Connect with us

    LATEST NEWS

    ಛತ್ತೀಸಗಢದಲ್ಲಿ ನಕ್ಸಲರ ಅಟ್ಟಹಾಸ : ನಾಲ್ವರು ಗ್ರಾಮಸ್ಥರ ಭೀಕರ ಹತ್ಯೆ

    Published

    on

    ಛತ್ತೀಸಗಢದಲ್ಲಿ ನಕ್ಸಲರ ಅಟ್ಟಹಾಸ : ನಾಲ್ವರು ಗ್ರಾಮಸ್ಥರ ಭೀಕರ ಹತ್ಯೆ

    ಛತ್ತೀಸಘಡ : ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು ಎನ್ನುವ ಅನುಮಾನ ಹಿನ್ನೆಲೆಯಲ್ಲಿ ಛತ್ತೀಸ್​ಗಢದಲ್ಲಿ ಮಾವೋವಾದಿಗಳು ನಾಲ್ಕು ಜನರನ್ನು ಹತ್ಯೆ ಮಾಡಿದ್ದಾರೆ.

    ಬಿಜಪುರ್​ ಜಿಲ್ಲೆಯ ದುಮ್ರಿ-ಪಾಲ್ನಾರ್​ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಳೆದ ಎರಡು ದಿನಗಳಲ್ಲಿ ನಾಲ್ಕು ಜನರನ್ನು ಹತ್ಯೆ ಮಾಡಲಾಗಿದೆ.

    ಕಾಡಿಗೆ ರಸ್ತೆ ಸಂಪರ್ಕ ಕಲ್ಪಿಸುವ ವಿಚಾರದಲ್ಲಿ ಕೆಲ ಹಳ್ಳಿಗರು ಬೆಂಬಲ ಸೂಚಿಸಿದ್ದರು. ಅವರನ್ನು ಮಾವೋವಾದಿಗಳು ಕಾಡಿಗೆ ಬರುವಂತೆ ಕರೆದಿದ್ದರು. ಈ ವೇಳೆ ಅವರನ್ನು ಹತ್ಯೆ ಮಾಡಲಾಗಿದೆ.

    ಗ್ರಾಮಸ್ಥರು ಕಾಣೆಯಾಗಿರುವ ಬಗ್ಗೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ವಿಚಾರಿಸಿದಾಗ ಅವರು ಕಾಡಿನತ್ತ ತೆರಳಿರುವ ವಿಚಾರ ಬೆಳಕಿಗೆ ಬಂದಿತ್ತು. ಕಾಡಿನಲ್ಲಿ ಪೊಲೀಸರು ಗಸ್ತು ತಿರುಗಿದ ವೇಳೆ ಹೆಣಗಳು ಸಿಕ್ಕಿವೆ.

    ಅಂದಹಾಗೆ, ಇವರನ್ನು ಒಮ್ಮೆಲೇ ಹತ್ಯೆ ಮಾಡಲಾಗಿದೆಯೋ ಅಥವಾ ಬೇರೆ ಬೇರೆ ಸಮಯದಲ್ಲಿ ಹತ್ಯೆ ಮಾಡಲಾಗಿದೆಯೇ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ.

    ಶುಕ್ರವಾರ ರಾತ್ರಿ ಕೂಡ ಇದೇ ರೀತಿಯ ಘಟನೆ ನಡೆದಿತ್ತು. ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು ಎನ್ನುವ ಆರೋಪದ ಮೇಲೆ ಇಬ್ಬರನ್ನು ಹತ್ಯೆ ಮಾಡಲಾಗಿತ್ತು.

    ಇತ್ತೀಚೆಗೆ ಬಿಜಪುರ್​ ಜಿಲ್ಲೆಯಲ್ಲಿ ನಕ್ಸಲರ ಹಾವಳಿ ಹೆಚ್ಚುತ್ತಿದೆ. ಸಾಕಷ್ಟು ಗ್ರಾಮಸ್ಥರನ್ನು ಇವರು ಹತ್ಯೆ ಮಾಡುತ್ತಿದ್ದು ಗ್ರಾಮಸ್ಥರು ಆತಂಕದಲ್ಲೇ ದಿನ ದೂಡುವ ಪರಿಶ್ತೀತಿ ನಿರ್ಮಾಣವಾಗಿದೆ.

    DAKSHINA KANNADA

    ಪತಿಯ ಹ*ತ್ಯೆ ಪ್ರಕರಣ; ಪತ್ನಿ ಸಹಿತ ಐವರಿಗೆ ಜೀವಾವಧಿ ಸಜೆ

    Published

    on

    ಮಂಗಳೂರು: ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೋರ್ವಳು ತನ್ನ ಪತಿಯನ್ನೇ ಕೊಲೆ ಮಾಡಿಸಿದ ಪ್ರಕರಣದಲ್ಲಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮಹಿಳೆ ಸಹಿತ ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

    ಕಾಸರಗೋಡು: ಪುರುಷ ಹಾಗೂ ಮಹಿಳೆಯ ಮೃ*ತದೇಹ ವಸತಿಗೃಹದಲ್ಲಿ ಪತ್ತೆ

    8 ವರ್ಷಗಳ ಹಿಂದೆ ಅಂದರೆ 2016ರಲ್ಲಿ ಈ ಘಟನೆ ನಡೆದಿತ್ತು. ಕೊಣಾಜೆ ಪೊಲೀಸ್‌ ಠಾಣಾ ವ್ಯಾಪ್ತಿಯ ಪಾವೂರು ನಿವಾಸಿ ಇಸ್ಮಾಯಿಲ್‌ (59) ಕೊಲೆಯಾದವರು. ಅವರ ಪತ್ನಿ ನೆಬಿಸಾ(40), ಆಕೆಯ ಪ್ರಿಯಕರ ಕುತ್ತಾರುಪದವಿನ ಜಮಾಲ್‌ ಅಹಮ್ಮದ್‌ (38), ಉಳ್ಳಾಲದ ಅಬ್ದುಲ್‌ ಮುನಾಫ್ ಯಾನೆ ಮುನ್ನ (41), ಉಳ್ಳಾಲದ ಅಬ್ದುಲ್‌ ರೆಹಮಾನ್‌ (36) ಮತ್ತು ಬೋಳಿಯಾರ್‌ನ ಶಬೀರ್‌ (31) ಶಿಕ್ಷೆಗೊಳಗಾದವರು. ಇಸ್ಮಾಯಿಲ್‌ ಅವರು ನೆಬಿಸಾಳನ್ನು ಎರಡನೇ ವಿವಾಹವಾಗಿದ್ದು ಅವರು ನಾಲ್ವರು ಮಕ್ಕಳನ್ನು ಹೊಂದಿದ್ದರು. ನೆಬಿಸಾ ಮತ್ತು ಜಮಾಲ್‌ನಿಗೆ ಅನೈತಿಕ ಸಂಬಂಧವಿತ್ತು. ಇದು ಇಸ್ಮಾಯಿಲ್‌ಗೆ ಗೊತ್ತಾಗಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಇದೇ ಕಾರಣಕ್ಕೆ ಆಗಾಗ್ಗೆ ಪತಿ -ಪತ್ನಿಯರ ನಡುವೆ ಗಲಾಟೆ ನಡೆಯುತ್ತಿತ್ತು. ಇದೇ ಹಿನ್ನೆಲೆಯಲ್ಲಿ ನೆಬಿಸಾ ಸುಪಾರಿ ನೀಡಿ ಪತಿಯನ್ನು ಕೊಲೆ ಮಾಡಿಸಿದ್ದಳು ಎಂದು ಆರೋಪಿಸಲಾಗಿತ್ತು. ಕೊಣಾಜೆ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶರಾದ ಕಾಂತಜಾರು ಎಸ್‌.ವಿ. ಅವರು ಆರೋಪಿಗಳ ಅಪರಾಧ ಸಾಬೀತಾಗಿರುವುದರಿಂದ ಆರೋಪಿಗಳಿಗೆ ಜೀವಾವಧಿ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಕೊಲೆಯಾದ ಇಸ್ಮಾಯಿಲ್‌ ಅವರ ಮಕ್ಕಳಿಗೆ ಪರಿಹಾರ ನೀಡಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶ ಮಾಡಿದ್ದಾರೆ.

     

     

    Continue Reading

    LATEST NEWS

    ಉಡುಪಿ: ಬೈಕ್‌ನ ಹೆಡ್‌ಲ್ಯಾಂಪ್ ನಲ್ಲಿ ಹೆಬ್ಬಾವು ಪತ್ತೆ

    Published

    on

    ಉಡುಪಿಯ ರಾಹುಲ್ ಎಂಬವರ ಬೈಕ್‌ನ ಹೆಡ್‌ಲ್ಯಾಂಪ್ ನಲ್ಲಿ ಹೆಬ್ಬಾವು ಸೇರಿಕೊಂಡಿದ್ದು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.

    ಜುಲೈ 2 ರಂದು ರಾಹುಲ್ ಕಿನ್ನಿಮುಲ್ಕಿ ಪೆಟ್ರೋಲ್ ಬಂಕ್ ಬಳಿ ಬೈಕ್ ನಿಲ್ಲಿಸಿ ಕೆಲಸಕ್ಕೆ ಹೋಗಿದ್ದರು. ರಾತ್ರಿ ಸುಮಾರ್ 8:30ಕ್ಕೆ ಕೆಲಸ ಮುಗಿಸಿ ವಾಪಸ್ಸಾದರು. ಹೊರಡಲು ತಯಾರಿ ನಡೆಸುತ್ತಿದ್ದಾಗ ಬೈಕ್‌ನಲ್ಲಿ ಹಾವು ಕಾಣಿಸಿಕೊಂಡಿದೆ. ಅಪಾಯದ ಅರಿವಾಗಿ ಕೂಡಲೇ ಬೈಕ್ ನಿಲ್ಲಿಸಿ ಅರಣ್ಯಾಧಿಕಾರಿಗಳ ಸಹಾಯ ಕೋರಿದ್ದಾರೆ. ಕರೆ ಸ್ವೀಕರಿಸಿದ ಪ್ರಾಣೇಶ್ ಪರ್ಕಳ ಅವರು ಸ್ಥಳಕ್ಕೆ ಧಾವಿಸಿ, ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ.

    ಸಂಪೂರ್ಣ ಪರೀಕ್ಷೆಯ ನಂತರ ಹಾವು ಯಾವುದೇ ಅಪಾಯವನ್ನು ಹೊಂದಿಲ್ಲ ಎಂದು ದೃಢಪಡಿಸಲಾಯಿತು ಮತ್ತು ಸುರಕ್ಷಿತವಾಗಿ ಹಿಡಿದು ರಕ್ಷಿಸಲಾಯಿತು.

    Continue Reading

    LATEST NEWS

    ಆಕಾಶದಲ್ಲಿ ಅಲುಗಾಡಿದ ವಿಮಾನ..! ಹಲವು ಪ್ರಯಾಣಿಕರಿಗೆ ಗಾಯ

    Published

    on

    ಉರುಗ್ವೇ ಕಡೆಗೆ ತೆರಳಿದ್ದ ಏರ್ ಯುರೋಪಾ ವಿಮಾನವು ವಾಯು ಪ್ರಕ್ಷುಬ್ಧತೆಗೆ ಸಿಲುಕಿದ ಘಟನೆ ನಡೆದಿದೆ. ಘಟನೆಯಿಂದ ಹಲವರಿಗೆ ಗಾಯಗಳುಂಟಾಗಿದ್ದು, ಓರ್ವ ಪ್ರಯಾಣಿಕ ಲಗೇಜ್ ಕಂಪಾರ್ಟ್‌ಮೆಂಟ್‌ನಲ್ಲಿ ಸಿಲುಕಿಹಾಕಿಕೊಂಡಿದ್ದಾನೆ.

    ವಿಮಾನ ಹಾರಾಟದಲ್ಲಿ ಹವಾಮಾನ ವ್ಯತ್ಯಯ ಕಂಡು ಬಂದಾಗ ವಿಮಾನದಲ್ಲಿ ಭಾರೀ ಪ್ರಕ್ಷಿಬ್ಧತೆ ಕಂಡುಬರುತ್ತದೆ. ಈ ಸಂದರ್ಭದಲ್ಲಿ ವಿಮಾನವು ಅಲುಗಾಡಲು ಆರಂಭವಾಗಿ ಅಲ್ಲೋಲ ಕಲ್ಲೋಲವಾಗಿ ಈ ವೇಳೆ ಸಾವು ನೋವುಗಳು ಸಂಭವಿಸುವ ಸಾಧ್ಯತೆ ಕೂಡಾ ಹೆಚ್ಚಿರುತ್ತದೆ. ಇದೀಗ ಇಂತಹದ್ದೇ ಘಟನೆ ಏರ್ ಯುರೋಪಾ ವಿಮಾನದಲ್ಲಿ ನಡೆದಿದ್ದು ಅದೃಷ್ಟವಷಾತ್  ಭಾರೀ ಅನಾಹುತ ತಪ್ಪಿದಂತಾಗಿದೆ.

    ಅಯೋಧ್ಯೆ ರಾಮ ಮಂದಿರದ ಅರ್ಚಕರಿಗೆ ಹೊಸ ಡ್ರೆಸ್​ ಕೋಡ್​, ಮೊಬೈಲ್​ ಬಳಕೆ ನಿಷೇಧ

    ಸ್ಪೇನ್‌ ದೇಶದ ಮ್ಯಾಡ್ರಿಡ್‌ನಿಂದ ಉರುಗ್ವೆಯ ರಾಜಧಾನಿ ಮಾಂಟೆವಿಡಿಯೊಗೆ ತೆರಳುತ್ತಿದ್ದ ಏರ್‌ ಯುರೋಪಾ ಬೋಯಿಂಗ್‌ 787-9 ಡ್ರೀಮ್‌ ಲೈನರ್‌ ವಿಮಾನವು ವಾಯು ಪ್ರಕ್ಷುಬ್ಧತೆಗೆ ತುತ್ತಾಗಿದ್ದು, ವಿಮಾನ ತೀವ್ರವಾಗಿ ಅಲುಗಾಡಿದರ ಪರಿಣಾಮ ಸೀಟ್‌ ಮೇಲೆ ಕುಳಿತಿದ್ದ ಪ್ರಯಾಣಿಕರೊಬ್ಬರು ಸೀದಾ ಹೋಗಿ ಲಗೇಜ್‌ ಕಂಪಾರ್ಟ್‌ಮೆಂಟ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಅವರನ್ನು ಇನ್ನೋರ್ವ ಪ್ರಯಾಣಿಕ ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಅಲ್ಲದೆ 30 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ. ಬಳಿಕ ವಿಮಾನವನ್ನು ಸುರಕ್ಷಿತವಾಗಿ ಬ್ರೆಜಿಲ್‌ನಲ್ಲಿ ತುರ್ತು ಭೂಸ್ಪರ್ಷ ಮಾಡಲಾಗಿದೆ.

    ಈ ಘಟನೆಯ ವೀಡಿಯೋವನ್ನು ವಿಮಾನ ಪ್ರಯಾಣಿಕೆಯೊಬ್ಬರು ಚಿತ್ರೀಕರಿಸಿದ್ದು ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಲಗೇಂಜ್‌ ಕಂಪಾರ್ಟ್‌ಮೆಂಟ್‌ ನಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯನ್ನು ಕೆಳಗಿಳಿಸುವುದನ್ನು ಕಾಣಬಹುದು.

    Continue Reading

    LATEST NEWS

    Trending