Connect with us

LATEST NEWS

Hubballi: ರೈಲ್ವೆ ಪ್ರಯಾಣಿಕರಿಗೆ ಕೈಗೆಟುಕುವ ಅಗ್ಗದ ದರದಲ್ಲಿ ʻಎಕಾನಮಿ ಮೀಲ್ಸ್‌ʼ

Published

on

ರೈಲುಗಳ ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಅಗ್ಗದ ದರದಲ್ಲಿ ಊಟ, ತಿಂಡಿ ತಿನಿಸುಗಳ ಜೊತೆಗೆ ಕುಡಿಯುವ ನೀರಿನ ಪ್ಯಾಕೇಜು ಒಳಗೊಂಡಿರುವ ಸೇವೆಯನ್ನು ಸಾಮಾನ್ಯ ಬೋಗಿಗಳು ನಿಲ್ಲುವ ಪ್ಲಾಟ್‌ಫಾರ್ಮ್‌ ಬಳಿಯಲ್ಲಿ ನೀಡುವ ಯೋಜನೆಯನ್ನು ಒದಗಿಸುವಂತೆ  ರೈಲ್ವೆ ಮಂಡಳಿಯು ಸೂಚಿಸಿದೆ.

ಹುಬ್ಬಳ್ಳಿ: ರೈಲುಗಳ ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಅಗ್ಗದ ದರದಲ್ಲಿ ಊಟ, ತಿಂಡಿ ತಿನಿಸುಗಳ ಜೊತೆಗೆ ಕುಡಿಯುವ ನೀರಿನ ಪ್ಯಾಕೇಜು ಒಳಗೊಂಡಿರುವ ಸೇವೆಯನ್ನು ಸಾಮಾನ್ಯ ಬೋಗಿಗಳು ನಿಲ್ಲುವ ಪ್ಲಾಟ್‌ಫಾರ್ಮ್‌ ಬಳಿಯಲ್ಲಿ ನೀಡುವ ಯೋಜನೆಯನ್ನು ಒದಗಿಸುವಂತೆ  ರೈಲ್ವೆ ಮಂಡಳಿಯು ಸೂಚಿಸಿದೆ.

ಐಆರ್‌ಸಿಟಿಸಿಯ ಅಡುಗೆ ಘಟಕಗಳಿಂದ ತಯಾರಿಸಿದ ಕೌಂಟರ್‌ಗಳಲ್ಲಿ ಪ್ರಯಾಣಿಕರಿಗೆ ಊಟದ ಪೊಟ್ಟಣ ವಿತರಿಸುವ ವ್ಯವಸ್ಥೆ ಮಾಡಲಾಗುತ್ತದೆ.

ಈ ಕೌಂಟರ್‌ಗಳು ಪ್ಲಾಟ್‌ಫಾರ್ಮ್‌ಗಳಲ್ಲಿನ ಸಾಮಾನ್ಯ ಬೋಗಿಗಳು ನಿಲ್ಲುವ ಸ್ಥಳದಲ್ಲಿಯೇ ಜೋಡಿಸಲು ನಿರ್ಧರಿಸಲಾಗಿದೆ.

ಈ ಸೇವಾ ಕೌಂಟರ್‌ಗಳನ್ನು 06 ತಿಂಗಳ ಅವಧಿಯ ಪ್ರಾಯೋಗಿಕ ಆಧಾರದ ಮೇಲೆ ಒದಗಿಸಲಾಗುತ್ತಿದೆ.

ಈ ಯೋಜನೆಯು ನೈರುತ್ಯ ರೈಲ್ವೆ ವಲಯದ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ನಿಲ್ದಾಣಗಳಲ್ಲಿ ಆರಂಭಿಸಲಾಗುತ್ತಿದೆ.

ನಿಲ್ದಾಣದ ಸೇವಾ ಕೌಂಟರ್‌ಗಳಲ್ಲಿ ಎರಡು ವಿಧದ ಊಟದ ಪ್ಯಾಕೇಜ್‌ಗಳಿರುತ್ತದೆ.

1ನೇ ಪ್ಯಾಕೇಜ್‌ನಲ್ಲಿ – ಎಕಾನಮಿ ಮೀಲ್ – 07 ಪೂರಿ (175 ಗ್ರಾಂ), ಒಣ ಆಲೂ ವೆಜ್ (150 ಗ್ರಾಂ) ಮತ್ತು ಉಪ್ಪಿನಕಾಯಿ (12 ಗ್ರಾಂ) ಒಳಗೊಂಡಿರುತ್ತದೆ ಇದಕ್ಕೆ ರೂ.20 (GST ಸೇರಿ) ದರ ನಿಗದಿ ಮಾಡಲಾಗಿದೆ.

2ನೇ ಪ್ಯಾಕೇಜ್‌ನಲ್ಲಿ – ತಿಂಡಿ ಊಟ (350 ಗ್ರಾಂ) – ಅನ್ನ, ರಾಜ್ಮಾ/ಚೋಲೆ ಅನ್ನ/ಖಿಚಡಿ/ಕುಲ್ಚಾ/ ಭತುರಾ/ಪಾವ್‌-ಬಾಜಿ/ಮಸಾಲಾ ದೋಸೆ ಸೇರಿದಂತೆ ಕೆಲ ದಕ್ಷಿಣ ಭಾರತದ ಆಹಾರದ ಪೊಟ್ಟಣ ಒಳಗೊಂಡಿರುತ್ತದೆ ಇದಕ್ಕೆ ರೂ. 50 (GST ಸೇರಿ) ದರ ನಿಗದಿ ಮಾಡಲಾಗಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ 200 ಎಂಎಲ್‌ ಗ್ಲಾಸ್‌ ಮತ್ತು 1 ಲೀಟರ್‌ ಕುಡಿಯುವ ನೀರಿನ ಬಾಟಲಿಗಳು ಲಭ್ಯವಿರುತ್ತವೆ.

ಮುಂಬರುವ ದಿನಗಳಲ್ಲಿ ಈ ಸೇವೆಯನ್ನು ಹೆಚ್ಚಿನ ನಿಲ್ದಾಣಗಳು ಗುರುತಿಸಿ ವಿಸ್ತರಿಸಲಾಗುವುದು ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

Click to comment

Leave a Reply

Your email address will not be published. Required fields are marked *

LATEST NEWS

ಎಸ್‌ಎಸ್‌ಎಲ್‌ಸಿ ಅಲ್ಲಿ ಫೇಲ್ ಎಂದು ತಿಳಿದು ಆತ್ಮಹತ್ಯೆ ಮಾಡಿದ ಯುವತಿ

Published

on

ಮಂಡ್ಯ: ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ರಿಸಲ್ಟ್ ಇಂದು ಪ್ರಕಟಗೊಂಡಿದೆ. ಆದರೆ ಮಂಡ್ಯದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಯಲ್ಲಿ ಪಾಸ್ ಆಗಿದ್ದರೂ ಫೇಲ್ ಎಂದು ತಪ್ಪಾಗಿ ತಿಳಿದು ನೇಣಿಗೆ ಶರಣಾಗಿದ್ದಾಳೆ.

ಅಮೃತ (16) ನೇಣಿಗೆ ಶರಣಾದ ವಿದ್ಯಾರ್ಥಿನಿ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹುಲಿಗೆರೆಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಅಮೃತ ನಗರಕೆರೆ ಗ್ರಾಮದ ಸರ್ಕಾರಿ ಅನುದಾನಿತ ಪೂರ್ಣಿಮಾ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ ಅಮೃತ ಶೇ.57 ಅಂಕ ಪಡೆದು ತೇರ್ಗಡೆ ಹೊಂದಿದ್ದಳು.

ಆದರೆ ಪರೀಕ್ಷೆಯಲ್ಲಿ ಫೇಲ್ ಆಗಿಬಿಟ್ಟೆ ಎಂದು ತಪ್ಪಾಗಿ ತಿಳಿದು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನೇಣಿಗೆ ಶರಣಾಗಿದ್ದಾಳೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.

Continue Reading

DAKSHINA KANNADA

ನಿವೃತ್ತ ಶಿಕ್ಷಕ ರಸ್ತೆ ದುರಂತದಲ್ಲಿ ಸಾ*ವು

Published

on

ಪುತ್ತೂರು : ನಿವೃತ್ತ ಶಿಕ್ಷಕ ಮರಿಕೆ ನಿವಾಸಿ ಸೂರ್ಯನಾರಾಯಣ ಕಾರಂತ (80) ಅವರು ರಸ್ತೆ ಅಪಘಾತಕ್ಕೆ ಬ*ಲಿಯಾಗಿದ್ದಾರೆ. ಪುತ್ತೂರಿನ ಸಂಪ್ಯ ಎಂಬಲ್ಲಿ ಗುರುವಾರ ರಸ್ತೆ ದಾಟುತ್ತಿದ್ದ ವೇಳೆ ಸೂರ್ಯನಾರಾಯಣ ಕಾರಂತ ಅವರಿಗೆ ಆಟೋ ರಿಕ್ಷಾವೊಂದು ಢಿಕ್ಕಿ ಹೊಡೆದಿತ್ತು.

ಡಿಕ್ಕಿಯ ರಭಸಕ್ಕೆ ಅವರು ರಸ್ತೆಗೆ ಬಿದ್ದು ತಲೆಗೆ ತೀವ್ರ ಗಾಯವಾಗಿತ್ತು. ಕೂಡಲೇ ಮತ್ತೊಂದು ರಿಕ್ಷಾದಲ್ಲಿ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಆದರೆ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃ*ತಪಟ್ಟಿದ್ದಾರೆ. ಸೂರ್ಯನಾರಾಯಣ ಕಾರಂತ ಅವರು ಗಣಿತ ಶಿಕ್ಷಕರಾಗಿ ಪ್ರಸಿದ್ಧರಾಗಿದ್ದರು.

ಇದನ್ನೂ ಓದಿ : ಕಣಗಿಲೆ ಹೂ ತಿಂದು ಇಹಲೋಕ ತ್ಯಜಿಸಿದ ಯುವತಿ!

Continue Reading

LATEST NEWS

ಕಣಗಿಲೆ ಹೂ ತಿಂದು ಇಹಲೋಕ ತ್ಯಜಿಸಿದ ಯುವತಿ!

Published

on

ತಿರುವನಂತಪುರಂ : ಕಣಗಿಲೆ(Oleander flower) ಹೂವು ಹಾಗೂ ಅದರ ಎಲೆಯ ರಸವನ್ನು ಸೇವಿಸಿ ಯುವತಿಯೊಬ್ಬಳು ಮೃ*ತಪಟ್ಟ ಘಟನೆ ಕೇರಳದ ಹರಿಪಾಡ್ ಸಮೀಪದ ಪಲ್ಲಿಪ್ಪಾಡ್ ನಲ್ಲಿ ನಡೆದಿದೆ. ಪಲ್ಲಿಪ್ಪಾಡ್‌ನ ನೀಂದೂರ್‌ನ ಕೊಂಡುರೆತ್ತು ಮನೆಯ ಸುರೇಂದ್ರನ್‌ ಅವರ ಪುತ್ರಿ ಸೂರ್ಯ ಸುರೇಂದ್ರನ್‌(24) ಮೃ*ತಪಟ್ಟವರು.


ಯುಕೆಗೆ ಹೋಗಬೇಕಿದ್ದವಳು ಸಾ*ವಿನ ಕದ ತಟ್ಟಿದಳು :

ಸೂರ್ಯ ಸುರೇಂದ್ರನ್‌ ಅವರ ಭಾನುವಾರ ನರ್ಸಿಂಗ್‌ ಕೆಲಸಕ್ಕೆ ಸೇರಲು ಯುಕೆಗೆ ತೆರಳುತ್ತಿದ್ದರು. ಕೆಲಸಕ್ಕಾಗಿ ವಿಮಾನ ನಿಲ್ದಾಣಕ್ಕೆ ಬಂದಾಗ ನೆಡುಂಬಶ್ಶೇರಿ ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದಿದ್ದಾರೆ. ನಂತರ ಆಕೆಯನ್ನು ಅಂಗಮಾಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ತಿರುವಲ್ಲಾ ಬಳಿಯ ಪರುಮಳದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಸೋಮವಾರ ಮೃ*ತಪಟ್ಟಿದ್ದಾಳೆ.

ಫೋನ್ ನಲ್ಲಿ ಮಾತನಾಡುತ್ತಾ ಹೂ ತಿಂದ ಯುವತಿ :

ಸೂರ್ಯ ಸುರೇಂದ್ರನ್‌ ಅವರ ಭಾನುವಾರ ನರ್ಸಿಂಗ್‌ ಕೆಲಸಕ್ಕೆ ಸೇರಲು ಯುಕೆಗೆ ತೆರಳುವ ತಯಾರಿಯಲ್ಲಿದ್ದರು. ಭಾನುವಾರ ಬೆಳಗ್ಗೆ ಮನೆಯಿಂದ ಫೋನ್ ಮೂಲಕ ಸಂಬಂಧಿಕರು ಮತ್ತು ಸ್ನೇಹಿತರಿಗೆ ತನ್ನ ಪ್ರಯಾಣದ ವಿಷಯವನ್ನು ತಿಳಿಸಿದ್ದಾಳೆ.

ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಾ ಓಡಾಡುವಾಗ, ಗೊತ್ತಿಲ್ಲದೆ ಎಲೆ ಮತ್ತು ಹೂವನ್ನು ಕಚ್ಚಿದ್ದಾರೆ. ತಕ್ಷಣವೇ ಅದನ್ನು ಉಗುಳಿದ್ದಾರೆ. ಆದರೂ, ಎಲೆ ಮತ್ತು ಹೂವಿನ ರಸದ ಕೆಲವು ಹನಿಗಳು ದೇಹಕ್ಕೆ ಸೇರಿಕೊಂಡಿದ್ದವು ಎಂದು ಮೃ*ತ ಯುವತಿ ಸೂರ್ಯ ಸುರೇಂದ್ರನ್‌ ತನ್ನ ಪೋಷಕರು ಮತ್ತು ವೈದ್ಯರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ : ಶವರ್ಮಾ ತಿಂದು ಪ್ರಾಣಬಿಟ್ಟ 19 ವರ್ಷದ ಯುವಕ

ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಆಕೆಯ ರಕ್ತದಲ್ಲಿ ವಿಷಕಾರಿ ಅಂಶ ಕಂಡುಬಂದಿದೆ ಎಂದು ಬಹಿರಂಗಪಡಿಸಿದ್ದಾರೆ. ಆದರೆ, ಆಕೆಯ ಹೊಟ್ಟೆಯಲ್ಲಿ ಹೂವು ಅಥವಾ ಎಲೆಯ ಅವಶೇಷಗಳು ಕಂಡುಬಂದಿಲ್ಲ. ಆಕೆಯ ಸಾ*ವಿಗೆ ನಿಜವಾಗಿಯೂ ಕಣಗಿಲೆ ಹೂ ಕಾರಣವಾಯ್ತ ಅನ್ನೋದು ತನಿಖೆಯಿಂದ ತಿಳಿಯಬೇಕಿದೆ.

Continue Reading

LATEST NEWS

Trending