Connect with us

    DAKSHINA KANNADA

    ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ

    Published

    on

    ಚಾರ್ಮಾಡಿ: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿದು ಟ್ರಾಫಿಕ್ ಜಾಮ್ ಆದ ಘಟನೆ ನಿನ್ನೆ ತಡರಾತ್ರಿ ಸಂಭವಿಸಿದೆ.

    ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯ ಚಾರ್ಮಾಡಿಘಾಟ್‌ನ 10ನೇ ತಿರುವಿನಲ್ಲಿ ಗುಡ್ಡ ಕುಸಿದಿದ್ದು ಚಾರ್ಮಾಡಿ ಘಾಟ್​ನಿಂದ ಕೊಟ್ಟಿಗೆಹಾರದವರೆಗೂ ವಾಹನಗಳು ನಿಂತಲ್ಲೇ ನಿಂತಿದ್ದವು. ಬಳಿಕ ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯಾಚರಣೆ ನಡೆಸಲಾಯ್ತು.

    ಅತ್ತ ಮಂಗಳೂರಿಗೆ ತೆರಳುವವರನ್ನು ಪೊಲೀಸರು ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲೇ ವಾಹನಗಳನ್ನು ತಡೆದು ವಾಪಸ್ ಕಳಿಸಿದ್ದಾರೆ. ಅತ್ತ ಉಜಿರೆ ಬಳಿಯೂ ಚಾರ್ಮಾಡಿ ಘಾಟ್ ಪ್ರವೇಶ ನಿರ್ಬಂಧಿಸಲಾಗಿತ್ತು.

    DAKSHINA KANNADA

    ಬಜಪೆ: ಶ್ರೀ ಸೋಮನಾಥೇಶ್ವರ ಗುಹಾಲಯ, ಗುಹಾತೀರ್ಥ ಸ್ನಾನಕ್ಕೆ ಚಾಲನೆ

    Published

    on

    ಬಜಪೆ: ಜಾಬಾಲಿ ಮಹರ್ಷಿಗಳ ತಪೋವನವೆಂದೆ ಪ್ರಖ್ಯಾತಿಯಾಗಿರುವ ತುಳುನಾಡಿನ ಪ್ರಸಿದ್ದ ಗುಹಾಲಯ ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಗುಹಾಲಯದಲ್ಲಿ ಪವಿತ್ರ ಗುಹಾಪ್ರವೇಶ ಗುಹಾತೀರ್ಥ ಸ್ನಾನ ಕಾರ್ಯಕ್ರಮಕ್ಕೆ ಗುರುವಾರದಂದು ತುಲಾ ಸಂಕ್ರಮಣದ ಸಂದರ್ಭ ಧಾರ್ಮಿಕ ಹಾಗೂ ಸಾಂಪ್ರದಾಯಿಕ ವಿಧಿಗಳೊಂದಿಗೆ ಕ್ಷೇತ್ರದ ತಂತ್ರಿ ಬಗ್ಗಮಜಲು ಬ್ರಹ್ಮಶ್ರೀ ಸುಬ್ರಹ್ಮಣ್ಯ ತಂತ್ರಿಯವರ ನೇತೃತ್ವದಲ್ಲಿ ಶ್ರೀಜಗದ್ಗುರು ಮಧ್ವಾಚಾರ್ಯ ಸಂಸ್ಥಾನ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಸ್ವಾಮೀಜಿ ದೀಪ ಪ್ರಜ್ವಲನೆಯೊಂದಿಗೆ ಚಾಲನೆ ನೀಡಿದರು.


    ಶ್ರೀ ಸೋಮನಾಥೇಶ್ವರ ಶ್ರೀ ಮಹಾಗಣಪತಿ ದೇವರು ಹಾಗೂ ಶ್ರೀ ಜಾಬಾಲಿ ಮಹರ್ಷಿ ಅವರ ಸನ್ನಿಧಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಕಟೀಲು ದೇವಳದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕಿನ್ನಿಗೋಳಿ ಯುಗಪುರುಷದ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ವಸಂತ ಭಟ್ ನೆಲ್ಲಿತೀರ್ಥ, ದೇಗುಲದ ಅರ್ಚಕ ಗಣಪತಿ ಭಟ್, ಅನಂತಕೃಷ್ಣ ಅಡಿಗ ಪುತ್ತಿಗೆ,ಎನ್ ವಿ ವೆಂಕಟರಾಜ ಭಟ್,ಎನ್ ವಿ ಜಿ ಕೆ ಭಟ್,ಪ್ರಸನ್ನ ಭಟ್ ನೆಲ್ಲಿತೀರ್ಥ,ಆನಂದ ಕಾವ ಸಾಂತ್ರಬೈಲು,ಕೃಷ್ಣಪ್ಪ ಪೂಜಾರಿ,ಸುಂದರ ಪೂಜಾರಿ, ಹನುಮಂತ ಕಾಮತ್ ಸ್ಥಳೀಯ ಪ್ರಮುಖರು,ಗ್ರಾಮಸ್ಥರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

    ಗುಹಾಪ್ರವೇಶಕ್ಕೆ ಮುಂಚಿತವಾಗಿ ಕ್ಷೇತ್ರದ ನಾಗಪ್ಪ ಕೆರೆಯಲ್ಲಿ ಮಿಂದು ಕ್ಷೇತ್ರದ ತಂತ್ರಿಗಳ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ಗುಹಾಪ್ರವೇಶ ಆರಂಭ ಮಾಡಲಾಯಿತು. ಆ.17 ತುಲಾ ಸಂಕ್ರಮಣದಂದು ಪ್ರಾರಂಭಗೊಂಡ ಗುಹಾಪ್ರವೇಶ – ಗುಹಾ ತೀರ್ಥ ಸ್ನಾನ ಏಪ್ರೀಲ್ ತಿಂಗಳ ಮೇಷ ಸಂಕ್ರಮಣದವರೆಗೂ ಪ್ರತಿದಿನ ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆಯವರೆಗೂ ಗುಹಾತೀರ್ಥ ಸ್ನಾನಕ್ಕೆ ಅವಕಾಶವಿದೆ.ಹುಣ್ಣಿಮೆಯ ಸಂದರ್ಭ ಹುಣ್ಣಿಮೆ ತೀರ್ಥ ಸ್ನಾನ ಇಲ್ಲಿ ವಿಶೇಷ.

    Continue Reading

    DAKSHINA KANNADA

    ದೀಪಾವಳಿಗೆ ಬಂಪರ್ ಆಫರ್; ಮಂಗಳೂರು – ಬೆಂಗಳೂರು ವಿಶೇಷ ರೈಲು

    Published

    on

    ಮಂಗಳೂರು: ಬೆಳಕಿನ ಹಬ್ಬ ದೀಪಾವಳಿಯ ಸಂದರ್ಭ ದೀರ್ಘ ರಜೆಯ ಕಾರಣ ಬೆಂಗಳೂರು – ಮಂಗಳೂರು ಮಧ್ಯೆ ಓಡಾಡುವವರ ಸಂಖ್ಯೆ ಹೆಚ್ಚಿರುತ್ತದೆ. ಟಿಕೇಟ್ ರೇಟ್ ಕೇಳಿಯೇ ಕಂಗಾಲಾಗುತ್ತಾರೆ. ಅದರ ಮಧ್ಯೆಯೂ ಸೀಟ್ ಭರ್ತಿಯಾಗಿದೆ ಎಂದಾಗ ಆತಂಕಕ್ಕೊಳಗಾಗುತ್ತಾರೆ. ಹಾಗಾಗಿ ಅಂತಹವರ ಭಾರ ಕಡಿಮೆ ಮಾಡುವ ನಿಟ್ಟಿನಲ್ಲಿ ಯಶವಂತಪುರ – ಮಂಗಳೂರು ಜಂಕ್ಷನ್‌- ಯಶವಂತಪುರ ನಡುವೆ ವಿಶೇಷ ರೈಲು ಓಡಿಸಲು ನೈಋತ್ಯ ರೈಲ್ವೇ ನಿರ್ಧರಿಸಿದ್ದು, ಅ.30 ಮತ್ತು 31ರಂದು ಈ ರೈಲುಗಳು ಸಂಚರಿಸಲಿವೆ.


    ನಂ.06565 ಯಶವಂತಪುರ-ಮಂಗಳೂರು ಜಂಕ್ಷನ್‌ ವಿಶೇಷ ರೈಲು ಅ.30ರಂದು ರಾತ್ರಿ 11.50ಕ್ಕೆ ಯಶವಂತಪುರದಿಂದ ಹೊರಡಲಿದ್ದು, ಅ.31ರಂದು ಮಧ್ಯಾಹ್ನ 11.45ಕ್ಕೆ ಮಂಗಳೂರು ಜಂಕ್ಷನ್‌ ತಲುಪಲಿದೆ. ನಂ.06566 ಮಂಗಳೂರು ಜಂಕ್ಷನ್‌ – ಯಶವಂತಪುರ ವಿಶೇಷ ರೈಲು ಅ.31ರಂದು ಮಧ್ಯಾಹ್ನ 1 ಗಂಟೆಗೆ ಮಂಗ ಳೂರು ಜಂಕ್ಷನ್‌ನಿಂದ ಹೊರಡಲಿದ್ದು, ರಾತ್ರಿ 9.45ಕ್ಕೆ ಬೆಂಗಳೂರು ತಲುಪಲಿದೆ.
    ಕುಣಿಗಲ್‌, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್‌, ಕಬಕ ಪುತ್ತೂರು, ಬಂಟ್ವಾಳ ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ. ರೈಲು ಒಟ್ಟು 21 ಬೋಗಿ ಸಂಯೋಜನೆಯನ್ನು ಒಳಗೊಂಡಿದೆ.

    ಪ್ರಯಾಣಿಕರ ಬೇಡಿಕೆ :
    ಕಳೆದ ವರ್ಷ ದಸರಾ, ದೀಪಾವಳಿ ಸಂದರ್ಭದಲ್ಲಿ ಮಂಗಳೂರು – ಬೆಂಗಳೂರು – ಮೈಸೂರು ನಡುವೆ ವಿಶೇಷ ರೈಲು ಓಡಾಟ ನಡೆಸಿತ್ತು. ಈ ಬಾರಿ ದಸರಾದಲ್ಲಿ ನಂ.06569 ಯಶವಂತಪುರ – ಕಾರವಾರ ವಿಶೇಷ ಎಕ್ಸ್‌ಪ್ರೆಸ್‌ ರೈಲು ಮತ್ತು ನಂ. 06570 ಕಾರವಾರ – ಮೈಸೂರು ವಿಶೇಷ ಎಕ್ಸ್‌ಪ್ರೆಸ್‌ ರೈಲು ವಯಾ ಪಡೀಲ್‌ ಮೂಲಕ ಸಂಚರಿಸಿದೆ. ಇದರಿಂದ ಮಂಗಳೂರಿಗೆ ಬರುವವರಿಗೆ ಹೆಚ್ಚಿನ ಲಾಭವಾಗಿಲ್ಲ. ದೀಪಾವಳಿಗಾದರೂ ಮಂಗಳೂರು – ಬೆಂಗಳೂರು ನಡುವೆ ಹೆಚ್ಚುವರಿ ರೈಲು ಓಡಲಿ ಎನ್ನುವುದು ರೈಲ್ವೇ ಹೋರಾಟಗಾರರ ಆಗ್ರಹವಾಗಿತ್ತು.

    ಸಂಸದರಿಂದ ಮನವಿ ಪತ್ರ:
    ವಿಶೇಷ ರೈಲಿಗೆ ಬೇಡಿಕೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಸಂಸದ ಕ್ಯಾ| ಬ್ರಿಜೇಶ್‌ ಚೌಟ ಅವರು ನೈಋತ್ಯ ರೈಲ್ವೇ ಮಹಾ ಪ್ರಬಂಧಕರಿಗೆ ಪತ್ರ ಬರೆದು, ದೀಪಾವಳಿ ಹಬ್ಬಕ್ಕೆ ಬೆಂಗಳೂರು – ಮಂಗಳೂರು ನಡುವೆ ವಿಶೇಷ ರೈಲು ಓಡಿಸುವಂತೆ ಮನವಿ ಮಾಡಿದ್ದರು. ಬೆಂಗಳೂರಿನಿಂದ ಊರಿಗೆ ಬರುವ ಸಾವಿರಾರು ಪ್ರಯಾಣಿಕರಿಗೆ ಈ ರೈಲಿನಿಂದ ಅನುಕೂಲವಾಗಲಿದೆ. ಆದ್ದರಿಂದ ಆದ್ಯತೆ ಮೇರೆಗೆ ರೈಲನ್ನು ಓಡಿಸಲು ಕ್ರಮ ಕೈಗೊಳ್ಳಬೇಕು. ಇದರಿಂದ ರೈಲ್ವೇ ಇಲಾಖೆಗೂ ಹೆಚ್ಚಿನ ಲಾಭವಾಗಲಿದೆ ಎಂದು ಸಂಸದರು ಪತ್ರದಲ್ಲಿ ವಿವರಿಸಿದ್ದರು. ಪ್ರಯಾಣಿಕರು, ಹೋರಾಟಗಾರರು ಹಾಗೂ ಜನ ಪ್ರತಿನಿಧಿಗಳ ಬೇಡಿಕೆ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೇ ವಿಶೇಷ ರೈಲು ಓಡಾಟಕ್ಕೆ ಮುಂದಾಗಿದೆ.

    Continue Reading

    DAKSHINA KANNADA

    ಕಟಪಾಡಿಯಲ್ಲಿ ವಾಹನಗಳ ಸರಣಿ ಅಪಘಾತ; ವಾಹನಗಳು ಜಖಂ

    Published

    on

    ಕಟಪಾಡಿ: ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್‌ನಲ್ಲಿ ಅ.17 ರ ಗುರುವಾರ ಸರಣಿ ಅಪಘಾತ ಸಂಭವಿಸಿದೆ.


    ತಾಂತ್ರಿಕ ತೊಂದರೆಯಿಂದ ಟ್ಯಾಂಕ್‌ವೊಂದು ಕಾರು, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅಪಘಾತದ ಪರಿಣಾಮ ಕಟಪಾಡಿ ಜಂಕ್ಷನ್‌ನ ಸಿಸಿ ಕ್ಯಾಮರಾ ಸಹಿತ ವಾಹನಗಳು ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ವಾಹನಗಳು ಉಡುಪಿಯತ್ತ ತೆರಳುತ್ತಿದ್ದವು ಎಂದು ತಿಳಿದು ಬಂದಿದೆ. ಪವಾಡ ಸದೃಶವಾಗಿ ಕಾರಿನಲ್ಲಿದ್ದರೂ, ದ್ವಿಚಕ್ರ ವಾಹನ ಸವಾರ ಅಪಾಯದಿಂದ ಪಾರಾಗಿದ್ದಾರೆ. ಕಾರು ಜಖಂಗೊಂಡಿದ್ದು, ಟ್ಯಾಂಕರ್ ಸುಮಾರು ದೂರ ಚಲಿಸಿ ಮತ್ತೆ ನಿಂತಿದೆ.


    ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

    Continue Reading

    LATEST NEWS

    Trending