Friday, July 1, 2022

ಪೊಲೀಸ್  ಆಯುಕ್ತರು ಅಗತ್ಯ ಖರೀದಿಗೆ ವಾಹನ ನಿಷೇಧ ಆದೇಶ ಹಿಂಪಡೆಯಲಿ: ಕೆ.ಅಶ್ರಫ್  ಆಗ್ರಹ..!

ಮಂಗಳೂರು: ನಗರ ಪೊಲೀಸ್ ಆಯುಕ್ತರು ನಿನ್ನೆ ಲಾಕ್ ಡೌನ್ ಬಗ್ಗೆ ಕೆಲವು ಕಟು ನಿಯಮಗಳನ್ನು ಆದೇಶಿಸಿದ್ದು, ಜನರ ದೈನಂದಿನ,ದಿನಸಿ,ಔಷಧ,ಇಂಧನ ಇತ್ಯಾದಿಗಳಿಗೆ ವಾಹನ ಬಳಕೆ ಮಾಡ ಬಾರದು ಎಂದು ಆದೇಶಿಸಿದ್ದಾರೆ.

ವಾಹನಗಳನ್ನು ಮುಟ್ಟು ಗೋಲು ಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ಆದೇಶಕ್ಕೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಕೂಡ  ಜವಾಬ್ದಾರರು ಅವರ ಸಲಹೆಯಂತೆ ಈ ಆದೇಶ ಆಗಿರಲೂ ಬಹುದು.

ಈ ಆದೇಶ ಅಪ್ರಾಯೋಗಿಕ.ಜನರು ದಿನಸಿ ವಸ್ತುಗಳಿಗೆ ತಮ್ಮ ತಮ್ಮ ಮೊಹಲ್ಲಾವನ್ನು ಮಾತ್ರ ಅವಲಂಬಿಸಿ ಇಲ್ಲ, ಬದಲಾಗಿ ಅಗತ್ಯ ವಸ್ತುಗಳಾದ ಧಾನ್ಯ ಅಕ್ಕಿ,ಮೀನು, ಹಾಲು ,ಔಷದ ಇತ್ಯಾದಿ ವಸ್ತುಗಳು ಒಂದೇ ಮಾರುಕಟ್ಟೆಯಲ್ಲಿ  ಲಭ್ಯವಾಗುವುದಿಲ್ಲ.

ಇವುಗಳು ನಗರದ ವಿವಿಧ ಕಿಲೋ ಮೀಟರ್  ದೂರದ ಸ್ಥಳಗಳಲ್ಲಿ ಮಾತ್ರ ಲಭ್ಯವಿದೆ.
ಆದುದರಿಂದ ಕಿಲೋಮೀಟರ್ ಗಟ್ಟಲೆ ನಡೆದು ಹೋಗುವ ಕಷ್ಟಕ್ಕೆ ಜನರನ್ನು ಪೊಲೀಸ್ ಆಯುಕ್ತರು ಹಾಕಬಾರದಾಗಿ , ಮತ್ತು ಆಯುಕ್ತರು ತಕ್ಷಣ ಸೀಮಿತ ಅವಧಿಗೆ ವಾಹನ ಬಳಕೆಗೆ ರಿಯಾಯಿತಿ ಘೋಷಿಸಬೇಕು.

ಇತರ ರಾಜ್ಯಗಳಂತೆ ಸರಕಾರ ಜನರ ದೈನಂದಿನ ಪಡಿತರ ಪೂರೈಕೆ ಬಗ್ಗೆ ಯಾವುದೇ ಪರಿಹಾರ ನೀಡದ ಕಾರಣ ಸಾರ್ವಜನಿಕರು ಕೋರೋಣ ಸಂಕಷ್ಟದ ಮದ್ಯೆ ಹಸಿವು ಮತ್ತು ಔಷದ ಅಲಭ್ಯತೆ ಕಾರಣದಿಂದ ಜೀವ ಹಾನಿ ಆಗದಂತಹ ಸಂದರ್ಭವನ್ನು ಆಯುಕ್ತರು ಮಾಡಬೇಕಾಗಿ ವಿನಂತಿ.

ಸರಕಾರದ ಪ್ರತಿ ಬಂಧಕ ಜ್ಯಾರಿಯಾದರೆ ಪ್ರಜೆಗಳಿಗೆ ಆಹಾರ,ಆರೋಗ್ಯ ಮತ್ತು ಭದ್ರತೆ ಒದಗಿಸುವುದು ಸರಕಾರದ ಪ್ರಥಮ ಕರ್ತವ್ಯ ಈ ಸವಲತ್ತನ್ನು ಸಮಗ್ರವಾಗಿ ದ.ಕ. ಜಿಲ್ಲೆಯಲ್ಲಿ ಸರಕಾರದ ವತಿಯಿಂದ ನೀಡಲಿ.

ಇತರ ರಾಜ್ಯ ಸರಕಾರ ಜನರಿಗೆ ನೀಡಿದ ರೀತಿಯಲ್ಲಿ ಪ್ರತೀ ಕುಟುಂಬಕ್ಕೆ ತಗಲುವ ಅಕ್ಕಿ, ಬೇಳೆ ಎಣ್ಣೆ,ಹಾಲು, ಗ್ಯಾಸ್ ಇತ್ಯಾದಿ ವಸ್ತುಗಳನ್ನು ಸರಕಾರ ಜನರಿಗೆ ತಕ್ಷಣ ಪೂರೈಸಬೇಕು.

ಹಾಗಾದಲ್ಲಿ ಜನರು ಲಾಕ್ ಡೌನ್ ಸಂದರ್ಭದಲ್ಲಿ ಮನೆಯಿಂದ ಹೊರಗಡೆ ಬರಲಾರರು. ಆಯುಕ್ತರು ತಕ್ಷಣ ಸೀಮಿತ ಅವಧಿ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ವಾಹನ ನಿಷೇಧ ಹಿಂಪಡೆಯಲಿ. ಸಾರ್ವಜನಿಕ ಹಿತಾಸಕ್ತಿ ಕಾಳಜಿಯಿಂದ ಈ ಹೇಳಿಕೆ ನೀಡಲಾಗಿದೆ.ಎಂದು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಕೆ. ಅಶ್ರಫ್ ಹೇಳಿದ್ದಾರೆ.

ಕೆ.ಅಶ್ರಫ್(ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.

LEAVE A REPLY

Please enter your comment!
Please enter your name here

Hot Topics

ಮೂಡುಬಿದಿರೆ ತಾಲ್ಲೂಕು ಪತ್ರಕರ್ತರ ಸಂಘದ ನೂತನ ಕಚೇರಿ ನಿರ್ಮಾಣಕ್ಕೆ ಶಿಲಾನ್ಯಾಸ

ಮೂಡುಬಿದಿರೆ: ಪತ್ರಕರ್ತರ ಸಂಘದ ನೂತನ ಕಚೇರಿ ಹಾಗೂ ಸಭಾಭವನ ನಿರ್ಮಾಣಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಶಿಲಾನ್ಯಾಸ ನೆರವೇರಿಸಿದರು.ಶಾಸಕ ಉಮಾನಾಥ್ ಕೋಟ್ಯಾನ್, ಮಾಜಿ ಶಾಸಕ ಅಭಯಚಂದ್ರ ಜೈನ್, ಪತ್ರಕರ್ತರ ಸಂಘದ ಶ್ರೀನಿವಾಸ್ ನಾಯಕ್,...

ಉಡುಪಿ: ನೀರಿನಿಂದ ಮುಳುಗಡೆಯಾದ ಕೃಷಿಭೂಮಿ-ಅಪಾರ ಬೆಳೆ ನಷ್ಟ

ಉಡುಪಿ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮೂರು ನಾಲ್ಕು ದಿನಗಳಿಂದ ಗ್ರಾಮ ಜಲಾವೃತಗೊಂಡು ಕೃಷಿ ಭೂಮಿಗೆ ನೀರು ನುಗ್ಗಿ ನೂರಾರು ಎಕರೆ ಕೃಷಿಭೂಮಿ ನೀರಿನಲ್ಲಿ ಮುಳುಗಡೆಯಾದ ಘಟನೆ ಉಡುಪಿಯ ಬೈಂದೂರಿನ ನಾವುಂದದಲ್ಲಿ ನಡೆದಿದೆ.ರೈಲ್ವೆ ಮಾರ್ಗದ...

ಬಂಟ್ವಾಳ: ಗೋಕಳ್ಳತನ-ದನದ ಮಾಂಸ ಸಹಿತ ಆರೋಪಿಗಳು ವಶಕ್ಕೆ

ಬಂಟ್ವಾಳ: ಕಳ್ಳತನ ಮಾಡಿದ ದನಗಳನ್ನು ಕಡಿದು ಮಾರಾಟ ಮಾಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ದನದ ಮಾಂಸ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಗೋಳ್ತಮಜಲು ಎಂಬಲ್ಲಿ...