LATEST NEWS
ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ಅಕ್ಕಿಯ ಜೊತೆಗೆ ಉಚಿತವಾಗಿ ಸಿಗಲಿವೆ ಈ 9 ವಸ್ತುಗಳು.!
ನವದೆಹಲಿ: ಉಚಿತ ಪಡಿತರ ಯೋಜನೆಯಲ್ಲಿ ಬದಲಾವಣೆ ತರುತ್ತಿರುವ ಮೋದಿ ಸರ್ಕಾರ ಇದೀಗ ಪಡಿತರ ಚೀಟಿದಾರರಿಗೆ ಅಕ್ಕಿಯ ಜೊತೆಗೆ 9 ಹೊಸ ಅಗತ್ಯ ವಸ್ತುಗಳನ್ನು ನೀಡಲು ನಿರ್ಧರಿಸಿದೆ. ಇದರಿಂದ ಪೌಷ್ಟಿಕತೆ ಮತ್ತು ಆರೋಗ್ಯವನ್ನು ಸುಧಾರಿಸಬಹುದು.
ಈ ಮಹತ್ವದ ಬದಲಾವಣೆ ಕೋಟ್ಯಂತರ ಫಲಾನುಭವಿಗಳಿಗೆ ನೇರ ಪ್ರಯೋಜನವಾಗಲಿದೆ. ಈ ಹಿಂದೆ ಪಡಿತರ ಚೀಟಿದಾರರಿಗೆ ಅಕ್ಕಿ, ಗೋಧಿ ಮಾತ್ರ ನೀಡಲಾಗುತ್ತಿತ್ತು. ಈ ಬದಲಾವಣೆಗಳ ಮುಖ್ಯ ಉದ್ದೇಶವು ಬಡ ಮತ್ತು ನಿರ್ಗತಿಕ ಜನರ ಪೌಷ್ಟಿಕಾಂಶದ ಮಟ್ಟವನ್ನು ಸುಧಾರಿಸುವುದು ಮತ್ತು ಅವರ ಆರೋಗ್ಯವನ್ನು ಸುಧಾರಿಸುವುದು.
ಇನ್ನು ಮುಂದೆ ಪಡಿತರ ಚೀಟಿದಾರರಿಗೆ ಈ ಕೆಳಗಿನ 9 ಅಗತ್ಯ ವಸ್ತುಗಳನ್ನು ಉಚಿತವಾಗಿ ನೀಡಲಾಗುವುದು.
ಗೋಧಿ
ಕಾಳುಗಳು
ಬೇಳೆ
ಸಕ್ಕರೆ
ಉಪ್ಪು
ಸಾಸಿವೆ ಎಣ್ಣೆ
ಹಿಟ್ಟು
ಸೋಯಾಬೀನ್
ಮಸಾಲೆಗಳು
ಈ ವಿಷಯಗಳನ್ನು ಸೇರಿಸುವ ಉದ್ದೇಶವು ಬಡವರಿಗೆ ಉತ್ತಮ ಪೋಷಣೆಯನ್ನು ಮತ್ತು ಅವರ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಖಚಿತಪಡಿಸಿಕೊಳ್ಳುವುದು. ಅಕ್ಕಿಯ ಬದಲಿಗೆ ಈ ಆಹಾರ ಪದಾರ್ಥಗಳನ್ನು ಒದಗಿಸುವುದು ಒಂದು ದೊಡ್ಡ ಹೆಜ್ಜೆಯಾಗಿದೆ, ಇದರಿಂದ ಜನರು ಸಮತೋಲಿತ ಆಹಾರವನ್ನು ಪಡೆಯಬಹುದು ಮತ್ತು ಅವರ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸಬಹುದು.
DAKSHINA KANNADA
ಕಂಬಳ ಯಜಮಾನ ಇ*ನ್ನಿಲ್ಲ; ಸುಧಾಕರ್ ಆಳ್ವ ವಿ*ಧಿವಶ !
ಮಂಗಳೂರು: ಯುವ ಉದ್ಯಮಿ, ಮೋರ್ಲ ಕಂಬಳ ಕೋಣದ ಯಜಮಾನ ಸುಧಾಕರ ಆಳ್ವ ಮೋರ್ಲ ಕಂಬಳಕೋಡಿ (45) ಅವರು ಆಕಸ್ಮಿಕವಾಗಿ ತಮ್ಮ ಮನೆಯ ತೋಟದ ಕೆರೆಗೆ ಕಾಲು ಜಾರಿ ಬಿದ್ದು ಮೃ*ತಪಟ್ಟಿದ್ದಾರೆ.
ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ಸುಧಾಕರ ಆಳ್ವ ಅವರು ಮಂಗಳವಾರ ಬೆಳಗ್ಗೆ 11 ಗಂಟೆಯಿಂದ ನಾ*ಪತ್ತೆಯಾಗಿದ್ದು ಮನೆ ಮಂದಿ ಹಾಗೂ ಸ್ಥಳೀಯರು ಸುತ್ತ ಮುತ್ತ ಹುಡುಕಾಟ ನಡೆಸಿದ್ದು ಮನೆಯ ಪಕ್ಕದ ಕೆರೆಯ ಬದಿಯಲ್ಲಿ ಮೃ*ತದೇಹ ಕಂಡು ಬಂದಿದೆ.
ಪಂಪ್ ಸ್ವಿಚ್ ಹಾಕಲು ಬಂದಾಗ ಕಾಲು ಜಾರಿ ಬಿದ್ದು ಮೃ*ತಪಟ್ಟಿರುವುದಾಗಿ ತಿಳಿದು ಬಂದಿದೆ.
ಬೇಕರಿ ತಿಂಡಿ-ತಿನಿಸುಗಳ ತಯಾರಕರಾಗಿ, ಯುವ ಉದ್ಯಮಿಯಾಗಿ ಜನಾನುರಾಗಿಯಾಗಿದ್ದ ಸುಧಾಕರ ಆಳ್ವರು ಮಂಗಳವಾರ ತೋಟಕ್ಕೆ ನೀರು ಹಾಯಿಸಲು ಹಾಕಿದ್ದ ಮೋಟಾರ್ ಪಂಪ್ ಅನ್ನು ಬಂದ್ ಮಾಡಲು ಕೆರೆ ಬಳಿ ತೆರಳಿದ್ದರು. ಮನೆಮಂದಿ ಚಹಾ ಕುಡಿಯಲು ಅವರನ್ನು ಕರೆಯಲು ಕೆರೆ ಬಳಿ ತೆರಳಿದಾಗ ಅವರ ಕೈಯಲ್ಲಿದ್ದ ಕೃಷಿಗೆ ಸಂಬಂಧಿ ಪರಿಕರಗಳು ಕೆರೆ ಪಕ್ಕದಲ್ಲಿ ಬಿದ್ದಿದ್ದು, ಚಪ್ಪಲಿ ನೀರಿನಲ್ಲಿ ತೇಲುತ್ತಿದ್ದುದು ಕಂಡುಬಂದಿದೆ. ಅಕ್ಕ-ಪಕ್ಕ ಹುಡುಕಾಟ ನಡೆಸಿದರೂ, ಅವರ ಪ*ತ್ತೆಯಾಗಿರಲಿಲ್ಲ.
ಕೊನೆಗೆ ಕೆರೆಗೆ ಬಿದ್ದಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕೆರೆಯಲ್ಲಿ ಶೋಧನೆ ನಡೆಸಿದಾಗ ಮೃ*ತದೇಹ ಪ*ತ್ತೆಯಾಗಿದೆ.
FILM
ಯಶ್ ವಿರುದ್ಧ ಎಫ್‌ಐಆರ್‌ಗೆ ಅರಣ್ಯ ಸಚಿವ ಸೂಚನೆ-ಅರೆಸ್ಟ್ ಆಗ್ತಾರಾ ಕೆಜಿಎಫ್ ಸ್ಟಾರ್?
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಕೆಜಿಎಫ್, ಕೆಜಿಎಫ್ 2 ಭಾರೀ ಸಕ್ಸಸ್ ನಂತರ ಟಾಕ್ಸಿಕ್ ಎಂಬ ಪ್ಯಾನ್ ಇಂಡಿಯಾ ಮೂವಿ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯೋಕೆ ಯಶ್ ಕೂಡ ಸಜ್ಜಾಗಿದ್ದಾರೆ. ಈ ಹೊತ್ತಲ್ಲೇ ನಟ ಯಶ್ ಅಭಿನಯಿಸುತ್ತಿರುವ ಟಾಕ್ಸಿಕ್ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ.
ಟಾಕ್ಸಿಕ್ ಚಿತ್ರದ ಸೆಟ್‌ಗಾಗಿ ನೂರಾರು ಮರಗಳನ್ನು ಕಡಿದಿರುವ ಆರೋಪ ಕೇಳಿ ಬಂದಿದೆ.ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಶೂಟಿಂಗ್‌ಗಾಗಿ ಎಚ್‌ಎಂಟಿ ಪ್ರದೇಶದಲ್ಲಿ ಬೃಹತ್ ಸೆಟ್ ಅನ್ನು ಹಾಕಿ ಚಿತ್ರೀಕರಣ ಮಾಡಲಾಗಿತ್ತು.ಈ ವೇಳೆ ಅಲ್ಲಿನ ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಸೆಟ್ ನಿರ್ಮಾಣ ಮಾಡಿರುವ ಆರೋಪ ಕೇಳಿ ಬಂದಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಯಾಟ್‌ಲೈಟ್ ಇಮೇಜ್ ಪಡೆದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಪರಿಶೀಲನೆ ನಡೆಸಿದ್ದಾರೆ. ಸ್ಯಾಟಲೈಟ್ ಇಮೇಜ್ ಪಡೆಯುವ ವೇಳೆ ನೂರಾರು ಮರಗಳು ನೆಲಸಮವಾಗಿದ್ದು ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಅರಣ್ಯ ಕಾಯ್ದೆ ಅಡಿ ಕೇಸ್ ದಾಖಲಿಸಲು ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಸೆಟ್ ಹಾಕಿರೋ ಸ್ಥಳಕ್ಕೂ ಅರಣ್ಯ ಸಚಿವ ಖಂಡ್ರೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಕೇಸ್ ದಾಖಲಾದ ಹಿನ್ನಲೆ ನಟ ಯಶ್ ಮತ್ತು ಟಾಕ್ಸಿಕ್ ಟೀಂ ಅರೆಸ್ಟ್ ಭೀತಿಗೆ ಸಿಲುಕಿದೆ.
FILM
ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ಕರಾವಳಿ ಬೆಡಗಿ ಆ್ಯಂಕರ್ ಅನುಶ್ರೀ
ಬೆಂಗಳೂರು: ಕರಾವಳಿ ಬೆಡಗಿ ಆ್ಯಂಕರ್ ಅನುಶ್ರೀ ಅವರ ಮದುವೆ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ಮುಂದಿನ ವರ್ಷ ಒಳ್ಳೆ ಹುಡುಗ ಸಿಕ್ಕರೆ ಮದುವೆ ಗ್ಯಾರಂಟಿ ಎಂದಿದ್ದಾರೆ.
ಜೀ ಕನ್ನಡ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಆ್ಯಂಕರ್ ಅಕುಲ್ ಅವರು ಅನುಶ್ರೀ ಅವರ ಮದುವೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ವೇಳೆ ಮಾತನಾಡಿದ ಅನುಶ್ರೀ ಎಲ್ಲ ಹುಡಿಗಿಯರಂತೆ ನನಗೂ ಮದುವೆ ಆಗಬೇಕು ಎಂದಿದೆ. ನನಗೂ ಬಾಳ ಸಂಗಾತಿ ಬೇಕು ಎಂದಿದೆ. ಎಲ್ಲದಕ್ಕೂ ಸಮಯ ಬರಬೇಕು. ಸರಿಯಾದ ಟೈಮ್ ಅಲ್ಲಿ ಸರಿಯಾದ ವ್ಯಕ್ತಿ ಬರಬೇಕು. ನಾನು ಮದುವೆ ಆಗಬೇಕು ಎಂದು ಮನಸ್ಸು ಮಾಡಬೇಕಿತ್ತು. ಈವರೆಗೆ ಮಾಡಿರಲಿಲ್ಲ. ಈಗ ಮಾಡಿದ್ದೇನೆ. ಮುಂದಿನ ವರ್ಷ ಒಳ್ಳೆಯ ಹುಡುಗ ಸಿಕ್ಕರೆ ಮದುವೆ ಆಗುತ್ತೇನೆ. ಆ ವ್ಯಕ್ತಿ ಬರಲಿ ಎಂದು ಕಾಯುತ್ತೇನೆ. ಬಂದರೆ ನಾನು ಅವರನ್ನು ನಿಮ್ಮ ಮುಂದೆ ತಂದು ನಿಲ್ಲಿಸುತ್ತೇನೆ’ ಎಂದರು ಅವರು.
ಅನುಶ್ರೀ ಅವರು ಲವ್ ಮ್ಯಾರೇಜ್ ಆಗ್ತಾರಾ ಅಥವಾ ಅವರದ್ದು ಅರೇಂಜ್ ಮ್ಯಾರೇಜ್ ಎಂಬ ಪ್ರಶ್ನೆ ಮೂಡಿದೆ. ಈ ವಿಚಾರ ತಿಳಿದುಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ. ಅವರು ಆ್ಯಂಕರಿಂಗ್ ಜೊತೆ ತಮ್ಮದೇ ಯೂಟ್ಯೂಬ್ ಚಾನೆಲ್ ಹೊಂದಿದ್ದು ಅಲ್ಲಿ ಅನೇಕ ಸೆಲೆಬ್ರಿಟಿಗಳ ಸಂದರ್ಶನ ಮಾಡುತ್ತಾರೆ.
- BIG BOSS3 days ago
BBK 11 : ಸೃಜನ್ ಲೊಕೇಶ್ ಜೊತೆ ಬಂದ ಹೊಸ ಕಾರಲ್ಲಿ ಹೊರ ಹೊಗೋದು ಯಾರು ಗೊತ್ತಾ ??
- BIG BOSS6 days ago
ಕಲರ್ಸ್ ಶೋಗೆ ಮರಳಿದ ಲಾಯರ್ ಜಗದೀಶ್; ಫ್ಯಾನ್ಸ್ಗೆ ಗುಡ್ ನ್ಯೂಸ್
- LATEST NEWS2 days ago
ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ʼಡಿಜಿಟಲ್ ಕಾಂಡೋಮ್ʼ !! ಬಳಕೆ ಹೇಗೆ ?
- FILM6 days ago
ತುಳು ಚಿತ್ರರಂಗಕ್ಕೆ ಕಾಲಿಟ್ಟ ಗಣೇಶ್ ಪತ್ನಿ ಶಿಲ್ಪಾ ಗಣೇಶ್