DAKSHINA KANNADA
ಸಂತ ಅಲೋಶಿಯಸ್ ಕಾಲೇಜಿನಲ್ಲಿ ನಡೆಯಿತು: ಪುರಾತನ ಸಂಸ್ಕೃತಿಯ ದೊಂದಿ ಬೆಳಕಿನ ಯಕ್ಷಗಾನ..!
Published
4 years agoon
By
Adminಮಂಗಳೂರು: ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಮದರ್ ತೆರೆಸಾ ಪೀಸ್ ಪಾರ್ಕ್ ಶನಿವಾರ ರಾತ್ರಿ ಅಪರೂಪದ “ದೊಂದಿ ಬೆಳಕಿನ ಯಕ್ಷಗಾನಕ್ಕೆ ಸಾಕ್ಷಿಯಾಯಿತು. ಪುರಾಣ ಪ್ರಸಿದ್ಧ ಯಕ್ಷಗಾನ ಪ್ರಸಂಗಕ್ಕೆ ಹೊರತಾಗಿ ಆಂಗ್ಲ ಕವಿ ವಿಲಿಯಂ ಶೇಕ್ಸ್ ಪಿಯರ್ “ಮ್ಯಾಕ್ ಬೆತ್” ಇಂಗ್ಲೀಷ್ ನಾಟಕವನ್ನು ಕನ್ನಡಕ್ಕೆ ಅನುವಾದ ಮಾಡಲಾಗಿದ್ದು, ಯಕ್ಷಗಾನವಾಗಿ ಪ್ರದರ್ಶನಗೊಂಡಿತು.ಖ್ಯಾತ ಯಕ್ಷಗಾನ ಪ್ರಸಂಗಕರ್ತ, ವೇಷಧಾರಿ ಸೂರಿಕುಮೇರು ಕೆ. ಗೋವಿಂದ ಭಟ್ ಮ್ಯಾಕ್ ಬೆತ್ ನಾಟಕವನ್ನು ಯಕ್ಷಗಾನ ಪ್ರಸಂಗವಾಗಿ ರಚನೆ ಮಾಡಿದ್ದಾರೆ.ಸಂತ ಅಲೋಶಿಯಸ್ ಯಕ್ಷತಂಡವು ದೊಂದಿ ಬೆಳಕಿನ ಯಕ್ಷಗಾನ ಪ್ರಸಂಗವನ್ನು ನಡೆಸಿಕೊಟ್ಟಿತು. ದ್ವಂದ್ವ ಭಾಗವತಿಕೆಯ ಮೂಲಕ ಭಾಗವತರಾದ ದಿನೇಶ್ ಅಮ್ಮಣ್ಣಾಯ ಹಾಗೂ ಪುತ್ತಿಗೆ ರಘುರಾಮ ಹೊಳ್ಳರು ಯಕ್ಷ ರೂಪಕಕ್ಕೆ ಕಳೆಗಟ್ಟಿಸಿದ್ದರು. ಹಿಮ್ಮೆಳದಲ್ಲಿ ಚಂಡೆಯಲ್ಲಿ ಮುರಾರಿ ಕಡಂಬಳಿತ್ತಾಯ, ಮದ್ದಳೆಯಲ್ಲಿ ಕೃಷ್ಣಪ್ರಕಾಶ ಉಳಿತ್ತಾಯ, ಚಕ್ರತಾಳದಲ್ಲಿ ಮಧುಸೂದನ ಅಲೆವೂರಾಯರು ಸಹಕರಿಸಿದ್ದರು.
ಮ್ಯಾಕ್ ಬೆತ್ ಆಗಿ ಸುನೀಲ್ ಪಲ್ಲಮಜಲು ಹಾಗೂ ದಿನೇಶ್ ನಾಯಕ್ ಸಮರ್ಥವಾಗಿ ಪಾತ್ರ ನಿಭಾಯಿಸಿದರೆ, ಲೇಡಿ ಮ್ಯಾಕ್ ಬೆತ್ ಆಗಿ ರಂಜಿತಾ ಎಲ್ಲೂರು ಉತ್ತಮ ಅಭಿನಯ ನೀಡಿದರು.
DAKSHINA KANNADA
ಮೂಡಬಿದಿರೆ: ಲವ್ ಜಿಹಾದ್ ಯತ್ನ; ಬಜರಂಗದಳದ ಮಿಂಚಿನ ಕಾರ್ಯಾಚರಣೆ …!!
Published
3 hours agoon
27/11/2024ಮೂಡುಬಿದಿರೆ : ಅನ್ಯಕೋಮಿನ ಯುವಕನ ಜೊತೆ ಜೈನ ವಿದ್ಯಾರ್ಥಿನಿಯ ಸುತ್ತಾಟ, ಚೆಲ್ಲಾಟಗಳನ್ನು ಮೂಡುಬಿದಿರೆ ಬಜರಂಗದಳ ಬೆಳಕಿಗೆ ಬಂದಿದೆ, ಬಳಿಕ, ಲವ್ ಜಿಹಾದ್‌ಗೆ ಜೈನ ಯುವತಿಯರನ್ನು ಟಾರ್ಗೆಟ್ ಮಾಡುತ್ತಿರುವ ಗಂಭೀರ ವಿಚಾರ ತಿಳಿದು ಬಂದಿದೆ.
ಮೊದಲಿಗೆ ಯುವತಿಯನ್ನು ಬಲೆಗೆ ಬೀಳಿಸಲು ಯುವಕ ಸ್ಕೇಚ್ ಹಾಕುತ್ತಿದ್ದವನ ಹೆಸರು ಸೀನಾನ್ ಎಂದು ತಿಳಿದುಬಂದಿದೆ. ಯುವತಿಯನ್ನು ತೋಡಾರಿನಲ್ಲಿರುವ ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ, ಮೂಡುಬಿದಿರೆ ನಿವಾಸಿ ಎಂದು ಗುರುತಿಸಲಾಗಿದೆ.
ಮೂಡುಬಿದಿರೆಯ ವಿದ್ಯಾಗಿರಿಯ ಕೆಫೆಯೊಂದರಲ್ಲಿ ಜೈನ ವಿದ್ಯಾರ್ಥಿನಿ ಜೊತೆ ಅನ್ಯಕೋಮಿನ ಯುವಕ ಚೆಲ್ಲಾಟವಾಡುತ್ತಿರುವ ವೇಳೆ ಬಜರಂಗದಳದ ಮಿಂಚಿನ ಕಾರ್ಯಾಚರಣೆ ನಡೆಸಿದೆ. ಈ ಸಮಯ ಸೀನಾನ್ ಸ್ಥಳದಿಂದ ಪರಾರಿಯಾಗಿದ್ದಾನೆ. ಇಬ್ಬರು ಕೆಫೆಯಲ್ಲಿ ಗ್ಲಾಸ್ ಅಳವಡಿಸಲಾಗಿರುವ ಸ್ಥಳದಲ್ಲಿ ಕೂತು ಮೈ-ಕೈಮುಟ್ಟಿಕೊಂಡು, ಚಕ್ಕಂದವಾಡುತ್ತಿದ್ದರು. ಸದ್ಯ ಇದೂ ಲವ್ ಜಿಹಾದ್ ಶಂಕೆ ವ್ಯಕ್ತವಾಗಿದ್ದು, ಸಾರ್ವಜನಿಕವಾಗಿ ಆಕ್ರೋಶ ಕೇಳಿಬಂದಿದೆ.
ಈ ಸೀನಾನ್ ಡ್ರಗ್ ಪೆಡ್ಲರ್ ಮತ್ತು ಇತರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾನೆ, ಮುಂದಿನ ದಿನಗಳಲ್ಲಿ ಮೂಡುಬಿದಿರೆ ಭಾಗದ ಯುವತಿಯರು ಸ್ವಲ್ಪ ಜಾಗರೂಕರಾಗಿರಬೇಕು. ತಪ್ಪಿದಲ್ಲಿ ಲವ್ ಜಿಹಾದಿಗೆ ಬಲಿಯಾಗಿ ತಮ್ಮ ಜೀವನವನ್ನು ಸರ್ವನಾಶ ಮಾಡಿಕೊಳ್ಳಬಾರದು ಎಂದು ಬಜರಂಗದಳ ಪ್ರಮುಖರು ಕರೆ ನೀಡಿರುತ್ತಾರೆ.
ಈಗಾಗಲೇ ಹಿಂದೂ ಸಮಾಜದ ಯುವತಿಯರು ಅನ್ಯಕೋಮಿನ ಯುವಕರ ನಾನಾ ವಿಧದ ಆಮಿಷಗಳಿಗೆ ಒಳಗಾಗಿ ಲವ್ ಜಿಹಾದ್ ಬಲೆಗೆ ಬಿದ್ದು, ಜೀವನ ಹಾಳು ಮಾಡಿಕೊಂಡಿರುವುದು ನಾವು ಪ್ರತಿದಿನ ಬೇರೆ ಬೇರೆ ಊರುಗಳಲ್ಲಿ ಕೇಳುತ್ತಿರುವ ವಿಚಾರವಾದರೂ ಇನ್ನೂ ಇತಂಹ ಜಿಗಾದ್ ಗೆ ಯುವತಿಯರು ಬಲಿಯಾಗುತ್ತಿರುವುದು ವಿಷಾದನೀಯವಾಗಿದೆ.
DAKSHINA KANNADA
ಮಂಗಳೂರು: ನಕಲಿ ಇ-ಚಲನ್ ಕಳುಹಿಸಿ ವ್ಯಕ್ತಿಗೆ 1.31 ಲಕ್ಷ ರೂಪಾಯಿ ವಂಚನೆ
Published
3 hours agoon
27/11/2024ಮಂಗಳೂರು: ಸಂಚಾರ ನಿಯಮ ಉಲ್ಲಂಘನೆಯ ಬಗ್ಗೆ ನಕಲಿ ಇ-ಚಲನ್ ಕಳುಹಿಸಿ ವ್ಯಕ್ತಿಯೊಬ್ಬರ ಖಾತೆಯಿಂದ 1.31 ಲಕ್ಷ ರೂಪಾಯಿ ಹಣವನ್ನು ವರ್ಗಾಯಿಸಿಕೊಂಡ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ :
ನವೆಂಬರ್ 24ರಂದು ತನಗೆ ವಾಟ್ಸ್‌ಆ್ಯಪ್ ನಂಬರ್‌ವೊಂದರಿಂದ ಮೆಸೇಜ್ ಬಂದಿದ್ದು, ಅದನ್ನು ಡೌನ್‌ಲೋಡ್ ಮಾಡಿದ ಬಳಿಕ ಮೊಬೈಲ್‌ಗೆ 16 ಒಟಿಪಿಗಳು ಬಂದಿದೆ. ಬಳಿಕ ಫ್ಲಿಪ್‌ಕಾರ್ಟ್ ಹಾಗೂ ಅಮೆಜಾನ್‌ನಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ 30,400 ರೂ., ಡೆಬಿಟ್ ಕಾರ್ಡ್ ಮೂಲಕ 16,700 ರೂ. ಮತ್ತು ಪೇ ಲೇಟರ್‌ನಲ್ಲಿ 71,496 ರೂ. ಹಣ ವರ್ಗಾವಣೆಯಾದ ಬಗ್ಗೆ ಮೊಬೈಲ್‌ಗೆ ಮೆಸೇಜ್ ಬಂದಿತ್ತು. ತಕ್ಷಣ ಮೊಬೈಲ್ ಮೂಲಕ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್‌ನ್ನು ದೂರುದಾರರು ಬ್ಲಾಕ್ ಮಾಡಿದ್ದಾರೆ.
ಯಾರೋ ಅಪರಿಚಿತರು ಎಪಿಕೆ ಫೈಲ್ ಮೂಲಕ ತನ್ನ ಡೆಬಿಟ್, ಕ್ರೆಡಿಟ್ ಕಾರ್ಡ್‌ನ ಮಾಹಿತಿ ಪಡೆದು ಫ್ಲಿಪ್‌ಕಾರ್ಟ್‌ನಲ್ಲಿ 39,398 ರೂ. ಮೌಲ್ಯದ ವನ್‌ಪ್ಲಸ್ ಮೊಬೈಲ್, 32,398 ರೂ. ಮೌಲ್ಯದ ಮೊಟೊರೊಲಾ ಎಜ್ ಮೊಬೈಲ್, 12,800 ರೂ. ಮೌಲ್ಯದ ಏರ್ ಪೋಡ್, 14,700 ರೂ., 29,400 ರೂ., 3,000 ರೂ. ಮೌಲ್ಯದ ಫ್ಲಿಪ್‌ಕಾರ್ಟ್ ವೋಚರ್‌ಗಳನ್ನು ಹೊಸದಿಲ್ಲಿಯ ವಿಳಾಸದಲ್ಲಿರುವ ವ್ಯಕ್ತಿಗೆ ಆರ್ಡರ್ ಮಾಡಿ 1,31,396 ರೂ. ವಂಚಿಸಿರುವುದಾಗಿ ಹಣ ಕಳೆದುಕೊಂಡ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.
DAKSHINA KANNADA
ಮಂಗಳೂರು : ಮತ್ತೆ ಡ್ರಗ್ ಸೀಜ್; ಎಂಡಿಎಂಎ ಮಾರಾಟ ಮಾಡುತ್ತಿದ್ದ ಮೂವರ ಬಂಧನ
Published
4 hours agoon
27/11/2024ಮಂಗಳೂರು: ನಗರವನ್ನು ಡ್ರಗ್ ಮುಕ್ತ ನಗರ ಮಾಡುವ ನಿಟ್ಟಿನಲ್ಲಿ ಪೊಲೀಸ್ ಕಾರ್ಯಾಚರಣೆ ಆರಂಭವಾಗಿ ವರ್ಷಗಳ ಕಳೆದಿದೆ. ಮಾದಕ ವ್ಯಸನ ಹಾಗೂ ಮಾರಾಟದ ವಿಚಾರವಾಗಿ ಹಲವಾರು ಜನಜಾಗೃತಿ ಕಾರ್ಯಕ್ರಮಗಳನ್ನು ಇಲಾಖೆಯಿಂದ ಮಾಡಲಾಗಿದೆ. ಆದ್ರೆ ಈ ಡ್ರಗ್ ಜಾಲವನ್ನು ಬುಡ ಸಮೇತ ಕಿತ್ತು ಹಾಕಲು ಪೊಲೀಸ್ ಇಲಾಖೆಯಿಂದ ಸಾದ್ಯವಾಗುತ್ತಿಲ್ಲ.
ಮಂಗಳೂರಿನಲ್ಲಿ ಮಾದಕ ವಸ್ತುವಿಗೆ ಡಿಮ್ಯಾಂಡ್ ಇರುವ ಹಿನ್ನೆಲೆಯಲ್ಲಿ ಡ್ರಗ್ ಮಾಫಿಯಾ ದಿನಕ್ಕೊಂದು ಹೊಸ ತಂತ್ರದ ಮೂಲಕ ಡ್ರಗ್ಸ್ ಮಂಗಳೂರಿಗೆ ತಲುಪಿಸುತ್ತಿದೆ. ಹಾಗಂತ ಪೊಲೀಸರು ಇಂತಹ ಆಸಾಮಿಗಳನ್ನು ಹಿಡಿದು ಜೈಲಿಗಟ್ಟುವುದು ಕೂಡಾ ನಿಂತಿಲ್ಲ. ಇದೀಗ ಪಜೀರು ಗ್ರಾಮದ ಕಂಬಳ ಪದವು ಎಂಬಲ್ಲಿ ಮತ್ತೆ ಮೂವರು ಡ್ರಗ್ ಸೆಲ್ಲರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು ಒಂದುವರೆ ಲಕ್ಷ ಮೌಲ್ಯದ ಎಂಡಿಎಂಎ ಡ್ರಗ್ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು ತಲಪಾಡಿಯ ಗೌತಮ್, ಕುಂಪಲದ ಕಾರ್ತಿಕ್ ಹಾಗೂ ತೊಕ್ಕೊಟ್ಟಿನ ನಿಖಿಲ್ ಎಂದು ಗುರುತಿಸಲಾಗಿದೆ.
LATEST NEWS
ಟ್ರಕ್ಗೆ ಸ್ಕಾರ್ಪಿಯೊ ಡಿ*ಕ್ಕಿ – ಭೀಕರ ಅಪಘಾ*ತಕ್ಕೆ ಐವರು ವೈದ್ಯರ ದುರ್ಮ*ರಣ
ಕುಸ್ತಿಪಟು ಬಜರಂಗ್ ಪೂನಿಯಾಗೆ 4 ವರ್ಷಗಳ ನಿಷೇಧ !
ರೈತನ ಸೋಗಿನಲ್ಲಿ ಬಂದು ದಾಳಿಂಬೆ ಖರೀದಿ – 6.5 ಲಕ್ಷ ಪಂಗನಾಮ
ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ
ಸೀತಾರಾಮ ಸೀರಿಯಲ್ ವೀಕ್ಷಕರಿಗೆ ಶಾಕಿಂಗ್ ನ್ಯೂಸ್; ಎಲ್ಲ ಸರಿ ಅನ್ನುವಷ್ಟರಲ್ಲೇ ಮತ್ತೊಂದು ಆಘಾತ
ಐಪಿಎಲ್ 2025: ಮೊದಲ ಪಂದ್ಯದಿಂದ ಮುಂಬೈ ಪಡೆಯ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾನ್
Trending
- LATEST NEWS7 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- Baindooru5 days ago
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!
- LIFE STYLE AND FASHION6 days ago
ಚಿಕನ್ ಪ್ರಿಯರೇ ಗಮನಿಸಿ; ಕೋಳಿ ಮಾಂಸದ ಈ ಭಾಗವನ್ನು ತಿನ್ನಲೇಬೇಡಿ
- BIG BOSS4 days ago
BBK11: ಕಿಚ್ಚನ ಪಂಚಾಯ್ತಿಯಲ್ಲಿ ರಜತ್ಗೆ ಫುಲ್ ಕ್ಲಾಸ್; ಹೊರ ಹೋಗೋಕೆ ಬಾಗಿಲು ಓಪನ್ ಇದೆ ಎಂದ ಬಾದ್ ಷಾ!