Connect with us

    FILM

    ಲಾಯರ್ ನಟನಾಗಿದ್ದು ಹೇಗೆ ? ‘ಅಣ್ಣಯ್ಯ’ ಹೀರೋ ವಿಕಾಸ್ ಬಗ್ಗೆ ಗೊತ್ತಾ!?

    Published

    on

    ಝೀ ಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ ಆರಂಭಗೊಂಡ ಅಣ್ಣಯ್ಯ ಧಾರಾವಾಹಿ ಈಗಾಗಲೇ ಜನ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ನಾಲ್ವರು ತಂಗಿಯಂದಿರ ಮುದ್ದಿನ ಅಣ್ಣನ ಕಥೆ ಧಾರಾವಾಹಿಯ ಜೀವಾಳ. ಅಣ್ಣ ಶಿವು ಪಾತ್ರದಲ್ಲಿ ಮಿಂಚಿರೋದು ಯಾರು ಗೊತ್ತಾ!? ಅವರೇ  ವಿಕಾಸ್ ಉತ್ತಯ್ಯ. ಅಣ್ಣಯ್ಯನಾಗಿ ತಮ್ಮ ಮನೋಜ್ಞ ಅಭಿನಯದ ಮೂಲಕ ಅವರು ಜನರಿಗೆ ಇಷ್ಟವಾಗಿದ್ದಾರೆ.

    ಯಾರು ಈ ವಿಕಾಸ್?

    ವಿಕಾಸ್ ಮೂಲತಃ ಕೊಡಗಿನವರು. ಆದರೆ, ನೆಲೆಯಾಗಿರೋದು ಬೆಂಗಳೂರಿನಲ್ಲಿ. ಚಿಕ್ಕ ವಯಸ್ಸಿನಿಂದಲೇ ನಟನಾಗಬೇಕೆಂಬ ಹಂಬಲ ಹೊತ್ತಿದ್ದ ಶಿವು, ವೃತ್ತಿಯಲ್ಲಿ ಅಡ್ವೊಕೇಟ್. ಆದರೆ, ಬಣ್ಣದ ಬದುಕು ಕೈ ಬೀಸಿತ್ತು. ಆನೆ , ಧ್ವಂದ್ವ ದ್ವಯಂ, ಮೇರಿ ಸಿನಿಮಾದಲ್ಲಿ ನಟಿಸಿದ್ದ ವಿಕಾಸ್ ಗೆ ಹೇಳಿಕೊಳ್ಳುವ ಯಶಸ್ಸು ಸಿಕ್ಕಿರಲಿಲ್ಲ. ಬಳಿಕ ಅವರು ಕಿರುತೆರೆಯತ್ತ ಮುಖ ಮಾಡಿದರು.

    ವಿಕಾಸ್ – ನಿಶಾ ಜೋಡಿ :

    ಅಣ್ಣಯ್ಯ ಧಾರಾವಾಹಿಯ ಮೂಲಕ ಜನಪ್ರಿಯರಾಗಿರೋ ವಿಕಾಸ್, ಈ ಧಾರಾವಾಹಿಯಲ್ಲಿ ಬಡ ಅಣ್ಣನಾಗಿ, ಹೃದಯವಂತ ಯುವಕನಾಗಿ ಮಿಂಚಿದ್ದಾರೆ. ಗಟ್ಟಿಮೇಳ ಖ್ಯಾತಿಯ  ನಿಶಾ ರವಿಕೃಷ್ಣನ್ ನಾಯಕಿ. ಪಾರು ಪಾತ್ರದಲ್ಲಿ ನಿಶಾ ಮಿಂಚಿದ್ದು,  ಪ್ರಮೋದ್ ಶೆಟ್ಟಿ ನಿರ್ಮಾಣದ ಈ ಧಾರಾವಾಹಿಗೆ ಉತ್ತಮ್ ಮಧು ನಿರ್ದೇಶನವಿದೆ.

    ಇದನ್ನೂ ಓದಿ : ಲಾಯರ್​ ಜಗದೀಶ್​ಗೆ ಸೀರೆ ಕೊಡ್ತೀನಿ ಉಟ್ಕೋ ಎಂದ ಮಾನಸ.. ಬೈಗುಳಗಳ ಸುರಿಮಳೆ

    ಸದ್ಯ ಪಾರು ಶಿವುಗೂ ಮದುವೆಯಾಗಿದೆ. ಸಿದ್ದಾರ್ಥ್ ಎಂಬಾತನನ್ನು ಪ್ರೀತಿಸುತ್ತಿದ್ದ ಪಾರು ಮೋಸ ಹೋಗುತ್ತಾಳೆ. ಮರಳಿ ಬಂದ ಪಾರುವನ್ನು ಶಿವು ಮದುವೆಯಾಗುವಂತಾಗುತ್ತೆ. ಒಲ್ಲದ ಮನಸ್ಸಿನಿಂದ ಪಾರು, ಶಿವು ಕಟ್ಟೋ ತಾಳಿಗೆ ತಲೆ ಬಾಗಿದ್ದು, ಆತನ ಮನೆಗೆ ಬಂದಿದ್ದಾಳೆ. ಶಿವು ಬಗ್ಗೆ ಕೊಂಚವೂ ಪ್ರೀತಿ ಇರದ ಆಕೆ ಆತನನ್ನು ಪತಿ ಎಂದು ಒಪ್ಪಿಕೊಳ್ಳಲು ತಯಾರಿರುವುದಿಲ್ಲ. ಹಾಗಾದ್ರೆ ಮುಂದಿನ ಕಥೆ ಏನು? ಮುಗ್ದ  ಶಿವುವನ್ನು ಒಪ್ಪುತ್ತಾಳಾ? ಸಿದ್ದಾರ್ಥ್ ಬರ್ತಾನಾ? ಇತ್ಯಾದಿ ಕುತೂಹಲವಿದೆ.

    FILM

    ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿಧನ

    Published

    on

    ಬೆಂಗಳೂರು : ನಟಿ ಅಮೂಲ್ಯ ಅವರ ಸಹೋದರ ದೀಪಕ್ ಅರಸ್ ನಿಧನರಾಗಿದ್ದಾರೆ. ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಅವರಿಗೆ 42 ವರ್ಷ ವಯಸ್ಸಾಗಿತ್ತು.

    ದೀಪಕ್ ಅರಸ್ ಅವರಿಗೆ ಕಿಡ್ನಿ ವೈಫಲ್ಯ ಆಗಿತ್ತು. ಅದಕ್ಕೆ ಅವರು ಡಯಾಲಿಸಿಸ್ ಮಾಡಿಸುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೆ
    ಬೆಂಗಳೂರಿನ ಆರ್​ ಆರ್​ ನಗರದ ಖಾಸಗಿ ಆಸ್ಪತ್ರೆಯಲ್ಲಿ ದೀಪಕ್ ಸಾವನ್ನಪಿದ್ದಾರೆ.

    ‘ಮನಸಾಲಜಿ’, ‘ಶುಗರ್​ ಫ್ಯಾಕ್ಟರಿ’ ಸಿನಿಮಾಗಳಿಗೆ ದೀಪಕ್ ನಿರ್ದೇಶನ ಮಾಡಿದ್ದರು. ದೀಪಕ್ ಅರಸ್ ಅವರಿಗೆ ಮದುವೆ ಆಗಿ ಇಬ್ಬರು ಮಕ್ಕಳು ಇದ್ದಾರೆ.

    Continue Reading

    BIG BOSS

    ಲಾಯರ್​ ಜಗದೀಶ್​ಗೆ ಸೀರೆ ಕೊಡ್ತೀನಿ ಉಟ್ಕೋ ಎಂದ ಮಾನಸ.. ಬೈಗುಳಗಳ ಸುರಿಮಳೆ

    Published

    on

    ಬಿಗ್ ಬಾಸ್ ಸೀಸನ್ 11ರ ಮನೆ ರಣರಂಗವಾಗಿದ್ದು ಕೆಲ ಸ್ಪರ್ಧಿಗಳೆಲ್ಲ ಲಾಯರ್ ಜದೀಶ್ ಮೇಲೆ ಮುಗಿಬೀಳುತ್ತಿದ್ದಾರೆ. ಗಲಾಟೆ ಅತಿರೇಕದ ಎಲ್ಲೆ ಮೀರಿದ್ದು ಯಾವ್ಯಾವ ಪದಗಳನ್ನು ಬಳಕೆ ಮಾಡುತ್ತಾರೆ ಎನ್ನುವುದೇ ಊಹೆ ಮಾಡೋಕೆ ಆಗುತ್ತಿಲ್ಲ. ಅವರು ಆಡಿದ ಕೆಲ ಮಾತುಗಳು ಸಂಘರ್ಷ ಜೊತೆಗೆ ಮಹಿಳೆಯರು, ಪುರುಷರು ಎನ್ನದೇ ಬಳಕೆ ಮಾಡಲಾಗುತ್ತಿದೆ. ವಿಡಿಯೋವೊಂದರಲ್ಲಿ ಜಗದೀಶ್ ಅವರಿಗೆ ಸೀರೆ ಕೊಡುತ್ತೀನಿ ಹುಟ್ಕೋ ಎಂದು ಹೇಳಲಾಗಿದೆ.

    ಬಿಗ್ ಹೌಸ್​ನಲ್ಲಿ ಹೆಣ್ಮುಕ್ಕಳು ಬಗ್ಗೆ ಮಾತನಾಡಿದ್ದಕ್ಕೆ ಗಲಾಟೆ ಆರಂಭ ಆಗಿರುವುದು ವಿಡಿಯೋದಿಂದ ಗೊತ್ತಾಗುತ್ತದೆ. ಇದಕ್ಕೆ ವಾಹಿನಿ ‘ಮನೆ ಮಂದಿ ಮನಸನ್ನು ಕೆಡಿಸ್ತಾ ಜಗದೀಶ್ ಮಾತು?’ ಎಂದು ಟ್ಯಾಗ್​​ಲೈನ್ ಬರೆಯಲಾಗಿದೆ. ವಿಡಿಯೋದಲ್ಲಿ ಗೋಲ್ಡ್ ಸುರೇಶ್ ಮಹಿಳೆಯರ ಬಗ್ಗೆ ಮಾತನಾಡಬೇಡ ಎಂದಿದ್ದಾರೆ. ಇದಕ್ಕೆ ಫುಲ್ ಗರಂ ಆಗಿರುವ ಜಗದೀಶ್ ನಾನು ಮಾತನಾಡುತ್ತೇನೆ, ಏನೋ ಇವಾಗ? ಅಂತ ಪ್ರಶ್ನಿಸಿದ್ದಾರೆ. ಈ ವೇಳೆ ಜಗದೀಶ್ ಮೇಲೆ ಚೈತ್ರಾ, ಮಾನಸ ಸೇರಿ ಕೆಲವು ಮುಗಿಬಿದ್ದಿದ್ದಾರೆ.

    ತಾಕತ್ ಇದ್ದರೇ ಏನ್ ಮಾಡ್ಕೊಂತಿಯಾ ಮಾಡ್ಕೊ ಹೋಗು ಎಂದು ಚೈತ್ರಾಗೆ ಜಗದೀಶ್ ಗದರಿದ್ದಾನೆ. ಕೈಕೈ ಮಿಲಾಯಿಸುವ ಮಟ್ಟಿಗೆ ಎಲ್ಲರು ಗುಂಪಾಗಿ ಜಗಳ ಮಾಡಿದ್ದಾರೆ. ಆಗ ನಿನ್ನಂತವರನ್ನು ಎಷ್ಟು ಜನ ನೋಡಿಲ್ಲ.. ಎಂದು ಜಗದೀಶ್ ಮಾನಸ ನೋಡಿಕೊಂಡು ಹೇಳುತ್ತಾರೆ. ಇದಕ್ಕೆ ಸೀರೆ ಕೊಡ್ತೀನಿ ಉಟ್ಕೋ ಮತ್ತೆ ಎಂದು ಜಗದೀಶ್​ಗೆ ಹೇಳಿದ್ದಾರೆ. ಇದೇ ವೇಳೆ ಹಂಸಾ ಅವರು ಹೆಂಗಸು ಆಗೋಕೆ ಯೋಗ್ಯತೆ ಇಲ್ಲ ಅವನಿಗೆ ಎಂದು ಹೇಳಿದ್ದಾರೆ. ಇದರಿಂದ ಕೋಪಗೊಂಡ ಜಗದೀಶ್ ಗಟ್ಟಿಧ್ವನಿಯಲ್ಲಿ ಮಾನಸಗೆ ಗದರಿದರು. ಇದರಿಂದ ತೀವ್ರ ಕೋಪದಲ್ಲೇ ಬಿಗ್​ಬಾಸ್ ಕ್ಯಾಮೆರಾ​ ಮುಂದೆ ಬಂದ ಹಂಸಾ ಅವರು ಇದಕ್ಕೆ ಏನಾದರೂ ಸಲ್ಯೂಷನ್​​ ಬೇಕೆಬೇಕು ಎಂದು ಕೇಳಿದ್ದಾರೆ.

    Continue Reading

    BIG BOSS

    ಕೊನೆಗೂ ಸುದೀಪ್ ಹೇಳಿದ ಬದಲಾವಣೆಯನ್ನು ಜಾರಿಗೆ ತಂದ ಬಿಗ್ ಬಾಸ್; ಏನದು ?

    Published

    on

    ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಬಳಿಕ ಬಿಗ್ ಬಾಸ್ ತೊರೆಯೋದಾಗಿ ಸುದೀಪ್ ಅವರು ಘೋಷಣೆ ಮಾಡಿದ್ದರು. ಇದು ಅನೇಕರಿಗೆ ಬೇಸರ ಮೂಡಿಸಿತ್ತು. ಸುದೀಪ್ ಅವರು ಈ ರೀತಿ ಏಕಾಏಕಿ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿತ್ತು. ಈ ಬಗ್ಗೆ ಮಾತನಾಡಿದ್ದ ಕನ್ನಡ ಪರ ಹೋರಾಟಗಾರ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ರೂಪೇಶ್ ರಾಜಣ್ಣ ಕೆಲವು ವಿಚಾರಗಳನ್ನು ಹೇಳಿದ್ದರು. ಅಲ್ಲದೆ, ಕಲರ್ಸ್ ವಾಹಿನಿ ಮಾಡಿದ ತಪ್ಪನ್ನು ಸರಿಪಡಿಸಿಕೊಂಡಿದೆ ಎಂದಿದ್ದರು. ಅಷ್ಟೇ ಅಲ್ಲ ಸುದೀಪ್ ಹೇಳಿದ್ದ ಬದಲಾವಣೆಗೆ ಕಲರ್ಸ್ ಕನ್ನಡ ಒಪ್ಪಿದೆ. ಇದು ಎಪಿಸೋಡ್​ನಲ್ಲೇ ಗೊತ್ತಾಗಿದೆ.

    ಬಿಗ್ ಬಾಸ್​ನಲ್ಲಿ ಇಂಗ್ಲಿಷ್ ವಾಕ್ಯಗಳನ್ನು ಹೆಚ್ಚು ಬಳಕೆ ಮಾಡುವಂತಿಲ್ಲ. ಕನ್ನಡವೇ ಬಳಕೆ ಆಗಬೇಕು. ಒಂದೊಮ್ಮೆ ಇಂಗ್ಲಿಷ್ ಬಳಕೆ ಆದರೆ, ‘ಹುಟ್ಟಿದರೇ ಕನ್ನಡ​ ನಾಡಲ್ಲಿ ಹುಟ್ಟಬೇಕು’ ಎನ್ನುವ ಹಾಡನ್ನು ಹಾಕುತ್ತಿದ್ದರು. ಆದರೆ, ಈ ಪದ್ಧತಿ ಇತ್ತೀಚೆಗೆ ಮಾಯ ಆಗಿತ್ತು. ಈಗ ಸುದೀಪ್ ಅವರ ಸೂಚನೆಯನ್ನು ಒಪ್ಪಿದ ಬಳಿಕ ಇದನ್ನು ಮತ್ತೆ ಜಾರಿಗೆ ತರಲಾಗಿದೆ.

    ಇಂಗ್ಲಿಷ್​ನ ಹೆಚ್ಚು ಬಳಕೆ ಮಾಡದಂತೆ ‘ಬಿಗ್ ಬಾಸ್​’ ಅಕ್ಟೋಬರ್ 16ರ ಎಪಿಸೋಡ್​ನಲ್ಲಿ ಎಚ್ಚರಿಕೆ ನೀಡಿದ್ದಾರೆ. ಸುದೀಪ್ ಹೇಳಿದ ಬದಲಾವಣೆಯಲ್ಲಿ ಇದು ಕೂಡ ಇತ್ತು ಎನ್ನಲಾಗಿದೆ. ಈಗ ಸುದೀಪ್ ಕೋರಿಕೆ ಈಡೇರಿದೆ ಎನ್ನಬಹುದು.

    ಈ ಮೊದಲು ಟ್ವೀಟ್ ಮಾಡಿದ್ದ ರಾಜಣ್ಣ, ‘ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಬಿಗ್ ಬಾಸ್ ಆಯೋಜಕರು ಒಪ್ಪಿದ್ದಾರೆ. ತಮಗೂ ಹಾಗೂ ಕನ್ನಡದ ಪರವಾಗಿ ನಿಂತ ಸುದೀಪ್ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಧನ್ಯವಾದಗಳು. ಬದಲಾವಣೆ ನೀವೇ ನೋಡುವಿರಿ’ ಎಂದಿದ್ದಾರೆ. ಈಗ ಆ ಬದಲಾವಣೆ ಕಾಣಿಸಿದೆ.

    ಮನೆಯಲ್ಲಿ ನಿದ್ದೆ ಮಾಡುವುದು ಎಷ್ಟು ತಪ್ಪೋ ಇಂಗ್ಲಿಷ್ ಪದಗಳನ್ನು ಹೆಚ್ಚು ಬಳಕೆ ಮಾಡೋದು ಕೂಡ ತಪ್ಪೇ. ಅದನ್ನು ಮೀರಿದರೆ ಶಿಕ್ಷೆ ಖಚಿತ. ಸದ್ಯ ಬಿಗ್ ಬಾಸ್ ಮನೆಯಿಂದ ರಂಜಿತ್ ಹಾಗೂ ಜಗದೀಶ್ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗುತ್ತಿದೆ.

    Continue Reading

    LATEST NEWS

    Trending