Connect with us

BANTWAL

SDPI ಕಚೇರಿಗೆ ಬೀಗ ಹಾಕಿದ ಕ್ರಮ ಪ್ರಶ್ನಿಸಿ ಅರ್ಜಿ: ಆದೇಶ ಕಾಯ್ದಿರಿಸಿದ ಹೈಕೋರ್ಟ್‌

Published

on

ಬೆಂಗಳೂರು:  ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಎಸ್‌ಡಿಪಿಐಗೆ ಸೇರಿದ ಕಚೇರಿಗಳಿಗೆ ಬೀಗ ಹಾಕಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ.

ಎಸ್‌ಡಿಪಿಐನ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್‌ ಸಾದತ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕ ಸದಸ್ಯಪೀಠ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ ಯಾವುದೇ ಮಾಹಿತಿ ನೀಡದೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆ ಇರುವ ಎಸ್‌ಡಿಪಿಐ ಕಚೇರಿಗಳು ಚುನಾಯಿತ ಕಾರ್ಪೊರೇಟರ್‌ಗಳ ಕಚೇರಿಗಳಿಗೆ ಬೀಗ ಹಾಕಲಾಗಿದೆ ದೇಶದ ವಿವಿಧ ರಾಜ್ಯಗಳಲ್ಲಿ ಎಸ್‌ಡಿಪಿಐ ಪಕ್ಷದ ಹಲವು ಮಂದಿ ಚುನಾಯಿತರಾಗಿದ್ದಾರೆ.

ದಕ್ಷಿಣ ಕನ್ನಡದಲ್ಲಿ 200ಕ್ಕೂ ಅಧಿಕ ಚುನಾಯಿತ ಪ್ರತಿನಿಧಿಗಳಿದ್ದು ರಾಜಕೀಯ ಚಟುವಟಿಕೆ ನಡೆಸಲು ಅವರಿಗೆ ಕಚೇರಿಯ ಅಗತ್ಯವಿದೆ ಆದ್ದರಿಂದ ಜಪ್ತಿ ಮಾಡಿರುವ ಕಚೇರಿಗಳಿಗೆ ಹಾಕಲಾಗಿರುವ ಮೊಹರು ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದರು.

ಅಲ್ಲದೆ ಪ್ರಜಾಪ್ರತಿನಿಧಿ ಕಾಯ್ದೆ 1951ರ ಅಡಿ ನೋಂದಾಯಿತ ರಾಜಕೀಯ ಪಕ್ಷವಾಗಿರುವ ಎಸ್‌ಡಿಪಿಐ ತುಳಿತಕ್ಕೊಳಗಾದ ಸಮುದಾಯಗಳ ಪರವಾಗಿ ಕೆಲಸ ಮಾಡುತ್ತಿದೆ ಇದೇ ಕಾರಣಕ್ಕೆ ಕೆಲ ಶಕ್ತಿಗಳ ಕೆಂಗಣ್ಣಿಗೆ ಪಕ್ಷ ಗುರಿಯಾಗಿದ್ದು ಅದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕೆಟ್ಟಅಭಿಪ್ರಾಯ ಮೂಡಿಸಲು ಸರ್ಕಾರಿ ಸಂಸ್ಥೆಗಳ ಮೇಲೆ ಒತ್ತಡ ಹಾಕಲಾಗುತ್ತಿದೆ ಪಾಪುಲರ್‌ಫ್ರಂಟ್ ಆಫ್ ಇಂಡಿಯಾ ಪಿಎಫ್‌ಐ ಜತೆ ಎಸ್‌ಡಿಪಿಐ ಯಾವುದೇ ಸಂಪರ್ಕ ಹೊಂದಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.

ಪ್ರಕರಣ ಸಂಬಂಧ ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅರುಣ್ ಶ್ಯಾಮ್ ಎಸ್‌ಡಿಪಿಐ ಕಚೇರಿಗಳನ್ನು ನಿಷೇಧಿತ ಪಿಎಫ್‌ಐ ಮತ್ತು ಸಿಎಫ್‌ಐ ಸಂಘಟನೆಗಳ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿತ್ತು ಎಂಬ ಖಚಿತ ಮಾಹಿತಿ ಆಧರಿಸಿ ಜಿಲ್ಲಾಧಿಕಾರಿಗಳು ಅಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದನ್ನು ದೃಢಪಡಿಸಿಕೊಂಡ ನಂತರ ಕ್ರಮ ಕೈಗೊಂಡಿದ್ದಾರೆ ಎಂದು ವಿವರಿಸಿದರು.

ಕೇಂದ್ರ ಸರ್ಕಾರ ರಾಜ್ಯಗಳಿಗೆ ನಿಯೋಜಿಸಿರುವ ಅಧಿಕಾರವನ್ನು ಆಧರಿಸಿ ಜಿಲ್ಲಾಡಳಿತ ಸಮಗ್ರ ಮಾಹಿತಿ ಕಲೆಹಾಕಿ ತನಿಖೆ ನಡೆಸಿ ಶಾಂತಿ ಭಂಗ ಹಾಗೂ ಸಾರ್ವಜನಿಕ ಸುವ್ಯವಸ್ಥೆ ಹಾಳು ಮಾಡುವ ಉದ್ದೇಶದ ಕೃತ್ಯಗಳನ್ನು ನಡೆಸುತ್ತಿದೆ ಎಂಬುದನ್ನು ಮನಗಂಡೇ ಎಸ್​ಡಿಪಿಐ ಕಚೇರಿಗಳ ಮೇಲೆ ದಾಳಿ ನಡೆಸಿ ನಂತರ ಅವುಗಳನ್ನು ಸೀಲ್ ಮಾಡಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಅಲ್ಲದೆ ಒಂದು ವೇಳೆ ಅರ್ಜಿದಾರರು ಜಿಲ್ಲಾಡಳಿತದ ಕ್ರಮವನ್ನು ಪ್ರಶ್ನಿಸುವುದಾದರೆ ಅದನ್ನು ಮ್ಯಾಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಪ್ರಶ್ನಿಸಬಹುದು ಹೈಕೋರ್ಟ್‌ನಲ್ಲಿ ರಿಟ್ ಮಾನ್ಯ ಮಾಡಲಾಗದು ಕಚೇರಿ ಜಾಗದ ಬಗ್ಗೆ ಮಾಡಿಕೊಂಡಿರುವ ಬಾಡಿಗೆ ಒಪ್ಪಂದಗಳಲ್ಲಿ ಉದ್ದೇಶವನ್ನು ನಮೂದಿಸಿಲ್ಲ ಕೆಲವು ಒಪ್ಪಂದಗಳ ಅವಧಿ ಮುಗಿದಿದೆ ಆ ಕಟ್ಟಡಗಳ ಮಾಲೀಕರನ್ನು ಪ್ರತಿವಾದಿಯನ್ನಾಗಿ ಮಾಡಿಲ್ಲ ಎಂದು ವಿವರಿಸಿದರು.

ಕೇಂದ್ರ ಸರ್ಕಾರದ ಪರ ವಾದಿಸಿದ ಎಎಸ್‌ಜಿ ಶಾಂತಿಭೂಷಣ್ ಕೇಂದ್ರ ಸರ್ಕಾರ ಪಿಎಫ್‌ಐ ಅನ್ನು ನಿಷೇಧಿಸಿದೆ ರಾಜ್ಯ ಸರ್ಕಾರ ತನ್ನ ಗುಪ್ತಚರ ಮಾಹಿತಿ ಆಧರಿಸಿ ಎಸ್‌ಡಿಪಿಐ ಕಚೇರಿಗಳಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆಯ ಚಟುವಟಿಕೆಗಳನ್ನು ನಡೆಸುತ್ತಿದ್ದರಿಂದ ಅದರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಿದೆ ಎಂದು ವಾದ ಮಂಡಿಸಿದರು ವಾದಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿರುವುದಾಗಿ ನ್ಯಾಯಪೀಠ ತಿಳಿಸಿದೆ.

BANTWAL

ULLALA : ನೇಣಿಗೆ ಶರಣಾದ ಇಬ್ಬರು ಪುಟ್ಟ ಮಕ್ಕಳ ತಂದೆ

Published

on

ಉಳ್ಳಾಲ :   ಎರಡು ಪುಟ್ಟ ಮಕ್ಕಳ ತಂದೆಯೋರ್ವರು ನೇಣಿಗೆ ಶರಣಾದ ಘಟನೆ ಉಳ್ಳಾಲದ ಕುಂಪಲದ ಹನುಮಾನ್ ನಗರದಲ್ಲಿ ಸೋಮವಾರ(ಏ. 29) ಮುಂಜಾನೆ ನಡೆದಿದೆ. 44 ವರ್ಷ ಯೋಗೀಶ್ ಆತ್ಮಹ*ತ್ಯೆಗೈದ ವ್ಯಕ್ತಿ.

ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಯೋಗೀಶ್ ಸೋಮವಾರ ಬೆಳಗ್ಗೆ ತಮ್ಮ ಮನೆಗೆ ತಾಗಿಕೊಂಡಿರುವ ಶೌಚಾಲಯದಲ್ಲಿ ನೇಣಿಗೆ ಶರಣಾಗಿದ್ದಾರೆ. ಯೋಗೀಶ್ ಸ್ವಸಹಾಯ ಗುಂಪೊಂದರ ಸದಸ್ಯರಾಗಿದ್ದು, ಸಂಘದ ನಲ್ವತ್ತು ಸಾವಿರ ರೂಪಾಯಿಗಳನ್ನ ಬ್ಯಾಂಕಿಗೆ ಕಟ್ಟದೆ ಖರ್ಚು ಮಾಡಿದ್ದರು ಎನ್ನಲಾಗಿದೆ.

ಈ ಬಗ್ಗೆ ಸಂಘದ ಉಳಿದ ಸದಸ್ಯರು ಭಾನುವಾರ ಬೆಳಗ್ಗೆ ಮತ್ತು ಸಂಜೆ ಯೋಗೀಶ್ ಅವರ ಮನೆಗೆ ತೆರಳಿ ಹಣ ಕಟ್ಟುವಂತೆ ಪೀಡನೆ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಇದೇ ಅವಮಾನದಲ್ಲಿ ಯೋಗೀಶ್ ಆತ್ಮಹ*ತ್ಯೆಗೈದಿರುವುದಾಗಿ ಹೇಳಲಾಗುತ್ತಿದೆ.

ಇದನ್ನೂ ಓದಿ : ಮೇ 3 ರಂದು ಕುದ್ರೆಬೆಟ್ಟು ಕಾರಣಿಕದ ಕಲ್ಲುರ್ಟಿ ದೈವಸ್ಥಾನದ ಪುನ: ಪ್ರತಿಷ್ಠಾ ಮಹೋತ್ಸವ; ಈ ದೈವಸ್ಥಾನದ ಹಿಂದಿದೆ ರೋಚಕ ಕಥೆ!

ಉಳ್ಳಾಲ ಠಾಣಾ ಪೊಲೀಸರು ಮೃ*ತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿದ್ದಾರೆ.

ಯೋಗೀಶ್ ಪತ್ನಿಯೂ ಆತ್ಮಹತ್ಯೆಗೆ ಯತ್ನ:

ಯೋಗೀಶ್ ಸಾ*ವನ್ನಪ್ಪಿದನ್ನು ಕಂಡ ಪತ್ನಿಯೂ ನೇಣು ಬಿಗಿದು ಆತ್ಮ ಹ*ತ್ಯೆಗೈಯಲು ಮುಂದಾಗಿದ್ದಾರೆ. ಘಟನಾ ಸ್ಥಳದಲ್ಲಿ ನೆರೆದಿದ್ದ ಸ್ಥಳೀಯರು ಆಕೆಯನ್ನ ತಡೆದು ಸಂತೈಸಿದ್ದಾರೆ. ಮೃ*ತ ಯೋಗೀಶ್ ಇಬ್ಬರು ಪುಟ್ಟ ಗಂಡು ಮಕ್ಕಳು, ಪತ್ನಿ, ತಾಯಿಯನ್ನು ಅಗಲಿದ್ದಾರೆ.

Continue Reading

BANTWAL

ಮೇ 3 ರಂದು ಕುದ್ರೆಬೆಟ್ಟು ಕಾರಣಿಕದ ಕಲ್ಲುರ್ಟಿ ದೈವಸ್ಥಾನದ ಪುನ: ಪ್ರತಿಷ್ಠಾ ಮಹೋತ್ಸವ; ಈ ದೈವಸ್ಥಾನದ ಹಿಂದಿದೆ ರೋಚಕ ಕಥೆ!

Published

on

ಬಂಟ್ವಾಳ : ಕಲ್ಲಡ್ಕ ಬಾಳ್ತಿಲ ಗ್ರಾಮದಲ್ಲಿದೆ ಕಾರಣಿಕದ ಕರ್ಲುರ್ಟಿ ಕ್ಷೇತ್ರ. ಈ ದೈವಸ್ಥಾನದ ಹಿಂದಿದೆ ರೋಚಕ ಕಥೆ.  ಈ ದೈವಸ್ಥಾನದಲ್ಲಿ ಪುನಃ ಪ್ರತಿಷ್ಠಾ ಮಹೋತ್ಸವದ ಸಿದ್ಧತೆ ಭರದಿಂದ ಸಾಗುತ್ತಿದೆ.

ಪವಾಡ ತೋರಿದ್ದ ಕಲ್ಲುರ್ಟಿ :

ಈಗಾಗಲೇ ತಿಳಿಸಿದಂತೆ ಈ ದೈವಸ್ಥಾನ ಹಿಂದು -ಮುಸಲ್ಮಾನ ಭಾಂದವರ ಭಾವೈಕ್ಯತೆಯ ಸಾನಿಧ್ಯ. ಕುದ್ರೆಬೆಟ್ಟುವಿನ ಒಂದು ಮುಸನ್ಮಾನ ಕುಟುಂಬ ಕಲ್ಲುರ್ಟಿ ದೈವವನ್ನು ನಂಬುತ್ತಿದ್ದರು. ಐಸಮ್ಮ ಎಂಬ ಮಹಿಳೆಯ ಕುಟುಂಬ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸುತ್ತಿದ್ದರು. ಇದರಿಂದ ಬೇಸತ್ತ ಕುಟುಂಬಕ್ಕೆ ಆ ಜಾಗದಲ್ಲಿ ಅಗೋಚರ ಶಕ್ತಿಯೊಂದು ಇರುವುದು ತಿಳಿಯುತ್ತದೆ. ನಂತರ ಅವರು ‘ಕಲ್ಲುರ್ಟಿ’ಯನ್ನು ಕಲ್ಲಿನ ರೂಪದಲ್ಲಿ ನಂಬಲು ಆರಂಭಿಸುತ್ತಾರೆ. ಕಷ್ಟ ಎಂದು ತನ್ನಲ್ಲಿಗೆ ಬಂದವರಿಗೆ ಐಸಮ್ಮ ಕಲ್ಲುರ್ಟಿಯ ಸ್ಮರಿಸಿ ಕಪ್ಪು ದಾರ ನೀಡುತ್ತಿದ್ದರು. ಇದರಿಂದ ಅವರ ತೊಂದರೆಗಳೆಲ್ಲ ನಿವಾರಣೆಯಾಗುತ್ತಿತ್ತು ಎಂಬ ನಂಬಿಕೆಯಿದೆ.

 

ಮನೆಯಲ್ಲಿ ವಿಶೇಷ ಅಡುಗೆ ಮಾಡಿದರೆ, ಆಕೆ ದೈವಕ್ಕೆ ಬಡಿಸದೇ ಸೇವಿಸುತ್ತಿರಲಿಲ್ಲ. ಒಂದುವೇಳೆ ತಪ್ಪಿದ್ದಲ್ಲಿ ಅಡುಗೆ ಮಾಡಿಟ್ಟಿದ್ದ ಪಾತ್ರೆಯೇ ದೈವದ ಕಲ್ಲಿನತ್ತ ಚಲಿಸುತ್ತಿತ್ತಂತೆ. ಆದರೆ, ಕಾಲಕ್ರಮೇಣ ಆ ಕುಟುಂಬ ಮನೆಯನ್ನು ಮಾರಿ ಬೇರೆ ಕಡೆ ಹೊರಟು ಹೋಗಿದ್ದರು.

ಮತ್ತೆ ಬೆಳಕಿಗೆ ಬಂದ ಕ್ಷೇತ್ರ :

ಆ ಮುಸಲ್ಮಾನ ಕುಟುಂಬವೇನೋ ಹೊರಟು ಹೋಯಿತು. ಶಕ್ತಿ ಅಲ್ಲೇ ಉಳಿಯಿತು. ಈ ಘಟನೆ ನಡೆದು ಹಲವು ದಶಕಗಳೇ ಕಳೆದಿವೆ. 15 ವರ್ಷಗಳಿಂದ ಇಲ್ಲಿ ಹಲವು ಘಟನೆಗಳು ನಡೆಯುತ್ತಿವೆ. ಇತ್ತೀಚೆಗೆ ಮಣಿಕಂಠ ಯುವಶಕ್ತಿ ಕೇಂದ್ರ ಭಜನಾ ಮಂದಿರವೊಂದನ್ನು ಸ್ಥಾಪಿಸುವ ಕೆಲಸ ಆರಂಭಿಸಿತ್ತು. ಆದರೆ, ಇದಕ್ಕೆ ತಡೆ ಬರಲಾರಂಭಿಸಿದಾಗ, ಮಂದಿರದಲ್ಲಿ ಪ್ರಶ್ನೆ ಇಟ್ಟಾಗ ‘ಯುವಶಕ್ತಿ’ ಯ ಯುವಕರು ತಾಯಿ ಕಲ್ಲುರ್ಟಿಯನ್ನು ನಂಬಬೇಕು ಎಂಬ ಅಪ್ಪಣೆಯಾಯಿತು.

ನಾವು ಬಿಟ್ಟೆವೆಂದು ದೈವ ಬಿಡುವುದೇ..? ಪೂ – ನೀರ್(ಹೂ-ನೀರು) ಸಲ್ಲದೇ ಹೋದಲ್ಲಿ ಹೇಗೆ? ಅಂತೆಯೇ, ಹಳೆಯ ದೈವಸ್ಥಾನ ಜೀರ್ಣೋದ್ಧಾರಗೊಂಡು ಹೊಸ ರೂಪ ಪಡೆದು ನಿಂತಿದೆ.

20 ದಿನಗಳಲ್ಲಿ ನಡೆಯಿತು ಜೀರ್ಣೋದ್ಧಾರ :

ದೈವದ ಅಭಯ ಯುವಕರ ಮೇಲಿತ್ತು. ಇಡೀ ಊರೇ ಅಚ್ಚರಿ ಪಡುವಂತೆ ತಾಯಿಯ ದೈವಸ್ಥಾನದ ಕಾರ್ಯ ನಡೆಯಿತು.  ಕೇವಲ 20 ದಿನಗಳಲ್ಲಿ ಅಪ್ಪೆ ಕಲ್ಲುರ್ಟಿಯ ಕ್ಷೇತ್ರ ತಲೆ ಎತ್ತಿ ನಿಂತಿತು ಅಂದರೆ ನೀವು ನಂಬಲೇ ಬೇಕು. ಕ್ಷೇತ್ರದ ಜೀರ್ಣೋದ್ಧಾರಕ್ಕಾಗಿ ಹಗಲಿರುಳು ಯುವಕರು ಶ್ರಮಿಸಿದ್ದಾರೆ. ಹುಬ್ಬೇರಿಸುವಂತಹ ಕೆಲಸ ಮಾಡಿದ ಶ್ರೀ ಮಣಿಕಂಠ ಯುವಶಕ್ತಿ ತಂಡದ ಈ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.

ಕಾರ್ಯಕ್ರಮಗಳ ವಿವರ :

ಕುದ್ರೆಬೆಟ್ಟು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಮೇ.3 ರಂದು ಶ್ರೀ ಕಲ್ಲುರ್ಟಿ ದೈವದ ಪುನಃ ಪ್ರತಿಷ್ಠಾ ಮಹೋತ್ಸವ ಹಾಗೂ ಶ್ರೀ ಕಲ್ಲುರ್ಟಿ ಮತ್ತು ಗುಳಿಗ ದೈವಗಳ ಕೋಲ ನಡೆಯಲಿದೆ. ಮೇ.02 ರಂದು ಬೆಳಿಗ್ಗೆ ಶ್ರೀ ಮಣಿಕಂಠ ಸನ್ನಿಧಾನದಲ್ಲಿ ಗಣಹೋಮ, ಸಂಜೆ ಶಾಸ್ತ್ರ, ಕಲ್ಪೋಕ್ತ ಪೂಜೆ, ವಾಸ್ತು ಹೋಮಾದಿ ಅಧಿವಾಸ ನಡೆಯಲಿದೆ. ಸಂಜೆ 6.30 ರಿಂದ ‘ನಮ್ಮ ಕುಡ್ಲ’ ವಾಹಿನಿ ಖ್ಯಾತಿಯ ‘ಯಕ್ಷ ತೆಲಿಕೆ’ ಕಾರ್ಯಕ್ರಮ ನಡೆಯಲಿದೆ.

ಮೇ.03 ರಂದು ಬೆಳಿಗ್ಗೆ ಗಣಹೋಮ ಬಳಿಕ 10.00 ರಿಂದ 10.25ರ ಒಳಗೆ ಒದಗುವ ಮಿಥುನ ಲಗ್ನದ ಸುಮೂಹೂರ್ತದಲ್ಲಿ ಶ್ರೀ ಸೂರ್ಯನಾರಾಯಣ ಭಟ್ ಕಶೆಕೋಡಿ ಇವರ ವೈದಿಕತ್ವದಲ್ಲಿ ಶ್ರೀ ಕಲ್ಲುರ್ಟಿ ದೈವದ ಪ್ರತಿಷ್ಠೆ, ಸಾನಿಧ್ಯ ನವಕ ಕಲಶಾಭಿಷೇಕ, ಪರ್ವ ಸೇವೆ ನಡೆಯಲಿದೆ.

ಇದನ್ನೂ ಓದಿ : ಪುತ್ತೂರು: ಮಳೆಗಾಗಿ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದಲ್ಲಿ‌ಪರ್ಜನ್ಯ ಜಪ; ಶಾಸಕರು ಭಾಗಿ

ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಹಾಗೂ ಅನ್ನಸಂತರ್ಪಣೆ ನಡೆದು, ರಾತ್ರಿ ಶ್ರೀ ಕಲ್ಲುರ್ಟಿ ಮತ್ತು ಗುಳಿಗ ದೈವಗಳ ಕೋಲ ನಡೆಯಲಿದೆ.

Continue Reading

BANTWAL

ಮತ ಚಲಾಯಿಸಿದ ನವ ದಂಪತಿ…! ಶುಭ ಹಾರೈಸಿದ ಸ್ನೇಹಿತರು..!

Published

on

ಮಂಗಳೂರು : ಇಂದು ಹೊಸ ಬಾಳಿಗೆ ಕಾಲಿಡುತ್ತಿದ್ದ ಆ ಜೋಡಿಗಳು ಹೊಸ ಬಾಳಿನ ಚಿಂತನೆಯ ಜೊತೆಗೆ ದೇಶದ ಚಿಂತನೆಯನ್ನೂ ಮಾಡಿದ್ದಾರೆ. ಮದುವೆಯ ಸಮಾರಂಭದಲ್ಲಿ ಹಸಮಣೆ ಏರಿ ಪತಿ ಪತ್ನಿಯರಾಗಿ ಒಂದಾದ ಜೋಡಿ ಎಲ್ಲಾ ಸಂಪ್ರದಾಯಗಳು ಪೂರ್ಣಗೊಂಡ ತಕ್ಷಣ ಮದುವೆ ಮನೆಯಿಂದ ಹೊರ ನಡೆದಿದ್ದಾರೆ. ಮದುವೆ ಮನೆಯಿಂದ ಬಂದವರೇ ನೇರವಾಗಿ ಮತಗಟ್ಟೆಗೆ ಹೋಗಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಹೌದು ಇದು ನಡೆದಿರುವುದು ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಬೂತ್ ಸಂಖ್ಯೆ 16 ರಲ್ಲಿ . ಇವರ ಮದುವೆ ನಿಗದಿಯಾದ ದಿನಂದಂತೆ ಪ್ರಜಾಪ್ರಭುತ್ವದ ಹಬ್ಬವಾಗಿರೋ ಚುನಾವಣೆ ದಿನಾಂಕ ಕೂಡಾ ಘೋಷಣೆ ಆಗಿದೆ. ಒಂದು ಕಡೆ ಹಸೆಮಣೆ ಏರಿ ತಮ್ಮ ಸ್ವಂತ ಭವಿಷ್ಯ ಕಟ್ಟಿಕೊಳ್ಳುವ ಜೊತೆಗೆ ದೇಶದ ಭವಿಷ್ಯವನ್ನೂ ಕಟ್ಟಲು ತಮ್ಮ ಅಮೂಲ್ಯ ಮತವನ್ನು ಚಲಾಯಿಸಿ ಮಾದರಿಯಾಗಿದ್ದಾರೆ. ಬಂಟ್ವಾಳ ತಾಲೂಕಿನ ಮಲ್ಲೆರ್ಮಳಕೋಡಿ ಜಯರಾಮ ಕುಲಾಲ್ ಎಂಬ ವರ ವದುವಿವೊಂದಿಗೆ ಬಂದು ತನ್ನ ಮತ ಚಲಾಯಿಸಿದ್ದಾರೆ. ಇವರಿಬ್ಬರ ಈ ಕಾಳಜಿಗೆ ಜನರು ಹಾಗೂ ಮತಗಟ್ಟೆ ಅಧಿಕಾರಿಗಳು ಶುಭ ಹಾರೈಸಿದ್ದಾರೆ. ಇದೇ ವೇಳೆ ಜಯರಾಮ್ ಕುಲಾಲ್ ಅವರ ಸ್ನೇಹಿತರು ಹಿತೈಷಿಗಳು ಕೂಡಾ ಶುಭ ಹಾರೈಸಿದ್ದಾರೆ.

Continue Reading

LATEST NEWS

Trending