DAKSHINA KANNADA
ಸೆಖೆಯಲ್ಲಿ ನೆನಪಾಗುತ್ತಿದೆ “ಮಂಗಳೂರು ಹಂಚು”…
ಇವತ್ತಿನ ದಿನಗಳಲ್ಲಿ ಹಂಚಿನ ಮನೆ ನೋಡಲು ಸಿಗುವುದೇ ಕಷ್ಟವಾಗಿದೆ. ಎಲ್ಲಾ ಕಾಂಕ್ರೀಟ್ ಆಗ್ತಾ ಬಂತು. ಬೇಸಿಗೆಯ ಬಿಸಿ ಹಂಚಿನ ಮನೆಯೊಳಗೆ ಇದ್ದಾಗ ಗೊತ್ತಾಗುತ್ತಿರಲಿಲ್ಲ. ಆದರೆ ಈಗ ಹಂಚಿನ ಮನೆಯ ಬೇಡಿಕೆ ಕಡಿಮೆ ಆಗಿದೆ. ಕಾರ್ಖಾನೆಗಳು ಬಂದ್ ಆಗ್ತಾ ಬಂತು. ಈಗ ಹಂಚು ತಯಾರು ಮಾಡುವ ಕಾರ್ಖಾನೆಗಳೇ ಕಮ್ಮಿಯಾಗಿದೆ. ಒಂದು ವೇಳೆ ಕಾರ್ಖಾನೆಗಳು ಇದ್ದರೂ ಅಲ್ಲಿ ಮಣ್ಣಿನಿಂದ ತಯಾರು ಮಾಡುವ ಬೇರೆ ಬೇರೆ ರೀತಿಯ ಸೊತ್ತುಗಳನ್ನು ತಯಾರು ಮಾಡ್ತಾರೆ.
ನಮ್ಮ ಮಂಗಳೂರಿನಲ್ಲಿ ಆಗುತ್ತಿದ್ದಂತಹ ಹಂಚು “ಮಂಗಳೂರು ಹಂಚು” ದೇಶ ವಿದೇಶದಲ್ಲೇ ಭಾರೀ ಹೆಸರು ಮಾಡಿದೆ. ಮಂಗಳೂರಿನಲ್ಲಿ ಹಂಚಿನ ಕಾರ್ಖಾನೆ ಯಾವಾಗ ಪ್ರಾರಂಭವಾಯಿತು.. ಅದರ ಇತಿಹಾಸವೇನು ತಿಳಿದುಕೊಳ್ಳೋಣ ಬನ್ನಿ.
ಹಂಚಿನ ಕಾರ್ಖಾನೆಯ ಇತಿಹಾಸ:
1865 ರಲ್ಲಿ ಮೊದಲ ಹಂಚಿನ ಕಾರ್ಖಾನೆ ಜರ್ಮನ್ ಬಾಜೀಲ್ ಮಿಷಿನರಿಸ್ ನಮ್ಮ ಮಂಗಳೂರಿನ ಜಪ್ಪಿನಲ್ಲಿ ಶುರು ಮಾಡ್ತಾರೆ. ಈಗಲೂ ನಾವು ಕಾಮನ್ ವೆಲ್ತ್ ಲಿಮಿಟೆಡ್ ಎನ್ನುವ ಹೆಸರಿನಲ್ಲಿ ನೋಡಬಹುದು. 1868ರಲ್ಲಿ ಅಲ್ಬುಕರ್ಕ್ ಆಂಡ್ ಸನ್ಸ್ ಹಂಚಿನ ಕಾರ್ಖಾನೆ ಪ್ರಾರಂಭವಾಗುತ್ತದೆ. ತದನಂತರ ಹೆನ್ರಿ, ಮೊರ್ಗನ್, ರೇಗೋ ಅಂಡ್ ಸನ್ಸ್, ಕಾಸಿಯ, ಸುಜಿರ್ಕಾರ್ ಹಂಚಿನ ಕಾರ್ಖಾನೆ ಇಂತಹ ಅದೆಷ್ಟೋ ಹಂಚಿನ ಕಾರ್ಖಾನೆಗಳು ಇಲ್ಲಿ ಬೆಳೆಯುತ್ತಾ ಬಂದಿದೆ.
1875-1860 ತನಕ ಹಂಚಿನ ಕಾರ್ಖಾನೆಯ ಸ್ವರ್ಣ ಯುಗ ಎಂದು ಹೇಳಬಹುದು. ಮಂಗಳೂರು, ಜೆಪ್ಪು, ಬೋಳಾರ, ಬೋಳೂರ್, ಕುತ್ತಾರ್, ಉಳ್ಳಾಲ, ಗುರುಪುರ, ಕುದ್ರೋಳಿ, ಬೊಕ್ಕಪಣ್ನ, ಎಡಪದವು, ಗಂಜಿಮಠ, ಕುಂದಾಪುರ ಹೀಗೆ ಸುಮಾರು 40 ರಿಂದ ಹೆಚ್ಚಿನ ಹಂಚಿನ ಕಾರ್ಖಾನೆಗಳು ಇದ್ದವು. ಪ್ರತಿದಿನವೂ 1 ಲಕ್ಷಗಿಂತಲೂ ಹೆಚ್ಚಿನ ಹಂಚು ತಯಾರ್ ಆಗುತ್ತಿತ್ತು. ಅಷ್ಟೇ ಅಲ್ಲದೇ ಅದೆಷ್ಟೋ ಕುಟುಂಬಗಳು ಹಂಚಿನ ಕಾರ್ಖಾನೆಯಲ್ಲಿ ದುಡಿಯುತ್ತಿದ್ದವು. ಅದರಲ್ಲೂ ಮನೆಯ ಮಹಿಳೆಯರು ಭಾರೀ ಸಂಖ್ಯೆಯಲ್ಲಿ ಇದರ ಕೆಲಸಕ್ಕೆ ಹೋಗುತ್ತಿದ್ದರು.
ಆ ಕಾಲದಲ್ಲಿ ಮಹಿಳೆಯರಿಗೆ 25 ಪೈಸೆ, ಪುರುಷರಿಗೆ 35 ಪೈಸೆ ಸಂಬಳ ಕೊಡುತ್ತಿದ್ದರು. ಆಗ 1 ಸಾವಿರ ಹಂಚಿಗೆ 18 ರೂಪಾಯಿ ಇತ್ತಂತೆ. ನಮ್ಮ ಮಂಗಳೂರಿನಲ್ಲಿ ಆಗುತ್ತಿದ್ದಂತಹ ಹಂಚಿಗೆ ವಿದೇಶದಲ್ಲಿ ಭಾರೀ ಬೇಡಿಕೆ ಇತ್ತು. ಯುರೋಪ್ ದೇಶಗಳಿಗೂ ರಫ್ತ್ ಆಗುತ್ತಿತ್ತಂತೆ. ಇಲ್ಲಿ ತಯಾರ್ ಆಗುತ್ತಿದ್ದ ಒಳ್ಳೆಯ ಹಂಚಿಗೆ ಕಾರಣ ನದಿಯ ದಡದಲ್ಲಿ ಸಿಗುತ್ತಿದ್ದ ಗುಣಮಟ್ಟದ ಮಣ್ಣು.
ಈಗ ಮಂಗಳೂರಿನಲ್ಲಿ ಇರುವ ಹಳೆಯ ಕಟ್ಟಡಗಳಲ್ಲಿ ನಮ್ಮ “ಮಂಗಳೂರು ಹಂಚು” ನೋಡಲು ಸಿಗುತ್ತದೆ. ಸುಮಾರು 158 ವರ್ಷ ಇತಿಹಾಸ ಇರುವ ನಮ್ಮ ಹಂಚಿನ ಕಾರ್ಖಾನೆಗಳು ನಮ್ಮ ಕರಾವಳಿಯ ಹೆಮ್ಮೆ.
DAKSHINA KANNADA
ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಸಾವು..!
ಬಂಟ್ವಾಳ : ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತಪಟ್ಟ ಘಟನೆ ಬಂಟ್ವಾಳದ ನಾವೂರು ಎಂಬಲ್ಲಿ ಭಾನುವಾರ(ಎ.5) ಸಂಜೆ ನಡೆದಿದೆ. ಉಳ್ಳಾಲ ನಿವಾಸಿಗಳಾದ ಅನ್ಸಾರ್ ಅವರ ಪುತ್ರಿ ಅಶ್ರಾ (11) ಮತ್ತು ಇಲಿಯಾಸ್ ಅವರ ಪುತ್ರಿ ಮರಿಯಮ್ ನಾಶೀಯಾ (14 )ಮೃತಪಟ್ಟ ಬಾಲಕಿಯರು.
ಮುಂದೆ ಓದಿ..; ಬರ್ಬರ ಹತ್ಯೆಯಾದ ಬ್ಯೂಟಿ ಕ್ವೀನ್.!! ಮುಳುವಾಯಿತಾ ಇನ್ಸ್ಟಾಗ್ರಾಮ್ ಪೋಸ್ಟ್..! ಸಿಸಿಟಿವಿಯಲ್ಲಿ ಸೆರೆಯಾದ ಭಯಾನಕ ದೃಶ್ಯ
ಮೂಲತಃ ನಾವೂರ ನಿವಾಸಿಯಾದ ಇಲಿಯಾಸ್ ಅವರು ಇತ್ತೀಚಿಗೆ ಉಳ್ಳಾಲದಲ್ಲಿ ಮನೆ ಕಟ್ಟಿಸಿದ್ದರು. ನಿನ್ನೆ ನಾವೂರು ಮೈಂದಾಳದಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಸಂಜೆ ವೇಳೆ ಮನೆಯವರ ಜತೆಗೆ ನಾವೂರಿನ ನೀರಕಟ್ಟೆ ಎಂಬಲ್ಲಿ ನೇತ್ರಾವತಿ ನದಿಗೆ ತೆರಳಿದ್ದರು. ಈ ವೇಳೆ ಮನೆ ಮಂದಿ ಇರುವಾಗಲೇ ಮಕ್ಕಳು ನೀರಿನಲ್ಲಿ ಆಟ ಆಡುತ್ತಾ ಇದ್ದರು. ಈ ಸಂದರ್ಭದಲ್ಲಿ ಇಬ್ಬರು ಮಕ್ಕಳು ಏಕಾ ಏಕಿ ನೀರಿನಲ್ಲಿ ಮುಳುಗಿದ್ದಾರೆ. ನೀರಿನಲ್ಲಿ ಮುಳುಗುವುದನ್ನು ಕಣ್ಣಾರೆ ಕಂಡರೂ ಈಜು ಬಾರದ ಕಾರಣ ಮಕ್ಕಳನ್ನು ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
DAKSHINA KANNADA
‘ಅಡ್ಡಣ ಪೆಟ್ಟು’ ದೈವಾರಾಧನೆಯ ವಿಶೇಷ ಆಚರಣೆ…! ಇದು ಸೌಹಾರ್ದತೆ ಬಯಸೋ ದೈವ..!
ಮಂಗಳೂರು : ತುಳುನಾಡಿನ ದೈವಾರಾಧನೆಯಲ್ಲಿ ಒಂದಕ್ಕಿಂತ ಒಂದು ವಿಶೇಷವಾದ ಆಚರಣೆ ಹಾಗೂ ನಂಬಿಕೆಗಳು ಇದೆ. ಅದು ಪ್ರದೇಶದಿಂದ ಪ್ರದೇಶಕ್ಕೆ ಒಂದಷ್ಟು ಬದಲಾವಣೆಯೊಂದಿಗೆ ನಡೆಯುತ್ತದೆ ಕೂಡಾ. ಕೇರಳದ ಗಡಿಗೆ ಹೊಂದಿಕೊಂಡಿರುವ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದಲ್ಲಿ ನಡೆಯೋ ದೈವಾರಾಧನೆ ಕೂಡಾ ಅದೇ ರೀತಿಯಾದ ವಿಶೇಷ ಆಚರಣೆಯೊಂದಕ್ಕೆ ಹೆಸರಾಗಿದೆ. ಇಲ್ಲಿನ ಶ್ರೀ ಮಹಾವಿಷ್ಣುಮೂರ್ತಿ ದೇವರ ಜಾತ್ರೆಯ ಬಳಿಕ ನಡೆಯುವ ದೈವದ ನೇಮದಲ್ಲಿ ‘ಅಡ್ಡಣ ಪೆಟ್ಟು’ ಅನ್ನೋ ಸಂಪ್ರದಾಯವಿದೆ. ಗ್ರಾಮದ ಜಾತ್ರೆಯ ಪ್ರಮುಖ ಆಕರ್ಷಣೆ ಕೂಡಾ ಇದೇ ಆಗಿದ್ದು, ಇದನ್ನು ನೋಡಲೆಂದೆ ಸಾವಿರಾರು ಜನ ಬರ್ತಾರೆ.
ನಾಲ್ಕು ಮನೆತನಗಳ ನಡುವೆ ಹೊಡೆದಾಟ…!
‘ಅಡ್ಡಣ ಪೆಟ್ಟು’ ಇದು ಮಂಡೆಕೋಲು ಗ್ರಾಮದ ಜಾತ್ರೆ ಮುಗಿದ ಬಳಿಕ ನಡೆಯುವ ಉಳ್ಳಾಕುಲು ಹಾಗೂ ಪರಿವಾರ ದೈವದ ನೇಮದಲ್ಲಿ ಕಾಣುವ ದೃಶ್ಯ. ನಾಲ್ಕು ಗೌಡ ಮನೆತನದವರು ಬೆತ್ತದ ಗುರಾಣಿ ಹಿಡಿದು ಕೋಲಿನಿಂದ ಹೊಡೆದಾಡುವುದೇ ಈ ‘ಅಡ್ಡಣ ಪೆಟ್ಟು’ ಅನ್ನೋ ವಿಶಿಷ್ಠ ಆಚರಣೆ. ದೇವಸ್ಥಾನಕ್ಕೆ ಸಂಬಂಧಪಟ್ಟ ಕೇನಾಜೆ- ಮಾವಜಿ, ಮುರೂರು- ಬೊಳುಗಲ್ಲು ಎಂಬ ನಾಲ್ಕು ಗೌಡ ಮನೆತನಗಳು ಈ ರೀತಿ ಹೊಡೆದಾಟ ನಡೆಸ್ತಾರೆ. ಈ ವೇಳೆ ಉಳ್ಳಾಕುಲು ದೈವ ಮದ್ಯಪ್ರವೇಶ ಮಾಡಿ ಜಗಳ ಬಿಡಿಸುತ್ತದೆ. ಇದು ನೋಡಲು ಕೂಡಾ ಸಾಕಷ್ಟು ಕುತೂಹಲವಾಗಿದ್ದು, ಇದರ ಜೊತೆ ದೈವದ ಸಂದೇಶ ಕೂಡಾ ಇದೆ.
‘ಅಡ್ಡಣ ಪೆಟ್ಟು’ವಿನ ಹಿಂದೆ ಇದೆ ದೈವದ ಸಂದೇಶ..!
ಮಂಡೆಕೋಲು ನೇಮದಲ್ಲಿ ಅಡ್ಡಣ ಪೆಟ್ಟು ಸಂಪ್ರದಾಯಕ್ಕೆ ಬೇರೆ ಬೇರೆ ಐಹಿತ್ಯವಿದೆ. ಅಡ್ಡಣಪೆಟ್ಟು ನಡೆದರೆ ಊರಲ್ಲಿ ಮುಂದೆ ಗಲಾಟೆ, ಹೊಡೆದಾಟಗಳು ಸಂಭವಿಸುವುದಿಲ್ಲ ಎಂಬ ನಂಬಿಕೆಯೂ ಊರಿನ ಭಕ್ತ ಜನರಲ್ಲಿದೆ. ನಾಲ್ಕೂರಿನ ಜಗಳವನ್ನು ದೈವ ಬಿಡಿಸುವುದು, ಗಲಾಟೆ ಮಾಡದೆ ಸೌಹಾರ್ದದಿಂದ ಬಾಳಿ ಎನ್ನುವ ಸಂದೇಶವೂ ಈ ಆಚರಣೆಯಲ್ಲಿದೆ. ಪುರಾತನ ಕಾಲದಲ್ಲಿ ಯಾವುದೋ ಗಲಾಟೆ ನಡೆದ ಸಂದರ್ಭ ಉಳ್ಳಾಕುಲು ದೈವ ಬಂದು ಗಲಾಟೆ ಬಿಡಿಸಿ ಪರಸ್ಪರ ಸಂದಾನ ನಡೆಸಿತ್ತು ಎಂಬ ಪ್ರತೀತಿಯೂ ಇದೆ. ಇದೇ ಕಾರಣದಿಂದ ಪ್ರತಿ ವರ್ಷ ಉಳ್ಳಾಕುಲು ನೇಮದ ಸಂದರ್ಭ “ಅಡ್ಡಣ ಪೆಟ್ಟು” ಒಂದು ಸಂಪ್ರದಾಯವಾಗಿ ನಡೆದು ಬರುತ್ತಿದೆ.
‘ಅಡ್ಡಣ ಪೆಟ್ಟು’ವಿನ ಆಚರಣೆ ಹೇಗೆ ?
ನೇಮೋತ್ಸವ ದಿನದಂದು ಉಳ್ಳಾಕುಲು ದೈವದ ಭಂಡಾರ ತೆಗೆದ ಬಳಿಕ ದೈವ ಸಹಿತ ನಾಲ್ಕೂರಿನ ಪ್ರತಿನಿಧಿಗಳು, ದೈವರ ಪರಿಚಾರಕರು ದೇವಸ್ಥಾನದ ಸಮೀಪದ ಗದ್ದೆಯಲ್ಲಿರುವ ಕಟ್ಟೆಗೆ ತೆರಳುತ್ತಾರೆ. ಕೇನಾಜೆ- ಮಾವಜಿ, ಮುರೂರು-ಬೊಳುಗಲ್ಲು ಮನೆತನಕ್ಕೆ ಸೇರಿದ ನಾಲ್ವರು ಪ್ರತಿನಿಧಿಗಳು ಸಮವಸ್ತ್ರ ಧರಿಸಿ ದಂಡ ಮತ್ತು ಗುರಾಣಿ (ಅಡ್ಡಣ) ಹಿಡಿದು ದೈವದ ಜತೆಯಲ್ಲಿ ತೆರಳುತ್ತಾರೆ. ಕಟ್ಟೆಯ ಬಳಿ ತೆರಳಿದ ಬಳಿಕ ಕೆಲವೊಂದು ಸಂಪ್ರದಾಯ ಆಚರಣೆಗಳು ನಡೆದು ಅಡ್ಡಣ ಹಿಡಿದ ಯುವಕರು ಅಡ್ಡಣವನ್ನು ನೆಲದಲ್ಲಿ ಎದುರು ಬದುರಾಗಿ ಇಡುತ್ತಾರೆ. ಲಾಠಿ ಮಾದರಿಯ ಹೊಡೆಯುವ ದಂಡವನ್ನು ಕೈಯಲ್ಲಿ ಹಿಡಿದಿರುತ್ತಾರೆ. ಇತ್ತ ಅಡ್ಡಣ ಹೊಡೆತದಲ್ಲಿ ಭಾಗವಹಿಸುವ ನಾಲ್ವರು ಯುವಕರಿಗೆ ಬೆನ್ನು ಹಾಕಿ ನಿಂತಿರುವ ಉಳ್ಳಾಕುಲು ದೈವಕ್ಕೆ ಅಣಿಯನ್ನು ಕೂರಿಸಲಾಗುತ್ತದೆ. ಅಣಿ ಇಟ್ಟ ಬಳಿಕ ತುಳು ನುಡಿಗಟ್ಟೊಂದನ್ನು ಹೇಳಲಾಗುತ್ತದೆ. ಈ ನುಡಿಗಟ್ಟು ಮುಗಿಯುತ್ತಿದ್ದಂತೆ ದೈವದ ಪರಿಚಾರಕರೊಬ್ಬರು ಅಡ್ಡಣ ಹೊಡೆತಕ್ಕೆ ಅಣಿಯಾಗಿ ನಿಂತಿರುವ ಯುವಕರತ್ತ ಕಲಶದ ನೀರಿನಿಂದ ಪ್ರೋಕ್ಷಣೆ ಮಾಡುತ್ತಾರೆ. ಕಲಶ ಪ್ರೋಕ್ಷಣೆ ಆಗುತ್ತಿದ್ದಂತೆ ಎದುರು ಬದುರಾಗಿ ನಿಂತಿರುವ ಯುವಕರು ನೆಲದಲ್ಲಿಟ್ಟ ಅಡ್ಡಣವನ್ನು ಕೈಗೆ ಎತ್ತಿಕೊಂಡು ಅದನ್ನು ಗುರಾಣಿಯಂತೆ ಹಿಡಿದು ಎದುರುಬದುರಾಗಿ ಹೊಡೆದಾಟ ಆರಂಭಿಸುತ್ತಾರೆ. ಪ್ರತಿಯೊಬ್ಬರೂ ಎದುರು ಪ್ರತಿನಿಧಿಯ ಕೈಯಲ್ಲಿ ಹಿಡಿದಿರುವ ಅಡ್ಡಣಕ್ಕೆ ಹೊಡೆಯಬೇಕೆಂಬ ನಿಯಮವೂ ಇದೆ. ಹೊಡೆದಾಟ ಜೋರಾಗುತ್ತಿದ್ದಂತೆ ಬೆನ್ನು ಹಾಕಿ ನಿಂತಿರುವ ಉಳ್ಳಾಕುಲು ದೈವ ಬಂದು ಹೊಡೆದಾಟವನ್ನು ಬಿಡಿಸುತ್ತದೆ.
DAKSHINA KANNADA
ನಾಲ್ಕು ತಿಂಗಳ ಮಗುವಿಗೆ ಹಾಲಿನಲ್ಲಿ ಆಲ್ಕೋಹಾಲ್ ಬೆರೆಸಿದ ಅಜ್ಜಿ..! ಅಜ್ಜಿ ಮಾಡಿದ ಎಡವಟ್ಟಿಗೆ ಕೋಮಾಗೆ ಜಾರಿದ ಮಗು !!
ಮಂಗಳೂರು/ಇಟಲಿ: ಇಟಲಿಯಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. ಅಜ್ಜಿಯೊಬ್ಬರು ನಾಲ್ಕು ತಿಂಗಳ ಮಗುವಿಗೆ ಕುಡಿಯುವ ಹಾಲಿನಲ್ಲಿ ಆಲ್ಕೋಹಾಲ್ ಬೆರೆಸಿರುವ ಘಟನೆ ನಡೆದಿದೆ.
ಮೊಮ್ಮಗು ಕುಡಿಯುವ ಹಾಲಿಗೆ ಅಜ್ಜಿ ತಪ್ಪಾಗಿ ಆಲ್ಕೋಹಲ್ ಬೆರೆಸಿದ್ದಾರೆ. ಮಗು ಅರ್ಧ ಹಾಲು ಕುಡಿದ ಬಳಿಕ ಮಗು ಅಳಲು ಆರಂಭಿಸಿದೆ. ಅಜ್ಜಿಗೆ ಅನುಮಾನ ಬಂದು ತಾನು ಕುಡಿಸಿದ ಹಾಲಿನ ವಾಸನೆಯನ್ನು ತೆಗೆದು ಪರಿಶೀಲನೆ ಮಾಡಿದಾಗ ಅದರಲ್ಲಿ ಆಲ್ಕೋಹಾಲ್ ಮಿಶ್ರಣ ಹಾಕಿರುವುದು ಬೆಳಕಿಗೆ ಬಂದಿದೆ. ಇದರಿಂದ ಆಘಾತಕ್ಕೊಳಗಾದ ವೃದ್ಧೆ ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಮುಂದೆ ಓದಿ..; ಜೀವಾಂತ್ಯವಾದ ಕಾಂತಾಬಾರೆ-ಬೂದಬಾರೆ ಜನ್ಮಕ್ಷೇತ್ರದ ಮರ..! ಇತಿಹಾಸದ ಜೀವಂತ ಸಾಕ್ಷಿಯ ಅಂತ್ಯ..!
ಕೋಮಾಗೆ ಜಾರಿದ ಮಗು:
ಅದಾಗಲೇ ಮಗುವಿನ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಕೋಮ ಸ್ಥಿತಿಗೆ ಜಾರಿತ್ತು. ಬಳಿಕ ವೈದ್ಯರು ಚಿಕಿತ್ಸೆ ನೀಡಿದ ಬಳಿಕ ಚೇತರಿಸಿಕೊಂಡಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಮಗುವಿಗೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಮಗುವಿನ ಆರೋಗ್ಯವನ್ನು ಸಂಪೂರ್ಣ ಪರಿಶೀಲಿಸಿದ ಬಳಿಕ ಅಜ್ಜಿ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
- DAKSHINA KANNADA3 days ago
ಸುಬ್ರಹ್ಮಣ್ಯ: ಕೆಎಸ್ಸಾರ್ಟಿಸಿ ಬಸ್ಗಳ ಹಗಲು ದರೋಡೆ..! ಏನಿದು ಘಟನೆ?
- FILM5 days ago
ಬಿಗ್ ಬಾಸ್ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ನಮ್ರತಾ ಗೌಡ!
- dehali4 days ago
ನಾಯಿಗಳಿಗೂ ಬಂತು ಆಧಾರ್ ಕಾರ್ಡ್.!! ಇನ್ಮುಂದೆ ನಾಯಿಗೂ ಸ್ಕ್ಯಾನ್ ಕಾರ್ಡ್..! ಏನಿದು?
- BELTHANGADY4 days ago
ವೇಷ ಕಳಚುವ ಮುನ್ನ ಇಹಲೋಕ ತ್ಯಜಿಸಿದ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು