Connect with us

    LATEST NEWS

    ಐಸ್‌ಕ್ರೀಂ ಪ್ರಿಯರೇ ಎಚ್ಚರ! ಆನ್‌ಲೈನ್‌ನಲ್ಲಿ ತರಿಸಿದ ಐಸ್‌ಕ್ರೀಂನಲ್ಲಿ ಸತ್ತ ಹುಳಗಳು ಪತ್ತೆ!

    Published

    on

    ನವದೆಹಲಿ/ ಮಂಗಳೂರು : ಆನ್ ಲೈನ್ ಮೂಲಕ ಆರ್ಡರ್ ಮಾಡಿದ ಫುಡ್ ನಲ್ಲಿ ಏನಾದರೂ ಅವಾಂತರ ಸೃಷ್ಟಿಯಾಗೋದು ಯಾವಾಗಲೂ ಇದ್ದದ್ದೇ. ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲೊಬ್ಬರು ಡೆಲಿವರಿ ಆ್ಯಪ್‌ನಿಂದ ಆರ್ಡರ್ ಮಾಡಿದ ಐಸ್ ಕ್ರೀಂನಲ್ಲಿ ಜರಿಹುಳು ಪತ್ತೆಯಾಗಿವೆ. ಈ ಘಟನೆ ನಡೆದಿರೋದು ನೋಯ್ಡಾದಲ್ಲಿ.


    ಈ ಬಗ್ಗೆ ಮಾಹಿತಿ ಬಂದ ತಕ್ಷಣ, ಆಹಾರ ಮತ್ತು ಸರಬರಾಜು ಇಲಾಖೆ ತಂಡವು ಸೆಕ್ಟರ್ -22 ರಲ್ಲಿರುವ ಡೆಲಿವರಿ ಆ್ಯಪ್‌ ಸ್ಟೋರ್‌ಗೆ ಭೇಟಿ ನೀಡಿದೆ. ಅಲ್ಲದೇ, ಎಲ್ಲಾ ಐಸ್​ಕ್ರೀಂಗಳ ಮಾರಾಟವನ್ನು ನಿಷೇಧಿಸಿದೆ. ಐಸ್ ಕ್ರೀಂ ಮಾದರಿಯನ್ನು ಪರೀಕ್ಷಿಸಲಾಗುತ್ತದೆ. ಐಸ್ ಕ್ರೀಂ ತಯಾರಿಕಾ ಕಂಪನಿ ಮತ್ತು ಡೆಲಿವರಿ ಆ್ಯಪ್ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂಬುದಾಗಿ ಇಲಾಖೆ ಮಾಹಿತಿ ನೀಡಿದೆ.

    ಏನಿದು ಘಟನೆ ?

    ನೋಯ್ಡಾದ ಸೆಕ್ಟರ್ -12 ರಲ್ಲಿ ವಾಸಿಸುತ್ತಿರುವ ದೀಪಾ ಎಂಬವರು ತನ್ನ ಮಕ್ಕಳಿಗಾಗಿ ಐಸ್ ಕ್ರೀಮ್ ತಿನ್ನಲು ಒತ್ತಾಯಿಸಿದರು ಎನ್ನುವ ಕಾರಣಕ್ಕೆ ಐಸ್‌ಕ್ರೀಮ್‌ ತರಲು ಯೋಚಿಸಿದ್ದಾರೆ. ಹೀಗಾಗಿ ಅವರು 195 ರೂಪಾಯಿ ಮೌಲ್ಯದ ಅಮುಲ್ ವೆನಿಲ್ಲಾ ಮ್ಯಾಜಿಕ್ ಐಸ್ ಕ್ರೀಮ್ ಅನ್ನು ಬ್ಲಿಂಕಿಟ್ ಆಪ್‌ನಲ್ಲಿ ಆನ್‌ಲೈನ್‌ಲ್ಲಿ ಆರ್ಡರ್ ಮಾಡಿದ್ದಾರೆ. ಅದನ್ನು ತೆರೆದಾಗ ಅದರೊಳಗೆ ಶತಪದಿ ಇರುವುದು ಅವರಿಗೆ ಕಂಡು ಬಂದಿದೆ.

    ಇದನ್ನು ನೋಡಿ ಅವರು ತುಂಬಾ ಭಯಗೊಂಡಿದ್ದು, ನಂತರ ಇದರ ಬಗ್ಗೆ ಅವರು ಈ ಬಗ್ಗೆ ಬ್ಲಿಂಕಿಟ್‌ಗೆ ದೂರು ನೀಡಿದ್ದಾರೆ. ನಂತರ ಬ್ಲಿಂಕಿಟ್‌ ದೀಪಾರಿಗೆ ಮರುಪಾವತಿಯನ್ನೂ ಮಾಡಿದೆ.

    ಅಮುಲ್ ಐಸ್‌ಕ್ರೀಂ ಕಂಪನಿಯ ಮ್ಯಾನೇಜರ್ ಅನ್ನು ಬ್ಲಿಂಕಿಟ್ ಕಸ್ಟಮರ್ ಕೇರ್ ತಂಡ ಸಂಪರ್ಕಿಸಿದೆ. ಆದರೆ ಇಲ್ಲಿಯವರೆಗೆ ಅಮುಲ್‌ ಕಂಪನಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿದು ಬಂದಿದೆ.

    ಇದನ್ನೂ ಓದಿ : ಆನ್​ಲೈನ್​ ಮೂಲಕ ಆರ್ಡರ್​ ಮಾಡಿದ್ದ ಐಸ್​ಕ್ರೀಂನಲ್ಲಿ ಮನುಷ್ಯನ ಬೆರಳು ಪತ್ತೆ

    ಈ ವಿಷಯದ ಬಗ್ಗೆ ಮಾಹಿತಿ ಬಂದ ತಕ್ಷಣ, ಆಹಾರ ಮತ್ತು ಸರಬರಾಜು ಇಲಾಖೆ ತಂಡವು ಸೆಕ್ಟರ್ -22 ನಲ್ಲಿರುವ ಡೆಲಿವರಿ ಆಪ್ ಸ್ಟೋರ್‌ಗೆ ತಲುಪಿದ್ದು, ಎಲ್ಲಾ ರೀತಿಯ ಐಸ್ ಕ್ರೀಮ್ ಮಾರಾಟವನ್ನು ನಿಷೇಧಿಸಿದೆ ಎಂದು ತಿಳಿದು ಬಂದಿದೆ.

    ಕೆಲವು ದಿನಗಳ ಹಿಂದೆ ಆನ್​ಲೈನ್​ ಮೂಲಕ ತರಿಸಲಾಗಿದ್ದ ಕೋನ್​ ಐಸ್​ಕ್ರೀಂನಲ್ಲಿ ಮಾನವನ ಬೆರಳುಗಳು ಪತ್ತೆಯಾಗಿದ್ದು ಸುದ್ದಿಯಾಗಿತ್ತು.

    FILM

    WATCH : ಅಭಿಮಾನಿಯನ್ನು ತಳ್ಳಿ ಬೀಳಿಸಿದ ನಾಗಾರ್ಜುನ ಬಾಡಿಗಾರ್ಡ್; ವೀಡಿಯೋ ವೈರಲ್ ಆಗುತ್ತಿದ್ದಂತೆ ಏನಂದ್ರು ನಟ?

    Published

    on

    ಮಂಗಳೂರು : ಸಿನಿಮಾ ನಟರು ಅಂದಾಕ್ಷಣ ಅಭಿಮಾನಿಗಳು ಮುಗಿಬೀಳೋದು ಸಹಜ. ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಬೇಕು, ಸೆಲ್ಫಿ ಗಿಟ್ಟಿಸಿಕೋಬೇಕು ಅನ್ನೋ ಹೆಬ್ಬಯಕೆ ಸಹಜ. ಆದ್ರೆ, ಈ ರೀತಿ ಹೋದ ಅಭಿಮಾನಿಯೊಬ್ಬನನ್ನು ತಳ್ಳಿರೋ ಘಟನೆ ನಡೆದಿದೆ. ಘಟನೆಯ ವೀಡಿಯೋ ಸದ್ಯ ವೈರಲ್ ಆಗಿದೆ.


    ವೈರಲ್ ಆಗಿರೋ ವೀಡಿಯೋ ನಟ ನಾಗಾರ್ಜುನ ಅವರದು. ವಿಮಾನ ನಿಲ್ದಾಣದಿಂದ ಹೊರಬರುತ್ತಿರುವ ಅವರ ಜೊತೆ ಫೋಟೋ ತೆಗೆಸಿಕೊಳ್ಳಲು ಅಭಿಮಾನಿಯೊಬ್ಬರು ಓಡೋಡಿ ಬಂದಿದ್ದಾರೆ. ಆದರೆ ಅವರನ್ನು ನಾಗಾರ್ಜುನ ಬಾಡಿಗಾರ್ಡ್​ ತಳ್ಳಿ ಬೀಳಿಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಗರಂ ಆಗಿದ್ದಾರೆ.

    ‘ನಿಮ್ಮ ಮಾನವೀಯತೆ ಎಲ್ಲಿ ಹೋಯಿತು ನಾಗಾರ್ಜುನ ಅವರೇ?’ ಎಂಬ ಕ್ಯಾಪ್ಷನ್​ನೊಂದಿಗೆ ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋವನ್ನು ಶೇರ್​ ಮಾಡಿಕೊಳ್ಳಲಾಗಿದೆ.

    ಇನ್ನು ವೀಡಿಯೋ ವೈರಲ್​ ಆಗುತ್ತಿದ್ದಂತೆ ಸ್ವತಃ ನಾಗಾರ್ಜುನ ಅವರು ಕ್ಷಮೆ ಕೇಳಿದ್ದಾರೆ. ‘ಇದು ಈಗ ತಾನೇ ನನ್ನ ಗಮನಕ್ಕೆ ಬಂತು. ಈ ರೀತಿ ಆಗಬಾರದಿತ್ತು. ಆ ವ್ಯಕ್ತಿಯಲ್ಲಿ ನಾನು ಕ್ಷಮೆ ಕೇಳುತ್ತೇನೆ. ಇನ್ಮುಂದೆ ಎಚ್ಚರಿಕೆ ವಹಿಸುತ್ತೇನೆ. ಈ ರೀತಿ ಇನ್ನೆಂದೂ ಆಗುವುದಿಲ್ಲ’ ಎಂದಿದ್ದಾರೆ.

    ಇದನ್ನೂ ಓದಿ: ದರ್ಶನ್ ಹಾಕಿ ಚಿತ್ರ ಮಾಡೋರು ಇನ್ಮೇಲೆ ಇದನ್ನ ಗಮನಿಸಲೇಬೇಕು

    ಅಂದಹಾಗೆ ಈ ಘಟನೆ ನಡೆದಾಗ ನಾಗಾರ್ಜುನ ಜೊತೆ ಕಾಲಿವುಡ್​ ನಟ ಧನುಷ್​ ಕೂಡ ಇದ್ದರು. ಸಿನಿಮಾ ನಟರನ್ನು ಕಂಡಾಗ ಸಿನಿಪ್ರಿಯರು ಹತ್ತಿರ ಬರೋದು ಸಹಜ. ಈ ವೇಳೆ ಬಾಡಿಗಾರ್ಡ್ ಗಳು ನಟರ ಬಳಿ ಬರಲು ಬಿಡುವುದಿಲ್ಲ. ಇಲ್ಲೂ ಹಾಗೇ ಆಗಿದೆ.

    Continue Reading

    LATEST NEWS

    ಬಿಗ್​ಬಾಸ್​ಗೆ ಎಂಟ್ರಿ ಕೊಟ್ರು ‘ವಡಾ ಪಾವ್​ ಗರ್ಲ್’​!

    Published

    on

    ಈಗಾಗಲೇ ಬಿಗ್ ಬಾಸ್ OTT 3 ಹಿಂದಿ ಭಾಷೆಯಲ್ಲಿ ಆರಂಭವಾಗಿದ್ದು, ಈ ಬಾರಿಯ ಬಿಗ್​ಬಾಸ್​ ಒಟಿಟಿ ಬಹಳಷ್ಟು ವಿಶೇಷತೆಯನ್ನು ಹೊಂದಿದೆ. ಇನ್ನು ವಿಶೇಷವಾಗಿ ವಡಾ ಪಾವ್​ ಹುಡುಗಿಯೆಂದೇ ಜನಪ್ರಿಯರಾಗಿರುವ ಚಂದ್ರಿಕಾ ಗೆರಾ ದೀಕ್ಷಿತ್ ಕೂಡ ಈ ಬಾರಿ ಬಿಗ್​ಬಾಸ್​​ ಒಟಿಟಿ 3 ಹಿಂದಿಯಲ್ಲಿ ಸ್ಪರ್ಧಿಯಾಗಿ ಇರಲಿದ್ದಾರೆ.

    ಚಂದ್ರಿಕಾ ದೀಕ್ಷಿತ್ ಅವರು ದೆಹಲಿಯ ಬೀದಿಬದಿ ಫುಡ್​​ ಮಾರಾಟ ಮಾಡುವ ಮೂಲಕ ಭಾರೀ ಜನಪ್ರಿಯತೆ ಪಡೆದಿದ್ದಾರೆ. ಇನ್ನು ಚಂದ್ರಿಕಾ ದೀಕ್ಷಿತ್ ಅವರು ವಡಾ ಪಾವ್ ಮಾರಾಟ ಮಾಡುವ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ರಾತ್ರೋರಾತ್ರಿ ಭಾರೀ ಸಂಚಲನ ಮೂಡಿಸಿದರು. ಅವರು ಈಗ ಅನಿಲ್ ಕಪೂರ್ ನಡೆಸಿಕೊಡುವ ಬಿಗ್ ಬಾಸ್ OTT 3 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ .

    ಬಿಗ್​ಬಾಸ್​ ಒಟಿಟಿ 3 ರಲ್ಲಿ ಚಂದ್ರಿಕಾ ದೀಕ್ಷಿತ್ ಭಾಗವಹಿಸುತ್ತಿದ್ದು, ಈಗಾಗಲೇ ಆರಂಭವಾಗಿ ವಡ ಪಾವ್ ಗರ್ಲ್​ ಎಂಟ್ರಿ ಕೊಟ್ಟಾಗಿದೆ. ಈ ವೇಳೆ ಚಂದ್ರಿಕಾ ತನ್ನ ಕೆರಿಯರ್​ ಮತ್ತು ಸಂಪಾದನೆ ಬಗ್ಗೆ ಬಹಿರಂಗಪಡಿಸಿದ್ದಾರೆ. ಹಾಗಿದ್ರೆ ಚಂದ್ರಿಕಾ ದೀಕ್ಷಿತ್​ ದಿನಕ್ಕೆ ಎಷ್ಟು ಸಂಪಾದನೆ ಮಾಡ್ತಾರೆ ಗೊತ್ತಾ?

    ವರದಿಗಳ ಪ್ರಕಾರ, ಚಂದ್ರಿಕಾ ದೀಕ್ಷಿತ್ ಅವರು ಬಿಗ್ ಬಾಸ್ OTT 3 ಮನೆಯಲ್ಲಿ ಹೇಳಿದಂತೆ, ಇವರು ವಡಾ ಪಾವ್ ಮಾರಾಟ ಮಾಡುವ ಮೂಲಕ ದಿನಕ್ಕೆ 40,000 ರೂಪಾಯಿಗಳನ್ನು ಗಳಿಸುತ್ತಿದ್ದರು ಎಂದು ಬಹಿರಂಗಪಡಿಸಿದರು. ಇದನ್ನು ಕೇಳಿ ಸಹಸ್ಪರ್ಧಿಗಳು ಸಹ ಆಶ್ಚರ್ಯಗೊಂಡಿದ್ದಾರೆ.

    ದೆಹಲಿಯಲ್ಲಿ ಮಹಾರಾಷ್ಟ್ರದ ಐಕಾನಿಕ್ ಆಹಾರ ಪದಾರ್ಥವನ್ನು ಮಾರಾಟ ಮಾಡಿ ರಾತ್ರೋರಾತ್ರಿ ಖ್ಯಾತಿ ಗಳಿಸಿದ ಚಂದ್ರಿಕಾ ದೀಕ್ಷಿತ್, ಇದೀಗ ಬಿಗ್ ಬಾಸ್ OTT 3 ನಲ್ಲಿ ಸ್ಪರ್ಧಿಸುತ್ತಿದ್ದು, ಇದಕ್ಕಾಗಿ ತಮ್ಮ ಕುಟುಂಬದೊಂದಿಗೆ ಮುಂಬೈಗೆ ಆಗಮಿಸಿದ್ದಾರೆ.

    ಇನ್ನು ಬಿಗ್ ಬಾಸ್ ಒಟಿಟಿ 3 ನಲ್ಲಿ ಸ್ಪರ್ಧಿಸಲು ಕಾರಣವೇನು ಎಂದು ಪ್ರಶ್ನಿಸಿದಾಗ, ಚಂದ್ರಿಕಾ ಜನರು ನಾನು ಅತ್ಯಂತ ಅಸಭ್ಯ ಮತ್ತು ತುಂಬಾ ಕೋಪ ಮಾಡಿಕೊಳ್ಳುತ್ತೇನೆ ಎಂದು ತಿಳಿದಿದ್ದಾರೆ. ಆದ್ರೆ ಬಿಗ್ ಬಾಸ್ OTT 3 ನಲ್ಲಿ ಭಾಗವಹಿಸುವ ಮೂಲಕ, ನಾನು ಏನು ಎಂಬುದನ್ನು ಜನರಿಗೆ ತಿಳಿಸಬಹುದು ಎಂದು ಹೇಳಿದ್ದಾರೆ.

    Continue Reading

    DAKSHINA KANNADA

    ಯಕ್ಷಗಾನದ ಖ್ಯಾತ ಹಾಸ್ಯ ಕಲಾವಿದ ದಿನೇಶ್ ಕೋಡಪದವು ಅವರಿಗೆ ಆರ್ಯಭಟ ಪ್ರಶಸ್ತಿ ಪ್ರದಾನ

    Published

    on

    ಮಂಗಳೂರು : ಯಕ್ಷಗಾನದ ಖ್ಯಾತ ಹಾಸ್ಯ ಕಲಾವಿದ ದಿನೇಶ್ ಕೋಡಪದವು ಅವರಿಗೆ ಅಂತಾರಾಷ್ಟ್ರೀಯ ಮಟ್ಟದ ಆರ್ಯಭಟ ಪ್ರಶಸ್ತಿಯನ್ನು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಯಕ್ಷಗಾನ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಹಬ್ಬಿರುವ ದಿನೇಶ್‌ ಕೋಡಪದವು ಅವರು ಕುಸಾಲ್ದ ಗುರಿಕ್ಕಾರೆ ಎನ್ನುವ ಬಿರುದನ್ನು ಕೂಡ ಪಡೆದುಕೊಂಡಿದ್ದಾರೆ.

    ದಿನೇಶ್ ಕೋಡಪದವು ಕುರಿತು :

    ಈಶ್ವರ ಶೆಟ್ಟಿಗಾರ್ ಮತ್ತು ಲೀಲಾವತಿ ದಂಪತಿಯ ಸುಪುತ್ರರಾದ ದಿನೇಶ್ ಶೆಟ್ಟಿಗಾರ್, ಕೋಡಪದವು ಹುಟ್ಟಿದ್ದು ಒಕ್ಕೆತ್ತೂರುವಿನಲ್ಲಿಯಾದರೂ, ಪ್ರಸ್ತುತ ವಾಸ ಕೋಡಪದವಿನಲ್ಲಿ. ಪ್ರಾಥಮಿಕ ವಿದ್ಯಾಭ್ಯಾಸ ಪಡೆಯುತ್ತಿದ್ದಂತೆ ಯಕ್ಷಗಾನ ಕೈಬೀಸಿ ಕರೆಯಿತು.

    ರತ್ನಾಕರ್ ಹೆಗ್ಡೆ ಪುತ್ತೂರು, ಸಬ್ಬಣ್ಣಕೋಡಿ ಕೃಷ್ಣ ಭಟ್ ಅಂತಹ ಮಹಾನ್ ಯಕ್ಷಗಾನ ಗುರುಗಳಿಂದ ಯಕ್ಷಗಾನ ಕಲೆಯನ್ನು ಕಲಿತು ಮಂಗಳಾದೇವಿ ಮೇಳದಲ್ಲಿ 5 ವರ್ಷ, ಸುಂಕದಕಟ್ಟೆ ಮತ್ತು ಸಸಿಹಿತ್ಲು ಮೇಳದಲ್ಲಿ 4 ವರ್ಷ, ಬಾಚಕೆರೆ ಮೇಳದಲ್ಲಿ 3 ವರ್ಷ, ಕರ್ನಾಟಕ ಮೇಳ ಹಾಗೂ ಕದ್ರಿ ಮೇಳದಲ್ಲಿ 1 ವರ್ಷ , ಪ್ರಸ್ತುತ ಬಪ್ಪನಾಡು ಮೇಳದಲ್ಲಿ 8 ವರುಷಗಳಿಂದ ಯಕ್ಷಗಾನ ತಿರುಗಾಟ ನಡೆಸುತ್ತಾ ಬಂದಿದ್ದಾರೆ.

    ಕನ್ನಡ ಭಾಷೆಯ ಯಕ್ಷಗಾನಗಳಲ್ಲಿ ಅಭಿಮನ್ಯು ಚಂಡ-ಮುಂಡ, ಸುಧನ್ವ ಬಬ್ರುವಾಹನ, ಕಮಲಧ್ವಜ, ಕೃಷ್ಣ ಬಲರಾಮ, ಪ್ರಹ್ಲಾದ, ಲೋಹಿತಾಶ್ವದಂತಹ ಪುಂಡು ವೇಷಧಾರಿಯಾಗಿಯೂ ಮಾಲಿನಿಧೂತ, ವಿದ್ಯುನ್ಮಾಲಿದೂತ, ಚಿಕ್ಕ, ದಾರುಕ, ಮಕರಂದ, ಪ್ರಾತಿಕಾಮಿಯಂತದ ಹಾಸ್ಯ ಪಾತ್ರಧಾರಿಯಾಗಿಯೂ, ನಾರದ ಮುಂತಾದ ಪುರಾಣ ಪಾತ್ರಗಳ ಮೂಲಕ ಪ್ರತಿಭೆ ಮೆರೆದಿದ್ದಾರೆ.
    ತುಳು ಭಾಷೆಯ ಯಕ್ಷಗಾನ ಪ್ರಸಂಗಗಳಾದ ಬನತ ಬಂಗಾರ್, ಬನತ ಬಬ್ಬರ್ಯೆ, ನಿಧಿ ನಿರ್ಮಲ, ಬಾಲೆ ಭಗವಂತದಂತಹ ಪ್ರಸಂಗಗಳಲ್ಲಿ ಕ್ರಮವಾಗಿ ನರಸಿಂಹ, ಪೈಕುಲ, ಚಾವುಂಡರಾಯ, ಗುಡ್ಡಪ್ಪ ಪಾತ್ರಗಳಲ್ಲಿ ಅಭಿನಯಿಸಿ ಮೆಚ್ಚುಗೆ ಪಡೆದಿದ್ದಾರೆ. ಹಲವಾರು ಹೊಸಹೊಸ ಪ್ರಸಂಗಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾ ಹೆಸರುವಾಸಿಯಾಗಿದ್ದಾರೆ.

     

    ಸಂಘಟಕನಾಗಿ…ಸಮಾಜ ಸೇವಕನಾಗಿ…

    ಯಕ್ಷಗಾನದಲ್ಲಿ ಮಾತ್ರವಲ್ಲದೇ ”ತೆಲಿಕೆದ ತೇಟ್ಲ” ಎಂಬ ತಂಡ ಕಟ್ಟಿ ಹಲವಾರು ಕಡೆಗಳಲ್ಲಿ “ಯಕ್ಷ ಹಾಸ್ಯ ವೈಭವ” , ”ಯಕ್ಷಗಾನ ಹಾಸ್ಯ ಕಲಾವಿದರ ಒಕ್ಕೂಟ” ಎಂಬ ತಂಡ ಕಟ್ಟಿ “ಆಟದ ಆಯನ” ಕಾರ್ಯಕ್ರಮ ನೀಡಿರುವುದಲ್ಲದೇ ಕೊರೊನಾ ಸಮಯದಲ್ಲಿ 25ಕ್ಕೂ ಹೆಚ್ಚು ಕಲಾವಿದರಿಗೆ ಆಹಾರ ಕಿಟ್ ಗಳನ್ನು ವಿತರಿಸಿ ಸಮಾಜ ಸೇವೆಯಲ್ಲಿಯೂ ತೊಡಗಿಕೊಂಡಿದ್ದಾರೆ.

    ಈ ಮೆರು ಕಲಾವಿದ “ಕುಸಲ್ದ ಗುರಿಕಾರೆ”, “ಯಕ್ಷಮಾಣಿಕ್ಯ”, ”ಹಾಸ್ಯದರಸು” ಇತ್ಯಾದಿ ಬಿರುದುಗಳಿಂದ ಮೇಳೈಸಿಕೊಂಡವರು ಯಕ್ಷಲೋಕದಲ್ಲಿ ತನ್ನದೇ ವ್ಯಕ್ತಿತ್ವದಲ್ಲಿ ಜನಮಾನದಲ್ಲಿ ಗುರುತಿಸಿಕೊಂಡವರು.

    ಇಂತಹ ಅದ್ಭುತ ಯಕ್ಷಲೋಕದಲ್ಲಿ ಮಿಂಚುತ್ತಿರುವ ಯಕ್ಷಾಭಿಮಾನಿಗಳಲ್ಲಿ ಸಂಚಲನವನ್ನುಂಟು ಮಾಡುತ್ತಿರುವ “ಯಕ್ಷಧ್ರುವತಾರೆ”ಯನ್ನು ಗುರುತಿಸಿ, ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ 317ಡಿ ಕಂದಾಯ ಜಿಲ್ಲೆಗಳಾದ ದಕ್ಷಿಣಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರಿನ ಹಲವಾರು ಉನ್ನತಮಟ್ಟದ ಲಯನ್ಸ್ ಕಾರ್ಯಕ್ರಮಗಳಲ್ಲಿ ಶ್ರೀಯುತರನ್ನು ಗೌರವಿಸಿ ಸನ್ಮಾನಿಸಿದ್ದು ಅವರ ಸಾಧನೆಗೆ ಸಂದ ಗೌರವ.

    ‘ನಮ್ಮ ಕುಡ್ಲ’ದ ‘ಯಕ್ಷ ತೆಲಿಕೆ’ಯ ಹೆಮ್ಮೆಯ ಕಲಾವಿದ :

    ಕರಾವಳಿ ಕರ್ನಾಟಕದ ಪ್ರಪ್ರಥಮ ತುಳು ವಾರ್ತಾವಾಹಿನಿ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ನಮ್ಮಕುಡ್ಲ ವಾಹಿನಿಯಲ್ಲಿ ಕೋಡಪದವು ಸಾರಥ್ಯದಲ್ಲಿ “ಯಕ್ಷ ಹಾಸ್ಯ ಕಾರ್ಯಕ್ರಮ “ಯಕ್ಷ ತೆಲಿಕೆ” ಕಾರ್ಯಕ್ರಮವನ್ನು ಆರಂಭಿಸಿದರು. ಇಂದು ಯಕ್ಷತೆಲಿಕೆ ಕಾರ್ಯಕ್ರಮ ಕರಾವಳಿ ಮಾತ್ರವಲ್ಲದೇ ದೇಶವಿದೇಶಗಳಲ್ಲಿ ಖ್ಯಾತಿಯನ್ನು ಪಡೆದುಕೊಂಡಿದೆ.

    ಇದನ್ನೂ ಓದಿ : ಟೀಸರ್ ಮೂಲಕ ಭಾರಿ ಸದ್ದು ಮಾಡುತ್ತಿದೆ ‘ಸಾಂಕೇತ್’

    ಯಕ್ಷತೆಲಿಕೆ ಕಾರ್ಯಕ್ರಮವು ಹಾಸ್ಯದ ಜೊತೆಗೆ ಉತ್ತಮ ಸಂದೇಶವನ್ನು ನೀಡುವ ಕಾರ್ಯಕ್ರಮವಾಗಿದೆ. ಕೋಡಪದವು ಬೊಬ್ಬಿರಿದು ಗೋಗರೆಯುವ ಅಬ್ಬರದ ಗಾಂಭೀರ್ಯ ವೇಷಕ್ಕೂ ಸೈ, ವೀಕ್ಷಕರನ್ನು ನಕ್ಕುನಗಿಸುವ ಹಾಸ್ಯ ಪಾತ್ರಕ್ಕೂ ಸೈ…ಹಾಸ್ಯ ಅಂದರೆ ಕೋಡಪದವು, ಕೋಡಪದವು ಅಂದರೆ ಹಾಸ್ಯ ಎನ್ನುವಷ್ಟರ ಮಟ್ಟಿಗೆ ಈ ಕಾರ್ಯಕ್ರಮ ಯಶಸ್ವಿಯಾಗಿದೆ.

    Continue Reading

    LATEST NEWS

    Trending