Wednesday, October 5, 2022

ಸೋಶಿಯಲ್ ಫೋರಮ್ ಒಮಾನ್ ನಿಂದ ಬೃಹತ್ ರಕ್ತದಾನ ಶಿಬಿರ

ಸೋಶಿಯಲ್ ಫೋರಮ್ ಒಮಾನ್ ನಿಂದ ಬೃಹತ್ ರಕ್ತದಾನ ಶಿಬಿರ..

ಮಸ್ಕತ್ : ಸೋಶಿಯಲ್ ಫೋರಮ್ ಒಮಾನ್ ಇದರ ವತಿಯಿಂದ ಒಮಾನ್ ನ ವಿವಿಧ ನಗರಗಳಲ್ಲಿ ಬೃಹತ್ ರಕ್ತದಾನ ಶಿಬಿರ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಸೆಪ್ಟೆಂಬರ್ 4ರಂದು ಮಸ್ಕತ್ ನಲ್ಲಿ ಎರಡನೇ ಹಂತದ ಬೃಹತ್ ರಕ್ತದಾನ ಶಿಬಿರವನ್ನು ನಡೆಸಲಾಯಿತು.

ಮಸ್ಕತ್ ನ ‘ರೂವಿ’ ‘ಅಲ್ ಮಾಸ ಹಾಲ್’ ನಲ್ಲಿ ಆಯೋಜಿಸಲಾದ ಬೃಹತ್ ರಕ್ತದಾನ ಶಿಬಿರವನ್ನು ಶಿಬಿರದ ಉಸ್ತುವಾರಿ ಅನಸ್ ಅಹ್ಮದ್ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಒಮಾನ್ ಕೇಂದ್ರ ಆರೋಗ್ಯ ಇಲಾಖೆಯ ಆರೋಗ್ಯಾಧಿಕಾರಿ ಜಮಾಲ್ ಮುಹಮ್ಮದ್ ರಕ್ತದಾನದ ಮಹತ್ವದದ ಬಗ್ಗೆ ಮಾಹಿತಿ ನೀಡಿದರು.

ಸುಮಾರು 200ಕ್ಕೂ ಅಧಿಕ ಅನಿವಾಸಿ ಭಾರತೀಯರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು.

ಕೋವಿಡ್ ನ ಸಂದಿಗ್ಧತೆಯಲ್ಲಿ ಒಮಾನ್ ಆರೋಗ್ಯ ಸಂಸ್ಥೆಯ ರಕ್ತನಿಧಿ ಕೇಂದ್ರದಲ್ಲಿನ ರಕ್ತದ ಅಭಾವವನ್ನು ಮನಗಂಡು ಸೋಶಿಯಲ್ ಫೋರಮ್ ಒಮಾನ್ ಮತ್ತು ಒಮಾನ್ ಕೇಂದ್ರ ಆರೋಗ್ಯ ಇಲಾಖೆ ವತಿಯಿಂದ “ರಕ್ತದಾನ ಮಾಡಿ ಜೀವ ಉಳಿಸಿ” ಎಂಬ ಶೀರ್ಷಿಕೆಯಡಿ ರಕ್ತದಾನ ಶಿಬಿರ ಅಭಿಯಾನವನ್ನು ಆಯೋಜಿಸಲಾಗಿತ್ತು. ಇದೇ ವೇಳೆ ಸಲಾಲ ನಗರದಲ್ಲಿಯೂ ರಕ್ತದಾನ ಶಿಬಿರ ನಡೆದಿದ್ದು, 100 ರಷ್ಟು ಅನಿವಾಸಿ ಭಾರತೀಯರು ರಕ್ತದಾನ ಮಾಡಿದರು.

 

LEAVE A REPLY

Please enter your comment!
Please enter your name here

Hot Topics

‘ಮಂಗಳೂರು ದಸರಾ’ ವೈಭವದ ಶೋಭಾಯಾತ್ರೆಗೆ ಕ್ಷಣಗಣನೆ ಆರಂಭ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶರನ್ನವರಾತ್ರಿ ಅಂಗವಾಗಿ ಕಳೆದ 9 ದಿನಗಳಿಂದ ಪೂಜಿಸಲ್ಪಟ್ಟ ಶಾರದೆ ಹಾಗೂ ನವ ದುರ್ಗೆಯರ ವೈಭವದ ಶೋಭಾ ಯಾತ್ರೆ ಇಂದು ಸಂಜೆ ನಡೆಯಲಿದೆ.ಸಂಜೆ 4 ಗಂಟೆಗೆ ಶಾರದಾ...

‘ಆದಿಪುರುಷ’ ನಿಗೆ ಆರಂಭದಲ್ಲೇ ಕಂಟಕ : ರಾಮಾಯಣಕ್ಕೆ ಅವಮಾನ ಮಾಡಿದಕ್ಕೆ ಬಾಹುಬಲಿ ನಟ ಪ್ರಭಾಸ್ ಅಂಡ್ ಟೀಮ್ ವಿರುದ್ದ ಗೃಹ ಸಚಿವರು ಗರಂ..!

ಹೈದ್ರಾಬಾದ್ :  ಬಾಹುಬಲಿ ಫೇಮ್‌ ನ ಪ್ರಭಾಸ್ ನಟಿಸಿರುವ ‘ಆದಿಪುರುಷ್’ ಸಿನಿಮಾದಲ್ಲಿ ರಾಮಾಯಣಕ್ಕೆ ಅಪಮಾನ ಮಾಡಿದ್ದಾರೆಂದು ಹಿಂದೂ ಪರ ಸಂಘಟನೆಗಳು ಆರೋಪಿಸಿದ್ದು ಸಿನಿಮಾವನ್ನು ಬಹಿಷ್ಕರಿಸಲು ಕರೆ ನೀಡಿವೆ .ರಾಮಾಯಣದ ಪಾತ್ರಗಳನ್ನು ತಿರುಚಿ ತಮಗಿಷ್ಟ...

ಅರಬ್‌ ನಾಡಲ್ಲಿ ನೂತನ ಹಿಂದೂ ದೇವಾಲಯ: ಉದ್ಘಾಟಿಸಿದ UAE ಸಚಿವ ಶೇಖ್ ನಹ್ಯಾನ್

ದುಬೈ(ಯುಎಇ): ಅರಬ್‌ ನಾಡಲ್ಲಿ ಮೊಟ್ಟ ಮೊದಲ ಸ್ವತಂತ್ರ ಹಿಂದೂ ದೇವಾಲಯ ನಿರ್ಮಾಣಗೊಂಡಿದ್ದು, ನಿನ್ನೆ ಉದ್ಘಾಟನೆಗೊಂಡಿದೆ.ಯುಎಇಯ ಜೆಬೆಲ್‌ ಆಲಿಯಲ್ಲಿರುವ ಆರಾಧನಾ ಗ್ರಾಮದಲ್ಲಿ ಈ ದೇವಾಲಯ ನಿರ್ಮಾಣವಾಗಿದೆ. ಈ ಮೂಲಕ ಭಾರತೀಯರ ದಶಕದ ಕನಸು ಈಡೇರಿದೆ.ಯುಎಇಯ...