Connect with us

DAKSHINA KANNADA

ಬ್ರಿಟಿಷರಿಗೆ ನಿರಂತರವಾಗಿ ಕ್ಷಮಾಪಣಾ ಪತ್ರ ಬರೆದವ ವೀರ ಆಗುವುದು ಹೇಗೆ?: ಬಿಳಿಮಲೆ

Published

on

ಮಂಗಳೂರು: ಸ್ವಾತಂತ್ರ್ಯಕ್ಕಾಗಿ ಹಲವು ಹೋರಾಟಗಾರರು ಗಲ್ಲಿಗೇರುತ್ತಿದ್ದಾಗ, ಅಂಡಮಾನ್‌ ಜೈಲಿನಲ್ಲಿ ಕೊಳೆಯುತ್ತಿದ್ದಾಗ ಬ್ರಿಟಿಷರಿಗೆ ನಿರಂತರವಾಗಿ ಕ್ಷಮಾಪಣಾ ಪತ್ರ ಬರೆದು ಹೊರಗೆ ಬಂದವ ವೀರ ಆಗುವುದು ಹೇಗೆ? ಅಂತಹವನನ್ನು ವೀರ ಎಂದು ಕರೆಯಲು ಭಾರತೀಯರಿಗೆ ತಲೆಕೆಟ್ಟಿಲ್ಲ ಎಂದು ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ ಪ್ರೊ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.


ಜನಶಕ್ತಿ ಕನ್ನಡ ವಾರಪತ್ರಿಕೆಯ ‘ಜನಶಕ್ತಿ ಉತ್ಸವ’ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾವರ್ಕರ್‌ ಅವರೇ ಚಿತ್ರಗುಪ್ತ ಎಂಬ ಹೆಸರಿನಲ್ಲಿ “ಬ್ಯಾರಿಸ್ಟರ್‌” ಎಂಬ ಆತ್ಮಕಥೆ ಪುಸ್ತಕ ಬರೆದರು ಅದಕ್ಕೆ ಅವರೇ ವೀರ ಎಂದು ಹೆಸರು ಕೊಟ್ಟರು.

ಸಾವರ್ಕರ್‌ ವೀರನೇ ಹೌದಾದರೆ ಬ್ರಿಟೀಷರ ಬೂಟು ನೆಕ್ಕುವ ಕೆಲಸವನ್ನು ಯಾಕೆ ಮಾಡುತ್ತಿದ್ದರು ಎಂದು ಪ್ರಶ್ನಿಸಿದ ಅವರು, ಆದರೆ ಇದನ್ನು ಮುಖ್ಯ ವಾಹಿನಿಗಳು ಚರ್ಚೆ ಮಾಡುತ್ತಿಲ್ಲ. 1990 ರ ಉದಾರೀಕರಣ ಹಾಗೂ 1992 ರಲ್ಲಿ ರಥಯಾತ್ರೆ ಒಟ್ಟೊಟ್ಟಿಗೆ ಹುಟ್ಟಿದ ಶನಿ ಸಂತಾನಗಳು.

1990 ರ ನಂತರ ಹುಟ್ಟಿದ ನವ ಬಂಡವಾಳ ಶಾಹಿ ಮಾಧ್ಯಮಗಳ ರೀತಿ ನೀತಿಗಳು ಬದಲಾದವು. 1861 ರಿಂದ 1881ರ ಮಧ್ಯೆ ಬ್ರಿಟೀಷ್‌ ಸರಕಾರ 68 ಸ್ಥಳೀಯ ಮಾಧ್ಯಮಗಳನ್ನು ಬ್ಯಾನ್‌ ಮಾಡಿದರು.

ಕಾರಣ ಸ್ಥಳೀಯ ಮಾಧ್ಯಮಗಳು ಬ್ರಿಟೀಷ್‌ ವಸಾಹತು ಶಾಹಿತ್ವನ್ನು ವಿರೋಧಿಸುತ್ತಿದ್ದವು. ಆದರೆ ಇಂದಿನ ಮುಖ್ಯವಾಹಿನಿ ಮಾಧ್ಯಮಗಳು 80 ಶೇಕಡಾ ಇಂಗ್ಲೀಷ್‌ ಪದ ಬಳಸುತ್ತಿದ್ದಾರೆ. ಅವುಗಳಿಂದ ಭಾಷೆ ಮತ್ತು ಸಂಸ್ಕೃತಿ ನಾಶವಾಗುತ್ತಿದೆ.
ಇದೇ ವೇಳೆ 2033ರ ವೇಳೆಗೆ ಆರ್‌ಎಸ್‌ಎಸ್‌ ಸಂಸ್ಕೃತ ಭಾಷೆಯನ್ನು ದೇಶದ ಭಾಷೆಯನ್ನಾಗಿ ಮಾಡಲು ಹುನ್ನಾರ ನಡೆಸುತ್ತಿದೆ ಎಂದು ಹೇಳಿದರು.

ರಾಜ್ಯಸಭಾ ಸದಸ್ಯ ಹಾಗೂ ಪತ್ರಕರ್ತ ಜೋನ್ ಬ್ರಿಟ್ಟಾಸ್ ಮಾತನಾಡಿ, ಪ್ರಧಾನಿ ಮೋದಿಯವರು ಸ್ವಾತಂತ್ರ್ಯ ದಿನದ ತಮ್ಮ ಭಾಷಣದಲ್ಲಿ ಅಂಬೇಡ್ಕರ್ ಒಳಗೊಂಡಂತೆ ಹಲವು ಸ್ವಾತಂತ್ರ್ಯ ಹೊರಾಟಗಾರರ ಹೆಸರುಗಳನ್ನು ಉಲ್ಲೇಖ ಮಾಡಿದ್ದರು. ಅಂದು ಸಾವರ್ಕರ್ ಹೆಸರೂ ಉಲ್ಲೇಖವಾಗಿತ್ತು. ಅಂಬೇಡ್ಕರ್ ಹೆಸರಿಗೆ ಸಮಾನವಾಗಿ ಸಾವರ್ಕರು ಎಂದಿಗೂ ಉಲ್ಲೇಖಿಸಲ್ಪಡಬಾರದು. ಅದು ಅಂಬೇಡ್ಕರ್ ಹಾಗೂ ಅಸಂಖ್ಯಾತ ನೈಜ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿ ನಿಂದಸಿದಂತೆ. ಇದೀಗ ಸಾವರ್ಕರ್ ರಾಷ್ಟ್ರಪಿತ ಎಂದು ಸಂಭೋದಿಸಲ್ಪಡುವ ದಿನಗಳು ದೂರವಿಲ್ಲ. ನೈಜ ದೇಶಪ್ರೇಮಿಗಳು ಸಾವರ್ಕರ್ ಹಿಂಬಾಲಕರನ್ನು ಸೆದೆಬಡಿಯುವ ಕೆಲಸವನ್ನು ಇಂದಿನಿಂದಲೇ ಆರಂಭಿಸಬೇಕಾಗಿದೆ.

ಬಿಲ್ಕೀಸ್ ಬಾನು ಪ್ರಕರಣದ ನರಹಂತಕರನ್ನು ಬಿಡುಗಡೆ ಮಾಡಿದ್ದು ಮಾತ್ರವಲ್ಲದೆ ಗುಜರಾತಿನ ಬೀದಿ ಬೀದಿಗಳಲ್ಲಿ ಅವರನ್ನು ಹೂ ಹಾರ ಹಾಕಿ ಸ್ವಾಗತಿಸುವ ಮೂಲಕ ಗುಜರಾತಿನ ಬಿಜೆಪಿ ಸರಕಾರ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಭಾರತದ ಪ್ರಸ್ತುತ ಪರಿಸ್ಥಿತಿ ಹೇಗಿದೆ ಎಂದು ಮುಕ್ತವಾಗಿ ಅರ್ಥೈಸುವಂತೆ ಮಾಡಿದೆ. ಹಂತಕರು ಬ್ರಾಹ್ಮಣರು ಎಂದು ಬಿಜೆಪಿ ಶಾಸಕರು ಒಬ್ಬರ ಹಿಂದೆ ಒಬ್ಬರಂತೆ ಅವರನ್ನು ಸಮರ್ಥಿಸಲು ಮುಂದೆ ಬರುತ್ತಿರುವಾಗ ಸಾಮಾಜಿಕ ನ್ಯಾಯದ ಜೀರ್ಣಾವಸ್ಥೆಯನ್ನು ಬಯಲಿಗೆಲೆಯಬೇಕಾದ ಮುಖ್ಯಧಾರ ಮಾಧ್ಯಮಗಳು ದೇಶದ ಆಡಳಿತಕ್ಕೆ ಬಹು ಪರಾಕ್ ಹಾಡುತ್ತಿವೆ. ಇದು ದೇಶಕ್ಕೆ ಮುಂದಿನ ವರ್ಷಗಳಲ್ಲಿ ಬರಲಿರುವ ಅತೀ ದೊಡ್ಡ ಸಾಮಾಜಿಕ ಗಂಡಾಂತರದ ನೇರ ಮುನ್ಸೂಚನೆ ಎಂದರು.

 

Click to comment

Leave a Reply

Your email address will not be published. Required fields are marked *

DAKSHINA KANNADA

ಕಾರಿನಲ್ಲಿ ಮಗುವನ್ನು ಮರೆತು ಹೋದ ತಾಯಿ..! ಕಾರಿನಲ್ಲೇ ಮಗುವಿನ ಅಂತ್ಯ…!

Published

on

ಮಂಗಳೂರು ( ರಾಜಸ್ಥಾನ ) :  ಮಕ್ಕಳ ಬಗ್ಗೆ ಪೋಷಕರು ಎಷ್ಟು ಮುಂಜಾಗ್ರತೆ ವಹಿಸಿದರೂ ಸಾಲದು. ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕು. ಆದ್ರೆ, ತಂದೆ ಮತ್ತು ತಾಯಿಯ ನಿರ್ಲಕ್ಷಕ್ಕೆ ಮೂರು ವರ್ಷದ ಬಾಲಕಿ ಅಸುನೀಗಿದ್ದಾಳೆ. ಹೌದು, ಮಗು ಕಾರಿನಲ್ಲಿ ಉಸಿರುಗಟ್ಟಿ ಸಾ*ವನಪ್ಪಿದ ಘಟನೆ ರಾಜಸ್ಥಾನದ ಕೋಟದಲ್ಲಿ ನಡೆದಿದೆ. ಮೃ*ತ ಮಗುವನ್ನು ಕೋಟಾದ ಇಂದ್ರ ಕಾಲೋನಿಯ ನಿವಾಸಿ ಪ್ರದೀಪ್ ಅವರ ಮಗಳು ಗರ್ವಿ (3) ಎಂದು ಗುರುತಿಸಲಾಗಿದೆ.

ಮದುವೆ ಸಂಭ್ರಮದಲ್ಲಿ ಕಳೆದುಹೋದ ದಂಪತಿ :

ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಾಲಕಿ ತನ್ನ ಪೋಷಕರೊಂದಿಗೆ ಕಾರಿನಲ್ಲಿ ಬಂದಿದ್ದರು. ಈ ವೇಳೆ ತಾಯಿ ತನ್ನ ಇನ್ನೊಬ್ಬ ಮಗಳ ಜೊತೆ ಕಾರಿನಿಂದ ಇಳಿದಿದ್ದಾರೆ. ಆದರೆ, ಬಾಲಕಿ ಗರ್ವಿ ಮಾತ್ರ ಕಾರಿನಲ್ಲೇ ಇದ್ದಳು. ಇತ್ತ ತಂದೆ ಕಾರನ್ನು ಪಾರ್ಕ್ ಮಾಡಿ, ಮಗು ಗರ್ವಿ ಕೂಡ ಅವಳ ತಾಯಿಯ ಜೊತೆಗಿದ್ದಾಳೆ ಎಂದು ಭಾವಿಸಿ, ಕಾರನ್ನು ಲಾಕ್ ಮಾಡಿ ತೆರಳಿದ್ದರು.

ಮದುವೆ ಸಮಾರಂಭದಲ್ಲಿ ಗಂಡ ಹೆಂಡತಿ ಇಬ್ಬರು ಮೈಮರೆತಿದ್ದರು. ಬ್ಯುಸಿಯಲ್ಲಿ ಯಾರೂ ತಮ್ಮ ಇನ್ನೊಂದು ಮಗುವಿನ ಬಗ್ಗೆ ಆಲೋಚಿಸಲೇ ಇದೆ. ಸುಮಾರು ಎರಡು ಗಂಟೆಗಳ ಬಳಿಕ ಪೋಷಕರಿಗೆ ಮಗು ಇಲ್ಲದ ಬಗ್ಗೆ ತಿಳಿದು ಬಂದಿದೆ. ಈ ವೇಳೆ ಇಡೀ ಮದುವೆ ಸಭಾಂಗಣ ಹುಡುಕಾಡಿದ್ದಾರೆ. ಬಳಿಕ ಕಾರಿನ ಬಳಿ ಬಂದಾಗ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿತ್ತು. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಮಗು ಅಷ್ಟರಲ್ಲೇ ಸಾ*ವನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ. ತಮ್ಮ ಸಂಭ್ರಮದಲ್ಲಿ ಮೈಮರೆತ ತಂದೆ – ತಾಯಿಯಿಂದಾಗಿ ಪುಟ್ಟ ಜೀವವೊಂದು ಬ*ಲಿಯಾಗಿದೆ.

Continue Reading

DAKSHINA KANNADA

ಪುಷ್ಪ 2 ರಿಲೀಸ್ ಡೇಟ್ ಬದಲು…? ಸ್ಪಷ್ಟನೆ ನೀಡಿದ ಚಿತ್ರ ತಂಡ

Published

on

ಮಂಗಳೂರು  : ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನ ಬಹು ನಿರೀಕ್ಷಿತ ಪುಷ್ಪ 2 ಚಿತ್ರ ಯಾವಾಗ ತೆರೆಗೆ ಬರುತ್ತೆ ಅಂತ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ನಡುವೆ ಸಿನೆಮಾ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ. ಆಗಸ್ಟ್‌ 15 ರಂದು ನಿಗದಿಯಾಗಿದ್ದ ಬಿಡುಗಡೆಯ ದಿನವನ್ನು ಬದಲಾಯಿಸಲಾಗಿದೆ. ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದ್ದು ಅಭಿಮಾನಿಗಳು ನಿರಾಶೆಗೊಂಡಿದ್ದಾರೆ.

ಎಡಿಟಿಂಗ್ ಸಮಸ್ಯೆಯಿಂದ ಪುಷ್ಪ 2 ರಿಲೀಸ್ ವಿಳಂಬವಾಗಲಿದೆ ಎಂಬ ಊಹಾಪೋಹಗಳು ಹರಡಿದೆ. ಪತ್ರಿಕೆಯೊಂದು ಈ ಬಗ್ಗೆ ವರದಿ ಮಾಡಿದ್ದು, ಆಂಟೋನಿ ರೂಬೆನ್‌ ಪುಷ್ಪ 2 ತಂಡದಿಂದ ಹೊರಬಂದಿದ್ದಾರೆ ಎಂದು ಹೇಳಿತ್ತು.
ಆಂಟೋನಿ ರೂಬೆನ್‌ ಜಾಗಕ್ಕೆ ನವೀನ್ ನೂಲಿ ಬರಲಿದ್ದು, ಪುಷ್ಪ 2 ಬಿಡುಗಡೆ ವಿಳಂಬವಾಗಲಿದೆ ಎಂದು ಹೇಳಿತ್ತು. ಇದು ಎಲ್ಲೆಡೆ ಸುದ್ದಿಯಾಗಿದ್ದು, ಸಿನೆಮಾ ರಿಲೀಸ್‌ನ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.
ಆದ್ರೆ, ಇದೊಂದು ಸುಳ್ಳು ಸುದ್ದಿಯಾಗಿದ್ದು, ನಿಗದಿತ ದಿನಾಂಕ ಆಗಸ್ಟ್‌ 15 ರಂದೇ ಸಿನೆಮಾ ರಿಲೀಸ್ ಆಗಲಿದೆ ಎಂದು ಸಿನೆಮಾ ತಂಡ ಸ್ಪಷ್ಟನೆ ನೀಡಿದೆ. ಅಲ್ಲೂ ಅರ್ಜುನ್‌ ಅವರ ಭಾಗದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಈ ಜೂನ್ ಅಂತ್ಯಕ್ಕೆ ಚಿತ್ರೀಕರಣ ಪೂರ್ಣಗೊಳ್ಳಲಿದೆ. ಹೀಗಾಗಿ ಎಡಿಟಿಂಗ್ ಕೂಡಾ ನಿರಾಂತಕವಾಗಿ ನಡೆಯಲಿದ್ದು, ಈಗಾಗಲೇ ಟೀಸರ್‌ ಕೂಡಾ ಭಾರೀ ಸದ್ದು ಮಾಡಿದೆ. ರಿಲೀಸ್ ಜೊತೆಗೆ ಬಾಕ್ಸ್‌ ಆಫೀಸಿನಲ್ಲಿ ಚಿಂದಿ ಉಡಾಯಿಸಲಿರುವ ಪುಷ್ಪಾ 2 ನಿಗದಿಯಾದ ದಿನದಂತೆ ಬಿಡುಗಡೆ ಆಗಲಿದೆ ಅಂತ ಸ್ಪಷ್ಟನೆ ನೀಡಿದ್ದಾರೆ.

Continue Reading

DAKSHINA KANNADA

ನಿಮ್ಮ ಆಫೀಸ್ ಡೆಸ್ಕ್ ಮೇಲೆ ಈ ವಸ್ತುಗಳನ್ನು ಇಟ್ಟರೆ ಶುಭ

Published

on

ಮಂಗಳೂರು: ವಾಸ್ತುಶಾಸ್ತ್ರಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಅದನ್ನು ಪಾಲಿಸಿದರೆ ಅದೃಷ್ಟ ನಿಮ್ಮದಾಗುತ್ತದೆ. ಕಚೇರಿಗೆ ಸಂಬಂಧಿಸಿದ ಅನೇಕ ವಿಚಾರಗಳನ್ನು ವಾಸ್ತುವಿನಲ್ಲಿ ಉಲ್ಲೇಖಿಸಲಾಗಿದೆ. ಅದನ್ನು ಅನುಸರಿಸಿ ಕೆಲಸದಲ್ಲಿ ಪ್ರಗತಿ ಹೊಂದಬಹುದು. ಈ ವಾಸ್ತುಗಳನ್ನು ಅನುಸರಿಸಿದರೆ ನಿಮಗೆ ಬಡ್ತಿ ದೊರೆಯುವುದಲ್ಲದೆ, ಸಂಬಳ ಕೂಡ ಹೆಚ್ಚಾಗುತ್ತದೆ.

ಸ್ಫಟಿಕ ಲೋಹ

ವಾಸ್ತು ಪ್ರಕಾರ ನಿಮ್ಮ ಆಫೀಸ್ ಡೆಸ್ಕ್ ಮೇಲೆ ಸ್ಫಟಿಕ ಲೋಹವನ್ನು ಇಟ್ಟರೆ ಅದು ನಿಮ್ಮ ಕೆಲಸವನ್ನು ಸುಲಭಗೊಳಿಸುತ್ತದೆ.

ಬಿದಿರಿನ ಗಿಡ

ವಾಸ್ತು ಪ್ರಕಾರ ಬಿದಿರಿನ ಗಿಡವನ್ನು ನೀವು ಡೆಸ್ಕ್ ಮೇಲೆ ಇಡುವುದು ಬಹಳ ಮಂಗಳಕರ. ಇದು ನಿಮಗೆ ಚೈತನ್ಯ ತುಂಬುತ್ತದೆ.

ಬುದ್ಧನ ಪ್ರತಿಮೆ

ಬುದ್ಧನ ಪ್ರತಿಮೆಯನ್ನು ಡೆಸ್ಕ್ ಮೇಲಿಟ್ಟರೆ ಅದು ನಿಮ್ಮನ್ನು ಶಾಂತಿಯುತವಾಗಿ ಕೆಲಸ ಮಾಡಲು ಪ್ರೇರೇಪಿಸುತ್ತದೆ.

ಹಡಗು ಚಿತ್ರವಿರುವ ನಾಣ್ಯ

ನಿಮಗೆ ಉದ್ಯೋಗದಲ್ಲಿ ಬಡ್ತಿ ಬೇಕಾದರೆ ವಾಸ್ತುಪ್ರಕಾರ ನಿಮ್ಮ ಟೇಬಲ್ ಮೇಲೆ ಹಡಗು ಚಿತ್ರವಿರುವ ನಾಣ್ಯ ಇಟ್ಟುಕೊಳ್ಳಬೇಕು.

ಗಣೇಶ ಮೂರ್ತಿ

ಇವಿಷ್ಟೇ ಅಲ್ಲದೆ ನೀವು ಮೇಜಿನ ಮೇಲೆ ಗಣೇಶ ಮೂರ್ತಿಯನ್ನು ಇಟ್ಟುಕೊಂಡರೆ ನಿಮಗೆ ಎಂದಿಗೂ ಯಾವ ವಿಘ್ನಗಳೂ ಬರುವುದಿಲ್ಲ.

Continue Reading

LATEST NEWS

Trending