ಹುಬ್ಬಳ್ಳಿ: ಹಳೆ ಹುಬ್ಬಳ್ಳಿ ಗಲಭೆಗೆ ಕಾರಣನಾಗಿದ್ದ ಪ್ರಮುಖ ಆರೋಪಿಗೆ ಇಂದು ಪಿಯು ಪರೀಕ್ಷೆ ಬರೆಯಲು ಕೋರ್ಟ್ ಅನುಮತಿ ನೀಡಿದೆ.
ಆಕ್ಷೇಪಾರ್ಹ ವಾಟ್ಸ್‌ಆ್ಯಪ್ ಸ್ಟೇಟಸ್ ಹಾಕಿಕೊಂಡಿದ್ದ ಆರೋಪದ ಮೇಲೆ ಬಂಧಿತನಾಗಿರುವ
ಆರೋಪಿ ಅಭಿಷೇಕ ಹಿರೇಮಠನನ್ನು ಪೊಲೀಸರು ಉಪ ಕಾರಾಗೃಹದಿಂದ ಇಂದು ನಗರದ ಪ್ರಿಯದರ್ಶಿನಿ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರಕ್ಕೆ ಭದ್ರತೆಯಲ್ಲಿ ಕರೆತಂದರು.
ಪರೀಕ್ಷೆ ಬರೆಯಲು ಆರೋಪಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಕಲ್ಪಿಸಲಾಗಿದೆ.
ಬೆಳಿಗ್ಗೆ 10.30ರಿಂದ ಪರೀಕ್ಷೆ ಆರಂಭವಾಗಲಿದ್ದು, ಭದ್ರತೆ ನಡುವೆ ಅಭಿಷೇಕ ಪರೀಕ್ಷೆ ಬರೆಯಲಿದ್ದಾನೆ. ಏ. 30ರ ವರೆಗೆ ಪರೀಕ್ಷೆ ಬರೆಯಲು ಕೋರ್ಟ್ ಅನುಮತಿ ನೀಡಿತ್ತು.