಲಿ ಗಡ್‌ಬಡ್. ಧಾರವಾಡದ ತಂಡವೊಂದು ಐಸ್ ಕ್ರೀಂ ಸವಿಯಲು ಐಡಿಯಲ್ ಗೆ ಬಂದಿದ್ದರು. ಬಂದ ತಂಡ ಸ್ವಲ್ಪ ತರಾತುರಿಯಲ್ಲಿದ್ದರಿಂದ ಐಸ್‌ಕ್ರೀಂ ಗಡ್ಬಡ್ (ಬೇಗ) ನೀಡಿ ಎಂದು ಕೇಳಿದ್ದಾರೆ. ಅದೇ ಗಡ್ಬಡ್ ಶಬ್ದ ಮುಂದೆ ಬಹಳ ಫೇಮಸ್ ಆಯಿತು ಎಂಬುದು ಪ್ರತೀತಿ. ಪ್ರಸ್ತುತ ಐಡಿಯಲ್ ಐಸ್ ಕ್ರೀಂ ಗುಚ್ಚದಲ್ಲಿ 40 ಕ್ಕೂ ಹೆಚ್ಚಿನ ಫ್ಲೇವರ್‌ ಗಳಿವೆ, ಸುಮಾರು 175 ವಿವಿಧ ಬಗೆಯ ಐಸ್‌ಕ್ರೀಂ ಗಳು ಇಲ್ಲಿ ಐಸ್ ಕ್ರೀಂ ಪ್ರಿಯರಿಗೆ ಸವಿಯಲು ಸಿದ್ಧವಾಗುತ್ತವೆ.

ಪ್ರಸ್ತುತ ಕಾಮತರ ಮಗ ಮುಕುಂದ ಕಾಮತ್ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಮೈಸೂರಿನ ಕೇಂದ್ರೀಯ ಆಹಾರ ಸಂಶೋಧನಾಲಯದಲ್ಲಿ ಮತ್ತು ಬೆಂಗಳೂರಿನ ರಾಷ್ಟ್ರೀಯ ಡೈರಿ ಸಂಶೋಧನ ಕೇಂದ್ರಗಳಲ್ಲಿ ಉನ್ನತ ತರಬೇತಿ ಪಡೆದು ಬಂದಿದ್ದಾರೆ ಮುಕುಂದ ಕಾಮತ್. ಪ್ರಸ್ತುತ ನಾಡಿನ ಉದ್ದಗಲಕ್ಕೂ 2000ಕ್ಕೂ ಐಡಿಯಲ್ ಐಸ್ ಕ್ರೀಂ ಡೀಲರ್‌ಗಳಿವೆ. 27 ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ಹೆಗ್ಗಳಿದೆ ಐಡಿಯಲ್‌ನದ್ದು, ಇದರ ಮತ್ತೊಂದು ವಿಶೇಷತೆ ಅಂದರೆ ಮೊಟ್ಟೆ ಅಥವಾ ಯಾವುದೇ ಇತರ ಪ್ರಾಣಿಜನ್ಯ ಕೊಬ್ಬನ್ನು ಬಳಸದೇ ಶೇಕಡ ನೂರರಷ್ಟು ಶುದ್ದ ಸಸ್ಯಾಹಾರಿ ಐಸ್‌ಕ್ರೀಂ ಐಡಿಯಲ್ ನಲ್ಲಿ ತಯಾರಾಗುತ್ತದೆ. ಮತ್ತೊಂದು ವಿಶೇಷವೆಂದರೆ ದಶಕಗಳಿಂದ ಲಕ್ಷಾಂತರ ಗ್ರಾಹಕರಿಗೆ ಉಣಬಡಿಸಿದ ಈ ಐಡಿಯಲ್ ಐಸ್‌ಕ್ರೀಂ ತಯಾರಿಕೆಯ ಗುಟ್ಟು ಕೂಡ ಕುಟುಂಬಸ್ಥರ ಬಳಿ ಗೌಪ್ಯವಾಗಿದೆ…!! ನೀವು ಕೂಡ ಇದುವರೆಗೆ ಐಡಿಯಲ್ ಐಸ್ ಕ್ರೀಂ ಸವಿಯದಿದ್ದರೆ ದಯವಿಟ್ಟು ಮಂಗಳೂರಿಗೆ ಬಂದರೆ ಐಡಿಯಲ್ ಐಸ್ ಕ್ರೀಂ ಪಾರ್ಲರ್ ಗೆ ಭೇಟಿ ನೀಡಿ ನಿಮ್ಮ ಇಷ್ಟದ ಮತ್ತು ಸ್ವಾದದ ಐಸ್ ಕ್ರೀಮನ್ನು ಸವಿಯಿರಿ.

@ರಾಜೇಶ್‌ ಫೇರಾವೊ

Ancient Mangaluru

ಮಂಗಳೂರು ವಿಮಾನ ನಿಲ್ದಾಣವಿನ್ನು ನಿಶ್ಶಬ್ದ ವಲಯ!

Published

on

ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇನ್ನು ಮುಂದೆ ನಿಶ್ಶಬ್ದ ವಲಯವಾಗಿರಲಿದೆ. ಹೌದು, ಇನ್ನು ಮುಂದೆ ವಿಮಾನ ನಿಲ್ದಾಣದಲ್ಲಿ ಏರ್‌ಲೈನರ್‌ಗಳಿಂದ ಯಾವುದೇ ಪ್ರಯಾಣಿಕರ ಮಾಹಿತಿ ಕುರಿತ ಅನೌನ್ಸ್ ಮೆಂಟ್‌ ಇರುವುದಿಲ್ಲ. ಪ್ರಯಾಣಿಕರು ಫ್ಲೈಟ್‌ ಇನ್ಫಾರ್ಮೇಶನ್‌ ಡಿಸ್‌ಪ್ಲೇ ಸಿಸ್ಟಂ ಫಲಕಗಳನ್ನು ನೋಡಿ ಮಾಹಿತಿ ಪಡೆದುಕೊಳ್ಳ ಬೇಕಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

ಸಹಾಯಕ್ಕಾಗಿ ಯಾರನ್ನು ಸಂಪರ್ಕಿಸಬೇಕು?

ವಿಮಾನ ನಿಲ್ದಾಣದಲ್ಲಿರುವ ಪ್ರಯಾಣಿಕರಿಗೆ ಕಿರಿಕಿರಿಯಾಗುವುದನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಇನ್ನು ಮುಂದೆ ವಿಮಾನಗಳ ಹಾರಾಟದ ಮಾಹಿತಿಗಳು ಫ್ಲೈಟ್‌ ಇನ್ಫಾರ್ಮೇಶನ್‌ ಡಿಸ್‌ಪ್ಲೇ ಸಿಸ್ಟಂ ಫಲಕಗಳಲ್ಲಿ ಅನಾವರಣಗೊಳ್ಳಲಿದೆ. ವಿಮಾನ ನಿಲ್ದಾಣದ ಹಲವು ಕಡೆಗಳಲ್ಲಿ ಈ ಡಿಸ್‌ಪ್ಲೇಗಳನ್ನು ಇರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.


ಇದಲ್ಲದೆ, ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ‘ಮೇ ಐ ಹೆಲ್ಪ್ ಯು’ ಡೆಸ್ಕ್ ನಿರ್ವಹಿಸುವ ಸಿಬಂದಿ, ಗ್ರಾಹಕ ಸೇವೆ ಮತ್ತು ಅತಿಥಿ ಸಂಬಂಧಗಳ ಕಾರ್ಯನಿರ್ವಾಹಕರು, ಪ್ರಣಾಮ್ ಸಿಬಂದಿ ಕೂಡಾ ಮಾಹಿತಿಯೊಂದಿಗೆ ಪ್ರಯಾಣಿಕರಿಗೆ ಸಹಾಯ ಮಾಡಲು ಸಿದ್ಧರಿರುತ್ತಾರೆ.

ಇದನ್ನೂ ಓದಿ : ಕೋವಿಶೀಲ್ಡ್ ಲಸಿಕೆ ಅಡ್ಡ ಪರಿಣಾಮ ಬೀರಲಿದೆ; ಸತ್ಯ ಒಪ್ಪಿಕೊಂಡ ಆಸ್ಟ್ರಾಜೆನಿಕಾ! ಏನಿದರ ಪರಿಣಾಮ?

ಎಸ್.ಎಂ.ಎಸ್ ಮೂಲಕ ಮಾಹಿತಿ :

ಎಲ್ಲಾ ಏರ್‌ಲೈನ್ ಚೆಕ್-ಇನ್ ಕೌಂಟರ್‌ಗಳು, ಬೋರ್ಡಿಂಗ್ ಗೇಟ್‌ಗಳಲ್ಲಿ ವಿಮಾನದ ಮಾಹಿತಿಯನ್ನು ವೀಕ್ಷಿಸ ಬಹುದು. ಬೋರ್ಡಿಂಗ್ ಗೇಟ್ ಬದಲಾವಣೆಗಳು/ ವಿಮಾನ ಮರು ವೇಳಾಪಟ್ಟಿ ವಿವರಗಳನ್ನು ಎಸ್.ಎಂ.ಎಸ್. ಮೂಲಕ ಪ್ರಯಾಣಿಕರ ನೋಂದಾಯಿತ ಇಮೇಲ್ ಮತ್ತು ಮೊಬೈಲ್ ಸಂಖ್ಯೆಯಲ್ಲೂ ಕೂಡಾ ಏರ್‌ಲೈನ್ ಹಂಚಿಕೊಳ್ಳಲಿದೆ ಎಂದು ವಿವರಿಸಿದ್ದಾರೆ.

Continue Reading

Ancient Mangaluru

ನೀರಿನ ಅಭಾವ ತಪ್ಪಿಸಲು ಟ್ಯಾಂಕರ್‌ ಮಾನಿಟರಿಂಗ್‌ ಆಪ್‌ ಅನುಷ್ಠಾನ-ಯು.ಟಿ ಖಾದರ್‌

Published

on

ಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೀರಿನ ಅಭಾವ ತಪ್ಪಿಸಲು ಟ್ಯಾಂಕರ್‌ ಮಾನಿಟರಿಂಗ್‌ ಆಪ್‌ನ್ನು ಶೀಘ್ರವೇ ಅನುಷ್ಠಾನಗೊಳಿಸಲಾಗುವುದು. ತಾಂತ್ರಿಕ ತೊಂದರೆಗಳಾಗದಂತೆ ಪೂರ್ವಭಾವಿಯಾಗಿ ಅಧಿಕಾರಿಗಳಿಗೆ, ಪಿಡಿಓಗಳಿಗೆ ಪ್ರಾತ್ಯಕ್ಷಿಕೆ ಹಾಗೂ ತರಬೇತಿಗಳನ್ನು ನೀಡುವ ಯೋಜನೆ ರೂಪಿಸಲಾಗಿದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್‌ ಹೇಳಿದ್ದಾರೆ.

ಅವರು ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅಧಿಕಾರಿಗಳು , ಅಧ್ಯಕ್ಷರು, ಉಪಾಧ್ಯಕ್ಷರು , ಉಳ್ಳಾಲ ತಾಲೂಕು ತಹಶೀಲ್ದಾರ್‌ಸಮ್ಮುಖದಲ್ಲಿ ಹಮ್ಮಿಕೊಂಡ ಕುಡಿಯುವ ನೀರು ಕುರಿತ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು “ಮಾರ್ಚ್‌, ಎಪ್ರಿಲ್‌, ಮೇ ತಿಂಗಳಲ್ಲಿ ಮಂಗಳೂರು ಕ್ಷೇತ್ರದ ಜನತೆಗೆ ಕುಡಿಯುವ ನೀರಿನ ಯೋಜನೆಗೆ ತೊಂದರೆಯಾಗದಂತೆ ಅಧಿಕಾರಿಗಳು, ಪಿಡಿಓ, ಸೆಕ್ರೆಟರಿಗಳು ಪಂಚಾಯಿತಿ ಅಧ್ಯಕ್ಷರು , ಗ್ರಾಮದ ಹಿರಿಯರನ್ನು ಕ್ರೂಢೀಕರಿಸಿಕೊಂಡು ಟಾಸ್ಕ್‌ಫೋರ್ಸ್‌ ರಚಿಸಲಾಗಿದೆ. ಕಳೆದ ವರ್ಷ ಯಾವ ಭಾಗದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿದೆ ಅನ್ನುವ ಕುರಿತು ವರದಿಯನ್ನು ಅಧಿಕಾರಿಗಳಿಂದ ಪಡೆಯಲಾಗಿದೆ.

ಆ ಭಾಗಗಳಲ್ಲಿ ಪ್ರಸಕ್ತ ವರ್ಷ ತೊಂದರೆಯಾಗದಂತೆ ಶಾಶ್ವತ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆ ಹಾಗೂ ಅಧಿಕಾರಿಗಳು ಪೂರ್ವಭಾವಿಯಾಗಿ ತಯಾರಿರಬೇಕು ಅನ್ನುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಮೊದಲ ಪ್ರಯತ್ನವಾಗಿ ಕುಡಿಯುವ ನೀರಿನ ಟ್ಯಾಂಕರುಗಳಿಗೆ ಮಾನಿಟರಿಂಗ್‌ಆಪ್‌ ಯೋಜನೆಯನ್ನು ರೂಪಿಸಲಾಗಿದೆ. ಅದರ ಸಾಧಕ ಬಾಧಕ ಹಾಗೂ ತಾಂತ್ರಿಕ ವಿಚಾರಗಳ ಕುರಿತು ಅಧಿಕಾರಿ ವರ್ಗದವರಿಗೆ ಅರಿಯಲು ಪ್ರಾತ್ಯಕ್ಷಿಕೆ ಹಾಗೂ ತರಬೇತಿ ನೀಡಲು ಸೂಚಿಸಲಾಗಿದೆ. ಕ್ಷೇತ್ರದಲ್ಲಿ ಸಮಗ್ರವಾಗಿ ಜಾರಿಯಾದಲ್ಲಿ ರಾಜ್ಯದಲ್ಲಿ ಸಚಿವರು ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತಂದು ರಾಜ್ಯದಾದ್ಯಂತ ನೀರಿನ ಅಭಾವ ತಪ್ಪಿಸಲು ಪ್ರಾಮಾಣಿಕ ಪ್ರಯತ್ನವನ್ನು ಕೈಗೊಳ್ಳಲಾಗುವುದು. ಕ್ಷೇತ್ರದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಗೆ 200 ಕೋಟಿ ರೂ. ಅನುದಾನ ಬಿಡುಗಡೆಯಾಗುವ ಕೊನೆಯ ಹಂತದಲ್ಲಿದೆ.

ಉಳ್ಳಾಲ ನಗರ ವ್ಯಾಪ್ತಿಯ ಕೆಲಸ ಪೂರ್ಣಗೊಂಡರೂ, ಗ್ರಾಮೀಣ ಮಟ್ಟಕ್ಕೆ ಎರಡು ವರ್ಷಗಳಲ್ಲಿ ಅನುದಾನ ಬಿಡುಗಡೆಯಾಗಲಿದೆ. ಟೆಂಡರ್‌ಪ್ರಕ್ರಿಯೆ ನಡೆದು ಎರಡು ವರ್ಷ ಬೇಕಾಗುತ್ತದೆ. ಆನಂತರ ನೀರಿನ ವ್ಯವಸ್ಥೆ ಆಗಲಿದೆ. ಗ್ರಾಮ ಪಂಚಾಯತ್ ನವರು ವರ್ಷಕ್ಕೆ 12 ಲಕ್ಷ ನೀರಿಗಾಗಿ ಗ್ರಾ.ಪಂ.ನಿಂದ ಕೊಡುವ ಬದಲು ಟ್ಯಾಂಕರ್‌ ಖರೀದಿಗೆ ಕೇಳಿಕೊಂಡಿದ್ದಾರೆ. ಆದರೆ ಸರಕಾರದಿಂದ ಟ್ಯಾಂಕರ್‌ ಬಾಡಿಗೆ ಪಡೆಯಲು ಮಾತ್ರ ಅವಕಾಶವಿದೆ. ಕರಾರು ಪತ್ರದಂತೆ ಟ್ಯಾಂಕರ್‌ಅನ್ನು ಸದ್ಯಕ್ಕೆ ನೀಡಬಹುದು. ಮುಂದೆಯೂ ಸಮಸ್ಯೆ ಮುಂದುವರಿದಲ್ಲಿ ರಾಜ್ಯದ ಸಚಿವರುಗಳನ್ನು ಚರ್ಚಿಸಲಾಗುವುದು ಎಂದರು.ಜಲಯೋಜನೆ, ಕಂದಾಯ , ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಪಶುಸಂಗೋಪನಾ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಟಾಸ್ಕ್‌ಫೋರ್ಸ್‌ಕುಡಿಯುವ ನೀರಿನ ಯೋಜನೆಯಲ್ಲಿ ಕಾರ್ಯಾಚರಿಸಲಿದೆ. ಇಲಾಖೆಗಳ ಎಲ್ಲಾ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ತಹಶೀಲ್ದಾರ್‌ಪುಟ್ಟರಾಜು ಡಿ, ಉಪತಹಶೀಲ್ದಾರ್‌ನವನೀತ್‌ಮಾಳವ, ಕಂದಾಯ ನಿರೀಕ್ಷಕ ಪ್ರಮೋದ್‌ಕುಮಾರ್‌, ಕೃಷಿ ಇಲಾಖೆ ಅಧಿಕಾರಿ ವೀಣಾ ರೈ, ಮಂಗಳೂರು ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾ.ಪಂ ಅಧ್ಯಕ್ಷರು ಭಾಗವಹಿಸಿದ್ದರು.

Continue Reading

Ancient Mangaluru

ಕುಂದಾಪುರ: 15 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಅರಣ್ಯ ಇಲಾಖೆ ನೌಕರ

Published

on

ಕುಂದಾಪುರ: ಅರಣ್ಯ ಇಲಾಖೆ ವಶದಲ್ಲಿದ್ದ ವಾಹನ ಬಿಡುಗಡೆಗೆ ಲಂಚ ಸ್ವೀಕರಿಸುತ್ತಿದ್ದ  ಕುಂದಾಪುರ ಅರಣ್ಯ ಇಲಾಖೆಯ ನೌಕರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಕ್ಷೇಮಾಭಿವೃದ್ಧಿ ನೌಕರ ಬಿ.ಮಂಜುನಾಥ್ ಪೂಜಾರಿ ಬಂಧಿತ ಆರೋಪಿ.

ಅರಣ್ಯ ಇಲಾಖೆ ವಶದಲ್ಲಿದ್ದ ಆಲೂರಿನ ಆದಿತ್ಯ ಎಂಬವರ ವಾಹನ ಬಿಡುಗಡೆಗಾಗಿ ಮಂಜುನಾಥ್ ಪೂಜಾರಿ 15 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದನು.  ಲಂಚ ನೀಡಲು ನಿರಾಕರಿಸಿದ ಆದಿತ್ಯ ಈ ಬಗ್ಗೆ ಉಡುಪಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಆದಿತ್ಯ ಅವರಿಂದ 15 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ  ಸಂದರ್ಭ ಮಂಜುನಾಥ್ ಪೂಜಾರಿಯನ್ನು ಬಂಧಿಸಿದರು.  ಲೋಕಾಯುಕ್ತ ಎಸ್ಪಿ ಸೈಮನ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ  ಕೆ.ಸಿ. ಪ್ರಕಾಶ್ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ಮತ್ತು ರಫೀಕ್ ಹಾಗೂ ಸಿಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Continue Reading

LATEST NEWS

Trending