Connect with us

  Ancient Mangaluru

  ‘ಅಕ್ಕಮಕ್ಕ ಮೀನೂಟದ ಹೋಟೆಲ್‌’ ಗೆ ದಾರಿ..!

  Published

  on

  ಮಂಗಳೂರಿನಲ್ಲಿ ಈಗ ಹಲವಾರು ಐಷಾರಾಮಿ ಫೈವ್‌ಸ್ಟಾರ್‌ ಹೋಟೆಲ್ ತಲೆಎತ್ತಿವೆ. ಜೊತೆಗೆ ಉತ್ತಮ ಸೇವೆಗಳನ್ನು ನೀಡುತ್ತಿದೆ. ಆದರೆ 130 ವರ್ಷಗಳ ಹಿಂದೆಯೇ ಮಂಗಳೂರಿನಲ್ಲಿ ಒಂದು ಜನಪ್ರಿಯ ಹೊಟೇಲ್ ಇತ್ತು.

  ಅದು ಈಗಲೂ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದರೆ ನಂಬಲೇಬೇಕು. ಅದುವೇ ಅಕ್ಕಮಕ್ಕ ಹೊಟೇಲ್‌. ಈ ಹೆಸರು ಹೆಚ್ಚಾಗಿ ಮಂಗಳೂರಿಗರಿಗೆ ಸೇರಿ ಅವಿಭಜಿತ ಜಿಲ್ಲೆಯಲ್ಲಿರುವರಿಗೆ ಚಿರಪರಿಚಿತ ಆದರೆ ಇದರ ಹಿನ್ನೆಲೆ ಹೆಚ್ಚಿನವರಿಗೆ ಗೊತ್ತಿಲ್ಲ.


  ಅಕ್ಕಮಕ್ಕೆ ಎಂಬ ಮಹಿಳೆ ಮೂಲತಃ ತಲಪಾಡಿಯವರು. ಮದುವೆಯಾದ ಅವರ ಕೆಲವೇ ವರ್ಷಗಳಲ್ಲಿ ಅವರ ಗಂಡ ತೀರಿಹೋದರು. ಮುಂದೆ ಬೇರೆ ಬೇರೆ ಕಾರಣಗಳಿಗೆ ತಲಪಾಡಿ ಊರನ್ನು ತೊರೆದು ತನ್ನ ತಮ್ಮ ಐತಪ್ಪ ಮಾಡ ಅವರ ಜೊತೆ ಮಂಗಳೂರಿನಲ್ಲಿ ನೆಲೆಸಿದರು.

  ಈ ವೇಳೆ ಇವರ ಸಣ್ಣ ಗುಡಿಸಲಿನಲ್ಲಿ ದೂರದ ಹಳ್ಳಿಯಿಂದ ಬಂದ ಶಾಲಾ ಮಕ್ಕಳಿಗೆ ಉಳಿದುಕೊಳ್ಳುವ ವ್ಯವಸ್ಥೆ ಇತ್ತು. ಮುಂದೆ ಅವರಿಗೆಲ್ಲ ಮೂರು ಹೊತ್ತು ಊಟ ನೀಡುವುದೂ ಅನಿವಾರ್ಯವಾಯಿತು.


  ಬೆಳಗ್ಗೆ ಕರಾವಳಿ ಶೈಲಿಯ ಗಂಜಿ ಊಟ, ಎಟ್ಟಿದ ಚಟ್ನಿ ಅಂದರೆ ತೆಂಗಿನಕಾಯಿ ಮತ್ತು ಕಾಯಿಮೆಣಸು ಚಟ್ಟಿಗೆ ಹುರಿದ ಹುಡಿ ಸಿಗಡಿ ಮೀನು ಬೆರಸಿ ರುಚಿಕಟ್ಟಾದ ವಿಶೇಷ ಚಟ್ಟಿ ತಯಾರಿಸುವುದು,
  ಅಕ್ಕಮಕ್ಕೆ ಬುಡಾರ ಹೊಟೇಲಿನಲ್ಲಿ ಮೊದಲು ಮೀನಿನ ಊಟ ಇರಲಿಲ್ಲ.

  ಅಕ್ಕಮಕ್ಕೆಯ ಮುಖ್ಯ ಉದ್ದೇಶ ಹಸಿದವರಿಗೆ ಒಪ್ಪತ್ತಿನ ಊಟ ನೀಡುವುದು. ಆಗ ಊಟಕ್ಕೆ ಹಣ ಇಲ್ಲದಿದ್ದರೂ ನಾಳೆ ಕೊಡಿ ಎನ್ನುತ್ತಿದ್ದರು.

  ದೂರದ ಊರಿನಿಂದ ಮಂಗಳೂರಿಗೆ ಕಾರ್ಯ ನಿಮಿತ್ತ ಬರುತ್ತಿದ್ದವರು ಅಕ್ಕಮಕ್ಕನ ಹೋಟೇಲಿಗೆ ಮಧ್ಯಾಹ್ನದ ಊಟಕ್ಕಾಗಿ ಬರುತ್ತಿದ್ದರು. ದೂರದ ಊರಿನಿಂದ ಹೆಚ್ಚಾಗಿ ನಡೆದುಕೊಂಡೇ ಅಥವಾ ಎತ್ತಿನ ಗಾಡಿಲ್ಲಿ ಬರುತ್ತಿದ್ದರು.

  ದಣಿದು ಬರುತ್ತಿದ್ದರಿಂದ ಊಟಮಾಡಿ ಅಲ್ಲೇ ಜಗುಲಿಯಲ್ಲಿ ಸ್ವಲ್ಪ ಹೊತ್ತು ದಣಿವಾರಿಸಿ ಒಂದು ಅಡಿಕೆ ಎಲೆ ಜಗಿದು ಸುಧಾರಿಸಿಕೊಂಡ ಬಳಿಕ ತಮ್ಮ ಊರುಗಳಿಗೆ ವಾಪಾಸ್ಸಾಗುತ್ತಿದ್ದರು.!

  ಆಗ ಮಧ್ಯಮ ವರ್ಗದವರಿಗೆ ಬೆಂಚು, ಮೇಜು, ಕುರ್ಚಿಯಲ್ಲಿ ಕುಳಿತು ಊಟ ಮಾಡುವಷ್ಟು ಸವಲತ್ತು ಇರಲಿಲ್ಲ.

  ಆಗ ಇವರ ಹೋಟೇಲ್ನ ನೆಲದಲ್ಲಿ ಮಣೆ ಹಾಕಿ ಊಟ ಬಡಿಸುವುದು ಕ್ರಮವಾಗಿತ್ತು. ಅವರ ಸುಧಾರಿಕೆ, ಯೋಗಕ್ಷೇಮ ವಿಚಾರಿಸುವ ರೀತಿ ತುಂಬಾ ಜನರಿಗೆ ಇಷ್ಟವಾಗುತಿತ್ತು.


  ಈ ಹೋಟೆಲ್ ಯಾವಾಗ ಪ್ರಾರಂಭವಾಯಿತೆಂದು ನಿಖರವಾಗಿ ಯಾರಿಗೂ ಗೊತ್ತಿಲ್ಲ.

  ಆದರೆ ಕೆಲವರ ಪ್ರಕಾರ 120 ರಿಂದ 130 ವರ್ಷ ಆಯಿತು ಅಕ್ಕಮಕ್ಕೆಯ ನಂತರ ಮಗಳು ಚಂದ್ರಾವತಿ ನೋಡಿಕೊಳ್ಳುತ್ತಿದ್ದರು.

  ಅವರನ್ನು ಕಿನ್ಯಕ್ಕೆ ಎಂದು ಕರೆಯುತ್ತಿದ್ದರು. ಮುಂದೆ ಈ ಹೋಟೆಲಿನ ಜವಾಬ್ದಾರಿ ನೋಡಿದರು. ಈಗ ಸತ್ಯವತಿ ಅವರು ಹೊಟೇಲು ನೋಡಿಕೊಳ್ಳುತ್ತಿದ್ದಾರೆ.

  ಎಲ್ಲಿದೆ ಈ ಹೊಟೇಲು..?
  ಮಂಗಳೂರಿನ ಹೃದಯಭಾಗದ ಕೆ.ಎಸ್ ರಾವ್ ರಸ್ತೆಯ ಹಂಪನಕಟ್ಟೆಯ ಸಿಗ್ನಲ್ ಬಳಿ ಈ ಹೊಟೇಲ್ ಇದೆ.

  ಇಲ್ಲಿ ಈಗ ಟೇಬಲ್ ಮೇಲೆ ಬಾಳೆ ಎಲೆ ಹಾಕಿ ಊಟ ಬಡಿಸುವುದು.

  ಕುಡಿಯಲು ಬಿಸಿನೀರು, ಕುಚ್ಚಲು ಅಕ್ಕಿಯ ಅನ್ನ, ಉಪ್ಪಿನಕಾಯಿ, ಒಂದು ಬಗೆ ತರಕಾರಿ ಪಲ್ಯ, ಆಮೇಲೆ ಮೀನಿನ ಪದಾರ್ಥ ಇರುತ್ತದೆ.


  ಏನಿದರ ವಿಶೇಷತೆ
  ವಿಶೇಷ ಅಂದರೆ ಈಗಲೂ ಗ್ಯಾಸ್ ಬಳಸದೇ ಕಟ್ಟಿಗೆಯಲ್ಲಿ ಅಡುಗೆ ಮಾಡುತ್ತಾರೆ.

  ಜೊತೆಗೆ ಇಲ್ಲಿ ಮೀನೂಟ ಬಿಟ್ಟರೆ ಕೋಳಿ ಪದಾರ್ಥ ಅಥವಾ ಯಾವುದೇ ಬೇರೆ ಪದಾರ್ಥ ಸಿಗುವುದಿಲ್ಲ. ವಿವಿಧ ರೀತಿಯ ಮೀನು ಫ್ರೈ ಸಿಗುತ್ತದೆ.

  ವಿಶೇಷವೆಂದರೆ ಇದನ್ನು ತೆಂಗಿನ ಎಣ್ಣೆಯಲ್ಲಿ ಮಾತ್ರ ಕಾಯಿಸುತ್ತಾರೆ. ಇದು ಪ್ರತಿನಿತ್ಯ ಮಧ್ಯಾಹ್ನ 12.30ರಿಂದ 3.30ರವರೆಗೆ ರಾತ್ರಿ ರಾತ್ರಿ 7ರಿಂದ 10ರವರೆಗೆ ತೆರೆದಿರುತ್ತದೆ.

  ಈಗಲೂ ಮಣ್ಣಿನ ಮಡಕೆಯನ್ನು ಊಟದ ಟೇಬಲ್ ಬಳಿ ತಂದಿಟ್ಟು ಗೆರಟೆಯಿಂದ ನಿರ್ಮಿತವಾದ ಸೌಟಿನಿಂದ ಘಮಘಮ ಪರಿಮಳದ ಮೀನಿನೂಟ ಬಳಸುತ್ತಾರೆ.

  ಸ್ವಾತಂತ್ರ್ಯ ಹೋರಾಟದ ವೇಳೆ ಬ್ರಿಟಿಷ್ ಪೊಲೀಸರಿಂದ ಏಟು ತಿಂದವರಿಗೆ ಅಕ್ಕಮಕ್ಕೆ ಅವರನ್ನು ಉಪಚರಿಸಿ, ವೈದ್ಯಕೀಯ ಚಿಕಿತ್ಸೆ ಕೊಡಿಸುತ್ತಿದ್ದರು ಎಂಬುವುದನ್ನು ಕೆಲವರು ಈಗಲೂ ನೆನಪಿಸುತ್ತಿದ್ದಾರೆ.

  @ರಾಜೇಶ್‌ ಫೆರಾವೋ

  Ancient Mangaluru

  ಮೇ.10 ರಂದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನೂತನ ಪಕ್ಷಿಕೆರೆ ಶಾಖೆಯ ಉದ್ಘಾಟನೆ

  Published

  on

  ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ರಾಷ್ಟ್ರೀಯ ಪುರಸ್ಕಾರ ಪಡೆದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನೂತನ ಪಕ್ಷಿಕೆರೆ ಶಾಖೆಯ ಉದ್ಘಾಟನಾ ಸಮಾರಂಭ ಮೇ 10 ರಂದು ಮಧ್ಯಾಹ್ನ 12 ಗಂಟೆಗೆ ಮುಲ್ಕಿಯ ಲಘುವಿ ಕಾಂಪ್ಲೆಕ್ಸ್ ಮುಖ್ಯರಸ್ತೆ ಪಕ್ಷಿಕೆರೆಯಲ್ಲಿ ನಡೆಯಲಿದೆ.

  ಮುಲ್ಕಿ ಮೂಡುಬಿದ್ರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಮಂಗಳೂರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

  ಪಕ್ಷಿಕೆರೆ ಸಂತ ಜುದರ ಪುಣ್ಯಕ್ಷೇತ್ರ ಧರ್ಮಗುರು ಅತಿ ವಂದನೀಯ ಗುರುಗಳು ಮೆಲ್ವಿನ್ ನೊರೊಹ್ನಾ ದ್ವೀಪ ಪ್ರಜ್ವಲಿಸಲಿದ್ದಾರೆ. ಪಕ್ಷಿಕೆರೆ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ಶ್ರೀ ಕೆ.ಸೀತಾರಾಮ್ ಶೆಟ್ಟಿ, ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಮಯ್ಯದ್ದಿ ಗಣಕೀಕೃತ ಬ್ಯಾಂಕಿಂಗ್ ಗೆ ಚಾಲನೆ ನೀಡಲಿದ್ದಾರೆ. ಪಕ್ಷಿಕೆರೆ, ಎಸ್ ಕೋಡಿ, ಬಿಲ್ಲವ ಸಂಘದ ಅಧ್ಯಕ್ಷ ನವೀನ್ ಹರಿಪಾದೆ ನಿರಖು ಠೇವಣಿ ಪತ್ರ ಬಿಡುಗಡೆ ಮಾಡಲಿದ್ದಾರೆ.

  ಇದನ್ನೂ ಓದಿ : ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ, ದ.ಕ ಎರಡನೇ ಸ್ಥಾನ

  ಸಮಾಜಸೇವಕ ಧನಂಜಯ ಶೆಟ್ಟಿಗಾರ್ ಇ-ಮುದ್ರಾಂಕ ಸೇವೆಗೆ, ಹಳೆಯಂಗಡಿ ಪ್ರಿಯದರ್ಶಿನಿ ಸಹಕಾರ ಸಂಘದ ಅಧ್ಯಕ್ಷ ಎಚ್.ವಸಂತ್ ಬೆರ್ನಾಡ್ ಆವರ್ತನ ಠೇವಣಿಗೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಕಸ್ತೂರಿ ಪಂಜ ಉಳಿತಾಯ ಖಾತೆಗೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ಕಟ್ಟಡದ ಮಾಲಕ ಶ್ರೀನಿವಾಸ ಕೋಟ್ಯಾನ್ ಮೈಕ್ರೋ ಸಾಲ ಯೋಜನೆಗೆ ಚಾಲನೆ ನೀಡಲಿದ್ದಾರೆ. ಸರ್ವರಿಗೂ ಆದರದ ಸ್ವಾಗತ ಕೋರಲಾಗಿದೆ.

  Continue Reading

  Ancient Mangaluru

  ಮಂಗಳೂರು ವಿಮಾನ ನಿಲ್ದಾಣವಿನ್ನು ನಿಶ್ಶಬ್ದ ವಲಯ!

  Published

  on

  ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇನ್ನು ಮುಂದೆ ನಿಶ್ಶಬ್ದ ವಲಯವಾಗಿರಲಿದೆ. ಹೌದು, ಇನ್ನು ಮುಂದೆ ವಿಮಾನ ನಿಲ್ದಾಣದಲ್ಲಿ ಏರ್‌ಲೈನರ್‌ಗಳಿಂದ ಯಾವುದೇ ಪ್ರಯಾಣಿಕರ ಮಾಹಿತಿ ಕುರಿತ ಅನೌನ್ಸ್ ಮೆಂಟ್‌ ಇರುವುದಿಲ್ಲ. ಪ್ರಯಾಣಿಕರು ಫ್ಲೈಟ್‌ ಇನ್ಫಾರ್ಮೇಶನ್‌ ಡಿಸ್‌ಪ್ಲೇ ಸಿಸ್ಟಂ ಫಲಕಗಳನ್ನು ನೋಡಿ ಮಾಹಿತಿ ಪಡೆದುಕೊಳ್ಳ ಬೇಕಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

  ಸಹಾಯಕ್ಕಾಗಿ ಯಾರನ್ನು ಸಂಪರ್ಕಿಸಬೇಕು?

  ವಿಮಾನ ನಿಲ್ದಾಣದಲ್ಲಿರುವ ಪ್ರಯಾಣಿಕರಿಗೆ ಕಿರಿಕಿರಿಯಾಗುವುದನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಇನ್ನು ಮುಂದೆ ವಿಮಾನಗಳ ಹಾರಾಟದ ಮಾಹಿತಿಗಳು ಫ್ಲೈಟ್‌ ಇನ್ಫಾರ್ಮೇಶನ್‌ ಡಿಸ್‌ಪ್ಲೇ ಸಿಸ್ಟಂ ಫಲಕಗಳಲ್ಲಿ ಅನಾವರಣಗೊಳ್ಳಲಿದೆ. ವಿಮಾನ ನಿಲ್ದಾಣದ ಹಲವು ಕಡೆಗಳಲ್ಲಿ ಈ ಡಿಸ್‌ಪ್ಲೇಗಳನ್ನು ಇರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.


  ಇದಲ್ಲದೆ, ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ‘ಮೇ ಐ ಹೆಲ್ಪ್ ಯು’ ಡೆಸ್ಕ್ ನಿರ್ವಹಿಸುವ ಸಿಬಂದಿ, ಗ್ರಾಹಕ ಸೇವೆ ಮತ್ತು ಅತಿಥಿ ಸಂಬಂಧಗಳ ಕಾರ್ಯನಿರ್ವಾಹಕರು, ಪ್ರಣಾಮ್ ಸಿಬಂದಿ ಕೂಡಾ ಮಾಹಿತಿಯೊಂದಿಗೆ ಪ್ರಯಾಣಿಕರಿಗೆ ಸಹಾಯ ಮಾಡಲು ಸಿದ್ಧರಿರುತ್ತಾರೆ.

  ಇದನ್ನೂ ಓದಿ : ಕೋವಿಶೀಲ್ಡ್ ಲಸಿಕೆ ಅಡ್ಡ ಪರಿಣಾಮ ಬೀರಲಿದೆ; ಸತ್ಯ ಒಪ್ಪಿಕೊಂಡ ಆಸ್ಟ್ರಾಜೆನಿಕಾ! ಏನಿದರ ಪರಿಣಾಮ?

  ಎಸ್.ಎಂ.ಎಸ್ ಮೂಲಕ ಮಾಹಿತಿ :

  ಎಲ್ಲಾ ಏರ್‌ಲೈನ್ ಚೆಕ್-ಇನ್ ಕೌಂಟರ್‌ಗಳು, ಬೋರ್ಡಿಂಗ್ ಗೇಟ್‌ಗಳಲ್ಲಿ ವಿಮಾನದ ಮಾಹಿತಿಯನ್ನು ವೀಕ್ಷಿಸ ಬಹುದು. ಬೋರ್ಡಿಂಗ್ ಗೇಟ್ ಬದಲಾವಣೆಗಳು/ ವಿಮಾನ ಮರು ವೇಳಾಪಟ್ಟಿ ವಿವರಗಳನ್ನು ಎಸ್.ಎಂ.ಎಸ್. ಮೂಲಕ ಪ್ರಯಾಣಿಕರ ನೋಂದಾಯಿತ ಇಮೇಲ್ ಮತ್ತು ಮೊಬೈಲ್ ಸಂಖ್ಯೆಯಲ್ಲೂ ಕೂಡಾ ಏರ್‌ಲೈನ್ ಹಂಚಿಕೊಳ್ಳಲಿದೆ ಎಂದು ವಿವರಿಸಿದ್ದಾರೆ.

  Continue Reading

  Ancient Mangaluru

  ನೀರಿನ ಅಭಾವ ತಪ್ಪಿಸಲು ಟ್ಯಾಂಕರ್‌ ಮಾನಿಟರಿಂಗ್‌ ಆಪ್‌ ಅನುಷ್ಠಾನ-ಯು.ಟಿ ಖಾದರ್‌

  Published

  on

  ಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೀರಿನ ಅಭಾವ ತಪ್ಪಿಸಲು ಟ್ಯಾಂಕರ್‌ ಮಾನಿಟರಿಂಗ್‌ ಆಪ್‌ನ್ನು ಶೀಘ್ರವೇ ಅನುಷ್ಠಾನಗೊಳಿಸಲಾಗುವುದು. ತಾಂತ್ರಿಕ ತೊಂದರೆಗಳಾಗದಂತೆ ಪೂರ್ವಭಾವಿಯಾಗಿ ಅಧಿಕಾರಿಗಳಿಗೆ, ಪಿಡಿಓಗಳಿಗೆ ಪ್ರಾತ್ಯಕ್ಷಿಕೆ ಹಾಗೂ ತರಬೇತಿಗಳನ್ನು ನೀಡುವ ಯೋಜನೆ ರೂಪಿಸಲಾಗಿದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್‌ ಹೇಳಿದ್ದಾರೆ.

  ಅವರು ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅಧಿಕಾರಿಗಳು , ಅಧ್ಯಕ್ಷರು, ಉಪಾಧ್ಯಕ್ಷರು , ಉಳ್ಳಾಲ ತಾಲೂಕು ತಹಶೀಲ್ದಾರ್‌ಸಮ್ಮುಖದಲ್ಲಿ ಹಮ್ಮಿಕೊಂಡ ಕುಡಿಯುವ ನೀರು ಕುರಿತ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು “ಮಾರ್ಚ್‌, ಎಪ್ರಿಲ್‌, ಮೇ ತಿಂಗಳಲ್ಲಿ ಮಂಗಳೂರು ಕ್ಷೇತ್ರದ ಜನತೆಗೆ ಕುಡಿಯುವ ನೀರಿನ ಯೋಜನೆಗೆ ತೊಂದರೆಯಾಗದಂತೆ ಅಧಿಕಾರಿಗಳು, ಪಿಡಿಓ, ಸೆಕ್ರೆಟರಿಗಳು ಪಂಚಾಯಿತಿ ಅಧ್ಯಕ್ಷರು , ಗ್ರಾಮದ ಹಿರಿಯರನ್ನು ಕ್ರೂಢೀಕರಿಸಿಕೊಂಡು ಟಾಸ್ಕ್‌ಫೋರ್ಸ್‌ ರಚಿಸಲಾಗಿದೆ. ಕಳೆದ ವರ್ಷ ಯಾವ ಭಾಗದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿದೆ ಅನ್ನುವ ಕುರಿತು ವರದಿಯನ್ನು ಅಧಿಕಾರಿಗಳಿಂದ ಪಡೆಯಲಾಗಿದೆ.

  ಆ ಭಾಗಗಳಲ್ಲಿ ಪ್ರಸಕ್ತ ವರ್ಷ ತೊಂದರೆಯಾಗದಂತೆ ಶಾಶ್ವತ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆ ಹಾಗೂ ಅಧಿಕಾರಿಗಳು ಪೂರ್ವಭಾವಿಯಾಗಿ ತಯಾರಿರಬೇಕು ಅನ್ನುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಮೊದಲ ಪ್ರಯತ್ನವಾಗಿ ಕುಡಿಯುವ ನೀರಿನ ಟ್ಯಾಂಕರುಗಳಿಗೆ ಮಾನಿಟರಿಂಗ್‌ಆಪ್‌ ಯೋಜನೆಯನ್ನು ರೂಪಿಸಲಾಗಿದೆ. ಅದರ ಸಾಧಕ ಬಾಧಕ ಹಾಗೂ ತಾಂತ್ರಿಕ ವಿಚಾರಗಳ ಕುರಿತು ಅಧಿಕಾರಿ ವರ್ಗದವರಿಗೆ ಅರಿಯಲು ಪ್ರಾತ್ಯಕ್ಷಿಕೆ ಹಾಗೂ ತರಬೇತಿ ನೀಡಲು ಸೂಚಿಸಲಾಗಿದೆ. ಕ್ಷೇತ್ರದಲ್ಲಿ ಸಮಗ್ರವಾಗಿ ಜಾರಿಯಾದಲ್ಲಿ ರಾಜ್ಯದಲ್ಲಿ ಸಚಿವರು ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತಂದು ರಾಜ್ಯದಾದ್ಯಂತ ನೀರಿನ ಅಭಾವ ತಪ್ಪಿಸಲು ಪ್ರಾಮಾಣಿಕ ಪ್ರಯತ್ನವನ್ನು ಕೈಗೊಳ್ಳಲಾಗುವುದು. ಕ್ಷೇತ್ರದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಗೆ 200 ಕೋಟಿ ರೂ. ಅನುದಾನ ಬಿಡುಗಡೆಯಾಗುವ ಕೊನೆಯ ಹಂತದಲ್ಲಿದೆ.

  ಉಳ್ಳಾಲ ನಗರ ವ್ಯಾಪ್ತಿಯ ಕೆಲಸ ಪೂರ್ಣಗೊಂಡರೂ, ಗ್ರಾಮೀಣ ಮಟ್ಟಕ್ಕೆ ಎರಡು ವರ್ಷಗಳಲ್ಲಿ ಅನುದಾನ ಬಿಡುಗಡೆಯಾಗಲಿದೆ. ಟೆಂಡರ್‌ಪ್ರಕ್ರಿಯೆ ನಡೆದು ಎರಡು ವರ್ಷ ಬೇಕಾಗುತ್ತದೆ. ಆನಂತರ ನೀರಿನ ವ್ಯವಸ್ಥೆ ಆಗಲಿದೆ. ಗ್ರಾಮ ಪಂಚಾಯತ್ ನವರು ವರ್ಷಕ್ಕೆ 12 ಲಕ್ಷ ನೀರಿಗಾಗಿ ಗ್ರಾ.ಪಂ.ನಿಂದ ಕೊಡುವ ಬದಲು ಟ್ಯಾಂಕರ್‌ ಖರೀದಿಗೆ ಕೇಳಿಕೊಂಡಿದ್ದಾರೆ. ಆದರೆ ಸರಕಾರದಿಂದ ಟ್ಯಾಂಕರ್‌ ಬಾಡಿಗೆ ಪಡೆಯಲು ಮಾತ್ರ ಅವಕಾಶವಿದೆ. ಕರಾರು ಪತ್ರದಂತೆ ಟ್ಯಾಂಕರ್‌ಅನ್ನು ಸದ್ಯಕ್ಕೆ ನೀಡಬಹುದು. ಮುಂದೆಯೂ ಸಮಸ್ಯೆ ಮುಂದುವರಿದಲ್ಲಿ ರಾಜ್ಯದ ಸಚಿವರುಗಳನ್ನು ಚರ್ಚಿಸಲಾಗುವುದು ಎಂದರು.ಜಲಯೋಜನೆ, ಕಂದಾಯ , ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಪಶುಸಂಗೋಪನಾ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಟಾಸ್ಕ್‌ಫೋರ್ಸ್‌ಕುಡಿಯುವ ನೀರಿನ ಯೋಜನೆಯಲ್ಲಿ ಕಾರ್ಯಾಚರಿಸಲಿದೆ. ಇಲಾಖೆಗಳ ಎಲ್ಲಾ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ತಹಶೀಲ್ದಾರ್‌ಪುಟ್ಟರಾಜು ಡಿ, ಉಪತಹಶೀಲ್ದಾರ್‌ನವನೀತ್‌ಮಾಳವ, ಕಂದಾಯ ನಿರೀಕ್ಷಕ ಪ್ರಮೋದ್‌ಕುಮಾರ್‌, ಕೃಷಿ ಇಲಾಖೆ ಅಧಿಕಾರಿ ವೀಣಾ ರೈ, ಮಂಗಳೂರು ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾ.ಪಂ ಅಧ್ಯಕ್ಷರು ಭಾಗವಹಿಸಿದ್ದರು.

  Continue Reading

  LATEST NEWS

  Trending