Connect with us

    LATEST NEWS

    ಪ್ರಧಾನಿ ಮೋದಿಗೆ ಗಯಾನಾ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ

    Published

    on

    ಗಯಾನಾ: ಭಾರತ-ಗಯಾನ ಸಂಬಂಧಗಳನ್ನು ಬಲಪಡಿಸುವ ಪ್ರಯತ್ನಗಳನ್ನು ಗುರುತಿಸಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಯಾನಾದ ಅತ್ಯುನ್ನತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಗಯಾನಾ ಅಧ್ಯಕ್ಷ ಡಾ.ಇರ್ಫಾನ್ ಅಲಿ ಜಾರ್ಜ್ಟ ಟೌನ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ‘ಆರ್ಡರ್ ಆಫ್ ಎಕ್ಸಲೆನ್ಸ್’ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ, ಗಯಾನಾದ ಅತ್ಯುನ್ನತ ಪ್ರಶಸ್ತಿಯನ್ನು ನನಗೆ ನೀಡಿ ಗೌರವಿಸಿದ್ದಕ್ಕಾಗಿ ನನ್ನ ಸ್ನೇಹಿತ ಅಧ್ಯಕ್ಷ ಇರ್ಫಾನ್ ಅಲಿ ಅವರಿಗೆ ನಾನು ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತೇನೆ ಎಂದು ಪ್ರಧಾನಿ ಮೋದಿ ಹೇಳಿದರು.

    ಅಷ್ಟೇ ಅಲ್ಲದೇ, ಫೆಬ್ರವರಿ 2021ರಲ್ಲಿ, ಪ್ರಧಾನಿ ಮೋದಿ ಅವರು ಡೊಮಿನಿಕಾಗೆ 70 ಸಾವಿರಾ ಡೋಸ್ ಕೊರೊನಾ ಲಸಿಕೆ ಅಸ್ಟ್ರಾಜೆನೆಕಾವನ್ನು ಪೂರೈಸುವ ಮೂಲಕ ಅಮೂಲ್ಯವಾದ ಉಡುಗೊರೆಯನ್ನು ನೀಡಿದ್ದರು. ಪ್ರಧಾನಿ ಮೋದಿಯವರ ಈ ಉದಾರತೆಯನ್ನು ಗುರುತಿಸಿ, ಡೊಮಿನಿಕಾ ಸರ್ಕಾರವು ಅವರಿಗೆ ತನ್ನ ಅತ್ಯುನ್ನತ ನಾಗರಿಕೆ ಗೌರವವನ್ನು ನೀಡಿ ಗೌರವಿಸಿದೆ.

    ಪ್ರಧಾನಿ ಮೋದಿ ಗಯಾನಾ ತಲುಪುತ್ತಿದ್ದಂತೆ ಅವರನ್ನು ಸ್ವಾಗತಿಸಲು ರಾಷ್ಟ್ರಪತಿಯಿಂದ ಹಿಡಿದು ಇಡೀ ಕ್ಯಾಬಿನೆಟ್ನವರಿಗೆ ಎಲ್ಲರೂ ಸಿದ್ದರಾಗಿ ನಿಂತಿರುವುದು ಕಂಡುಬಂದಿತ್ತು. ಅಂದಹಾಗೆ 56 ವರ್ಷಗಳಲ್ಲಿ ಗಯಾನಾಗೆ ಭೇಟಿ ನೀಡಿದ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಪಾತ್ರರಾಗಿದ್ದಾರೆ.

    LATEST NEWS

    ಪ್ರತಿವರ್ಷ ಅಯ್ಯಪ್ಪ ಮಾಲೆ ಹಾಕುವ ಸ್ವಾಮಿಗಳ ಹೆಸರು ಯಾವುದು ಗೊತ್ತಾ ??

    Published

    on

    ‘ಶಬರಿಮಲೆ’ ಎಂದಾಕ್ಷಣ ನಮಗೆ ಮೊದಲು ನೆನಪಿಗೆ ಬರೋದು ಅಯ್ಯಪ್ಪ ಸ್ವಾಮಿ ಮತ್ತು ಭಕ್ತಿಯಿಂದ ಮಾಲೆ ಧರಿಸುವ ಭಕ್ತರು. ಕಾರ್ತಿಕ ಮಾಸ ಆರಂಭವಾಗುತ್ತಿದ್ದಂತೆ ಲಕ್ಷಾಂತರ ಜನ ಅಯ್ಯಪ್ಪ ಮಾಲೆಯನ್ನು ಧರಿಸುತ್ತಾರೆ. ಕೆಲವರು ಮಂಡಲ ದೀಕ್ಷಾ, ಇನ್ನು ಕೆಲವರು ಅರ್ಥ ಮಂಡಲ ದೀಕ್ಷಾ ತೆಗೆದುಕೊಳ್ಳುತ್ತಾರೆ. 41 ದಿನಗಳ ದೀಕ್ಷೆ ಪಡೆದು ಶಬರಿಮಲೆಗೆ ತೆರಳಿ ಅಯ್ಯಪ್ಪನ ದರ್ಶನ ಪಡೆದು ಬಂದ ಬಳಿಕ ಪೂಜೆಯೊಂದಿಗೆ ಅಯ್ಯಪ್ಪ ಮಾಲೆಯನ್ನು ತೆಗೆಯುತ್ತಾರೆ.

    ಪ್ರತಿವರ್ಷ ಭಕ್ತಿಯಿಂದ ಮಾಲೆ ಧರಿಸಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯುವ ಸ್ವಾಮಿಗಳಿಗೆ ಒಂದೊಂದು ಹೆಸರಿನಿಂದ ಕರೆಯಲಾಗುತ್ತದೆ ಎಂಬ ವಿಷಯ ಎಷ್ಟೋ ಜನರಿಗೆ ಗೊತ್ತೇ ಇರುವುದಿಲ್ಲ. ಸಾಮಾನ್ಯವಾಗಿ ಐದಕ್ಕಿಂತ ಹೆಚ್ಚು ಬಾರಿ ಮಾಲೆ ಧರಿಸಿ ಅಯ್ಯಪ್ಪನ ದರ್ಶನ ಪಡೆದವರನ್ನು ‘ಗುರು ಸ್ವಾಮಿ’ ಎನ್ನಲಾಗುತ್ತದೆ.
    ಇದಕ್ಕೆ ಹೊರತಾಗಿ ಪ್ರತಿವರ್ಷ ಮಾಲೆ ಹಾಕಿದವರನ್ನು ಒಂದೊಂದು ಹೆಸರುಗಳಿಂದ ಕರೆಯಲಾಗುತ್ತದೆ. ಆ ಹೆಸರುಗಳು ಯಾವುದ್ಯಾವುದು ಎಂಬ ವಿವರ ಇಲ್ಲಿವೆ.

     

    18 ವರ್ಷಗಳಿಂದ ಮಾಲೆ ಹಾಕುವ ಸ್ವಾಮಿಗಳ ಹೆಸರು :

    ಮೊದಲನೇ ಬಾರಿಗೆ ದೀಕ್ಷೆ ಪಡೆದುಕೊಂಡ ಸ್ವಾಮಿಗಳನ್ನು ಕನ್ನೆಸ್ವಾಮಿ ಎಂದು ಕರೆಯಲಾಗುತ್ತದೆ. ಎರಡನೇ ಬಾರಿಗೆ ಮಾಲೆ ಹಾಕಿದ ಸ್ವಾಮಿಗಳನ್ನು ಕತ್ತಿಸ್ವಾಮಿ, ಮೂರನೇ ಬಾರಿಗೆ ಮಾಲೆ ಹಾಕಿದವರನ್ನು ಗಂಟ ಸ್ವಾಮಿ, ನಾಲ್ಕನೇ ಬಾರಿಗೆ ಮಾಲೆ ಹಾಕಿದರೇ ಅವರನ್ನು ಗದಸ್ವಾಮಿ, ಆ ಬಳಿಕ ಮಾಲೆ ಹಾಕುವ ಸ್ವಾಮಿಗಳನ್ನು ಬಿಲ್ಲು ಸ್ವಾಮಿ, ಆರನೇ ಬಾರಿಗೆ ಮಾಲೆ ಹಾಕಿದ ಸ್ವಾಮಿಗಳನ್ನು ಜ್ಯೋತಿ ಸ್ವಾಮಿ, ಏಳನೇ ಬಾರಿಗೆ ಸೂರ್ಯ ಸ್ವಾಮಿ, ಎಂಟನೇ ಬಾರಿಗೆ ಚಂದ್ರ ಸ್ವಾಮಿ, ಒಂಬತ್ತನೇ ಬಾರಿಗೆ ಮಾಲೆ ಹಾಕಿದವರನ್ನು ವೇಲು ಸ್ವಾಮಿ, ಹತ್ತನೇ ಬಾರಿಗೆ ಮಾಲೆ ಹಾಕಿದರೆ ಅವರನ್ನು ವಿಷ್ಣು ಚಕ್ರ ಸ್ವಾಮಿ ಎಂದು ಕರೆಯಲಾಗುತ್ತದೆ. ಹನ್ನೊಂದನೇ ಬಾರಿಗೆ ಮಾಲೆ ಹಾಕಿದರೆ ಶಂಖಾದರ ಸ್ವಾಮಿ, ಹನ್ನೆರಡನೇ ಬಾರಿಗೆ ಮಾಲೆ ಹಾಕಿದವರನ್ನು ನಾಗಾಭರಣ ಸ್ವಾಮಿ, ಬಳಿಕ ಹದಿಮೂರನೇ ಬಾರಿಗೆ ಮಾಲೆ ಹಾಕುವ ಸ್ವಾಮಿಗಳನ್ನು ಶ್ರೀಹರಿ ಸ್ವಾಮಿ, ಹದಿನಾಲ್ಕನೇ ಬಾರಿಗೆ ಮಾಲೆ ಹಾಕುವ ಸ್ವಾಮಿಗಳನ್ನು ಪದ್ಮಸ್ವಾಮಿ, ಹದಿನೈದನೇ ಬಾರಿಗೆ ಮಾಲೆ ಹಾಕುವ ಸ್ವಾಮಿಗಳನ್ನು ತ್ರಿಶೂಲಸ್ವಾಮಿ ಎಂದು ಹೇಳಲಾಗುತ್ತದೆ.ಹದಿನಾರನೇ ಬಾರಿಗೆ ಮಾಲೆ ಹಾಕಿದರೆ ಅಂತಹ ಸ್ವಾಮಿಯನ್ನು ಶಬರಿಗಿರಿಸ್ವಾಮಿ, ಹದಿನೇಳನೇ ಬಾರಿಗೆ ಮಾಲೆ ಹಾಕುವ ಸ್ವಾಮಿಯನ್ನು ಓಂಕಾರ ಸ್ವಾಮಿ, ಹದಿನೆಂಟನೇ ಬಾರಿಗೆ ಮಾಲೆ ಹಾಕಿದರೆ ಅವರನ್ನು ನಾರಿಕೇಳಸ್ವಾಮಿ ಎಂದು ಕರೆಯಲಾಗುತ್ತದೆ.

    Continue Reading

    LATEST NEWS

    ‘ಓಲಾ ಎಲೆಕ್ಟ್ರಿಕ್ ಕಂಪನಿ’ಯಿಂದ 500 ಉದ್ಯೋಗಿಗಳು ವಜಾ

    Published

    on

    ನವದೆಹಲಿ: ಓಲಾ ಎಲೆಕ್ಟ್ರಿಕ್ ಸಂಸ್ಥೆಯೊಳಗಿನ ವಿವಿಧ ಪಾತ್ರಗಳಲ್ಲಿ 500 ಕ್ಕೂ ಹೆಚ್ಚು ಉದ್ಯೋಗಿಗಳ ಮೇಲೆ ಪರಿಣಾಮ ಬೀರುವ ಪುನರ್ರಚನೆ ಉಪಕ್ರಮವನ್ನ ಪ್ರಾರಂಭಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಮಾರ್ಜಿನ್ಗಳನ್ನು ಸುಧಾರಿಸುವ ಮತ್ತು ಲಾಭದಾಯಕತೆಯನ್ನ ಸಾಧಿಸುವ ಕಾರ್ಯತಂತ್ರದ ಭಾಗವಾಗಿ ಕಂಪನಿಯು ಈ ವಜಾಗಳನ್ನ ಜಾರಿಗೆ ತರುತ್ತಿದೆ ಎಂದು ವರದಿ ತಿಳಿಸಿದೆ.

     

    ಅಂದ ಹಾಗೆ , ಭವಿಶ್ ಅಗರ್ವಾಲ್ ನೇತೃತ್ವದ ಸಂಸ್ಥೆಯು ತನ್ನ ಐಪಿಒಗೆ ಮುಂಚಿತವಾಗಿ ಸೆಪ್ಟೆಂಬರ್ 2022ರಲ್ಲಿ ಎರಡು ಪುನರ್ರಚನೆ ಅಭ್ಯಾಸಗಳನ್ನ ನಡೆಸಿತು. ಈ ಅಭ್ಯಾಸಗಳ ಸಮಯದಲ್ಲಿ, ವಿವಿಧ ಲಂಬಗಳಲ್ಲಿ ಕಾರ್ಯಾಚರಣೆಗಳನ್ನ ಕೇಂದ್ರೀಕರಿಸುವ ಮತ್ತು ಸುವ್ಯವಸ್ಥಿತಗೊಳಿಸುವ ಗುರಿಯನ್ನ ಹೊಂದಿರುವ ಹೊಸ ನೇಮಕಾತಿಗಳ ಸರಣಿಯನ್ನ ಅದು ಘೋಷಿಸಿತು.

    Continue Reading

    bangalore

    ಯಜಮಾನಿಯರಿಗೆ ಸ್ಟಾಪ್ ಆಗುತ್ತಾ ಗೃಹಲಕ್ಷೀ ಹಣ ?

    Published

    on

    ಮಂಗಳೂರು/ಬೆಂಗಳೂರು: ಕಾಂಗ್ರೇಸ್ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಗೃಹಲಕ್ಷೀ ಯೋಜನೆ ಹಣ ಸ್ಟಾಪ್ ಆಗುತ್ತಾ ಅನ್ನುವಂತಹ ಭಯ ಯಜಮಾನಿಯರಲ್ಲಿ ಕಾಡುತ್ತಿದೆ. ಇದಕ್ಕೆ ಕಾರಣ ಇತ್ತೀಚೆಗೆ, ರಾಜ್ಯದಲ್ಲಿ ಕೆಲವು ದಿನಗಳಿಂದ ಚರ್ಚೆಯಲ್ಲಿರುವ ಅಕ್ರಮ ಬಿಪಿಎಲ್ ಕಾರ್ಡ್ ರದ್ದತಿ ವಿಚಾರ.


    ರಾಜ್ಯದಲ್ಲಿ ಅಕ್ರಮ ಬಿಪಿಎಲ್ ಕಾರ್ಡ್ ರದ್ದತಿ ವಿಚಾರ ಬಾರಿ ಸದ್ದು ಮಾಡುತ್ತಿದೆ. ಇದರ ನಡುವೆ ಮಹಿಳೆಯರಿಗೆ ಬಿಪಿಎಲ್ ಕಾರ್ಡ್ ರದ್ದಾದರೆ ಅಥವಾ ಬಿಪಿಎಲ್ ಕಾರ್ಡ್ ನಿಂದ ಎಪಿಎಲ್ ಗೆ ವರ್ಗಾವಣೆಯಾದರೆ 2000 ರೂ. ಬರುತ್ತೋ, ಇಲ್ಲವೋ ಎಂಬುವುದು ರಾಜ್ಯದ ಮಹಿಳೆಯರ ತಲೆನೋವಿಗೆ ಕಾರಣವಾಗಿದೆ.

    ಇದನ್ನು ಓದಿ :ನಾಯಕನಾಗಿ ಕಾಣಿಸಿಕೊಳ್ಳಲಿರುವ ರಜತ್ ಪಾಟಿದಾರ್

    ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಮೀ ಹೆಬ್ಬಾಳ್ಕರ್, ರಾಜ್ಯದಲ್ಲಿ ಬಿಪಿಎಲ್ ಗೆ ಅರ್ಹವಲ್ಲದ ಸುಮಾರು 80,000 ಕಾರ್ಡುಗಳನ್ನು ಎಪಿಎಲ್ ಗೆ ವರ್ಗಾವಣೆ ಮಾಡಲಾಗಿದೆ. ಇದರಿಂದಾಗಿ ಮಹಿಳೆಯರು ಯಾವುದೇ ರೀತಿಯ ಗೊಂದಲ ಪಡುವುದು ಬೇಡ. ಅಕ್ರಮ ಬಿಪಿಎಲ್ ಕಾರ್ಡ್ ರದ್ದಾದ ಕೂಡಲೇ ಗೃಹಲಕ್ಷೀಯರ ಖಾತೆಗೆ 2000 ರೂ. ಹಣ ಜಮೆ ಆಗುವುದು. ತೆರಿಗೆ ಪಾವತಿಸುವವರಿಗೆ ಮಾತ್ರ 2000 ರೂ. ಹಣ ಬರುವುದಿಲ್ಲ. ಬಿಪಿಎಲ್ ಕಾರ್ಡ್ ಎಪಿಎಲ್ ಆಗಿ ಬದಲಾದರೂ ಹಣ ಬರುತ್ತದೆ, ಆದರೆ ಅಂತವರು ತೆರಿಗೆ ಪಾವತಿಸದಿದ್ದರೆ ಮಾತ್ರ ಬರುವುದು ಎಂದು ಹೇಳಿದ್ದಾರೆ.

    Continue Reading

    LATEST NEWS

    Trending