Connect with us

    LATEST NEWS

    ಆದಾಯ ತೆರಿಗೆದಾರರಿಗೆ ಗುಡ್ ನ್ಯೂಸ್ : ಇಂದಿನಿಂದ ಹೊಸ ತೆರಿಗೆ ನಿಯಮಗಳು ಜಾರಿ.!

    Published

    on

    ನವದೆಹಲಿ: ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಆದಾಯ ತೆರಿಗೆ ನಿಯಮಗಳಿಗೆ ಬದಲಾವಣೆಗಳನ್ನು ಜಾರಿಗೆ ತಂದಿದೆ, ತೆರಿಗೆದಾರರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸುತ್ತದೆ. ಇದು ಆದಾಯ ತೆರಿಗೆದಾರರಲ್ಲಿ ಸಂತಸ ತಂದಿದೆ.

    CBDT TDS/TCS ಕ್ರೆಡಿಟ್ ಕ್ಲೈಮ್‌ಗಳನ್ನು ಸರಳಗೊಳಿಸಿದೆ. ಈ ನವೀಕರಣಗಳು ಸಂಬಳ ಪಡೆಯುವ ವ್ಯಕ್ತಿಗಳಿಗೆ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತವೆ. ಹೆಚ್ಚುವರಿಯಾಗಿ, ನಿರ್ದಿಷ್ಟ ಷರತ್ತುಗಳ ಅಡಿಯಲ್ಲಿ ಅಪ್ರಾಪ್ತ ವಯಸ್ಕರಿಗೆ ಪೋಷಕರು ಈಗ TCS ಕ್ರೆಡಿಟ್ ಅನ್ನು ಕ್ಲೈಮ್ ಮಾಡಬಹುದು.

    ಹಣಕಾಸು ಸಚಿವಾಲಯವು ಆದಾಯ ತೆರಿಗೆ ಕಾಯಿದೆ, 1961 ಗೆ ತಿದ್ದುಪಡಿಗಳನ್ನು ಘೋಷಿಸಿತು. ಫಾರ್ಮ್ 12BAA ತೆರಿಗೆ ಹೊಂದಾಣಿಕೆಗಳಿಗಾಗಿ ಅಧ್ಯಾಯ XVII-B ಅಥವಾ XVII-BB ಅಡಿಯಲ್ಲಿ TDS/TCS ಅನ್ನು ಸೇರಿಸಲು ಸಹಾಯ ಮಾಡುತ್ತದೆ.

    TDS ಕಡಿತಕ್ಕಾಗಿ ಉದ್ಯೋಗಿಗಳು ಫಾರ್ಮ್ 12BAA ನಲ್ಲಿ ವಿವರಗಳನ್ನು ನೀಡಬೇಕು. ಹೊಸ ನಿಯಮಗಳು TCS ಕ್ರೆಡಿಟ್ ಅನ್ನು ಕ್ಲೈಮ್ ಮಾಡಲು ಖರ್ಚು ಮಾಡುವವರನ್ನು ಹೊರತುಪಡಿಸಿ ಇತರರಿಗೆ ಅವಕಾಶ ನೀಡುತ್ತದೆ. ಅಪ್ರಾಪ್ತ ವಯಸ್ಕರಿಗೆ ಪೋಷಕರು ಹಕ್ಕು ಸಲ್ಲಿಸಬಹುದು. ಇನ್ನೊಬ್ಬ ವ್ಯಕ್ತಿಗೆ TCS ಕ್ರೆಡಿಟ್ ಪಡೆಯಲು, ಸಂಗ್ರಹಣೆಯ ಬ್ಯಾಂಕ್‌ಗೆ ಘೋಷಣೆಯನ್ನು ಸಲ್ಲಿಸಬೇಕು. ಇದು ಹೆಸರು, ವಿಳಾಸ, ಪ್ಯಾನ್, ಪಾವತಿ ವಿವರಗಳು ಮತ್ತು ಸಮರ್ಥನೆಯಂತಹ ವಿವರಗಳನ್ನು ಒಳಗೊಂಡಿರಬೇಕು.

    ನೇರ ತೆರಿಗೆ ಸಂಗ್ರಹ ಗಣನೀಯವಾಗಿ ಹೆಚ್ಚಿದೆ. ಕಾರ್ಪೊರೇಟ್ ತೆರಿಗೆ ಆದಾಯವು ದ್ವಿಗುಣಗೊಂಡಿದೆ ಮತ್ತು ಕಳೆದ ಹತ್ತು ವರ್ಷಗಳಲ್ಲಿ ವೈಯಕ್ತಿಕ ಆದಾಯ ತೆರಿಗೆ ಸಂಗ್ರಹವು ನಾಲ್ಕು ಪಟ್ಟು ಹೆಚ್ಚಾಗಿದೆ.

    BELTHANGADY

    ಅರಣ್ಯ ವಾಸಿಗಳ ಸಮಸ್ಯೆ ಬಗೆಹರಿಸಲು ಅರಣ್ಯ ಸಚಿವರಿಗೆ ಮನವಿ..!

    Published

    on

    ಮಂಗಳೂರು : ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳಕ್ಕೆ ಆಗಮಿಸಿದ ರಾಜ್ಯದ ಅರಣ್ಯ ಮತ್ತು ಜೀವಶಾಸ್ತ್ರ ಸಚಿವ ಈಶ್ವರ ಖಂಡ್ರೆ ಅವರನ್ನು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಪದಾಧಿಕಾರಿಗಳು ಭೇಟಿಯಾಗಿ ಅರಣ್ಯವಾಸಿಗಳ ಸಮಸ್ಯೆಗಳನ್ನು ಬಗೆಹರಿಸಲು ಮನವಿ ಸಲ್ಲಿಸಿದರು.

    ಅರಣ್ಯ ಮತ್ತು ಕಂದಾಯ ಜಮೀನಿನ ಬಗ್ಗೆ ಇರುವ ಗೊಂದಲಗಳನ್ನು ಬಗೆಹರಿಸಬೇಕು . ಜಂಟಿ ಸರ್ವೇ ನಡೆಸಿ , ಕೃಷಿ ಚಟುವಟಿಕೆಗಳನ್ನು ನಡೆಸಿರುವ ಅರಣ್ಯವಾಸಿಗಳಿಗೆ ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿಗಳನ್ನು ಇತ್ಯರ್ಥಪಡಿಸಿ ಹಕ್ಕುಪತ್ರ ವಿತರಣೆ ಮಾಡಬೇಕು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ವಾಸಿಸುವ ಆದಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಲು ಆದಿವಾಸಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು ಮತ್ತು ಇತರರಿಗೆ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಲು ಅವಕಾಶ ನಿರಾಕರಣೆ ಮಾಡಬೇಕು.  ಕಸ್ತೂರಿ ರಂಗನ್ ವರದಿ ಸೇರಿದಂತೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ , ಆನೆ ಕಾರಿಡಾರ್ , ಅರಣ್ಯ ಸೂಕ್ಷ್ಮ ವಲಯ , ಹುಲಿ ಸಂರಕ್ಷಿತ ವಲಯ ಸೇರಿದಂತೆ ವಿವಿಧ ಯೋಜನೆಗಳ ಹೆಸರಿನಲ್ಲಿ ಅರಣ್ಯವಾಸಿಗಳಿಗೆ ತೊಂದರೆ ಉಂಟುಮಾಡುವ ಯಾವುದೇ ತೀರ್ಮಾನ ರಾಜ್ಯ ಸರ್ಕಾರ ಕೈಗೊಳ್ಳಬಾರದು . ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಉದ್ಯೋಗಗಳಲ್ಲಿ ಅರಣ್ಯವಾಸಿಗಳಿಗೆ ಪ್ರಾಶಸ್ತ್ಯ ನೀಡುವ ವಿಚಾರ  ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಸಚಿವರ ಗಮನ ಸೆಳೆಯಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅರಣ್ಯಾಧಿಕಾರಿಗಳು ಉಪಸ್ಥಿತರಿದ್ದರು. ಸಮಸ್ಯೆಗಳನ್ನು ಕಾನೂನಿನ ಪರಿಮಿತಿಯಲ್ಲಿ ಬಗೆಹರಿಸಲು ಸಹಾಯ ಮಾಡುವಂತೆ ಸಚಿವರು ಇಲಾಖಾಧಿಕಾರಿಗಳಿಗೆ ಸೂಚಿಸಿದರು. ಇತರ ರಾಜ್ಯ ಮಟ್ಟದ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಭರವಸೆ ನೀಡಿದರು.  ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ , ಉಪಾಧ್ಯಕ್ಷ ಲಕ್ಷ್ಮಣ ಆಲಂಗಾಯಿ ನೆರಿಯ , ಸಂಚಾಲಕ ಶೇಖರ್ ಲಾಯಿಲ ಉಪಸ್ಥಿತರಿದ್ದರು.

    Continue Reading

    LATEST NEWS

    ಪೂಜಾ ಖೇಡ್ಕರ್ ಜಾಮೀನು ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್ !

    Published

    on

    ಮಂಗಳೂರು/ನವದೆಹಲಿ: ನೇಮಕಾತಿ ರದ್ದಾಗಿರುವ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ಇಂದು (ಸೋಮವಾರ) ದೆಹಲಿ ಹೈಕೋರ್ಟ್ ನಿರಾಕರಿಸಿದೆ.

    ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ ಸಿ) ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಅಂಗವೈಕಲ್ಯತೆ ಸಮಸ್ಯೆಯಿಂದ ಬಳಲುತ್ತಿರುವಂತೆ ನಕಲಿ ದಾಖಲೆಗಳನ್ನು ನೀಡಿ ಮೀಸಲಾತಿಯ ದುರುಪಯೋಗಪಡಿಸಿಕೊಂಡಿರುವ ಆರೋಪ ಪೂಜಾ ಮೇಲಿದೆ.

    ಪೂಜಾ ಖೇಡ್ಕರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ. ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದ್ದ ಆದೇಶವನ್ನು ಹಿಂಪಡೆಯಲಾಗಿದೆ ಎಂದು ನ್ಯಾಯಮೂರ್ತಿ ಚಂದ್ರಧಾರಿ ಸಿಂಗ್ ಹೇಳಿದ್ದಾರೆ.

    ಇದನ್ನೂ ಓದಿ: ಇವರು 50 ವರ್ಷಗಳಿಂದ ಅಂಗಿ ಹಾಕಿಲ್ಲ; ಕಾರಣ ಏನು ಗೊತ್ತಾ ?

    ಪೂಜಾ ಖೇಡ್ಕರ್ ಅವರ ವಿರುದ್ದ ಪ್ರಬಲವಾದ ಪ್ರಕರಣ ದಾಖಲಾಗಿದ್ದು, ಪ್ರಕರಣದ ಸತ್ಯಾಸತ್ಯತೆ ತಿಳಿಯಬೇಕಾದರೆ ಸೂಕ್ತ ತನಿಖೆಯ ಅಗತ್ಯವಿದೆ. ಹಾಗಾಗಿ ಪೂಜಾ ಅವರು ತನಿಖೆಗೆ ಸಹಕರಿಸಬೇಕು’ ಎಂದೂ ನ್ಯಾಯಮೂರ್ತಿ ಸಿಂಗ್ ತಿಳಿಸಿದ್ದಾರೆ.

    ಯುಪಿಎಸ್ ಸಿ ಪರ ಹಿರಿಯ ವಕೀಲ ನರೇಶ್ ಕೌಶಿಕ್ ಮತ್ತು ವಕೀಲ ವರ್ಧಮಾನ್ ಕೌಶಿಕ್ ವಾದ ಮಂಡಿಸಿದ್ದರು.

    ಪ್ರಕರಣ ಸಂಬಂಧ ಕೆಲವು ದಿನಗಳ ಹಿಂದೆ ಪೂಜಾ ಖೇಡ್ಕರ್ ವಿರುದ್ದ ದೆಹಲಿ ಪೊಲೀಸರು ಭಾರತೀಯ ದಂಡ ಸಂಹಿತೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ವಿಕಲಚೇತನರ ಹಕ್ಕು ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಎಫ್ ಐಆರ್ ದಾಖಲಿಸಿದ್ದರು.

     

    Continue Reading

    BELTHANGADY

    ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಕುಟುಂಬ ಭೇಟಿ

    Published

    on

    ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಡಿ.23 ರಂದು ಮಧ್ಯಾಹ್ನ ಕರ್ನಾಟಕ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಪತ್ನಿ ಗೀತಾ ಖಂಡ್ರೆ ಮಗ ಬಿದ‌ರ್ ಸಂಸದ ಸಾಗರ್ ಖಂಡ್ರೆ ಹಾಗೂ ಪತ್ನಿ ಗೀತಾ ಖಂಡ್ರೆ ಸಹೋದರರಾದ ಹೈಕೋರ್ಟ್‌ ಎಸ್.ಪಿ.ಪಿ ವಿಜಯ್ ಕುಮಾರ್ ಮಜ್ಜಿಗೆ ಹಾಗೂ ವಕೀಲ ಗಂಗಾಧರ್ ಮಜ್ಜಿಗೆ, ಕಾಂಗ್ರೆಸ್ SC ಮೋರ್ಚಾದ ಅಧ್ಯಕ್ಷ ಲಕ್ಷ್ಮಿ ನಾರಾಯಣ ಸ್ವಾಮಿ ಭೇಟಿ ನೀಡಿ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

    ಈಶ್ವರ್ ಖಂಡ್ರೆ ಮತ್ತು ಮಗ ಸಾಗರ್ ಖಂಡ್ರೆ ಬೆಲ್ಲ ಮತ್ತು ಕಡ್ಲೆ ಬೇಳೆಯಿಂದ ಧರ್ಮಾಧಿಕಾರಿಗಳ ಮುಂದೆ ತುಲಭಾರ ಸೇವೆ ಮಾಡಿಸಿದರು. ಬಳಿಕ ಡಾ.ವಿರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

    ಸಚಿವರ ಭೇಟಿ ವೇಳೆ ಮಂಗಳೂರು ಡಿಸಿಎಫ್ ಮರಿಯಪ್ಪ ಕರಿಕಳನ್, ಅರಣ್ಯ ಇಲಾಖೆಯ (FMS) ಮಂಗಳೂರು DCF ಶ್ರೀಕಾಂತ್‌ ಖಣದಾಳಿ ಬೆಳ್ತಂಗಡಿ ಆರ್.ಎಫ್.ಓ ತ್ಯಾಗರಾಜ್, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಗೌಡ ಮತ್ತಿತರ ಕಾರ್ಯಕರ್ತರು ಭಾಗಿಯಾಗಿದ್ದರು.

    Continue Reading

    LATEST NEWS

    Trending