ಮಂಗಳೂರು: ಬಜರಂಗದಳ ಹಾಗೂ ವಿಹೆಚ್‌ಪಿ ಕಾರ್ಯಕರ್ತರು ಕಿಡಿಗೇಡಿಗಳು, ಸಮಾಜಘಾತುಕರು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಹಲಾಲ್ ನಿಷೇಧದ ಬಗ್ಗೆ ಪ್ರತಿಕ್ರಿಯಿಸಿದ ಅವರು, ರೈತರ ಬದುಕು ಗೊತ್ತಿದೆಯಾ ಅವರಿಗೆ, ರೈತರಿಗೆ ಇವರು ಬದುಕು ಕಟ್ಟಿಕೊಡ್ತಾರ ಎಂದು ಪ್ರಶ್ನಿಸಿದ ಅವರು, ರೇಷ್ಮೆ, ದ್ರಾಕ್ಷಿ, ಮಾವು ಬೆಳೆಯನ್ನು ಖರೀದಿಸುವವರು ಮುಸಲ್ಮಾನರು,
ಹಬ್ಬಕ್ಕೆ ಕುರಿ-ಮೇಕೆ ಕಟ್ ಮಾಡೋಕೆ, ಕ್ಲೀನ್ ಮಾಡೋಕೆ ಅದೇ ಸಮಾಜದವರು ಬೇಕು. ಹೊಟ್ಟೆಪಾಡಿಗಾಗಿ ಈ ಸಂಘಟನೆಗಳು ಸಮಾಜ ಒಡೆಯುತ್ತಿವೆ.
ಇಷ್ಟು ವರ್ಷ ಹಲಾಲ್ ಮಾಂಸ ತಿಂದಿಲ್ವಾ, ಚೆನ್ನಾಗಿದ್ದೇವಲ್ವಾ? ಏನಾದ್ರೂ ಆಯ್ತಾ? ಹಿಂದೂ ದೇವರಿಗೆ ಈಗ ತೊಂದರೆಯಾಯ್ತ? ಎಂದು ಆಕ್ರೋಶ ವ್ಯಕ್ತಪಡಿಸಿದರು.