Connect with us

DAKSHINA KANNADA

ಸರಕಾರದ ಹೊಸ ಲಾಕ್ ಡೌನ್ ಜನತೆಯನ್ನು ಹಸಿವಿನಿಂದ ಸಾಯಿಸಲಿದೆ : ಡಿವೈಎಫ್ಐ

Published

on

ಮಂಗಳೂರು: ರಾಜ್ಯ ಸರಕಾರ ಘೋಷಿಸಿರುವ ಹೊಸಲಾಕ್ ಡೌನ್ ನಿಯಮಗಳು ಅಪ್ರಾಯೋಗಿಕ ಮಾತ್ರವಲ್ಲ, ಅಮಾನವೀಯವೂ ಆಗಿದೆ. ಈ ನಿಯಮಗಳು ಪೊಲೀಸರ ಲಾಠಿಗಳಿಗೆ ಅಸಾಧಾರಣ ಶಕ್ತಿ ನೀಡುವುದಲ್ಲದೆ, ಜನಸಾಮಾನ್ಯರನ್ನು ಹಸಿವಿಗೆ ದೂಡಿ ಸಾಯಿಸಲಿದೆ ಎಂದು ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.ಕೊರೋನ‌ ಸೋಂಕು ಹರಡುವಿಕೆ ತಡೆಯಲು, ಸೋಂಕಿತರಿಗೆ ಚಿಕಿತ್ಸೆ ಒದಗಿಸಿ ಸಾವು ನೋವು ತಡೆಯಲು ಪೂರ್ಣವಾಗಿ ವಿಫಲಗೊಂಡಿರುವ ರಾಜ್ಯ ಸರಕಾರ ಕಳೆದ ಮೂರು ವಾರಗಳಿಂದ ಜನಸಂದಣಿ ತಡೆಯುವ ನಿಟ್ಟಿನಲ್ಲಿ ಹೊರಡಿಸುತ್ತಿರುವ ಆದೇಶಗಳಲ್ಲಿ ತಪ್ಪುಗಳ ಮೇಲೆ ತಪ್ಪುಗಳನ್ನು ಎಸಗುತ್ತಿದೆ.

ಹತ್ತಿರದ ರಾಜ್ಯ ಸರಕಾರಗಳ ಮಾದರಿಯನ್ನು ಅನುಸರಿಸಿ “ಚಿಕಿತ್ಸೆ, ಪರಿಹಾರ, ನಿರ್ಬಂಧ” ದಂತಹ ಪ್ರಾಯೋಗಿಕ ಕ್ರಮಗಳನ್ನು ಕೈಗೊಳ್ಳುವ ಬದಲಿಗೆ ಜನತೆಯನ್ನು ಮನೆಗಳಲ್ಲಿ ಕೂಡಿ ಹಾಕುವ, ಅಗತ್ಯ ವಸ್ತುಗಳ ಖರೀದಿ ಸಂದರ್ಭ ಜನಜಂಗುಳಿ ಸೇರುವಂತಹ ತಪ್ಪುಗಳನ್ನು ಎಸಗುತ್ತಾ ಬಂದಿದೆ.

ಇದರಿಂದ ರಾಜ್ಯದಲ್ಲಿ ಈಗಾಗಲೆ ಹಾಹಾಕಾರ ಎದ್ದಿದೆ. ಆಕ್ಸಿಜನ್, ಹಾಸಿಗೆ, ಚಿಕಿತ್ಸೆಗಳು ಇನ್ನೂ ಸರಿಯಾಗಿ ದೊರಕದ ದಯನೀಯ ಸ್ಥಿತಿ ಒಂದೆಡೆಯಾದರೆ,ಔಷಧಿಗಳ ಕಾಲಾದಂಧೆ, ಖಾಸಗಿ ಆಸ್ಪತ್ರೆಗಳ ದುಬಾರಿ ವೆಚ್ಚ ಸಂತ್ರಸ್ತ ಜನತೆಯನ್ನು ಹೈರಾಣಾಗಿಸಿದೆ.

ಯಾವುದೇ ಪರಿಹಾರ ಪ್ಯಾಕೇಜ್ ಗಳಿಲ್ಲದೆ ಜ‌ನತೆಯನ್ನು ಮನೆಗಳಲ್ಲಿ ಕೂಡಿಹಾಕುವ, ದುಡಿಮೆಯ ಅವಕಾಶ ನಿರಾಕರಿಸುವ ವಾರಾಂತ್ಯ ಕರ್ಫ್ಯೂ, ಜನತಾ ಕರ್ಫ್ಯೂಗಳು ಜನತೆಯ ಚೈತನ್ಯವನ್ನೇ ಕಡಿದು ಹಾಕಿದೆ.

ಈಗ ಇವೆಲ್ಲದರ ಅತಿ ಎಂಬಂತೆ ಪೂರ್ಣ ಲಾಕ್ ಡೌ‌ನ್ ಘೋಷಿಸಿ ಕೇವಲ ಕಾಲ್ನಡಿಗೆಯಲ್ಲಿ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಎಂದು ಆದೇಶಿಸಿರುವುದು ಜನತೆಯ ಬದುಕುವ ಹಕ್ಕಿಗೆ ಪೆಟ್ಟು ನೀಡಲಿದೆ.

ವಾಹನಗಳ ಬಳಕೆಗೆ ಅವಕಾಶ ನಿರಾಕರಣೆ ವ್ಯಾಪಾರಿಗಳು ಸಹ ತಮ್ಮ ಮಳಿಗೆಗಳಿಗೆ ತಲುಪಲಾರದಂತೆ ಮಾಡಲಿದೆ. ಮಹಾ ‌ನಗರಗಳ ಮುಖ್ಯ ಬಡಾವಣೆಗಳನ್ನು ಹೊರತು ಪಡಿಸಿ ಇತರೆಡೆ ಕೆಲವು ಅಗತ್ಯ ವಸ್ತುಗಳ ಮಳಿಗೆ, ಮಾರುಕಟ್ಟೆಗಳಿಗಾಗಿ ಕಿಲೋ ಮೀಟರ್ ದೂರ ಕ್ರಮಿಸಬೇಕಾಗುತ್ತದೆ.

ಸಣ್ಣ ಪುಟ್ಟ ಪಟ್ಟಣ, ಗ್ರಾಮೀಣ ಭಾಗಗಳಲ್ಲಂತೂ ಕಾಲ್ನಡಿಗೆಯಲ್ಲಿ ಅಗತ್ಯ ವಸ್ತುಗಳ ಖರೀದಿ ಅಂದರೆ ಗಂಟೆಗಟ್ಟಲೆ ನಡೆದು, ಹೊತ್ತುಕೊಂಡು ಬರಬೇಕಾಗುತ್ತದೆ.

ಇದು ಜ‌ನ ಸಾಮಾನ್ಯರನ್ನು ಅಗತ್ಯ ವಸ್ತುಗಳನ್ನು ಖರೀದಿಸದಂತೆ ನಿರ್ಬಂಧಿಸುತ್ತದೆ. ಜೊತೆಗೆ ಈ ಬಾರಿಯ ನಿಯಮಗಳು ನಿರ್ಮಾಣ ಕ್ಷೇತ್ರ ಸೇರಿದಂತೆ ಕೂಲಿ ಕೆಲಸಗಾರರು, ಆಟೊ, ಟೊಂಪೊಗಳಲ್ಲಿ ದುಡಿಯುವ ಶ್ರಮಿಕರ ದುಡಿಮೆಯ ಅಲ್ಪ ಸ್ವಲ್ಪ‌ ಅವಕಾಶಗಳನ್ನು ಕಸಿದು ಹಾಕುತ್ತದೆ.

ಪಡಿತರ ಸೇರಿದಂತೆ ಯಾವುದೆ ಪರಿಹಾರ ಪ್ಯಾಕೇಜ್ ನೀಡದೆ ಹೊರಡಿಸುವ ಇಂತಹ ಕ್ರಮಗಳು ಅಪ್ರಾಯೋಗಿಕ, ಅಮಾನವೀಯ. ಒಟ್ಟಾರೆಯಾಗಿ ಹೊಸ ಲಾಕ್ ಡೌನ್ ನಿಯಮಗಳು ಯಾವ ಕಾರಣಕ್ಕೂ ಪ್ರಾಯೋಗಿಕವಲ್ಲ.‌

ಖರೀದಿಯ ಸಾಮರ್ಥ್ಯ ಹೊಂದಿದವರಿಗೂ ಅವಕಾಶ ನಿರಾಕರಿಸುವ ಕಾಲ್ನಡಿಗೆಯ ಖರೀದಿ ಅಂಶವನ್ನು ಕೈ ಬಿಟ್ಟು ಅಗತ್ಯ ವಸ್ತುಗಳ ಖರೀದಿ ಅವಧಿಯಲ್ಲಿ ಆಟೋ ಸಹಿತ ಖಾಸಗಿ ವಾಹನಗಳ ಬಳಕೆಗೆ ಅವಕಾಶ ಒದಗಿಸಬೇಕು.

ಕೂಲಿಕಾರರ ದುಡಿಮೆಗೆ ಹಾಕಿರುವ ನಿರ್ಬಂಧಗಳನ್ನು ಸರಳಗೊಳಿಸಬೇಕು, ಪಡಿತರ ಸಾಮಾಗ್ರಿ, ಕೇರಳ ಮಾದರಿ ವಾರ್ಡ್, ಪಂಚಾಯತ್ ಮಟ್ಟದಲ್ಲಿ ಸಾಮುದಾಯಿಕ ಕಿಚನ್ ಗಳ ಮೂಲಕ‌ ಅಗತ್ಯ ಇರುವವರಿಗೆ, ಹಸಿದವರಿಗೆ ಸಿದ್ದಪಡಿಸಿದ ಆಹಾರ, ದುಡಿಮೆಯ ಅವಕಾಶ ಕಳೆದುಕೊಂಡವರಿಗೆ ನಗದು ಪರಿಹಾರಗಳೆಲ್ಲ ಪರಿಹಾರ ಪ್ಯಾಕೇಜ್ ಒದಗಿಸಬೇಕು.

ಇಂತಹ ಕ್ರಮಗಳು ಇಲ್ಲದೆ ಅಪ್ರಾಯೋಗಿಕ ಲಾಕ್ ಡೌನ್ ಜಾರಿಗೊಳಿಸಿದರೆ ಜನತೆ ಹಸಿವಿನಿಂದ ಸಾಯುವ ಸ್ಥಿತಿ ಉದ್ಭವವಾಗಲಿದೆ. ಇದರಿಂದ ಜನತೆ ಸಹಜವಾಗಿ ಲಾಕ್ ಡೌನ್ ನಿಯಮಗಳನ್ನು ಮುರಿಯತೊಡಗುತ್ತಾರೆ.

ಇಂತಹ ಸಂದರ್ಭಗಳಲ್ಲಿ ಪೊಲೀಸರಿಗೆ ಮುಕ್ತ ಅವಕಾಶ ಒದಗಿಸಿ ವಾಹನಗಳ ಜಪ್ತಿ, ದಂಡ ಸೇರಿದಂತೆ ಜನರನ್ನು ಹಿಂಸಿಸಲು ಹೊರಟರೆ ಜನತೆ ಪೊಲೀಸರೊಂದಿಗೆ ಸಂಘರ್ಷಕ್ಕಿಳಿಯುವ ಪರಿಸ್ಥಿತಿ ನಿರ್ಮಾಣಗೊಳ್ಳಲಿದೆ.

ಕಾನೂನು ಸುವ್ಯವಸ್ಥೆ ಹದಗೆಡಲಿದೆ. ಇಂತಹ ಅರಾಜಕತೆಗೆ ಅವಕಾಶ ನೀಡದೆ ಸರಕಾರ ತಕ್ಷಣ ಅಮಾನವೀಯ ಲಾಕ್ ಡೌನ್ ನಿಯಮಗಳನ್ನು ಸರಳಗೊಳಿಸಬೇಕು, ಜನತೆಗೆ ಪರಿಹಾರ ಪ್ಯಾಕೇಜ್ ಗಳನ್ನು ನೀಡಬೇಕು ಎಂದು ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ಸರಕಾರವನ್ನು ಒತ್ತಾಯಿಸುತ್ತದೆ. ಎಂದು  ಡಿವೈಎಫ್ಐ   ಅಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *

BANTWAL

ಮತ ಚಲಾಯಿಸಿದ ನವ ದಂಪತಿ…! ಶುಭ ಹಾರೈಸಿದ ಸ್ನೇಹಿತರು..!

Published

on

ಮಂಗಳೂರು : ಇಂದು ಹೊಸ ಬಾಳಿಗೆ ಕಾಲಿಡುತ್ತಿದ್ದ ಆ ಜೋಡಿಗಳು ಹೊಸ ಬಾಳಿನ ಚಿಂತನೆಯ ಜೊತೆಗೆ ದೇಶದ ಚಿಂತನೆಯನ್ನೂ ಮಾಡಿದ್ದಾರೆ. ಮದುವೆಯ ಸಮಾರಂಭದಲ್ಲಿ ಹಸಮಣೆ ಏರಿ ಪತಿ ಪತ್ನಿಯರಾಗಿ ಒಂದಾದ ಜೋಡಿ ಎಲ್ಲಾ ಸಂಪ್ರದಾಯಗಳು ಪೂರ್ಣಗೊಂಡ ತಕ್ಷಣ ಮದುವೆ ಮನೆಯಿಂದ ಹೊರ ನಡೆದಿದ್ದಾರೆ. ಮದುವೆ ಮನೆಯಿಂದ ಬಂದವರೇ ನೇರವಾಗಿ ಮತಗಟ್ಟೆಗೆ ಹೋಗಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಹೌದು ಇದು ನಡೆದಿರುವುದು ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಬೂತ್ ಸಂಖ್ಯೆ 16 ರಲ್ಲಿ . ಇವರ ಮದುವೆ ನಿಗದಿಯಾದ ದಿನಂದಂತೆ ಪ್ರಜಾಪ್ರಭುತ್ವದ ಹಬ್ಬವಾಗಿರೋ ಚುನಾವಣೆ ದಿನಾಂಕ ಕೂಡಾ ಘೋಷಣೆ ಆಗಿದೆ. ಒಂದು ಕಡೆ ಹಸೆಮಣೆ ಏರಿ ತಮ್ಮ ಸ್ವಂತ ಭವಿಷ್ಯ ಕಟ್ಟಿಕೊಳ್ಳುವ ಜೊತೆಗೆ ದೇಶದ ಭವಿಷ್ಯವನ್ನೂ ಕಟ್ಟಲು ತಮ್ಮ ಅಮೂಲ್ಯ ಮತವನ್ನು ಚಲಾಯಿಸಿ ಮಾದರಿಯಾಗಿದ್ದಾರೆ. ಬಂಟ್ವಾಳ ತಾಲೂಕಿನ ಮಲ್ಲೆರ್ಮಳಕೋಡಿ ಜಯರಾಮ ಕುಲಾಲ್ ಎಂಬ ವರ ವದುವಿವೊಂದಿಗೆ ಬಂದು ತನ್ನ ಮತ ಚಲಾಯಿಸಿದ್ದಾರೆ. ಇವರಿಬ್ಬರ ಈ ಕಾಳಜಿಗೆ ಜನರು ಹಾಗೂ ಮತಗಟ್ಟೆ ಅಧಿಕಾರಿಗಳು ಶುಭ ಹಾರೈಸಿದ್ದಾರೆ. ಇದೇ ವೇಳೆ ಜಯರಾಮ್ ಕುಲಾಲ್ ಅವರ ಸ್ನೇಹಿತರು ಹಿತೈಷಿಗಳು ಕೂಡಾ ಶುಭ ಹಾರೈಸಿದ್ದಾರೆ.

Continue Reading

DAKSHINA KANNADA

ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಶೇರ್ ಮಾಡಿದ ಯುವಕ; ಎಫ್ ಐ ಆರ್ ದಾಖಲಿಸಿದ ಚುನಾವಣಾ ಆಯೋಗ

Published

on

ಪುತ್ತೂರು : ಮತಗಟ್ಟೆಯೊಳಗೆ ಮೊಬೈಲ್ ಗೆ ನಿರ್ಬಂಧ ವಿಧಿಸಿದರೂ ಕಾನೂನು ಉಲ್ಲಂಘನೆಯಾಗಿರುವ ಘಟನೆ ಪುತ್ತೂರಿನ ಮತಗಟ್ಟೆಯೊಂದರಲ್ಲಿ ನಡೆದಿದೆ. ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಗ್ರೂಪ್ ಗೆ ಶೇರ್ ಮಾಡಿದ ಯುವಕನ ವಿರುದ್ಧ ಆಕ್ರೋಶ ಕೇಳಿ ಬಂದಿತ್ತು.

ಪುತ್ತೂರಿನ ಕೋಟಿ-ಚೆನ್ನಯ ಕಂಬಳ ಗ್ರೂಪ್ ಗೆ ಮತದಾನ ಮಾಡುವ ಫೋಟೊವನ್ನು ರಂಜಿತ್ ಬಂಗೇರ ಎಂಬ ಯುವಕ ಶೇರ್ ಮಾಡಿರುವ ಬಗ್ಗೆ ತಿಳಿದು ಬಂದಿದೆ.

ಇದನ್ನೂ ಓದಿ : ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಕುಸಿದು ಬಿದ್ದು ಸಾ*ವು

ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಫೋಟೊವನ್ನು ರಂಜಿತ್ ಬಂಗೇರ ಎಂಬ ಯುವಕ ತೆಗೆದಿದ್ದಾನೆ.  ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದಿಂದ ಎಫ್ ಐ ಆರ್ ದಾಖಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ / ಜಿಲ್ಲಾ ಚುನಾವಣಾಧಿಕಾರಿ ಮುಲೈ ಮುಗಿಲನ್ ಮಾಹಿತಿ ನೀಡಿದ್ದಾರೆ.

Continue Reading

DAKSHINA KANNADA

ಬೈಕ್-ಕಾರು ನಡುವೆ ಅಪ*ಘಾತ; ಓರ್ವ ಮೃ*ತ್ಯು

Published

on

ಅರಂತೋಡು: ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪ*ಘಾತದಲ್ಲಿ ಬೈಕ್‌ನ ಹಿಂಬದಿ ಸವಾರ ಮೃ*ತಪಟ್ಟ ಘಟನೆ ಸಂಪಾಜೆ ಕಲ್ಲುಗುಂಡಿ ಸಮೀಪ ದೊಡ್ಡಡ್ಕ ಎಂಬಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.


ಮತದಾನ ಮಾಡಲು ಊರಿಗೆ ಬರುತ್ತಿದ್ದರು ಎಂದು ಹೇಳಲಾಗುತ್ತಿದ್ದು ಡಿ*ಕ್ಕಿಯ ರಭಸಕ್ಕೆ ಬೈಕ್‌ನ ಹಿಂಬದಿ ಸವಾರನಿಗೆ ಗಂಭೀರ ಗಾಯಗೊಂಡು ಮೃ*ತಪಟ್ಟರೆ ಇನ್ನೋರ್ವನಿಗೆ ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃ*ತರ ವಿವರ ಇನ್ನಷ್ಟೇ ತಿಳಿದುಬರಬೇಕಾಗಿದೆ.

Continue Reading

LATEST NEWS

Trending