LATEST NEWS
ಇರಾನ್ ಬಂದರಿನಲ್ಲಿ ಸಿಕ್ಕಿಕೊಂಡ ಭಟ್ಕಳಿಗನಿಗೆ ಬೇಕಿದೆ ಸಹಾಯಹಸ್ತ..
Published
4 years agoon
By
Adminಭಟ್ಕಳ: ಭಟ್ಕಳ ಮೂಲದ ಯುವಕನೋರ್ವ 19 ತಿಂಗಳಿಗೂ ಹೆಚ್ಚು ಕಾಲ ಇರಾನ್ ಬಂದರುವಿನಲ್ಲಿ ಸಿಕ್ಕಿಕೊಂಡು ಮರಳಿ ಭಾರತಕ್ಕೆ ಬರಲು ಸಂಘ- ಸಂಸ್ಥೆಗಳು, ಸರ್ಕಾರಿ ಇಲಾಖೆಗಳ ನೆರವಿಗಾಗಿ ಈತ ಕಾಯುತ್ತಿದ್ದಾನೆ.
ಸರಕು ಹಡಗಿನಲ್ಲಿ ಸಮುದ್ರಯಾನಗಾರನಾಗಿ ಕೆಲಸ ಮಾಡುತ್ತಿದ್ದ ಯಾಸೀನ್, 2020ರ ಜನವರಿಯಲ್ಲಿ ಇರಾನ್ ಬಂದರಿನಲ್ಲಿ ಇಳಿದಿದ್ದ. ಕೋವಿಡ್ ಕಾರಣದಿಂದ ಹಡಗನ್ನು ಬಂದರಿನಲ್ಲೇ ಲಂಗರು ಹಾಕಲಾಗಿತ್ತು. ಈ ಹಡಗು ಮೂವರ ಪಾಲುದಾರಿಕೆ ಹೊಂದಿದ್ದು, ಈ ಮಾಲೀಕರುಗಳ ನಡುವಿನ ವಿವಾದದ ಕಾರಣದಿಂದ ಒಂದು ವರ್ಷಗಳ ವೇತನವನ್ನೇ ನೀಡಿಲ್ಲ. ಇದೀಗ ಸರಕು ಹಡಗುಗಳ ಚಲನೆ ಪುನರಾರಂಭಗೊಂಡಿದ್ದರೂ ಯಾಸೀನ್ ಇರುವ ಹಡಗು ಅಲ್ಲಿಂದ ತೆರಳಿಲ್ಲ ಎನ್ನಲಾಗಿದೆ.
ಯಾಸೀನ್ ಇರಾನ್‌ಗೆ ತೆರಳಲು ಏಜೆನ್ಸಿಯೊಂದರೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಇರಾನ್‌ನಲ್ಲಿ ಬದಲಿಸಲಾಗಿತ್ತು. ಬಹುತೇಕ ಇರಾನ್ ಏಜೆನ್ಸಿಗಳು ಪರ್ಸಿಯನ್ ಭಾಷೆಯ ಒಪ್ಪಂದ ಪತ್ರಕ್ಕೆ ಸಹಿ ಹಾಕಿಸಿಕೊಂಡು, ವೇತನ ಪಾವತಿಸದೆ ಕೆಲಸಗಾರರಿಗೆ ವಂಚಿಸುತ್ತದೆ.
ಪರ್ಸಿಯನ್ ಭಾಷೆ ಅಲ್ಪಸ್ವಲ್ಪ ತಿಳಿದಿದ್ದ ಯಾಸೀನ್, ಏಜೆನ್ಸಿಯ ಒಪ್ಪಂದ ಪತ್ರಕ್ಕೆ ಸಹಿ ಹಾಕದೆ ಆಕ್ಷೇಪ ವ್ಯಕ್ತಪಡಿಸಿದ್ದ ಎನ್ನಲಾಗಿದೆ.
ಕಳೆದ ಆರು ತಿಂಗಳಿನಿಂದ ಯಾಸೀನ್‌ಗೆ ಆಹಾರ ಸಾಮಗ್ರಿಗಳನ್ನೂ ನೀಡುತ್ತಿಲ್ಲ.
ಬಂದರಿನಲ್ಲಿ ಲಂಗರು ಹಾಕಿರುವ ಇತರ ಹಡಗುಗಳಿಂದ ಆಹಾರಗಳನ್ನು ಪಡೆದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾನೆನ್ನಲಾಗಿದೆ. ತಾನು ಇರಾನ್‌ನಲ್ಲಿ ಅನುಭವಿಸುತ್ತಿರುವ ಸಂಕಷ್ಟದ ಕುರಿತು ಯಾಸೀನ್ ಭಾರತೀಯ ದೂತಾವಾಸ ಮತ್ತು ಇತರ ಸಂಸ್ಥೆಗಳಿಗೆ ಸಂಪರ್ಕಿಸಿ ಹೇಳಿಕೊಂಡಿದ್ದಾನೆ ಎನ್ನಲಾಗಿದೆ.
ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಈಗಾಗಲೇ ಸಂಪರ್ಕ ಸಾಧಿಸಲಾಗಿದೆ. ಇರಾನ್‌ನಲ್ಲಿ ಸಿಲುಕಿಕೊಂಡಿರುವ ಭಾರತೀಯನಿಗೆ ವೇತನ ಪಾವತಿಸಿ, ಮರಳಿ ಮನೆಗೆ ಕರೆತರಲು ವಿದೇಶಾಂಗ ಸಚಿವಾಲಯ ಮಧ್ಯಪ್ರವೇಶಿಸಬೇಕು ಎಂದು ಏಮ್ ಇಂಡಿಯಾ ಫೋರಂ ಸ್ಥಾಪಕ ಅಧ್ಯಕ್ಷ ಶೇಖ್ ಮುಜಾಫರ್ ಶಿರಾಲಿ ಒತ್ತಾಯಿಸಿದ್ದಾರೆ.
news update
ಸಂಕಷ್ಟದಲ್ಲಿರುವ ಈ ಭಾರತೀಯ ಪ್ರಜೆಯ ಸಂರಕ್ಷಣೆ ಮತ್ತು ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ನಿಟ್ಟಿನಲ್ಲಿ Aim India Forum ಪರವಾಗಿ Shaikh Muzaffer Shirali ಅವರು ಈಗಾಗಲೇ ಪ್ರಧಾನ ಮಂತ್ರಿ ಸೇರಿದಂತೆ ಸಂಬಂಧಿಸಿದ ಇಲಾಖೆ ಮತ್ತು ಅಧಿಕಾರಿ ವಲಕ್ಕೆ ವಿಶೇಷ ಮನವಿಯ ಮೂಲಕ ಪ್ರಯತ್ನಿಸುತಿದ್ದು,ಭಾರತ ಮತ್ತು ಇರಾನ್ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇವರ ಪ್ರಯತ್ನದ ಫಲವಾಗಿ ಯಾಸೀನಶಾ ಇವರ ಪಾಸಪೋರ್ಟ ಆತನ ಇರಾನ್ ಮಾಲೀಕರಿಂದ ಮರಳಿ ಪಡೆಯಲಾಗಿದ್ದು, ಇಂದಿನಿಂದ ನಿಯಮಿತ ಆಹಾರವನ್ನು ಸಹ ಪೂರೈಸಲಾಗುತ್ತಿದೆ.
ಇವರ ಮಾಲೀಕರಿಂದ ವೇತನ ಪಾವತಿಯ ಜೊತೆಗೆ ಭಾರತಕ್ಕೆ ಸುರಕ್ಷಿತವಾಗಿ ಕಳುಹಿಸಿಕೊಡುವ ಕುರಿತು Aim India Forum ಸಂಬಂಧಪಟ್ಟ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕ ಸಾಧಿಸಿದ್ದು,ಪ್ರಕರಣ ಆದಷ್ಟು ಬೇಗ ಸುಖಾಂತ ಕಾಣುವ ವಿಶ್ವಾಸವಿದೆ ಎಂದು Aim India Forum ತಿಳಿಸಿದೆ.
FILM
ಖ್ಯಾತ ಬಾಲಿವುಡ್ ನಟಿಯಿಂದ ನಾಗಾದೀಕ್ಷೆ..! ಮಹಾಮಂಡಲೇಶ್ವರಿಯಾಗಿ ಬದಲಾದ ಬಾಲಿವುಡ್ ಹಾಟ್ ಸ್ಟಾರ್..!
Published
1 hour agoon
24/01/2025By
NEWS DESK90 ರ ದಶಕದಲ್ಲಿ ಪಡ್ಡೆ ಹುಡುಗರ ಹೃದಯಕ್ಕೆ ಕಚಕುಳಿ ಇಟ್ಟಿದ್ದ ಬಾಲಿವುಡ್ ಹಾಟ್ ಕ್ವೀನ್ ಮಮತಾ ಕುಲಕರ್ಣಿ ಈಗ ನಾಗಾಸಾದ್ವಿಯಾಗಿ (ಮಾಹಾಮಂಡಲೇಶ್ವರಿಯಾಗಿ)ದೀಕ್ಷೆ ಸ್ವೀಕರಿಸಿದ್ದಾರೆ. ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಕಿನ್ನರ ಅಖಾಡದಲ್ಲಿ ಈ ದೀಕ್ಷೆ ಸ್ವೀಕರಿಸುವ ಮೂಲಕ ಮಮತಾ ನಂದಗಿರಿ ಮಹಾಮಂಡಲೇಶ್ವರಿಯಾಗಿ ಬದಲಾಗಿದ್ದಾರೆ.
1993 ರಲ್ಲಿ ಬಾಲಿವುಡ್ ಸಿನೆಮಾಗೆ ಎಂಟ್ರಿಕೊಟ್ಟಿದ್ದ ಮಮತಾ ಕುಲಕರ್ಣಿ ಬ್ರಾಹ್ಮಣ ಕುಟುಂಬದಿಂದ ಬಂದವರು. ಮಾಡೆಲಿಂಗ್ ಮೂಲಕ ಸಿನೆಮಾ ಇಂಡಸ್ಟ್ರಿ ಪ್ರವೇಶಿಸಿದ ಮಮತಾ ಕುಲಕರ್ಣಿ ಹತ್ತಕ್ಕೂ ಹೆಚ್ಚು ಹಿಟ್ ಸಿನೆಮಾಗಳನ್ನು ನೀಡಿದ್ದಾರೆ. ಅಕ್ಷಯ್ ಕುಮಾರ್, ಗೋವಿಂದ್, ಅಮಿರ್ ಖಾನ್ ಸೇರಿದಂತೆ ಹಲವು ನಾಯಕರ ಜೊತೆ ನಟಿಸಿದ್ದಾರೆ. ಅಂದಿನ ಕಾಲದಲ್ಲೇ ಮೈ ಚಳಿ ಬಿಟ್ಟು ಡ್ಯಾನ್ಸ್ ಮಾಡುತ್ತಿದ್ದ ಮಮತಾ ಕುಲಕರ್ಣಿ ಬಾಲಿವುಡ್‌ನಲ್ಲಿ ಹಾಟ್ ಸ್ಟಾರ್ ಆಗಿಯೇ ಗುರುತಿಸಿಕೊಂಡಿದ್ದರು. 2000ನೇ ಇಸವಿಯಲ್ಲಿ ಸಿನೆಮಾ ಇಂಡಸ್ಟ್ರಿಯಿಂದ ದೂರ ಉಳಿಯಲು ಬಯಸಿದ್ದರಾದ್ರೂ 2001 ರಲ್ಲಿ ಕೊನೆಯ ಸಿನೆಮಾದಲ್ಲಿ ನಟಿಸಿ ಚಿತ್ರರಂಗಕ್ಕೆ ವಿದಾಯ ಹೇಳಿದ್ದರು.
ಸಿನೆಮಾ ಇಂಡಸ್ಟ್ರಿ ಬಿಟ್ಟು ಆಧ್ಯಾತ್ಮದತ್ತ ಒಲವು ತೋರಿದ ಮಮತಾ ಕುಲಕರ್ಣಿ, ಬೋರಿವಿಲಿಯಲ್ಲಿನ ಶ್ರೀ ಚೈತನ್ಯ ಗಗನಗಿರಿ ನಾಥ ಸ್ವಾಮಿ ಬಳಿ ಸನ್ಯಾಸತ್ವ ಸ್ವೀಕರಿಸಿದ್ದರು ಎಂದು ಸ್ವತಹ ಅವರೇ ಹೇಳಿಕೊಂಡಿದ್ದಾರೆ. ಕಳೆದ 20 ವರ್ಷಗಳಿಂದ ಸನ್ಯಾಸಿಯಂತೆ ಜೀವನ ಮಾಡುತ್ತಿದ್ದ 52 ವರ್ಷದ ಮಮತಾ ಕುಲಕರ್ಣಿ ಇದೀಗ ಕುಂಭ ಮೇಳಕ್ಕೆ ಆಗಮಿಸಿದ್ದಾರೆ. ಕುಂಭ ಮೇಳದಲ್ಲಿ ಕಿನ್ನರ ಅಖಾಡದ ಆಚಾರ್ಯ ಮಾಹಾಮಂಡಲೇಶ್ವರ್ ಲಕ್ಷ್ಮೀನಾರಾಯಣ ತ್ರಿಪಾಠಿ ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ.
ಬಳಿಕ ಮಹಾಮಂಡಲೇಶ್ವರಿ ದೀಕ್ಷೆ ಪಡೆಯುವ ಇಚ್ಚೆ ವ್ಯಕ್ತಪಡಿಸಿದ್ದು, ಅಖಿಲ ಭಾರತೀಯ ಅಖಾಡದ ಅಧ್ಯಕ್ಷ ರವೀಂದ್ರ ಪುರಿ ಅವರ ಜೊತೆ ಚರ್ಚೆ ನಡೆಸಿದ ಬಳಿಕ ಮಮತಾ ಕುಲಕರ್ಣಿಗೆ ದೀಕ್ಷೆ ನೀಡಲಾಗಿದೆ.
LATEST NEWS
ಬ್ರಾಹ್ಮಣರಿಲ್ಲದೆ ಸಂವಿಧಾನವೇ ಇಲ್ಲ ; ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್
Published
4 hours agoon
24/01/2025ಮಂಗಳೂರು/ಬೆಂಗಳೂರು : ‘ಬ್ರಾಹ್ಮಣ ಸಮುದಾಯದವರು ಭಾರತೀಯ ಸಂವಿಧಾನ ರಚನೆಯಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ’ ಎಂದು ಅಂಬೇಡ್ಕರ್ ಅವರೇ ಹೇಳಿದ್ದರು ಎಂಬುವುದಾಗಿ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ತಿಳಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸುವರ್ಣ ಮಹೋತ್ಸವದ ಅಂಗವಾಗಿ ನಡೆದ ಎರಡು ದಿನಗಳ ಬ್ರಾಹ್ಮಣ ಸಮಾವೇಶದಲ್ಲಿ ಮಾತನಾಡಿದ ನ್ಯಾಯಾಧೀಶರು, “ಬ್ರಾಹ್ಮಣ ಪದವನ್ನು ಜಾತಿಗಿಂತ ‘ವರ್ಣ’ ದೊಂದಿಗೆ ಸಂಯೋಜಿಸಬೇಕು. ವೇದಗಳನ್ನು ವರ್ಗೀಕರಿಸಿದ ವೇದವ್ಯಾಸ ಮೀನುಗಾರ ಮಹಿಳೆಯ ಮಗ ಆಗಿದ್ದರು. ರಾಮಾಯಣದ ಕರ್ತೃ ವಾಲ್ಮೀಕಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರು ಎಂದ ಮಾತ್ರಕ್ಕೆ “ನಾವು (ಬ್ರಾಹ್ಮಣರು) ಅವರನ್ನು ಕೀಳಾಗಿ ನೋಡಿದ್ದೇವೆಯೇ? ಶತಮಾನಗಳಿಂದ ಶ್ರೀರಾಮನನ್ನು ಪೂಜಿಸುತ್ತಿದ್ದೇವೆ ಮತ್ತು ಅವರ ಮೌಲ್ಯಗಳನ್ನು ಸಂವಿಧಾನದಲ್ಲಿ ಸೇರಿಸಲಾಗಿದೆ” ಎಂದು ಗರ್ವದಿಂದ ಹೇಳಿದರು.
ಬ್ರಾಹ್ಮಣೇತರ ರಾಷ್ಟ್ರೀಯತಾವಾದಿ ಹೋರಾಟಗಳಲ್ಲಿ ತಮ್ಮ ಹಿಂದಿನ ಸಂಬಂಧವನ್ನು ಉಲ್ಲೇಖಿಸಿದ ನ್ಯಾಯಾಧೀಶರು ನ್ಯಾಯಾಂಗ ಸ್ಥಾನದ ಇತಿಮಿತಿಗಳಲ್ಲಿ ಮಾತನಾಡುತ್ತಿದ್ದಾಗಿ ತಿಳಿಸಿದರು. “ಬಿ. ಎನ್. ರಾವ್ ಅವರು ಸಂವಿಧಾನದ ಕರಡನ್ನು ಸಿದ್ಧಪಡಿಸದಿದ್ದರೆ, ಅದನ್ನು ರೂಪಿಸಲು ಇನ್ನೂ 25 ವರ್ಷಗಳು ಬೇಕಾಗುತ್ತಿತ್ತು ಎಂದು ಡಾ. ಅಂಬೇಡ್ಕರ್ ಒಮ್ಮೆ ಭಂಡಾರ್ಕರ್ ಸಂಸ್ಥೆಯಲ್ಲಿ ಹೇಳಿದ್ದರು. ಸಂವಿಧಾನದ ಕರಡು ರಚನೆಯಲ್ಲಿ ಸಮಿತಿಯಲ್ಲಿದ್ದ ಏಳು ಸದಸ್ಯರಲ್ಲಿ ಮೂವರು – ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯಂಗಾರ್, ಎನ್. ಗೋಪಾಲಸ್ವಾಮಿ ಅಯ್ಯಂಗಾರ್ ಮತ್ತು ಬಿ. ಎನ್. ರಾವ್ – ಬ್ರಾಹ್ಮಣರಾಗಿದ್ದರು” ಎಂದು ಹೇಳುತ್ತಾ, ರಾಷ್ಟ್ರದ ಕಾನೂನು ಚೌಕಟ್ಟನ್ನು ರೂಪಿಸುವಲ್ಲಿ ಅವರ ಪಾತ್ರವನ್ನು ಒತ್ತಿ ಹೇಳಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು, “ಜನರು ಆಹಾರ ಅಥವಾ ಶಿಕ್ಷಣಕ್ಕಾಗಿ ಹೆಣಗಾಡುತ್ತಿರುವಾಗ ಇಂತಹ ದೊಡ್ಡ ಕಾರ್ಯಕ್ರಮಗಳು ಏಕೆ ಬೇಕು ಎಂದು ಹಲವರು ಕೇಳುತ್ತಾರೆ. ಆದರೆ ಸಮುದಾಯವನ್ನು ಒಟ್ಟುಗೂಡಿಸಲು ಮತ್ತು ಅದರ ಸಮಸ್ಯೆಗಳನ್ನು ಚರ್ಚಿಸಲು ಈ ಸಮಾವೇಶಗಳು ಅತ್ಯಗತ್ಯ. ಅಂತಹ ಕಾರ್ಯಕ್ರಮಗಳನ್ನು ಏಕೆ ನಡೆಸಬಾರದು?” ಎಂದು ಪ್ರಶ್ನಿಸಿದರು. ಈ ರೀತಿಯ ವಾಗ್ವಾದಗಳು ನಡೆಯುವ ಮೂಲಕ ಬ್ರಾಹ್ಮಣ ಸಮಾವೇಶ ಸಮಾರೋಪಗೊಂಡಿತು.
LATEST NEWS
ಐಸಿಸಿ ವರ್ಷದ ಏಕದಿನ ತಂಡ ಪ್ರಕಟ; ಭಾರತೀಯರಿಗಿಲ್ಲ ಸ್ಥಾನ
Published
4 hours agoon
24/01/2025By
NEWS DESK3ಮಂಗಳೂರು/ದುಬೈ : ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ವರ್ಷ ಪೂರ್ತಿ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಗುರುತಿಸಿ ಒಂದು ತಂಡವನ್ನು ಕಟ್ಟುತ್ತದೆ. ಇದು ಎಲ್ಲ ಸ್ವರೂಪಗಳಲ್ಲೂ ಮಾಡುತ್ತಲೇ ಬರುತ್ತಿದೆ. ಈಗ ಐಸಿಸಿ ವರ್ಷದ ಏಕದಿನ ತಂಡವನ್ನು ಪ್ರಕಟ ಮಾಡಿದೆ.
ವಿಪರ್ಯಾಸವೆಂದರೆ ಈ ತಂಡದಲ್ಲಿ ಒಬ್ಬನೇ ಒಬ್ಬ ಭಾರತೀಯ ಆಟಗಾರ ಇಲ್ಲ ಎಂಬುದೇ ಅಭಿಮಾನಿಗಳಿಗೆ ಬೇಸರದ ಸಂಗತಿಯಾಗಿದೆ.
ಆದರೆ, ಈ ತಂಡದಲ್ಲಿ ಮೂವರು ಪಾಕಿಸ್ತಾನ ತಂಡದ ಆಟಗಾರರು ಮತ್ತು ನಾಲ್ವರು ಲಂಕಾ ಆಟಗಾರರು ಸ್ಥಾನ ಪಡೆದಿರುವುದು ವಿಶೇಷ. ಐಸಿಸಿ ಪ್ರಕಟಿಸಿದ ಏಕದಿನ ತಂಡವನ್ನು ಶ್ರೀಲಂಕಾದ ಚರಿತ್ ಅಸಲಂಕಾ ಮುನ್ನಡೆಸುತ್ತಿದ್ದಾರೆ. ಅಸಲಂಕಾ ಆಡಿದ 16 ಪಂದ್ಯಗಳಲ್ಲಿ 50.2ರ ಸರಾಸರಿಯಲ್ಲಿ 605 ರನ್ ಕಲೆ ಹಾಕಿದ್ದು, ಇವರಿಗೆ ನಾಯಕನ ಪಟ್ಟ ಕಟ್ಟಲಾಗಿದೆ.
ಇದನ್ನೂ ಓದಿ: ಮಾಜಿ ಕ್ರಿಕೆಟಿಗ ಸೆಹ್ವಾಗ್-ಆರತಿ ದಾಂಪತ್ಯದಲ್ಲಿ ಬಿರುಕು ?
ಶ್ರೀಲಂಕಾ ತಂಡದ ಪರ ಕುಸಾಲ್ ಮೆಂಡೀಸ್ ಆಡಿದ 17 ಪಂದ್ಯಗಳಲ್ಲಿ 742 ರನ್ ಸಿಡಿಸಿದ್ದಾರೆ. ಈ ವೇಳೆ ಇವರ ಸರಾಸರಿ 53 ಆಗಿದೆ. ಈ ತಂಡದಲ್ಲಿ ಸ್ಥಾನ ಪಡೆದ ಇನ್ನೊಬ್ಬ ಲಂಕಾ ಆಟಗಾರ ಪತುನ್ ನಿಸ್ಸಂಕಾ. ಇವರು ಆಡಿದ 12 ಪಂದ್ಯಗಳಲ್ಲಿ 694 ರನ್ ಸಿಡಿಸಿದ್ದಾರೆ. ಉಳಿದಂತೆ ಸ್ಪಿನ್ ಬೌಲರ್ ವನಿಂದು ಹಸರಂಗಾ ಅವರಿಗೆ ತಂಡದಲ್ಲಿ ಸ್ಥಾನ ಲಭಿಸಿದೆ.
ಅಫ್ಘಾನಿಸ್ತಾನದ ಪರ ರಹಮಾನುಲ್ಲಾ ಗುರ್ಬಾಜ್, ಅಜ್ಮತುಲ್ಲಾ ಒಮರ್ಜಾಯ್, ಅಲ್ಲಾ ಗಜನ್ಫರ್ ಮೂವರು ಸ್ಥಾನ ಪಡೆದಿದ್ದಾರೆ. ರಹಮಾನುಲ್ಲಾ ಗುರ್ಬಾಜ್ ಪಾಕ್ ತಂಡದ ಸಯಿಮ್ ಅಯುಬ್ ಅವರೊಂದಿಗೆ ಇನಿಂಗ್ಸ್ ಆರಂಭಿಸಲಿದ್ದಾರೆ. ಈ ತಂಡದಲ್ಲಿ ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಆಲ್‌ರೌಂಡರ್ ಶೆರ್ಫೇನ್ ರುದಪೋರ್ಡ್ ಅವರನ್ನು ಐಸಿಸಿ ವರ್ಷದ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇವರು ಈ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಲಿದ್ದಾರೆ.
ಪಾಕ್ ತಂಡದ ಇಬ್ಬರು ವೇಗಿಗಳು
ಈ ವರ್ಷದ ಅಮೋಘ ಪ್ರದರ್ಶನ ನೀಡಿರುವ ಪಾಕ್ ತಂಡದ ಇಬ್ಬರು ಸ್ಟಾರ್ ವೇಗಿಗಳಿಗೆ ಅವಕಾಶ ನೀಡಲಾಗಿದೆ. ಪಾಕ್ ತಂಡದ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ಆಡಿದ 5 ಪಂದ್ಯಗಳಲ್ಲಿ 15 ವಿಕೆಟ್ ಪಡೆದಿದ್ದು, ಇವರು ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ. ಇನ್ನು ಕಳೆದ ವರ್ಷ ಆಡಿದ 8 ಪಂದ್ಯಗಳಲ್ಲಿ 13 ವಿಕೆಟ್ ಪಡೆದಿರುವ ಹ್ಯಾರಿಸ್ ರೌಫ್ ಅವರಿಗೂ ತಂಡದಲ್ಲಿ ಸ್ಥಾನ ನೀಡಲಾಗಿದೆ.
ಭಾರತೀಯ ಆಟಗಾರರಿಗೆ ಏಕೆ ಇಲ್ಲ ಸ್ಥಾನ?
2024ರ ಐಸಿಸಿಯ ಅತ್ಯುತ್ತಮ ಏಕದಿನ ತಂಡದಲ್ಲಿ ಒಬ್ಬ ಭಾರತೀಯ ಕ್ರಿಕೆಟಿಗ ಕೂಡ ಸ್ಥಾನ ಪಡೆಯದಿರುವುದು ಅಭಿಮಾನಿಗಳನ್ನು ನಿರಾಸೆಗೊಳಿಸಿದೆ. ಟೀಂ ಇಂಡಿಯಾ 2024ರಲ್ಲಿ ಕೇವಲ ಮೂರು ಏಕದಿನ ಪಂದ್ಯಗಳು ಆಡಿತ್ತು. ಈ ಸರಣಿ ಶ್ರೀಲಂಕಾ ವಿರುದ್ದ ನಡೆದಿತ್ತು. ಈ ಸರಣಿಯನ್ನು ಲಂಕಾ ಕೈವಶ ಮಾಡಿಕೊಂಡಿತ್ತು. ಹೀಗಾಗಿ ಭಾರತದ ಯಾವೊಬ್ಬ ಆಟಗಾರನು ಐಸಿಸಿ ತಂಡದಲ್ಲಿ ಸ್ಥಾನ ಪಡೆದಿಲ್ಲ.
ಐಸಿಸಿ ಏಕದಿನ ತಂಡ : ಸೈಮ್ ಅಯೂಬ್, ರಹಮಾನುಲ್ಲಾ ಗುರ್ಬಾಜ್, ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕಾ (ನಾಯಕ), ಶೆರ್ಫಾನೆ ರುದರ್‌ಫೋರ್ಡ್, ಅಜ್ಮತುಲ್ಲಾ ಒಮರ್ಜಾಯ್, ವನಿಂದು ಹಸರಂಗಾ, ಶಾಹೀನ್ ಶಾ ಅಫ್ರಿದಿ, ಹಾರಿಸ್ ರೌಫ್, ಎಎಮ್ ಗಜನ್ಫರ್
LATEST NEWS
ರೇಣುಕಾಸ್ವಾಮಿ ಕೊ*ಲೆ ಪ್ರಕರಣ : ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಹೇಳಿದ್ದೇನು?
Oyo ರೂಮ್ ನಲ್ಲಿ ಮಾಡಬಾರದನ್ನು ಮಾಡಿ ಸಿಕ್ಕಿಬಿದ್ದ ಜೋಡಿಹಕ್ಕಿ
ಶ್ರೀಲಂಕಾದಿಂದ ಧರ್ಮಸ್ಥಳಕ್ಕೆ ಆಗಮಿಸಿದ 38 ಜನರ ತಂಡ: ಬಿ.ಸಿ. ಮಾದರಿ ಅಳವಡಿಸಲು ಖಾವಂದರ ಸಲಹೆ
ಬೆಂಗಳೂರು: ಮಂತ್ರಿಮಾಲ್ನಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ
ಕಂದಕಕ್ಕೆ ಉರುಳಿದ ಕಾರು; ಮೂವರ ದು*ರ್ಮರಣ
ಟೀ ಮಾರುವವನ ಯಡವಟ್ಟಿಗೆ 13 ಮಂದಿ ಬಲಿ
Trending
- BIG BOSS2 days ago
ಗೌತಮಿ-ಧನರಾಜ್ ಬೆನ್ನಲ್ಲೇ ಈ ವಾರ ಫಸ್ಟ್ ಎಲಿಮಿನೇಟ್ ಆಗೋದ್ಯಾರು ?
- BIG BOSS4 days ago
ಬಿಗ್ ಬಾಸ್ ತೊರೆಯುವ ಬಗ್ಗೆ ಮತ್ತೊಮ್ಮೆ ಘೋಷಣೆ ಮಾಡಿದ ಕಿಚ್ಚ
- BIG BOSS1 day ago
ಭಾವನೆಗಳ ಮಹಾಪೂರ ನೀನು, ಕನಸುಗಳ ಶಿಖರ ನೀನು: ಭವ್ಯಾಗೆ ತ್ರಿವಿಕ್ರಮ್ ಪ್ರಪೋಸ್
- BIG BOSS4 days ago
ಬಿಗ್ ಬಾಸ್ ಸೀಸನ್ 11ರ ವಿನ್ನರ್ ಒಬ್ಬರಲ್ಲ ಇಬ್ಬರು… ಅಷ್ಟಕ್ಕೂ ಟ್ರೋಫಿ ನೀಡಿದ ಸುಳಿವೇನು ?