Connect with us

LATEST NEWS

ಆಧಾರ್-ಪಾನ್ ಲಿಂಕ್ ಗಡುವು ವಿಸ್ತರಣೆ: ಜೊತೆಗೆ ವಿಳಂಬ ದಂಡ ಶುಲ್ಕ ಪಾವತಿ

Published

on

ಹೊಸದಿಲ್ಲಿ: ಪ್ಯಾನ್ ಮತ್ತು ಆಧಾರ್‌ ಕಾರ್ಡ್ ಜತೆ ಲಿಂಕ್ ಮಾಡಲು ಗಡುವನ್ನು 2023ರ ಮಾರ್ಚ್‌ 31 ರವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ಸರ್ಕಾರ 2021ರ ಸಪ್ಟೆಂಬರ್ 30ರಿಂದ 2022ರ ಮಾರ್ಚ್‌ 31ರ ತನಕ ಅಂದರೆ ಆರು ತಿಂಗಳು ವಿಸ್ತರಿಸಿತ್ತು.

ಪ್ರತಿಯೊಬ್ಬ ನಾಗರಿಕರೂ ಪ್ಯಾನ್ ಕಾರ್ಡ್‌ನ್ನು ಆಧಾರ್ ಕಾರ್ಡ್‌ ಜೊತೆ ಲಿಂಕ್ ಮಾಡೋದು ಕಡ್ಡಾಯವಾಗಿದೆ. ಈ ಬಾರಿ ಗಡುವು  ಮುಂದೂಡಿಕೆಯ ಜೊತೆಗೆ ದಂಡವನ್ನೂ ಕೂಡ ಅನ್ವಯಿಸಲಾಗಿದೆ.

ಯಾವುದೇ ಪರಿಣಾಮಗಳು ಆಗದಂತೆ ಆಧಾರ್​ ಜತೆಗೆ ಪ್ಯಾನ್ ಜೋಡಣೆ ಮಾಡುವುದಕ್ಕೆ ಮಾರ್ಚ್ 31, 2023ರ ತನಕ ಒಂದು ಅವಕಾಶ ನೀಡಲಾಗುತ್ತದೆ.

ಆದಾಯ ತೆರಿಗೆ ನಿಯಮ, 1962ಕ್ಕೆ ತಂದ ತಿದ್ದುಪಡಿ ನಿಯಮಾವಳಿ ಪ್ರಕಾರ, ಪ್ಯಾನ್- ಆಧಾರ್ ಜೋಡಣೆ ಕಡ್ಡಾಯವಾಗಿದೆ. ಜುಲೈ 1, 2017ಕ್ಕೆ ಅನ್ವಯ ಆಗುವಂತೆ ಯಾರಿಗೆಲ್ಲ ಪ್ಯಾನ್ ವಿತರಿಸಲಾಗಿದೆ ಅವರೆಲ್ಲ ಆಧಾರ್ ಪಡೆಯುವುದಕ್ಕೆ ಅರ್ಹರು.

ಅಂಥವರೆಲ್ಲರೂ ಪ್ಯಾನ್ ಅನ್ನು ಆಧಾರ್ ಜತೆಗೆ ಜೋಡಣೆ ಮಾಡಿ, ತಮ್ಮ ಪ್ಯಾನ್ ಸಂಖ್ಯೆ ಕಾರ್ಯ ನಿರ್ವಹಿಸುವುದನ್ನು ಖಾತ್ರಿ ಮಾಡಿಕೊಳ್ಳಬೇಕು ಮತ್ತು ಯಾವ ಪ್ರಕ್ರಿಯೆಗಳಲ್ಲಿ ಪ್ಯಾನ್​ ಅಗತ್ಯ ಇರುತ್ತದೋ ಅದು ನಿಲ್ಲುವುದಿಲ್ಲ.

ಮೊದಲೇ ತಿಳಿಸಿದಂತೆ ಪ್ಯಾನ್- ಆಧಾರ್ ಜೋಡಣೆಯನ್ನು ಮಾರ್ಚ್ 31, 2022ರ ಮಧ್ಯರಾತ್ರಿಯೊಳಗೆ ಮಾಡಿ ಮುಗಿಸಿರದಿದ್ದಲ್ಲಿ ತೆರಿಗೆ ಪಾವತಿದಾರರು ಹಣಕಾಸು ವರ್ಷದ (2022-23) ಮೊದಲ ಮೂರು ತಿಂಗಳಲ್ಲಿ 500 ರೂಪಾಯಿ ವಿಳಂಬ ಶುಲ್ಕ ಪಾವತಿಸಬೇಕಾಗುತ್ತದೆ.

ಅದು ಏಪ್ರಿಲ್ 1, 2022ರಿಂದ ಜೂನ್ 30ರ ತನಕ. ಇನ್ನೂ ವಿಳಂಬ ಮಾಡಿದಲ್ಲಿ, ಜುಲೈ 1, 2022ರಿಂದ ಮಾರ್ಚ್ 31, 2023ರ ಮಧ್ಯೆ ಜೋಡಣೆ ಮಾಡಿದಲ್ಲಿ ಅದಕ್ಕಾಗಿ ವಿಳಂಬ ಶುಲ್ಕ 1000 ರೂಪಾಯಿ ಪಾವತಿಸಬೇಕು.

ಈ ಅವಧಿಯನ್ನು ಮತ್ತೆ ವಿಸ್ತರಿಸದಿದ್ದರೆ ನಾಳೆಯಿಂದ ಆಧಾರ್ ಜೊತೆ ಲಿಂಕ್ ಮಾಡದ ಪ್ಯಾನ್‌ ಕಾರ್ಡ್‌ ನಿಷ್ಕ್ರಿಯಗೊಳ್ಳುತ್ತದೆ. ಇದರಿಂದ ಬ್ಯಾಂಕ್ ಸೇರಿದಂತೆ ಯಾವುದೇ ಹಣಕಾಸಿನ ವಹಿವಾಟುಗಳಲ್ಲಿ ಪ್ಯಾನ್ ಕಾರ್ಡನ್ನು ಬಳಸಲು ಸಾಧ್ಯವಾಗುವುದಿಲ್ಲ.

ತೆರಿಗೆದಾರರು ನಾಳೆಯಿಂದ 3 ತಿಂಗಳವರೆಗೆ 500 ರೂಪಾಯಿ ಶುಲ್ಕ ವಿಧಿಸಬೇಕಾಗುತ್ತದೆ.

ಅದರ ಬಳಿಕ 1000 ರೂಪಾಯಿ ಪಾವತಿಸಬೇಕಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಸಮೀಕ್ಷೆಯ ಪ್ರಕಾರ ಜನವರಿ 24ರ ವೇಳೆಗೆ 43.34 ಕೋಟಿಗೂ ಅಧಿಕ ಪ್ಯಾನ್ ಕಾರ್ಡ್‌ಗಳು ಆಧಾರ್ ಜೊತೆ ಲಿಂಕ್ ಆಗಿವೆ.

ಇದುವರೆಗೆ 131 ಕೋಟಿಗೂ ಹೆಚ್ಚು ಆಧಾರ್ ಕಾರ್ಡ್‌ಗಳು ವಿತರಣೆಯಾಗಿವೆ. ಲಿಂಕ್ ಮಾಡುವುದರಿಂದ ನಕಲಿ ಪ್ಯಾನ್‌ಗಳು ನಿರ್ಮೂಲನೆ ಆಗಲಿವೆ. ತೆರಿಗೆ ವಂಚನೆ ತಡೆಗೆ ಸಹಕಾರಿಯಾಗಲಿದೆ.

DAKSHINA KANNADA

ಪ್ರಜ್ವಲ್‌ ಅಶ್ಲೀಲ್ ವಿಡಿಯೋ ಡಿಲೀಟ್ ಮಾಡಿ..! ಎಸ್‌ಐಟಿ ವಾರ್ನಿಂಗ್..!

Published

on

ಮಂಗಳೂರು : ಸದ್ಯ ಸಂಸದ ಪ್ರಜ್ವಲ್ ರೇವಣ್ಣ ವೀಡಿಯೋ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಪ್ರಕರಣ ಬೆಂಬತ್ತಿರುವ ಎಸ್ ಐ ಟಿ ಖಡಕ್ ವಾರ್ನ್ ಮಾಡಿದೆ. ಅಶ್ಲೀಲ ವಿಡಿಯೋಗಳನ್ನು ಶೇರ್ ಮಾಡದಂತೆ ಹೇಳಿದೆ. ಅಷ್ಟೇ ಅಲ್ಲದೆ, ಅಶ್ಲೀಲ ವಿಡಿಯೋ ಮೊಬೈಲ್ ನಲ್ಲಿ ಸ್ಟೋರ್ ಮಾಡಿಕೊಂಡಿದ್ದರೆ, ಒಂದು ವೇಳೆ ಡಿಲೀಟ್‌ ಮಾಡದೇ ಇದ್ದರೆ ಕಾನೂನು ಕ್ರಮಗಳನ್ನು ಎದುರಿಸಬೇಕಾದೀತು ಎಂದು ಎಸ್ಐಟಿ ಮುಖ್ಯಸ್ಥ ಬಿ.ಕೆ. ಸಿಂಗ್ ಮಾಧ್ಯಮ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೇ, ಯಾವುದೇ ಅಶ್ಲೀಲ ವೀಡಿಯೋ ಹಾಗೂ ಧ್ವನಿ ಮುದ್ರಣವನ್ನು ಇಟ್ಟುಕೊಂಡಿದ್ದರೆ ಅದು ಅಪರಾಧವಾಗುವುದರಿಂದ ಜನರು ತಮ್ಮ ಮೊಬೈಲ್‌ ಅಥವಾ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಇಟ್ಟುಕೊಳ್ಳಬಾರದು. ಒಂದು ವೇಳೆ ಇಟ್ಟುಕೊಂಡಿದ್ದರೆ ಕೂಡಲೇ ಡಿಲೀಟ್‌ ಮಾಡಿಬಿಡಿ. ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ಇದ್ದರೆ ಅದರ ರಚನಕಾರರು ನೀವು ಎಂದು ಪರಿಗಣಿಸಿ ಕ್ರಿಮಿನಲ್ ಕೇಸ್ ಬೀಳುತ್ತದೆ. ಆದ್ದರಿಂದ, ಡಿಲೀಟ್ ಮಾಡುವುದರಿಂದ ಕಾನೂನು ಕ್ರಮಗಳಿಂದ ಪಾರಾಗುವ ಸಾಧ್ಯತೆ ಇರುತ್ತದೆ ಎಂದು ಬಿ.ಕೆ. ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

BANTWAL

ಸಾಲದ ಶೂಲಕ್ಕೆ ಜೀವಾಂತ್ಯಗೊಳಿಸಿದ ಯುವಕ…!

Published

on

ಮಂಗಳೂರು : ತಾನು ತಂಗಿದ್ದ ಲಾಡ್ಜ್ ನಲ್ಲಿಯೇ ಅವಿವಾಹಿತ ಯುವಕನೋರ್ವ ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡ ‌ಘಟನೆ ಬಿಸಿರೋಡಿನಲ್ಲಿ ನಡೆದಿದೆ.

ಮಂಗಳೂರು ಅತ್ತಾವರ ನಿವಾಸಿ ಪ್ರಜ್ವಲ್ ( 30) ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡ ಯುವಕ. ಮೇ. 5 ರಂದು ಬಿಸಿರೋಡಿನ ಖಾಸಗಿ ಬಸ್ ನಿಲ್ದಾಣದ ಹತ್ತಿರವಿರುವ ಹೋಟೆಲೊಂದರಲ್ಲಿ ರೂಂ ಮಾಡಿದ್ದ. ಈತ ಮೇ.6 ರಂದು ರಾತ್ರಿ ಊಟ ಮುಗಿಸಿ, ಬಾಗಿಲು ಹಾಕಿಕೊಂಡಿದ್ದ. ಮಂಗಖವಾರ ಬೆಳಿಗ್ಗೆ ರೂಂನ ಬಾಗಿಲು ತೆರೆಯದ ಇದ್ದ ಕಾರಣ ಹೋಟೆಲ್ ಸಿಬ್ಬಂದಿ ಕರೆದರೂ ಸ್ಪಂದಿಸಿರಲಿಲ್ಲ. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಿ ಬಾಗಿಲು ತೆರೆದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪ್ರಜ್ವಲ್ ಮೃ*ತದೇಹದ ಪತ್ತೆಯಾಗಿದೆ.


ಓನ್ ಲೈನ್ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಪ್ರಜ್ವಲ್ ಇತ್ತೀಚಿನ ದಿನಗಳಲ್ಲಿ ಮಾನಸಿಕವಾಗಿ ತೀವ್ರವಾಗಿ ನೊಂದಿದ್ದ ಎನ್ನಲಾಗಿದೆ. ತಾನು ಕೆಲಸ ಮಾಡಿಕೊಂಡಿದ್ದ ಕಂಪೆನಿಯ ಮಾಲಕರಿಂದ 60 ಸಾವಿರ ಸಾಲ ಪಡೆದು ಬಳಿಕ ಹಣ ಹೊಂದಿಸಲಾಗದೆ, ಸರಿಯಾದ ಸಮಯಕ್ಕೆ ಹಿಂದುರುಗಿಸಲಾಗಿಲ್ಲ ಎಂಬ ಕಾರಣಕ್ಕೆ ಕೊರುಗುತ್ತಿದ್ದ ಎಂದು ಹೇಳಲಾಗಿದೆ. ಸಾಲದ ವಿಚಾರವಲ್ಲದೆ ಪ್ರೀತಿಸಿದ ಯುವತಿ ಕೈಕೊಟ್ಟಿದ್ದು, ಪ್ರೇಮ ವೈಫಲ್ಯದ ನೋವಿನಲ್ಲೂ ಇದ್ದ ಎಂದು ವರದಿಯಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

LATEST NEWS

WATCH : ಕೋಳಿಗೂ ಯುವತಿಗೂ ನಡುವೆ ಫೈಟ್; ಗೆದ್ದವರು ಯಾರು? ವೀಡಿಯೋ ವೈರಲ್

Published

on

ಮಂಗಳೂರು : ಇದೊಂತರ ಸೋಶಿಯಲ್ ಮೀಡಿಯಾ ಯುಗ. ಇಲ್ಲಿ ಎಲ್ಲವೂ ವೈರಲ್ ವೈರಲ್. ದಿನನಿತ್ಯ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋಗಳು ಸದ್ದು ಮಾಡುತ್ತಲೇ ಇರುತ್ತವೆ. ಮನುಷ್ಯರದ್ದೇ ಆಗಿರಲಿ, ಪ್ರಾಣಿ, ಪಕ್ಷಿಗಳದೇ ಆಗಿರಲಿ ಇಲ್ಲಿ ಸುದ್ದಿ ಆಗುತ್ತಲೇ ಇರುತ್ತದೆ. ಸದ್ಯ ಅಂತಹುದೇ ವೀಡಿಯೋವೊಂದು ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಕೋಳಿ ಹಾಗೂ ಯುವತಿಯ ನಡುವೆ ಫೈಟ್ ನಡೆದಿದೆ.


ವೀಡಿಯೋದಲ್ಲಿ ಏನಿದೆ?

ವೀಡಿಯೋ ಆರಂಭದಲ್ಲಿ ಯುವತಿಯೊಬ್ಬಳು ತನ್ನಷ್ಟಕ್ಕೆ ಬರುತ್ತಿರುವುದನ್ನು ಕಾಣಬಹುದು. ಈ ವೇಳೆ, ಪಕ್ಕದಲ್ಲಿದ್ದ ಕೋಳಿ ಸುಖಾಸುಮ್ಮನೆ ಆಕೆಯ ಕಾಲಿಗೆ ಬಂದು ಕುಕ್ಕುತ್ತದೆ. ಇದರಿಂದ ಕೋಪಗೊಂಡ ಯುವತಿ ಆ ಕೋಳಿಗೆ ಒದೆಯುತ್ತಾಳೆ. ಅದು ಮತ್ತೆ ಅಟ್ಯಾಕ್ ಮಾಡಲು ಬಂದಾಗ, ಕೈಯಿಂದ ಚೆನ್ನಾಗಿ ಬಾರಿಸುತ್ತಾಳೆ. ಆದರೆ, ಆ ಕೋಳಿ ಹೆದರಿ ಓಡುವುದಿಲ್ಲ. ಬದಲಿಗೆ ಅದು ಮತ್ತೆ ದಾಳಿ ನಡೆಸುತ್ತದೆ.

ಆಗ ಕೋಪದಲ್ಲಿ ಯುವತಿ ಅದಕ್ಕೆ ಒಂದೇಟು ಬಾರಿಸುತ್ತಾಳೆ. ಅವಳಿಗೆ ಇದರಿಂದ ಸಿಟ್ಟು ಬರುತ್ತದೆ. ಅದನ್ನು ಎತ್ತಿ ನೆಲಕ್ಕೆ ಕುಕ್ಕುತ್ತಾಳೆ. ಅಯ್ಯೋ ಓಡೋಗ್ಹೋಣ ಅಂತ ಯೋಚಿಸದ ಕೋಳಿ ಮತ್ತೆ ಅಟ್ಯಾಕ್ ಗೆ ಬರುತ್ತದೆ. ಆಗ ಆಕೆ ತಿರುಗಿಸಿ ತಿರುಗಿಸಿ ಎಸೆಯುತ್ತಾಳೆ. ಆದರೆ, ಅದು ಮತ್ತೆ ಎದ್ದು ಬರುತ್ತೆ. ಆಕೆ ಅಲ್ಲೇ ಸಿಕ್ಕಿದ ವಸ್ತುವಿನಿಂದ ಹೊಡೆಯುತ್ತಾಳೆ.

ಇದನ್ನೂ ಓದಿ : ತಾಯಿಯನ್ನು ಕೊಂ*ದ ಮಗನಿಗೆ ವಿಶಿಷ್ಟ ಶಿಕ್ಷೆ; ಅಪರೂಪದ ಆದೇಶ ನೀಡಿದ ಹೈಕೋರ್ಟ್

ಸದ್ಯ ಈ ವೀಡಿಯೋ ವೈರಲ್ ಆಗುತ್ತಿದೆ. ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದಿದೆ. ವೀಡಿಯೋ ನೋಡಿದವರು ಕಮೆಂಟ್ಸ್ ಮಾಡುತ್ತಿದ್ದು, ಚಿಕನ್ ವರ್ಸಸ್ ಚಿಕ್ ಎಂದು ಕಮೆಂಟ್ಸ್ ಮಾಡಿದ್ದಾರೆ. ಸೋಲೊಪ್ಪಿಕೊಳ್ಳಬೇಡ ಕೋಳಿ, ನೀನು ಆಕೆಯನ್ನು ಸೋಲಿಸಬಲ್ಲೆ, ಎಂತಹ ಫೈಟ್ ಇದು, ಚಿಕನ್ ಟಕ್ಕರ್ ಎಂದು ಕಮೆಂಟ್ಸ್ ಮಾಡುತ್ತಿದ್ದಾರೆ.

 

 

Continue Reading

LATEST NEWS

Trending