Connect with us

    LATEST NEWS

    ವಾಹನಗಳ ನಡುವೆ ಭೀಕರ ಅ*ಪಘಾತ: ಇಬ್ಬರು ಸ್ಥಳದಲ್ಲೇ ಮೃ*ತ್ಯು, ಓರ್ವನಿಗೆ ಗಾಯ

    Published

    on

    ಮಂಗಳೂರು/ತಾವರಗೇರಾ: ದ್ವಿಚಕ್ರ ವಾಹನಕ್ಕೆ ಕೆಎಸ್ಆರ್ ಟಿಸಿ ಬಸ್ ಡಿ*ಕ್ಕಿ ಹೊಡೆದ ಘಟನೆ ಬುಧವಾರ(ಅ.23) ದಂದು ತಾವರಗೇರಾ ಸಮೀಪದ ಗರ್ಜಿನಾಳ ಕ್ರಾಸ್ ಬಳಿ ನಡೆದಿದೆ.

    ಅಪಘಾತದ ಹಿನ್ನಲೆ ಇಬ್ಬರು ಮೃ*ತಪಟ್ಟು ಇನ್ನೋರ್ವ ಗಂ*ಭೀರ ಗಾಯಗೊಂಡಿದ್ದಾನೆ.

    ಮೃ*ತರನ್ನು ಗರ್ಜಿನಾಳಗ್ರಾಮದ ಹನುಮನ ಗೌಡ ಸೋಮನಗೌಡ ಗೌರಿಪುರ (30) ಹಾಗೂ ಬಸವರಾಜ್ ರಾಮಣ್ಣ ಅಂತರಗಂಗಿ (20) ಎಂದು ಗುರುತಿಸಲಾಗಿದೆ.

    ಗಾ*ಯಗೊಂಡ ವ್ಯಕ್ತಿ ಮುದುಕಪ್ಪ ಬನ್ನಿಕಟ್ಟಿ ಎಂದು ತಿಳಿದು ಬಂದಿದೆ.

    ಘಟನೆ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನಾ ಸ್ಥಳಕ್ಕೆ ಗಂಗಾವತಿ ಡಿವೈಎಸ್ಪಿ ಹಾಗೂ ಕುಷ್ಟಗಿ ಸಿಪಿಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    DAKSHINA KANNADA

    ಸುರತ್ಕಲ್ : ಸಮುದ್ರಪಾಲಾಗಿದ್ದ ಯುವಕನ ಶ*ವ ಪತ್ತೆ

    Published

    on

    ಸುರತ್ಕಲ್ : ಅಲೆಗಳ ಹೊಡೆತಕ್ಕೆ ಸಮುದ್ರಪಾಲಾಗಿದ್ದ ಯುವಕನ ಶವ ಸಸಿಹಿತ್ಲು ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ. ಬಂಟ್ವಾಳ ತಾಲೂಕಿನ ಬಿಸಿ ರೋಡ್ ನಿವಾಸಿ, 21 ವರ್ಷದ ಪ್ರಜ್ವಲ್ ಮೃ*ತ ಯುವಕ.

    ನಿನ್ನೆ ಸುರತ್ಕಲ್‌ ಸಮೀಪದ ಮುಕ್ಕ ರೆಡ್‌ ರಾಕ್‌ ಬಳಿಯ ಕಡಲ ಕಿನಾರೆಗೆ 8 ಜನ ಸ್ನೇಹಿತರು ವಿಹಾರಕ್ಕೆ ಬಂದಿದ್ದರು. ಸಮುದ್ರ ಕಿನಾರೆಯಲ್ಲಿ ಅಲೆಗಳ ಜೊತೆ ಆಟವಾಡುತ್ತಿದ್ದ ವೇಳೆ ಜೋರಾಗಿ ಅಪ್ಪಳಿಸಿದ ಅಲೆಯಲ್ಲಿ ಪ್ರಜ್ವಲ್ ಕೊಚ್ಚಿಕೊಂಡು ಹೋಗಿದ್ದ. ಅಲೆಗಳ ಹೊಡೆತದಿಂದ ತಪ್ಪಿಸಿಕೊಂಡ ಇತರ ಯುವಕರು ತಮ್ಮ ಜೀ*ವ ಉಳಿಸಿಕೊಂಡಿದ್ದರು.

    ಇದನ್ನೂ ಓದಿ : ಬಿಗ್ ಬಾಸ್ ಮನೆಯ ರಾಜಕೀಯ ವಿಚಾರಿಸಲು ನ್ಯೂಸ್ ಆ್ಯಂಕರ್ ರಾಧಾ ಹಿರೇಗೌಡರ್ ಎಂಟ್ರಿ

    ಈ ಬಗ್ಗೆ ಯುವಕನ ಸಂಬಂಧಿಕರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನಾಪತ್ತೆಯಾದ ಯುವಕನಿಗಾಗಿ ಶೋಧಕಾರ್ಯ ನಡೆಸಲಾಗಿತ್ತು. ಇಂದು ಯುವಕನ ಶ*ವ ಪತ್ತೆಯಾಗಿದೆ.

    Continue Reading

    LATEST NEWS

    ಮತ್ತೆ 85 ವಿಮಾನಗಳಿಗೆ ಬಾಂಬ್ ಬೆದರಿಕೆ

    Published

    on

    ನವದೆಹಲಿ: ಕಳೆದ ಕೆಲ ದಿನಗಳಿಂದ ಹಲವು ವಿಮಾನಗಳಿಗೆ ಬಾಂಬ್ ಬೆದರಿಕೆಯನ್ನು ಇಮೇಲ್, ಎಕ್ಸ್ ಮೂಲಕ ಹಾಕಲಾಗಿತ್ತು. ಇಂದು ಮತ್ತೆ ಸರಣಿ ಮುಂದುವರೆದಿದ್ದು ಹೊಸದಾಗಿ 85 ವಿಮಾನಗಳಿಗೆ ಬಾಂಬ್ ಬೆದರಿಕೆಯನ್ನು ಹಾಕಲಾಗಿದೆ.

    ಇಂದು ಇಂಡಿಗೊ, ಏರ್ ಇಂಡಿಯಾ, ವಿಸ್ತಾರಾ ಮತ್ತು ಅಕಾಸಾ ಏರ್ ಸೇರಿದಂತೆ 85 ವಿಮಾನಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಹೀಗಾಗಿ ಕೆಲ ವಿಮಾನಗಳ ಸಂಚಾರದಲ್ಲೂ ವ್ಯತ್ಯಯ ಉಂಟಾಗಿದೆ. ಬಾಂಬ್ ಬೆದರಿಕೆಯಿಂದಾಗಿ ವಿಮಾನಗಳನ್ನು ಬಾಂಬ್ ನಿಷ್ಕ್ರೀಯ ದಳದವರು ತಪಾಸಣೆಗೆ ಒಳಪಡಿಸುತ್ತಿದ್ದಾರೆ.

    Continue Reading

    LATEST NEWS

    ಹೆಣ್ಣು ಹೆತ್ತಿದಕ್ಕೆ ಅವಮಾನ; 3 ಹೆಣ್ಣು ಮಕ್ಕಳ ತ*ಬ್ಬಲಿಯಾಗಿಸಿ ಹೊರಟ ತಾಯಿ

    Published

    on

    ಮಂಗಳೂರು/ಕೊಪ್ಪಳ: ಮೂರು ಹೆಣ್ಣು ಹೆತ್ತಳು ಎನ್ನುವ ಕಾರಣಕ್ಕೆ ಪತಿ ಸೇರಿದಂತೆ ಪತಿಯ ಕುಟುಂಬಸ್ಥರು ನಿಂದಿಸಿದರು ಎನ್ನುವ ಕಾರಣಕ್ಕೆ ಮನನೊಂದು ಹನುಮವ್ವ ಆ*ತ್ಮಹತ್ಯೆ ಮಾಡಿಕೊಂಡು ಇ*ಹಲೋಕ ತ್ಯಜಿಸಿದ್ದಾರೆ.
    ತಾಯಿ ಎದೆಗವಚಿಕೊಂಡು ಹಾಲು ಉಣ್ಣಬೇಕಾದ ನಾಲ್ಕು ತಿಂಗಳು ಹೆಣ್ಣು ಕೂಸು ಈಗ ಅ*ನಾಥ. ಅಷ್ಟೇ ಅಲ್ಲ, ನಾಲ್ಕು, ಮೂರು ವರ್ಷದ ಇನ್ನೆರಡು ಹೆಣ್ಣು ಮಕ್ಕಳೂ ಸಹ ಅ*ನಾಥವಾಗಿವೆ.

    ಮುಖ್ಯ ಯುವತಿಯ ಪತಿ ಗಣೇಶ ಮಾಡಿದ ತಪ್ಪಿಗೆ ಜೈಲು ಸೇರಿದ್ದಾನೆ.

    ಈಗ ಮಕ್ಕಳು ತಂದೆ, ತಾಯಿ ಇಲ್ಲದೆ ಅ*ನಾಥವಾಗಿವೆ. ಇತರ ಐವರು ಆರೋಪಿಗಳು ನಾಪತ್ತೆಯಾಗಿದ್ದರು. ಬಳಿಕ ತೀವ್ರವಾದ ಕಾರ್ಯಾಚರಣೆಯ ವೇಳೆ ಒಬ್ಬೊಬ್ಬರೆ ಪತ್ತೆಯಾಗುತ್ತಿದ್ದಾರೆ.

    ಕೊ*ಲೆಯಾಗಿರುವ ಶಂಕೆ :

    ಮಗಳು ಆ*ತ್ಮಹತ್ಯೆ ಮಾಡಿಕೊಂಡಿರಲು ಸಾಧ್ಯವೇ ಇಲ್ಲ ಎಂದು ತಂದೆ ತಾಯಿ ಪೊಲೀಸರ ಹೇಳಿದ್ದು, ಕೊ*ಲೆಯಾಗಿರಬಹುದು ಏಂದು ಶಂಕಿಸಲಾಗಿದೆ. ಹೆಣ್ಣು ಮಕ್ಕಳನ್ನೇ ಹೆತ್ತಿರುವ ಕಾರಣಕ್ಕೆ ಗಂಡನ ಮನೆಯವರು ಹಿಂಸೆ ನೀಡುತ್ತಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.

    ಆ ಮೂವರು ಮಕ್ಕಳು ಗಣೇಶನ ಸಹೋದರನ ಮನೆಯಲ್ಲಿದ್ದಾರೆ ಎಂದು ಕೊಪ್ಪಳ ಗ್ರಾಮೀಣ ಠಾಣೆ ಸಿಪಿಐ ಡಿ. ಸುರೇಶ ತಿಳಿಸಿದ್ದಾರೆ.

    ಸಮಗ್ರ ತನಿಖೆಯಾಗಬೇಕು. ಆಕೆಯನ್ನು ಕೊಂದವರಿಗೆ ಶಿಕ್ಷೆಯಾಗಬೇಕು. ಹೆಣ್ಣು ಹೆರುವುದೇ ತಪ್ಪಾ, ಇಂಥವರಿಗೆ ದೇವರು ಶಿಕ್ಷೆ ನೀಡಲಿ ಎಂದು ಮೃತಳ ತಂದೆ ಬಸಪ್ಪ ಕೋರಿ ಹೇಳಿದ್ದಾರೆ. ಸದ್ಯ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Continue Reading

    LATEST NEWS

    Trending