Connect with us

    LATEST NEWS

    ಉಡುಪಿ: ಅಸೋಡು ನಂದಿಕೇಶ್ವರ ದೇವಳದಲ್ಲಿ ಹಿಂದುಯೇತರರಿಗೆ ವ್ಯಾಪಾರ ನಿರ್ಬಂಧಕ್ಕೆ ಸಂಘಟನೆಗಳ ಒತ್ತಾಯ

    Published

    on

    ಉಡುಪಿ: ಈ ಜಿಲ್ಲೆಯಲ್ಲಿ ವ್ಯಾಪಾರ ಬಹಿಷ್ಕಾರ ಇನ್ನೂ ಮುಂದುವರೆದಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಸೋಡು ನಂದಿಕೇಶ್ವರ ದೇವಸ್ಥಾನದಲ್ಲಿ ವ್ಯಾಪಾರಕ್ಕೆ ಅವಕಾಶ ನಿರಾಕರಿಸಲಾಗಿದೆ.

    ಕೇಸರಿ ಬಾವುಟಗಳನ್ನು ಕಟ್ಟಿ ಹಿಂದೂಗಳು ವ್ಯಾಪಾರ ಮಾಡಿದ್ದಾರೆ. ಸುಮಾರು ಐವತ್ತಕ್ಕೂ ಹೆಚ್ಚು ಮುಸಲ್ಮಾನ ವರ್ತಕರಿಂದ ವ್ಯಾಪಾರ ಅವಕಾಶ ನೀಡುವಂತೆ ಮನವಿ ಮಾಡಲಾಗಿತ್ತು.

    ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಹಿಂದೂ ಸಂಘಟನೆಗಳು ವ್ಯಾಪಾರಕ್ಕೆ ಅವಕಾಶ ನೀಡದಂತೆ ಒತ್ತಾಯಿಸಿವೆ.

    ಹಿಂದೂ ಕಾರ್ಯಕರ್ತರಿಂದ ದೇವಸ್ಥಾನಕ್ಕೆ ವ್ಯಾಪಾ ರಕ್ಕೆ ಅವಕಾಶ ನೀಡದಂತೆ ಒತ್ತಾಯಿಸಿದೆ. ಪೋಸ್ಟರ್ ಬ್ಯಾನರ್ ಗಳ ಮೂಲಕ ವ್ಯಾಪಾರ ಅಸಹಕಾರ ಪ್ರಚಾರ ಮಾಡಲಾಗಿದೆ.

     

    LATEST NEWS

    ಮನೆಯಲ್ಲಿ ಒಂದಕ್ಕಿಂತ ಹೆಚ್ಚು ವಾಶ್‌ ರೂಮ್ ಇದ್ರೆ ಹೆಚ್ಚುವರಿ ಶುಲ್ಕ..!

    Published

    on

    ಮಂಗಳೂರು : ಮನೆಯಲ್ಲಿ ಒಂದಕ್ಕಿಂತ ಹೆಚ್ಚು ವಾಶ್ ರೂಮ್ ಹೊಂದಿದವರಿಗೆ ತೆರಿಗೆ ರೂಪದಲ್ಲಿ ಹೆಚ್ಚುವರಿ ಶುಲ್ಕ ವಸೂಲಿಗೆ ಸರ್ಕಾರ ತೀರ್ಮಾನಿಸಿದೆ. ಈ ಕುರಿತಾಗಿ ಸರಕಾರ ಅಧಿಸೂಚನೆ ಹೊರಡಿಸಿದ್ದು, ಇನ್ನು ಮುಂದೆ ನಗರ ಪ್ರದೇಶದಲ್ಲಿ ವಾಸವಾಗಿರುವವರು ಮನೆಯಲ್ಲಿ ಒಂದಕ್ಕಿಂತ ಹೆಚ್ಚು ವಾಶ್ ರೂಮ್ ಹೊಂದಿದ್ದರೆ, ತಲಾ ರೂ.25 ರಂತೆ ತೆರಿಗೆ ನೀಡಬೇಕಾಗುತ್ತದೆ.

    ನಗರವಾಸಿಗಳು ಬಳಸುವ ನೀರಿನ ಬಿಲ್ಲಿನ ಶೇಖಡಾ 30 ರಷ್ಟು ಒಳಚರಂಡಿ ತೆರಿಗೆ ಹಾಗೂ ಪ್ರತಿ ಹೆಚ್ಚುವರಿ ವಾಶ್‌ರೂಮ್‌ಗೆ ರೂ.25 ತೆರಿಗೆ ನೀಡುವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಇಂತಹ ಒಂದು ವಾಶ್ ರೂಮ್ ಟ್ಯಾಕ್ಸ್ ಹಿಮಾಚಲ ಪ್ರದೇಶದ ಸರ್ಕಾರ ಜಾರಿಗೆ ತಂದಿದೆ.

    ಹಿಮಾಚಲ ಪ್ರದೇಶದ ಸರ್ಕಾರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದು, ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಇಂತಹ ಒಂದು ಅಧಿಸೂಚನೆ ಹೊರಡಿಸಿದೆ. ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಆರ್ಥಿಕ ಸಂಕಷ್ಟದಿಂದ ಪಾರಾಗಲು ವಾಶ್‌ರೂಮ್ ಟ್ಯಾಕ್ಸ್‌ ಜಾರಿ ಮಾಡಿದ್ದಾರೆ. ಒಳಚರಂಡಿ ಬಿಲ್ ಜೊತೆಗೆ ಈ ಹೆಚ್ಚುವರಿ ಶುಲ್ಕವನ್ನು ಜಲಶಕ್ತಿ ಇಲಾಖೆ ಸಂಗ್ರಹಿಸಲಿದ್ದು ಇದು ಜಲಶಕ್ತಿ ಇಲಾಖೆಯ ಖಾತೆಗೆ ಜಮೆ ಆಗಲಿದೆ.
    ಇದರಿಂದ ಹಿಮಾಚಲ ಪ್ರದೇಶದ 5 ಮುನ್ಸಿಪಲ್ ಕಾರ್ಪೋರೇಶನ್‌, 29 ಪುರಸಭೆಗಳ ಮತ್ತು 17 ನಗರ ಪಂಚಾಯತ್ ನ ಸುಮಾರು 10 ಲಕ್ಷ ಜನರಿಗೆ ಹೊರೆಯಾಗಲಿದೆ.

    Continue Reading

    LATEST NEWS

    ಮತ್ತೆ ವಿವಾದದ ಸುಳಿಯಲ್ಲಿ ಸಂಸದೆ ಕಂಗನಾ..!

    Published

    on

    ನವದೆಹಲಿ : ಇತ್ತೀಚೆಗಷ್ಟೇ ರೈತರ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಂಡಿ ಕ್ಷೇತ್ರ ಬಿಜೆಪಿ ಸಂಸದೆ ನಟಿ ಕಂಗಾನ ರಾನೌತ್ ಈಗ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ರಾಷ್ಟ್ರಪಿತ ಗಾಂಧಿ ಅವರ ಕುರಿತಾಗಿ ಹಾಕಿದ ಪೋಸ್ಟ್ ಈಗ ವಿವಾದಕ್ಕೆ ಕಾರಣವಾಗಿದೆ.


    “ದೇಶ್‌ ಕೆ ಪಿತಾ ನಹೀ. ದೇಶ್‌ ಕೆ ತೋ ಲಾಲ್‌ ಹೋತೇ ಹೈ. ಧನ್ಯ ಹೇ ಭಾರತ್ ಮಾಕೆ ಲಾಲ್‌”( ದೇಶಕ್ಕೆ ತಂದೆಯಿಲ್ಲ .ಅದಕ್ಕೆ ಮಕ್ಕಳಿದ್ದಾರೆ. ಭಾರತಮಾತೆಯ ಮಕ್ಕಳು ಧನ್ಯರು) ಎಂದು ಕಂಗನಾ ಪೋಸ್ಟ್ ಮಾಡಿದ್ದಾರೆ. ಲಾಲ್‌ ಬಹುದ್ದೂರು ಶಾಸ್ತ್ರಿ ಅವರನ್ನು ಗಾಂಧೀಜಿಗೆ ಹೋಲಿಕೆ ಮಾಡಿದ್ದು ಅಲ್ಲದೆ ಗಾಂಧೀಜಿಯ ಕುರಿತಾಗಿ ಕೀಳು ಮಟ್ಟದ ಪೋಸ್ಟ್ ಮಾಡಿದ್ದಾರೆ.

    ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ನಾಯಕಿ ಸುಪ್ರಿಯಾ ಶ್ರಿನಾಥೆ ಅವರು ಇದು “ಬಿಜೆಪಿಯ ಹೊಸ ಗೋಡ್ಸೆ ಭಕ್ತೆ” ಎಂದು ಆರೋಪಿಸಿದ್ದಾರೆ. “ಸಂಸದೆ ಕಂಗನಾ ಈ ಹೇಳಿಕೆಗೆ ನರೇಂದ್ರ ಮೋದಿ ಅವರು ಪಕ್ಷದ ಈ ಹೊಸ ಗೋಡ್ಸೆ ಭಕ್ತೆಯನ್ನು ಮನಃಪೂರ್ವಕವಾಗಿ ಕ್ಷಮಿಸುವರೇ? ರಾಷ್ಟ್ರಪಿತ ಇದ್ದಾರೆ, ಪುತ್ರರಿದ್ದಾರೆ ಮತ್ತು ಹುತಾತ್ಮರು ಇದ್ದಾರೆ” ಎಂದು ಸುಪ್ರಿಯಾ ಶ್ರಿನಾಥೆ ಹೇಳಿದ್ದಾರೆ.

    ಇಷ್ಟೇ ಅಲ್ಲದೆ ಬಿಜೆಪಿಯ ನಾಯಕ ಮನೋರಂಜನ್ ಕಾಲಿಯ ಕೂಡಾ ಈ ಬಗ್ಗೆ ಟೀಕಿಸಿದ್ದು, ಮಂಡಿ ಸಂಸದರು ಇಂತಹ ವಿವಾದಾತ್ಮ ಹೇಳಿಕೆ ನೀಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಇದು ಪಕ್ಷಕ್ಕೆ ತೊಂದರೆ ಉಂಟು ಮಾಡುತ್ತಿದೆ. ಅವರೊಬ್ಬ ರಾಜಕಾರಣಿ ಅಲ್ಲವಾಗಿದ್ದು ರಾಜಕಾರಣಿಯಾಗಿ ಗಂಭೀರ ವಿಚಾರ ಮಾತನಾಡುವ ಮೊದಲು ಆಲೋಚಿಸಬೇಕು ಎಂದು ಹೇಳಿದ್ದಾರೆ.

    ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯು ದೇಶದಲ್ಲಿ ಬಾಂಗ್ಲಾದೇಶದಂತಹ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ ಎಂದು ಅವರು ಈ ಹಿಂದೆ ಹೇಳಿದ್ದರು. ರೈತರ ಪ್ರತಿಭಟನಾ ಸ್ಥಳಗಳಲ್ಲಿ ಅತ್ಯಾಚಾರಗಳು ನಡೆಯುತ್ತಿವೆ ಎಂದು ಹೇಳಿದ್ದರು. ಬಳಿಕ ಈ ಮೂರು ಕೃಷಿ ಕಾನೂನು ಕುರಿತಾಗಿ ಪ್ರಧಾನಿ ಮತ್ತೊಮ್ಮೆ ಚಿಂತಿಸಬೇಕು ಎಂದು ಹೇಳಿಕೆ ನೀಡಿದ್ದರು.

    Continue Reading

    BIG BOSS

    ಬಿಗ್ ಬಾಸ್ ಮನೆಯೊಳಗಿರುವ ಲಾಯರ್ ಜಗದೀಶನ ವಕೀಲಿಕೆ ಲೈಸೆನ್ಸ್ ಕ್ಯಾನ್ಸಲ್!

    Published

    on

    ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಹೋಗಿರುವ ಹಾಗೂ ನಾನು ಸಿಂಹ ಎಂದೇ ಹೇಳಿಕೊಳ್ಳುತ್ತಿರುವ ವಕೀಲ ಜಗದೀಶ್ ಅವರು ಪಡೆದಿದ್ದ ಲಾಯರ್ ಲೈಸೆನ್ಸ್ ಅನ್ನು ದೆಹಲಿ ಬಾರ್ ಕೌನ್ಸಿಲ್ ರದ್ದುಗೊಳಿಸಿದೆ. ಇವರು ಫೇಕ್  ಮಾರ್ಕ್ಸ್ ಕಾರ್ಡ್‌ ಕೊಟ್ಟು ಪದವಿ ಹಾಗೂ ಎಲ್‌ಎಲ್‌ಬಿ ಪದವಿ ಮಾಡಿ ಬಾರ್ ಕೌನ್ಸಿಲ್ ಅನುಮತಿ ಪಡೆದಿದ್ದರು. ಇದೀಗ ನಕಲಿ ಮಾರ್ಕ್ಸ್‌ ಕಾರ್ಡ್ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ವಕೀಲಿಕೆ ಸನ್ನದು (ಅಡ್ವೋಕೇಟ್ ಬಾರ್ ಕೌನ್ಸಿಲ್ ನೀಡಿದ್ದ ಲೈಸೆನ್ಸ್) ಅನ್ನು ರದ್ದುಗೊಳಿಸಿ ದೆಹಲಿ ಬಾರ್ ಕೌನ್ಸಿಲ್ ಆದೇಶ ಹೊರಡಿಸಿದೆ.

    ನಕಲಿ ಮಾರ್ಕ್ಸ್ ಕಾರ್ಡ್ ಮೇಲೆ ಪದವಿ:

    ಈಗಾಗಲೇ ಸುಮಾರು 40ಕ್ಕೂ ಅಧಿಕ ವರ್ಷ ವಯಸ್ಸಾಗಿದ್ದರೂ ಕೇವಲ 10 ವರ್ಷ ವಕೀಲಿಕೆ ಸೇವೆ ಮಾಡಿದ್ದಾಗಿ ಹೇಳಿಕೊಂಡಿರುವ ಲಾಯರ್ ಜಗದೀಶ್ ಮೇಲೆ ಸ್ವಲ್ಪ ಅನುಮಾನ ವ್ಯಕ್ತವಾಗಿತ್ತು. ಆದರೆ, ಇದೀಗ ಅವರು ಪಿಯುಸಿಯನ್ನೇ ಓದದೇ ನಕಲಿ ಮಾರ್ಕ್ಸ್ ಕಾರ್ಡ್ ಸೃಷ್ಟಿಸಿ, ಅದನ್ನು ಪದವಿ ಕಾಲೇಜಿಗೆ ಕೊಟ್ಟು ಡಿಗ್ರಿ ಮಾಡಿದ್ದಾರೆ. ನಂತರ, ಪದವಿ ಮೇಲೆ ಎಲ್‌ಎಲ್‌ಬಿ ಮಾಡಿದ್ದಾರೆ. ಬೆಂಗಳೂರಿನ ಬದಲು ದೆಹಲಿಗೆ ಹೋಗಿ ದೆಹಲಿ ಬಾರ್ ಕೌನ್ಸಿಲ್‌ನಲ್ಲಿ ಎಲ್‌ಎಲ್‌ಬಿ ಮೇಲೆ ಬಾರ್ ಕೌನ್ಸಿಲ್‌ನಿಂದ ವಕೀಲಿಕೆ ಸನ್ನದು ಪಡೆದಿದ್ದಾರೆ. ಇವರದ್ದು ನಕಲಿ ಸರ್ಟಿಫಿಕೇಟ್ ಎಂದು ಬಾರ್ ಕೌನ್ಸಿಲ್ ಲೈಸೆನ್ಸ್ ರದ್ದತಿಗೆ ಕೋರಿ ಹಿಮಾಂಶು ಭಾಟಿ ಎನ್ನುವವರು ಕೌನ್ಸಿಲ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು.

    ಇದನ್ನು ಪರಿಗಣಿಸಿದ ದೆಹಲಿ ಬಾರ್ ಕೌನ್ಸಿಲ್ ಸಮಿಯು ವಕೀಲ ಜಗದೀಶ್ ಅವರಿಗೆ ನೀಡದಲಾಗಿದ್ದ ಅನುಮತಿಯನ್ನು ತಾತ್ಕಾಲಿಕವಾಗಿ ತಡೆ ಹಿಡಿದು ಎಲ್ಲ ದಾಖಲಾತಿಗಳನ್ನು ಪರಿಶೀಲನೆ ಮಾಡಿದೆ. ಇದಾದ ನಂತರ 2024ರ ಏಪ್ರಿಲ್‌ನಲ್ಲಿ ನಡೆದ ಬಾರ್ ಕೌನ್ಸಿಲ್ ಸಭೆಯಲ್ಲಿ ಕೆ.ಎನ್. ಜಗದೀಶ್ ಕುಮಾರ್ ಅವರು ಸಲ್ಲಿಕೆ ಮಾಡಿದ ಪಿಯುಸಿ ಅಂಕಪಟ್ಟಿ ನಕಲಿ ಆಗಿದ್ದು, ಇದರ ಆಧಾರದಲ್ಲಿ ಮಾಡಲಾದ ಪದವಿ ಹಾಗೂ ಎಲ್‌ಎಲ್‌ಬಿ ಸೇರಿ ಎಲ್ಲವೂ ಅಮಾನ್ಯವಾಗಿರುತ್ತವೆ. ಆದ್ದರಿಂದ ಕೆ.ಎನ್ ಜಗದೀಶ್ ಕುಮಾರ್ (ಡಿ/2091/2017) ಅವರ ವಕೀಲಿಕೆ ಸನ್ನದು ಅನ್ನು ರದ್ದುಗೊಳಿಸಲಾಗಿದೆ ಎಂದು ಅಧಿಸೂಚನೆ ಹೊರಡಿಸಿದೆ.

    Continue Reading

    LATEST NEWS

    Trending