Connect with us

    DAKSHINA KANNADA

    ಬಳ್ಕುಂಜೆಯಲ್ಲಿ ಬೃಹತ್‌ ಪ್ರತಿಭಟನೆ: ಭೂ ಸ್ವಾಧೀನ ವಿರುದ್ಧ ತೊಡೆ ತಟ್ಟಿದ ಗ್ರಾಮಸ್ಥರು

    Published

    on

    ಕಿನ್ನಿಗೋಳಿ: ಬಳ್ಕುಂಜೆ, ಕೊಲ್ಲೂರು, ಉಳೆಪಾಡಿ ಪ್ರದೇಶಗಳನ್ನು ಸರಕಾರ ಭೂ ಸ್ವಾಧೀನ ಪಡಿಸುವುದನ್ನು ವಿರೋಧಿಸಿ ಇಂದು ಬಳ್ಕುಂಜೆ ಪೇಟೆಯಲ್ಲಿ ಬೃಹತ್‌ ಪ್ರತಿಭಟನೆ ನಡೆಯಿತು.


    ಪ್ರತಿಭಟನಾ ಸಭೆಯಲ್ಲಿ ಬಳ್ಕುಂಜೆ ಚರ್ಚ್‌ನ ಧರ್ಮಗುರು‌ ಗಿಲ್ಬರ್ಟ್ ಡಿಸೋಜ ‌ಮಾತನಾಡಿ, ನಮ್ಮ ಫಲವತ್ತಾದ ಭೂಮಿಯನ್ನು ಬಿಟ್ಟು ಕೊಡುವುದಿಲ್ಲ, ಇಲ್ಲಿನ ಜನರು‌ ಕೃಷಿಯನ್ನೇ ನಂಬಿ ಬದುಕಿದವರು, ಯಾವುದೇ ಕಾರಣಕ್ಕೂ ಭೂಮಿ ಬಿಟ್ಟು ಕೊಡುವುದಿಲ್ಲ ಎಂದರು.
    ಶಂಶುದ್ದೀನ್ ಕರ್ನಿರೆ ಮಾತನಾಡಿ, ಭೂಸ್ವಾಧೀನಕ್ಕೆ ಆಯ್ಕೆ ಮಾಡಿದ ಮೂರು ಗ್ರಾಮಗಳು ಫಲವತ್ತಾಗಿದ್ದು ಉತ್ತಮ ಬೆಳೆಯನ್ನು ತೆಗೆಯಬಹುದಾಗಿದೆ, ಸರಕಾರಕ್ಕೆ ಈ ಬಗ್ಗೆ ಮಾಹಿತಿ ಇಲ್ಲದಿದ್ದರೆ ಇನ್ನಾದರೂ ಮಾಹಿತಿ ಪಡೆಯಿರಿ ಎಂದರು.


    ಫಾದರ್ ಮೈಕಲ್ ಡಿಸಿಲ್ವ ಮಾತನಾಡಿ, ಬಳ್ಕುಂಜೆ ಎಂಬುವುದು ಸರ್ವ ಧರ್ಮಿಯರೂ ಒಂದಾಗಿ ಬಾಳುವ ಊರು ಇಲ್ಲಿನ ಮಣ್ಣು ಎಷ್ಟು ಫಲವತ್ತಾಗಿದೆ ಅಂದರೆ ಇಲ್ಲಿನ ಮಣ್ಣನ್ನು ಅಂಮ್ಮೆಬಳಕ್ಕೆ ತೆಗೆದುಕೊಂಡು ಹೋಗಿ ಬೆಳೆಗಳಿಗೆ ಹಾಕಿದ್ದೇನೆ,

    ಅತ್ಯುತ್ತಮವಾದ ಈ ಪ್ರದೇಶಕ್ಕೆ ಬರುವ ಕೈಗಾರಿಕೆಗಳನ್ನು ನಾವು ವಿರೋಧಿಸಲೇಬೇಕು ಎಂದರು.


    ಬಳ್ಕುಂಜೆ ಪಂಚಾಯತ್ ಮಾಜಿ ಅಧ್ಯಕ್ಷ ದಿನೇಶ್ ಪುತ್ರನ್ ಮಾತನಾಡಿ, ಭೂಸ್ವಾಧೀನಕ್ಕೆ ಮುಂದಾದ ಭೂಮಿಯನ್ನು ಮೊದಲು ಸರ್ವೆ ಮಾಡಬೇಕಾಗಿತ್ತು ಆದರೆ ಇದೀಗ ಸರ್ವೆಗೆ ಮುಂದಾಗಿದ್ದಾರೆ,

    ಅಭಿವೃದ್ದಿ ಖಂಡಿತವಾಗಿಯೂ ಅಗತ್ಯ ಆದರೆ ಕೃಷಿ ಭೂಮಿಯಲ್ಲಿ ಅಭಿವೃದ್ದಿ ಬೇಡ, ಬಂಜರು ಭೂಮಿಯನ್ನು ಗುರುತಿಸಿ ಅಭಿವೃದ್ದಿ‌ಮಾಡಿ,

    ಸುಳ್ಳು ಮಾಹಿತಿ ನೀಡಿ, ಅಭಿವೃದ್ದಿ ವಿಷಯದಲ್ಲಿ ಕೃಷಿಕರಿಗೆ ತೊಂದರೆ ಕೊಡಬೇಡಿ ಎಂದರು. ನಂತರ ನಾಗಭೂಷಣ್ ರಾವ್, ದಿನಕರ್, ಪ್ರೀಡಾ, ಡೇನಿಸ್ ಡಿಸೋಜ ಮತ್ತಿತರರು ಮಾತನಾಡಿದರು.


    ಈ ಸಂದರ್ಭ ಸಾಂಕೇತಿಕವಾಗಿ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿ ನಂತರ ಉಳೆಪಾಡಿ ಉಮಾಮಹೇಶ್ವರೀ ದೇವಸ್ಥಾನದ ದ್ವಾರದವರೆಗೆ ಮೆರವಣಿಗೆ ನಡೆಸಲಾಯಿತು.

    BIG BOSS

    ಕೊಣಾಜೆ: 3 ವರ್ಷದ ಬಾಲೆಗೆ ಕಿ*ರುಕುಳ ನೀಡಿದ 70ರ ಅಜ್ಜ ಅರೆಸ್ಟ್

    Published

    on

    ಕೊಣಾಜೆ: ಬಾಲಕಿಗೆ ಕಿ*ರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಪ್ಪತ್ತರ ಹರೆಯದ ವೃದ್ಧನನ್ನು ಪೊಲೀಸರು ಬಂಧಿಸಿ,‌ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

    ಆರೋಪಿಯನ್ನು ಅಬ್ದುಲ್ಲಾ (70) ಎಂದು ಗುರುತಿಸಲಾಗಿದೆ.

    ಉಳ್ಳಾಲ ತಾಲೂಕು ಬಾಳೆಪುಣಿ ಗ್ರಾಮದಲ್ಲಿ ಘಟನೆ ನಡೆದಿದೆ. 3 ವರ್ಷದ ಬಾಲಕಿ ಆಟವಾಡುತ್ತಿದ್ದಾಗ ಆರೋಪಿ ಲೈಂ*ಗಿಕ ಕಿ*ರುಕುಳ ನೀಡಿದ್ದ ಎಂದು ಆರೋಪಿಸಲಾಗಿದೆ. ಬಾಲಕಿಯ ಅಸ್ವಸ್ಥತೆಯನ್ನು ಗಮನಿಸಿದ ತಾಯಿ ವೈದ್ಯಕೀಯ ತಪಾಸಣೆ ನಡೆಸಿದ್ದು ಬಳಿಕ ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಈ ಬಗ್ಗೆ ಕೊಣಾಜೆ ಪೊಲೀಸರು ಆರೋಪಿ ವಿರುದ್ಧ ಪೋ*ಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

    Continue Reading

    BIG BOSS

    ಮಂಗಳೂರು: ಮುಂಜಾನೆಯೇ ಸರಣಿ ಅ*ಪಘಾತ; ವಿದ್ಯಾರ್ಥಿಗಳಿದ್ದ ಬಸ್ ಪ*ಲ್ಟಿ

    Published

    on

    ಮಂಗಳೂರು: ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಸಮೀಪರದ ಅಡ್ಡಹೊಳೆ ಎಂಬಲ್ಲಿ ಬೆಳ್ಳಂಬೆಳಗ್ಗೆ ಸರಣಿ ಅ*ಪಘಾತ ಸಂಭವಿಸಿದೆ. ಕುಂದಾಪುರ ಪ್ರವಾಸಕ್ಕೆ ತೆರಳಿ ಹಿಂದಿರುಗುತ್ತಿದ್ದ ಬೆಂಗಳೂರು ಕಾಲೇಜು ವಿದ್ಯಾರ್ಥಿಗಳಿದ್ದ ಖಾಸಗಿ ಟೂರಿಸ್ಟ್ ಬಸ್ ಉರುಳಿ ಬಿದ್ದಿದೆ.

    ಇಂದು (ನ.23) ಬೆಳಗಿನ ಜಾವ ಕಾರೊಂದು ಹಿಂದಿನಿಂದ ಬಂದು ಕೆಎಸ್‌ಆರ್‌ಟಿಸಿ ಬಸ್‌ಗೆ ಡಿ*ಕ್ಕಿ ಹೊಡೆದಿದೆ. ನಂತರ, ಬೆಂಗಳೂರು ಕಾಲೇಜು ವಿದ್ಯಾರ್ಥಿಗಳಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ಕೆಎಸ್‌ಆರ್‌ಟಿಸಿ ಬಸ್‌ಗೆ ಗು*ದ್ದಿದೆ.

    ಟೂರಿಸ್ಟ್ ಬಸ್ ರಸ್ತೆಗೆ ಉರುಳಿದ್ದು, ವಿದ್ಯಾರ್ಥಿಗಳು ಗಾ*ಯಗೊಂಡಿದ್ದಾರೆ. ಗಾ*ಯಾಳುಗಳನ್ನು ನೆಲ್ಯಾಡಿ ಮತ್ತು ಕಡಬದ ಖಾಸಗಿ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಉಪ್ಪಿನಂಗಡಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

    Continue Reading

    DAKSHINA KANNADA

    ಮಂಗಳೂರು: ಟ್ರಾಯ್‌ನಿಂದ ಕರೆ; 1.71 ಕೋ.ರೂ ವಂಚನೆ

    Published

    on

    ಮಂಗಳೂರು: ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದಿಂದ ಕರೆ ಮಾಡುವುದಾಗಿ ತಿಳಿಸಿ, ಮೊಬೈಲ್‌ ಸಿಮ್‌ ಖರೀದಿಸಿ ಕಾನೂನು ಬಾಹಿರ ಚಟುವಟಿಕೆ ಕುರಿತು ಆರೋಪಿಸಿ 1.71 ಕೋ.ರೂ ವಂಚಿಸಿರುವ ಕುರಿತು ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗದೆ.

    ನ.11 ರಂದು ಅಪರಿಚಿತ ವ್ಯಕ್ತಿಯೋರ್ವರು ಟ್ರಾಯ್‌ ಪ್ರತಿನಿಧಿ ಎಂದು ಕರೆ ಮಾಡಿದ್ದು, ‘ನಿಮ್ಮ ಹೆಸರಿನಲ್ಲಿ ಇನ್ನೊಂದು ಮೊಬೈಲ್‌ ನಂಬರ್‌ ರಿಜಿಸ್ಟರ್‌ ಆಗಿದೆ, ಮುಂಬೈನ ಅಂಧೇರಿ ಯ ಮೂಲಕ ಕಾನೂನು ಬಾಹಿರ ಚಟುವಟಿಕೆ ನಡೆದಿದೆ . ಮಾರ್ಕೆಟಿಂಗ್‌ ನೆಪದಲ್ಲಿ ಈ ನಂಬರ್‌ ಮೂಲಕ ಕರೆ ಮಾಡಿ ಕಿರುಕುಳ ನೀಡುತ್ತಿರುವ ಕುರಿತು ಎಫ್‌ಐಆರ್‌ ದಾಖಲಾಗಿದೆ. ಈಗಲೇ ನೀವು ಅಂಧೇರಿ ಠಾಣೆಯನ್ನು ಸಂಪರ್ಕ ಮಾಡಬೇಕು. ಇಲ್ಲದಿದ್ದರೆ ನಿಮ್ಮ ಎರಡು ಮೊಬೈಲ್‌ ಸೇವೆಯನ್ನು ಕೊನೆಗಳಿಸಲಾಗುವುದು’ ಎಂದು ಹೇಳಿದ್ದಾರೆ.

    ಅನಂತರ ವಾಟ್ಸಪ್‌ ಮೂಲಕ ವೀಡಿಯೋ ಕರೆ ಮಾಡಿದ್ದು, ನ.13 ರಿಂದ 19 ರ ನಡುವೆ 53 ಲಕ್ಷ, 74 ಲಕ್ಷ ರೂ, 44 ಲಕ್ಷ ರೂ, ಹೀಗೆ ಒಟ್ಟು 1.71 ಕೋ.ರೂ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ. ದೂರುದಾರರು ಅಮೆರಿಕಾದ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ವಾಪಾಸಾದ ಬಳಿಕ ಮಂಗಳೂರಿನಲ್ಲಿ ಫ್ಲ್ಯಾಟ್‌ ಒಂದನ್ನು ಖರೀದಿ ಮಾಡಿದ್ದರು. ಅವರು ಅವಿವಾಹಿತರಾಗಿದ್ದು, ಒಬ್ಬರೇ ವಾಸ ಮಾಡುತ್ತಿದ್ದರು. ಉದ್ಯೋಗದ ಮೂಲಕ ಉಳಿತಾಯ ಮಾಡಿದ ಸಂಪಾದನೆಯನ್ನು ಈ ಮೂಲಕ ಕಳೆದುಕೊಂಡಿದ್ದಾರೆ.

    Continue Reading

    LATEST NEWS

    Trending