MANGALORE
ಗಣಪತಿ ಮೂರ್ತಿ ವಿಸರ್ಜನೆಗೆ ಉತ್ತಮ ವ್ಯವಸ್ಥೆ ಮಾಡಿ: ಹಿಂದೂ ಜನಜಾಗೃತಿ ಸಮಿತಿ ಮನವಿ
Published
2 years agoon
By
Adminಮಂಗಳೂರು: ಗಣೇಶ ಚತುರ್ಥಿಯ ನಂತರ ಮೂರ್ತಿ ವಿಸರ್ಜನೆಗೆ ಉತ್ತಮ ಮತ್ತು ಸುರಕ್ಷಿತ ವ್ಯವಸ್ಥೆ ಮಾಡಿಕೊಡುವಂತೆ ಹಿಂದೂ ಜನಜಾಗೃತಿ ಸಮಿತಿ ಮಂಗಳೂರು ಮಹಾನಗರ ಪಾಲಿಕೆಯ ಡೆಪ್ಯೂಟಿ ಆಯುಕ್ತ ರವಿಕುಮಾರ್‌ಗೆ ಮನವಿ ಮಾಡಿದರು.
ಮನವಿಯಲ್ಲಿ ಹಿಂದೂ ಧರ್ಮಶಾಸ್ತ್ರದಂತೆ ಗಣೇಶನ ಮೂರ್ತಿಯ ವಿಸರ್ಜನೆಯನ್ನು ಹರಿಯುವ ನೀರಿನಲ್ಲಿ ಮಾಡಬೇಕೆಂದಿದೆ.
ಆದರೆ ಕೆಲವರು ಇದರ ಬಗ್ಗೆ ಪರಿಸರ ಮಾಲಿನ್ಯದ ನೆಪವೊಡ್ಡಿ ಹರಿಯುವ ನೀರಿನಲ್ಲಿ ವಿಸರ್ಜಿಸುವ ಬದಲು ಕೆರೆ ಮತ್ತು ಸರೋವರಗಳಲ್ಲಿ ಹಾಗೂ ಕೃತಕ (ಮೊಬೈಲ್) ಟ್ಯಾಂಕ್ ವ್ಯವಸ್ಥೆಯನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಾಡಲಾಗುತ್ತದೆ.
ಸರಕಾರವು ಇದರ ಬಗ್ಗೆ ಗಮನವಹಿಸಿ ಹರಿಯುವ ನೀರಿನಲ್ಲಿ ಗಣೇಶ ವಿಸರ್ಜನೆಯ ವ್ಯವಸ್ಥೆ ಮಾಡಿಕೊಡಬೇಕು ಜೊತೆಗೆ ಈ ವೇಳೆಯಲ್ಲಿ ಅಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗಮನಹರಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಜೊತೆಗೆ ಮೂರ್ತಿಕಾರರಿಗೆ ಪ್ಲಾಸ್ಟರ್ ಆಫ್ ಪ್ಯಾರೀಸ್‌ನ ಮೂರ್ತಿ ಮಾಡದೇ ಮಣ್ಣಿನ ಮೂರ್ತಿಯನ್ನೇ ಮಾಡುವಂತೆ ಪ್ರೇರೇಪಿಸಿ ಅದಕ್ಕಾಗಿ ಅವರಿಗೆ ಸರಕಾರದ ವತಿಯಿಂದ ಅನುದಾನ ನೀಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ದ.ಕ ಸಮನ್ವಯಕ ಚಂದ್ರ ಮೊಗೇರ ನೇತೃತ್ವದಲ್ಲಿ ಆಗ್ರಹಿಸಿದರು.
ಈ ಸಂಧರ್ಭ ಹಿಂದೂ ಜನ ಜಾಗೃತಿ ಸಮಿತಿಯ ಸರ್ವಶ್ರೀ ವಿವೇಕ್ ಪೈ, ಸುಪಣ್ಣ, ರಾಜೇಶ್ ಆಚಾರ್ಯ ಪ್ರಭಾಕರ್ ನಾಯಕ್, ಶನೇಶ್ವರ ಸೇವಾ ಸಮಿತಿ ಇದರ ಅಧ್ಯಕ್ಷ ಸುಬ್ರಹ್ಮಣ್ಯ ರೆಡ್ಡಿ ಧರ್ಮ ಪ್ರೇಮಿ ರೂಪೇಶ್ ರೈ, ಸುರೇಶ್ ಕೊಣಾಜೆ, ರಮೇಶ್ ಕುಮಾರ್, ಕಿಶೋರ್ ಕುಮಾರ್, ಉಳ್ಳಾಲ ಸುನಿಲ್ ಕುರ್ನಾಡ್, ಉಪಸ್ಥಿತರಿದ್ದರು
BIG BOSS
ಮಂಗಳೂರು: ಕುಖ್ಯಾತ ರೌಡಿಶೀಟರ್ ದಾವೂದ್ ಸಂಚು ರೂಪಿಸುತ್ತಿದ್ದಾಗಲೇ ಅರೆಸ್ಟ್
Published
54 minutes agoon
23/11/2024ಮಂಗಳೂರು: ಕುಖ್ಯಾತ ರೌಡಿಶೀಟರ್ ದಾವೂದ್ (43) ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರ ತಂಡವು ನವೆಂಬರ್ 22ರ ಸಂಜೆ ಬಂಧಿಸಿದೆ.
ಆರೋಪಿ ದಾವೂದ್ ಉಳ್ಳಾಲದ ಧರ್ಮನಗರ ನಿವಾಸಿ. ಅವನು ಮಂಗಳೂರಿನ ತಲಪಾಡಿ-ದೇವಿಪುರ ರಸ್ತೆ ಬಳಿ ಪ್ರತಿಸ್ಪರ್ಧಿ ಗ್ಯಾಂಗ್ ಸದಸ್ಯರ ವಿರುದ್ಧ ಅಪರಾಧ ಎಸಗಲು ಸಂಚು ರೂಪಿಸುತ್ತಿದ್ದಾಗಲೇ ಬಂಧಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಪಿಎಸ್ ಐ ನರೇಂದ್ರ ನೇತೃತ್ವದ ಸಿಸಿಬಿ ತಂಡ ರೌಡಿಶೀಟರ್‌ನನ್ನು ಬಂಧಿಸಲು ಮುಂದಾಗಿದೆ.
ಕಾರ್ಯಾಚರಣೆ ವೇಳೆ ದಾವೂದ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದು, ಪಿಎಸ್ ಐ ನರೇಂದ್ರ ಮತ್ತು ಇತರ ಸಿಬ್ಬಂದಿಗೆ ಗಾಯಗಳಾಗಿವೆ. ದಾಳಿಯ ಹೊರತಾಗಿಯೂ ಪೊಲೀಸ್ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಮುಂದಿನ ಕ್ರಮಕ್ಕಾಗಿ ದಾವುದ್‌ನನ್ನು ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ದಾವೂದ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್ ಐ ನರೇಂದ್ರ ಅವರ ದೂರಿನ ಮೇರೆಗೆ ಆರೋಪಿ ದಾವುದ್ ವಿರುದ್ಧ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ದಾವೂದ್ ಕೊಲೆ ಸೇರಿದಂತೆ ಹಲವು ಅಪರಾಧಗಳಲ್ಲಿ ಭಾಗಿಯಾಗಿರುತ್ತಾನೆ. ಉಳ್ಳಾಲ, ಮಂಗಳೂರು ದಕ್ಷಿಣ ಮತ್ತು ಬಜ್ಪೆ ಸೇರಿದಂತೆ ಇತರ ಸ್ಥಳಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದಾಗಿ ವರದಿಯಾಗಿದೆ .
ಕೊಣಾಜೆ: ಬಾಲಕಿಗೆ ಕಿ*ರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಪ್ಪತ್ತರ ಹರೆಯದ ವೃದ್ಧನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿಯನ್ನು ಅಬ್ದುಲ್ಲಾ (70) ಎಂದು ಗುರುತಿಸಲಾಗಿದೆ.
ಉಳ್ಳಾಲ ತಾಲೂಕು ಬಾಳೆಪುಣಿ ಗ್ರಾಮದಲ್ಲಿ ಘಟನೆ ನಡೆದಿದೆ. 3 ವರ್ಷದ ಬಾಲಕಿ ಆಟವಾಡುತ್ತಿದ್ದಾಗ ಆರೋಪಿ ಲೈಂ*ಗಿಕ ಕಿ*ರುಕುಳ ನೀಡಿದ್ದ ಎಂದು ಆರೋಪಿಸಲಾಗಿದೆ. ಬಾಲಕಿಯ ಅಸ್ವಸ್ಥತೆಯನ್ನು ಗಮನಿಸಿದ ತಾಯಿ ವೈದ್ಯಕೀಯ ತಪಾಸಣೆ ನಡೆಸಿದ್ದು ಬಳಿಕ ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಬಗ್ಗೆ ಕೊಣಾಜೆ ಪೊಲೀಸರು ಆರೋಪಿ ವಿರುದ್ಧ ಪೋ*ಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
BIG BOSS
ಮಂಗಳೂರು: ಮುಂಜಾನೆಯೇ ಸರಣಿ ಅ*ಪಘಾತ; ವಿದ್ಯಾರ್ಥಿಗಳಿದ್ದ ಬಸ್ ಪ*ಲ್ಟಿ
Published
2 hours agoon
23/11/2024ಮಂಗಳೂರು: ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಸಮೀಪದ ಅಡ್ಡಹೊಳೆ ಎಂಬಲ್ಲಿ ಬೆಳ್ಳಂಬೆಳಗ್ಗೆ ಸರಣಿ ಅ*ಪಘಾತ ಸಂಭವಿಸಿದೆ. ಕುಂದಾಪುರ ಪ್ರವಾಸಕ್ಕೆ ತೆರಳಿ ಹಿಂದಿರುಗುತ್ತಿದ್ದ ಬೆಂಗಳೂರು ಕಾಲೇಜು ವಿದ್ಯಾರ್ಥಿಗಳಿದ್ದ ಖಾಸಗಿ ಟೂರಿಸ್ಟ್ ಬಸ್ ಉರುಳಿ ಬಿದ್ದಿದೆ.
ಇಂದು (ನ.23) ಬೆಳಗಿನ ಜಾವ ಕಾರೊಂದು ಹಿಂದಿನಿಂದ ಬಂದು ಕೆಎಸ್‌ಆರ್‌ಟಿಸಿ ಬಸ್‌ಗೆ ಡಿ*ಕ್ಕಿ ಹೊಡೆದಿದೆ. ನಂತರ, ಬೆಂಗಳೂರು ಕಾಲೇಜು ವಿದ್ಯಾರ್ಥಿಗಳಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್‌ಗೆ ಗು*ದ್ದಿದೆ.
ಟೂರಿಸ್ಟ್ ಬಸ್ ರಸ್ತೆಗೆ ಉರುಳಿದ್ದು, ವಿದ್ಯಾರ್ಥಿಗಳು ಗಾ*ಯಗೊಂಡಿದ್ದಾರೆ. ಗಾ*ಯಾಳುಗಳನ್ನು ನೆಲ್ಯಾಡಿ ಮತ್ತು ಕಡಬದ ಖಾಸಗಿ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಉಪ್ಪಿನಂಗಡಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
LATEST NEWS
ನ್ಯೂ ಇಯರ್ ನಶೆಗೆ ಸಿಸಿಬಿ ಬ್ರೇಕ್..! 6 ಕೋಟಿ ಮೌಲ್ಯದ ಡ್ರ*ಗ್ಸ್ ಜಪ್ತಿ..!
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!
ಹೊಸ ಟ್ರೆಂಡ್ನ ಪ್ಯಾಂಟ್ ಧರಿಸಿದ ಯುವಕ; ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
ನಿಜ್ಜರ್ ಹತ್ಯೆಯಲ್ಲಿ ಮೋದಿ-ಅಜಿತ್ ದೋವಲ್ ಕೈವಾಡ; ವರದಿ ನಿರಾಕರಿಸಿದ ಕೆನಡಾ ಸರ್ಕಾರ
ಕದ್ರಿ ಪಾರ್ಕ್ನಲ್ಲಿ ‘ಕಲಾಪರ್ಬ’; ಯು.ಟಿ.ಖಾದರ್ನಿಂದ ಲಾಂಛನ ಬಿಡುಗಡೆ
ನಾಳೆ ಉಪಚುನಾವಣೆಯ ಮತಎಣಿಕೆ: ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
Trending
- LATEST NEWS3 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- LATEST NEWS5 days ago
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!
- LIFE STYLE AND FASHION2 days ago
ಚಿಕನ್ ಪ್ರಿಯರೇ ಗಮನಿಸಿ; ಕೋಳಿ ಮಾಂಸದ ಈ ಭಾಗವನ್ನು ತಿನ್ನಲೇಬೇಡಿ
- BIG BOSS6 days ago
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?