Connect with us

    NATIONAL

    ಅಂಡಮಾನ್ ಹೋಗೋರಿಗೆ ಭರ್ಜರಿ ಆಫರ್; ಊಟ, ಜ್ಯೂಸ್ ಫ್ರೀ! ಕಡಿಮೆ ಟಿಕೆಟ್ ದರ!

    Published

    on

    ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಶತಮಾನಗಳಿಂದ ಸೌಂದರ್ಯದ ಸಂಕೇತವಾಗಿದ್ದು, ಕಡಲತೀರಗಳಿಗೆ ಯಾರಾದರು ಹೋಗಲು ಬಯಸಿದರೆ, . ಇಲ್ಲಿ ಸುಂದರವಾದ ಕಡಲತೀರಗಳಿರುವ ಐಆರ್‌ಸಿಟಿಸಿಯ ಅಂಡಮಾನ್ ಟೂರ್ ಪ್ಯಾಕೇಜ್ ಬುಕ್ ಮಾಡಬಹುದು.

    ಪ್ರವಾಸದ ಅವಧಿ 5 ರಾತ್ರಿ/ 6 ದಿನಗಳು. ಪ್ರಯಾಣದ ದಿನಾಂಕ 18.12.2024. ಎಸಿ ಹೋಟೆಲ್ ವಸತಿ ಒದಗಿಸಲಾಗುವುದು. ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಈ ಟೂರ್ ಪ್ಯಾಕೇಜ್ ಅನ್ನು ಬುಕ್ ಮಾಡಬಹುದು. ನವದೆಹಲಿ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 16 ರಲ್ಲಿರುವ ಪ್ರವಾಸೋದ್ಯಮ ಕೇಂದ್ರಕ್ಕೆ ಭೇಟಿ ನೀಡಿ ಪ್ಯಾಕೇಜ್ ಅನ್ನು ಬುಕ್ ಮಾಡಬಹುದು.

    ಐಆರ್‌ಸಿಟಿಸಿ ಅಂಡಮಾನ್ ಪ್ರವಾಸೋದ್ಯಮದ ಅಧಿಕೃತ ವೆಬ್‌ಸೈಟ್ www.irctctourism.com ಈ ಪ್ಯಾಕೇಜನ್ನು ನೇರವಾಗಿ ಬುಕ್ ಮಾಡಬಹುದು. ಈ ಟೂರ್ ಪ್ಯಾಕೇಜ್‌ನಲ್ಲಿ  ಒಬ್ಬಂಟಿಯಾಗಿ ಪ್ರಯಾಣಿಸಿದರೆ, ಒಬ್ಬ ವ್ಯಕ್ತಿಗೆ ರೂ.82,020 ಶುಲ್ಕ ವಿಧಿಸಲಾಗುತ್ತದೆ. ಇಬ್ಬರು ಪ್ರಯಾಣಿಸಿದರೆ, ಒಬ್ಬರಿಗೆ ರೂ.59,760/- ಶುಲ್ಕ ವಿಧಿಸಲಾಗುತ್ತದೆ.

    ಮೂವರು ಪ್ರಯಾಣಿಸಿದರೆ, ಒಬ್ಬರಿಗೆ ರೂ.56,270 ಶುಲ್ಕ ವಿಧಿಸಲಾಗುತ್ತದೆ. ಮಕ್ಕಳಿಗೆ ಪ್ರತ್ಯೇಕ ಶುಲ್ಕ ವಿಧಿಸಲಾಗುತ್ತದೆ. 5 ರಿಂದ 11 ವರ್ಷ ವಯಸ್ಸಿನ ಮಕ್ಕಳೊಂದಿಗೆ ಪ್ರಯಾಣಿಸಿದರೆ, ಪ್ರತ್ಯೇಕ ಶುಲ್ಕ ಪಾವತಿಸಬೇಕಾಗುತ್ತದೆ. ಹೈದರಾಬಾದ್‌ನಿಂದ ಪೋರ್ಟ್ ಬ್ಲೇರ್‌ಗೆ ಮತ್ತು ಹೈದರಾಬಾದ್‌ಗೆ ಹಿಂತಿರುಗುವ ವಿಮಾನ ಟಿಕೆಟ್‌ಗಳು ಲಭ್ಯವಿವೆ.

    ಎಲ್ಲಾ ಸ್ಥಳಗಳಲ್ಲಿಯೂ ಹವಾನಿಯಂತ್ರಿತ ವಸತಿ ವ್ಯವಸ್ಥೆ ಮಾಡಲಾಗುವುದು. ನೀಲ್ ದ್ವೀಪ, ಹ್ಯಾವ್ಲಾಕ್ ದ್ವೀಪ, ರಾಸ್ ದ್ವೀಪ, ನಾರ್ತ್ ಬೇ ದ್ವೀಪ ಮತ್ತು ಹಿಂತಿರುಗುವ ದೋಣಿ ಶುಲ್ಕವನ್ನು ಒಳಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ, ಐಆರ್‌ಸಿಟಿಸಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

     

    LATEST NEWS

    WATCH : ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ರಕ್ಷಿಸಿದ ರೈಲ್ವೇ ಸಿಬ್ಬಂದಿ

    Published

    on

    ಮಂಗಳೂರು/ಕಾನ್ಪುರ : ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ರೈಲು ಹತ್ತುವ ವೇಳೆ ಅಥವಾ ಇಳಿಯುವ ವೇಳೆ ಆಯತಪ್ಪಿ ಬಿದ್ದ ಘಟನೆಗಳು ಸಂಭವಿಸಿವೆ. ಕೆಲವೊಮ್ಮೆ ಅದೃಷ್ಟವಶಾತ್, ಪಾರಾಗಿರುವುದಿದೆ. ರೈಲ್ವೇ ಸಿಬ್ಬಂದಿ ರಕ್ಷಿಸಿರುವ ಘಟನೆಗಳೂ ಇವೆ. ಇಂತಹ ಹಲವು ವೀಡಿಯೋಗಳು ವೈರಲ್ ಆಗಿವೆ. ಇದೀಗ ಮತ್ತೊಂದು ಅಂತಹುದೇ ವೀಡಿಯೋ ವೈರಲ್ ಆಗಿದೆ.


    ರೈಲು ಬಂದು ನಿಂತಿತ್ತು. ಮಹಿಳೆ ರೈಲು ಹತ್ತಿದ್ದರು. ಆದರೆ, ಮಕ್ಕಳು ಪ್ಲಾಟ್ ಫಾರ್ಮ್ ನಲ್ಲಿಯೇ ಉಳಿದಿದ್ದರು.  ಮಕ್ಕಳು ಅಲ್ಲೇ ಇರುವುದನ್ನು  ನೋಡಿ ಮಹಿಳೆ ಮಕ್ಕಳನ್ನು ಕರೆದಿದ್ದಾರೆ. ಅವರು ಬರದೇ ಇದ್ದಾಗ ರೈಲಿನಿಂದ ಕೆಳಗೆ ಹಾರಲು ಯತ್ನಿಸಿದ್ದಾರೆ. ಈ ವೇಳೆ  ಆಯತಪ್ಪಿ ರೈಲು ಹಾಗೂ ಪ್ಲಾರ್ಟ್ ಫಾರ್ಮ್ ನಡುವೆ ಸಿಲುಕಿಕೊಂಡಿದ್ದಾರೆ. ತಕ್ಷಣ ರೈಲ್ಬೇ ಪೊಲೀಸರು ಆಕೆಯನ್ನು ರಕ್ಷಿಸಿ ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದಾರೆ.

    ಸದ್ಯ ಘಟನೆಯ ವೀಡಿಯೋ ವೈರಲ್ ಆಗಿದ್ದು, ಇದು ಕಾನ್ಪುರ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.  ಮಹಿಳೆಯನ್ನು ಜಿಆರ್‌ಪಿ ಸಬ್‌ಇನ್ಸ್‌ಪೆಕ್ಟರ್ ಶಿವ ಸಾಗರ್ ಶುಕ್ಲಾ ಮತ್ತು ಕಾನ್‌ಸ್ಟೇಬಲ್ ಅನೂಪ್ ಕುಮಾರ್ ಪ್ರಜಾಪತಿ ರಕ್ಷಿಸಿದ್ದಾರೆ.

    ಇದನ್ನೂ ಓದಿ : ಚಾರ್ಜರ್ ಕೇಬಲ್ ಗೆ ಗಮ್ ಟೇಪ್ ಸುತ್ತಿ ಚಾರ್ಜ್ ಮಾಡುವವರು ಇದನ್ನು ಓದಲೇ ಬೇಕು !

    11 ಸೆಕೆಂಡುಗಳಈ ವೀಡಿಯೋದಲ್ಲಿ ಇಬ್ಬರು ರೈಲ್ವೆ ಸಿಬ್ಬಂದಿ ರೈಲಿನಿಂದ ಜಿಗಿದ ಮಹಿಳೆಯನ್ನು ರಕ್ಷಿಸುತ್ತಿರುವುದನ್ನು ಕಾಣಬಹುದಾಗಿದೆ. ಆಕೆ ಬಿದ್ದ ಕೆಲವೇ ಕ್ಷಣಗಳಲ್ಲಿ ಜಿಆರ್‌ಪಿ ಸಿಬ್ಬಂದಿ ಆಕೆಯನ್ನು ಹಿಡಿದು ರಕ್ಷಿಸಿದ್ದು, ವ್ಯಾಪಕ ಮೆಚ್ಚುಗೆ ಗಳಿಸಿದೆ.

    Continue Reading

    LATEST NEWS

    ಚಾರ್ಜರ್ ಕೇಬಲ್ ಗೆ ಗಮ್ ಟೇಪ್ ಸುತ್ತಿ ಚಾರ್ಜ್ ಮಾಡುವವರು ಇದನ್ನು ಓದಲೇ ಬೇಕು !

    Published

    on

    ಮಂಗಳೂರು: ಕೆಲವರೆಲ್ಲಾ ಲಕ್ಷ-ಲಕ್ಷ ಕೊಟ್ಟು ಮೊಬೈಲ್ ತೆಗೆದುಕೊಳ್ಳುತ್ತಾರೆ. ಆದ್ರೆ, ಅದಕ್ಕಿಂತ ಕಡಿಮೆಯಲ್ಲಿ ಸಿಗುವ ಚಾರ್ಜರ್ ತೆಗೆದುಕೊಳ್ಳಲು ಜಿಪುಣತನ ತೋರಿಸುತ್ತಾರೆ. ಹಳೇ ಚಾರ್ಜರ್ ಗಳಿಗೆ ಗಮ್ ಟೇಪ್, ಪ್ಲಾಸ್ಟರ್ ಅಥವಾ ರಬ್ಬರ್ ಹಾಕಿ ಮೊಬೈಲ್ ಚಾರ್ಜ್ ಮಾಡುವುದರಿಂದ ಅಪಘಾತಗಳು ಸಂಭವಿಸುತ್ತಿವೆ ಎಂದು ಅಧ್ಯಯನ ಒಂದು ದೃಢ ಪಡಿಸಿದೆ.


    ಇದು ತುಂಬಾ ಮನೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ದೃಶ್ಯವಾಗಿದೆ. ಯುನೈಟೆಡ್ ಕಿಂಗ್ ಡಮ್ ನ ಎಲೆಕ್ಟ್ರಿಕಲ್ ಸೇಫ್ಟಿ ಇನ್ ಸ್ಟಿಟ್ಯೂಟ್ ಈ ಬಗ್ಗೆ ಅಧ್ಯಯನ ನಡೆಸಿದೆ. ಕಳಪೆ ಗುಣಮಟ್ಟದ ಚಾರ್ಜರ್ ಹಾಗೂ ಚೈನೀಸ್ ಚಾರ್ಜರ್ ಗಳಿಂದಲೂ ಅಪಘಾತಗಳು ಸಂಭವಿಸುತ್ತಿವೆ. ಕಳೆದ ಐದು ವರ್ಷಗಳಲ್ಲಿ, ಅಪಘಾತಗಳಿಗೆ ಗುರಿಯಾಗುವ ಎಲೆಕ್ಟ್ರಾನಿಕ್ ಯಂತ್ರೋಪಕರಣಗಳ ಕುರಿತು ವಿವಿಧ ದೇಶಗಳಲ್ಲಿ ಅಧ್ಯಯನಗಳನ್ನು ನಡೆಸಿದೆ.
    ನೀವು ಎಷ್ಟೇ ದುಬಾರಿ ಮೊಬೈಲ್ ತೆಗೆದುಕೊಂಡರು ಕೂಡ, ಕಡಿಮೆ ಬೆಲೆಯ ಚಾರ್ಜರ್ ನಿಮ್ಮ ಮೊಬೈಲ್ ಹಾಳು ಮಾಡುತ್ತವೆ. ಇನ್ನೂ, ಚಾರ್ಜರ್ ಖರೀದಿಸುವಾಗ ತೂಕವಿಲ್ಲದೆ ಹಗುರವಾಗಿ ಕಂಡರೆ ಅದು ಒಳ್ಳೆಯದಲ್ಲ. ಬದಲಾಗಿ ಅದು ಉತ್ತಮ ಗುಣಮಟ್ಟದಿಂದ ಕೂಡಿರುವುದಿಲ್ಲ. ಉತ್ತಮವಾದ ಚರ್ಜಾರ್ ಗಳು ಸ್ವಲ್ಪ ಭಾರವಾಗಿರುತ್ತದೆ.

    ಇದನ್ನೂ ಓದಿ: ಮದ್ಯಪ್ರಿಯರಿಗೆ ಅಬಕಾರಿ ಇಲಾಖೆಯಿಂದ ಸಿಹಿಸುದ್ಧಿ !!
    ಇತ್ತೀಚೆಗೆ, ಪ್ರಪಂಚದಾದ್ಯಂತ ಸೆಲ್ ಫೋನ್ ಗಳು ಸ್ಪೋಟಗೊಳ್ಳುವುದನ್ನು ಕೇಳಿರಬಹುದು. ಇದಕ್ಕೆ ಮುಖ್ಯ ಕಾರಣ ಚಾರ್ಜರ್ ಗಳು ಎಂದು ಹೇಳಿದರೆ ನೀವು ನಂಬಲೇ ಬೇಕು. ಹಳೆಯ ಚಾರ್ಜರ್ ಗಳನ್ನು ಜನರು ಬಳಸಲು ಇನ್ನೊಂದು ಕಾರಣ, ಮೊಬೈಲ್ ಕಂಪನಿಗಳು ಫೋನ್ ಜೊತೆ ಚಾರ್ಜರ್ ಕೊಡುವುದನ್ನು ನಿಲ್ಲಿಸಿದೆ. ಇದರಿಂದ ಹಳೆಯ ಚಾರ್ಜರ್ ಗಳಿಗೆ ಗಮ್ ಟೇಪ್, ಪ್ಲಾಸ್ಟರ್ ಸುತ್ತಿ ಅಥವಾ ಲಬ್ಬರ್ ಸುತ್ತಿ ಮತ್ತೆ ಮತ್ತೆ ಉಪಯೋಗಿಸುತ್ತಾರೆ. ಇಂತಹ ಚಾರ್ಜರ್ ಗಳನ್ನು ಬಳಸುವುದರಿಂದ ವಿದ್ಯುತ್ ಅಪಘಾತ ಸಂಭವಿಸಬಹುದು ಎಂದು ಅಧ್ಯಯನ ಹೇಳಿದೆ.
    ಗಮ್ ಟೇಪ್ ಅಥವಾ ಪ್ಲಾಸ್ಟರ್ ಸುತ್ತಿದ ಚಾರ್ಜಿಂಗ್ ಕೇಬಲ್ ವೈರ್ ಗಳಿಂದ ಶಾರ್ಟ್ ಸರ್ಕ್ಯೂಟ್ ಉಂಟಾದ ಘಟನೆಗಳು ನಡೆದಿವೆ. ಒಂದು ವೇಳೆ ಚಾರ್ಜಿಂಗ್ ಕೇಬಲ್ ಎಲ್ಲಿಯಾದರೂ ಕತ್ತರಿಸಲ್ಪಟ್ಟರೆ ಮತ್ತು ಅದರ ಒಳ ಭಾಗವು ತುಂಬಾ ಕಾಣುತ್ತಿದ್ದರೆ, ಅದನ್ನು ಬಳಸುವುದನ್ನು ನಿಲ್ಲಿಸಿ.


    ಈ ಕತ್ತರಿಸಲ್ಪಟ್ಟ ಚಾರ್ಜಿಂಗ್ ಕೇಬಲ್ ವೈರ್ ಗಳಿಂದ ಶಾರ್ಟ್ ಸರ್ಕ್ಯೂಟ್ ಗಳಂತಹ ಘಟನೆಗಳು ಸಂಭವಿಸಿದೆ. ಮೊಬೈಲ್ ಫೋನ್ ಗಳು ಮಾತ್ರವಲ್ಲದೆ, ಟ್ಯಾಬ್, ಲ್ಯಾಪ್ ಟಾಪ್, ಟ್ರಿಮ್ಮರ್ ಹಾಗೂ ಇನ್ನಿತರೆ ಯಂತ್ರೋಪಕರಣಗಳಲ್ಲಿಯೂ ಹಾನಿಗೊಳಗಾದ ಕೇಬಲ್ ಗಳಿರುವ ಹಳೆಯ ಚಾರ್ಜರ್ ಗಳನ್ನು ಉಪಯೋಗಿಸಬಾರದು.
    ಆದಷ್ಟು ಉತ್ತಮ ಚಾರ್ಜರ್ ಕೇಬಲ್ ಗಳನ್ನು ಬಳಸುವುದರಿಂದ ಮೊಬೈಲ್ ಸುರಕ್ಷಿತವಾಗಿರುತ್ತದೆ ಮತ್ತು ಜಾಸ್ತಿ ಬಾಳಿಕೆ ಬರುತ್ತದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ನೀವು ಸುರಕ್ಷಿತವಾಗಿರುತ್ತಿರ.

    Continue Reading

    LATEST NEWS

    ಸ್ನೇಹಿತನಿಗೆ ಥಳಿಸಿ ಅ*ಪ್ರಾಪ್ತೆ ಮೇಲೆ ಅ*ತ್ಯಾಚಾ*ರ ಎಸಗಿದ ಟ್ರಕ್ ಚಾಲಕ

    Published

    on

    ಮಂಗಳೂರು/ ಮಧ್ಯಪ್ರದೇಶ : 15 ವರ್ಷದ ಬಾ*ಲಕಿಯ ಮೇಲೆ ಟ್ರಕ್ ಚಾಲಕ ಅ*ತ್ಯಾಚಾ*ರವೆಸಗಿರುವ ಘಟನೆ ರೈಸನ್ ಜಿಲ್ಲೆಯಲ್ಲಿ ನಡೆದಿದೆ. ಸಿಲ್ವಾನಿ – ಸಾಗರ್ ರಸ್ತೆಯಲ್ಲಿರುವ ಸಿಯರಾಮೌ ಅರಣ್ಯದಲ್ಲಿ ಕೃ*ತ್ಯ ನಡೆದಿದೆ. ಟ್ರಕ್ ಚಾಲಕ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಓರ್ವ ಆರೋಪಿ ಪರಾರಿಯಾಗಿದ್ದಾನೆ.

    ಸ್ನೇಹಿತನಿಗೆ ಥಳಿಸಿ ಕೃ*ತ್ಯ :

    ಸಂ*ತ್ರಸ್ತೆ ಮತ್ತು ಆಕೆಯ 21 ವರ್ಷದ ಸ್ನೇಹಿತ ವನದೇವಿ ದೇವಾಲಯ ಭೇಟಿ ನೀಡಲು ತಮ್ಮ ಬೈಕನ್ನು ರಸ್ತೆ ಬದಿ ನಿಲ್ಲಿಸಿ ತೆರಳುತ್ತಿದ್ದರು. ಈ ವೇಳೆ ಒಂದು ಟ್ರಕ್ ಕೆಟ್ಟು ನಿಂತಿತ್ತು. ಅದರ ಚಾಲಕ ಮತ್ತು ಅವನ ಸಹಚರರು ಕೂಡ ಕಾಡಿನೊಳಗೆ ಹೋಗಿದ್ದಾರೆ.  ಬಾಲಕಿಯ ಸ್ನೇಹಿತನಿಗೆ ಥಳಿಸಿ ಬೈಕ್ ಕೀ ಕಿತ್ತುಕೊಂಡಿದ್ದಾರೆ. ಟ್ರಕ್ ಚಾಲಕ ಸಂಜು ಅ*ಪ್ರಾಪ್ತೆಯನ್ನು ಕಾಡಿನೊಳಗೆ ಎಳೆದೊಯ್ದು ಆಕೆಯ ಮೇಲೆ ಆ*ತ್ಯಾಚಾ*ರ ಎಸಗಿದ್ದಾನೆ ಎಂದು ತಿಳಿದುಬಂದಿದೆ.

    ಇದನ್ನೂ ಓದಿ : ಗೂಗಲ್ ಮ್ಯಾಪ್ ನಂಬಿ ಎಡವಟ್ಟು; 50 ಅಡಿ ಆಳಕ್ಕೆ ಕಾರು ಬಿದ್ದು ಮೂವರ ದುರ್ಮ*ರಣ

    ಮೂವರು ಆರೋಪಿಗಳು ಹೋದ ಬಳಿಕ ಅಪ್ರಾ*ಪ್ತೆ ಹಾಗೂ ಆಕೆಯ ಸ್ನೇಹಿತ ಮುಖ್ಯರಸ್ತೆಗೆ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಗಳ ಬೆಂಬತ್ತಿದ ಪೊಲೀಸರು ಟ್ರಕ್ ಚಾಲಕ ಸಂಜು, ಸಹಚರರಾದ ಶಿವನಾರಾಯಣ ಎಂಬವರನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಮತ್ತೊರ್ವ ಆರೋಪಿ  ಅಕ್ಷಯ್ ಗಾಗಿ ಬಲೆ ಬೀಸಿದ್ದಾರೆ.

    Continue Reading

    LATEST NEWS

    Trending