Connect with us

    LATEST NEWS

    ಗುದದ್ವಾರದಲ್ಲಿ ದುಬೈನಿಂದ-ಮಂಗಳೂರಿಗೆ ಅಕ್ರಮ ಚಿನ್ನ ಸಾಗಾಟ

    Published

    on

    ಮಂಗಳೂರು: ದುಬೈನಿಂದ ಮಂಗಳೂರಿನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಓರ್ವನನ್ನು ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


    ಬಂಧಿತ ಆರೋಪಿ ಕಾಸರಗೋಡು ಮೂಲದವನೆಂದು ತಿಳಿದುಬಂದಿದ್ದು, ಈತನ ಬಳಿಯಿದ್ದ 24 ಕ್ಯಾರೆಟ್‌ನ 60.24 ಲಕ್ಷ‌ ರೂ. ಮೌಲ್ಯದ ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
    ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು

    ಇಂಡಿಗೋ ವಿಮಾನದ ಮೂಲಕ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಆರೋಪಿಯನ್ನು ತಪಾಸಣೆಗೆ ಒಳಪಡಿಸಿದಾಗ ಆತನ ಗುದದ್ವಾರದಲ್ಲಿ 4 ಅಂಡಾಕಾರದಲ್ಲಿ ಪ್ಯಾಕೆಟ್‌ಗಳಲ್ಲಿ ತುಂಬಿಸಿ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.

    LATEST NEWS

    WATCH : UDUPI : ಮನೆಯಂಗಳದಲ್ಲಿ ಚಿರತೆ ಪ್ರತ್ಯಕ್ಷ; ರಾತ್ರಿ ಇಡೀ ಕಣ್ಮರೆಯಾಗಿದ್ದ ಸಾಕು ನಾಯಿ ಬದುಕುಳಿದಿದ್ದು ಹೇಗೆ?

    Published

    on

    ಉಡುಪಿ : ಮನೆಯೊಂದರ ಅಂಗಳದಲ್ಲಿ ಚಿರತೆಯೊಂದು ಕಾಣಿಸಿಕೊಂಡ ಘಟನೆ ಉಡುಪಿ ಪೆರಂಪಳ್ಳಿಯಲ್ಲಿ ಶುಕ್ರವಾರ(ಜು.27) ತಡರಾತ್ರಿ ನಡೆದಿದೆ. ಚಿರತೆ ಓಡಾಟದ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮನೆಯಂಗಳದಲ್ಲಿ ಮಲಗಿದ್ದ ನಾಯಿಯ ಬೇಟೆಗಾಗಿ ಚಿರತೆ ಬಂದಿದ್ದು, ನಾಯಿಯನ್ನು‌ ಅಟ್ಟಿಸಿಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.


    ನಾಯಿ ಬೊಗಳಿದರೂ ಮನೆಯವರು ಹೊರಬಂದಿಲ್ಲ. ಕೆಲವು ದಿನಗಳಿಂದ ಮಣಿಪಾಲ ಆಸುಪಾಸಿನಲ್ಲಿ ಚಿರತೆ ಓಡಾಟದ ಮಾಹಿತಿ ತಿಳಿದಿದ್ದ ಮನೆಯವರು ಸುಮ್ಮನಿದ್ದರು ಎನ್ನಲಾಗಿದೆ. ಸ್ವಲ್ಪ ಹೊತ್ತಿನಲ್ಲಿ ನಾಯಿಯ ಶಬ್ದ ಕೂಡ ಕೇಳಿರಲಿಲ್ಲ. ಬೆಳಿಗ್ಗೆ ಮನೆಯ ಸಿಸಿಟಿವಿ ದ್ರಶ್ಯಾವಳಿ ಗಮನಿಸಿದಾಗ ಚಿರತೆ ನಾಯಿಯ ಹಿಂದೆ ಹೋಗುತ್ತಿರುವ ದೃಶ್ಯ ಕಂಡು ಭಯಭೀತರಾಗಿದ್ದಾರೆ.

    ಇದನ್ನೂ ಓದಿ : ಮೊಬೈಲ್ ಚಾರ್ಜ್ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಬಾಲಕಿ ಸಾ*ವು
    ಆದರೆ ಅಚ್ಚರಿ ಎಂಬಂತೆ ರಾತ್ರಿ ಇಡೀ ಕಣ್ಮರೆಯಾಗಿದ್ದ ಸಾಕು ನಾಯಿ ಬೆಳಿಗ್ಗೆ ಪ್ರತ್ಯಕ್ಷವಾಗಿದೆ. ಚಿರತೆಯ ಬಾಯಿಯಿಂದ ತಪ್ಪಿಸಿಕೊಂಡು ಪ್ರಾ*ಣ ಉಳಿಸಿಕೊಂಡಿದೆ. ಈ ಘಟನೆ ಮಣಿಪಾಲ, ಪೆರಂಪಳ್ಳಿ ಭಾಗದಲ್ಲಿ ಆತಂಕ ಸೃಷ್ಟಿಸಿದೆ. ಕೂಡಲೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು, ಚಿರತೆಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.

    Continue Reading

    DAKSHINA KANNADA

    ಮೊಬೈಲ್ ಚಾರ್ಜ್ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಬಾಲಕಿ ಸಾ*ವು

    Published

    on

    ತೆಲಂಗಾಣ: ಮೊಬೈಲ್ ಚಾರ್ಜ್ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಬಾಲಕಿ ಸಾ*ವನ್ನಪ್ಪಿರುವ ಘಟನೆ ತೆಲಂಗಾಣದ ಖಮ್ಮಂ ಜಿಲ್ಲೆಯ ಚಿಂತಕಣಿಲ್ಲಿ ಶುಕ್ರವಾರ ನಡೆದಿದೆ.

    ಅಂಜಲಿ ಕಾರ್ತಿಕಾ (9) ಮೃ*ತ ಬಾಲಕಿ. ಮೊಬೈಲ್​​​ನಲ್ಲಿ ಆಟವಾಡುತ್ತಿರುವ ವೇಳೆ ಚಾರ್ಜ್ ಖಾಲಿಯಾಗಿದ್ದು, ಅಂಜಲಿ ಮೊಬೈಲ್ ಚಾರ್ಜ್ ಮಾಡಲು ಹೋಗಿದ್ದಾಳೆ. ಈ ವೇಳೆ ವಿದ್ಯುತ್ ಸ್ಪರ್ಶಿಸಿದ್ದು, ಬಾಲಕಿ ಕುಸಿದು ಬಿದ್ದಿದ್ದಾಳೆ.

    ಕುಸಿದು ಬಿದ್ದು ಒದ್ದಾಡುತ್ತಿರುವ ಬಾಲಕಿಯನ್ನು ಗಮನಿಸಿದ ಆಕೆಯ ಪೋಷಕರು ತಕ್ಷಣ ಗ್ರಾಮದ ಖಾಸಗಿ ವೈದ್ಯರ ಬಳಿ ಕರೆದೊಯ್ದಿದ್ದಾರೆ. ಆದರೆ ಬಾಲಕಿ ಅದಾಗಲೇ ಮೃ*ತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

    ಬಾಲಕಿ ಆಟವಾಡುತ್ತಿದ್ದಂತೆ ಒದ್ದೆ ಕೈಯಲ್ಲಿ ಹೋಗಿ ವಿದ್ಯುತ್ ಸ್ಪರ್ಶಿಸಿರುವುದೇ ಸಾವಿಗೆ ಕಾರಣ ಎಂದು ತಿಳಿದುಬಂದಿದೆ. ಕೆಲ ಹೊತ್ತಿನ ಹಿಂದೆ ಮನೆಯಲ್ಲಿ ಕುಣಿದು ಕುಪ್ಪಳಿಸುತ್ತಾ ಆಟವಾಡುತ್ತಿದ್ದ ಬಾಲಕಿ ಏಕಾಏಕಿ ಪ್ರಾ*ಣ ಕಳೆದುಕೊಂಡಿರುವುದನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

    ಮೃ*ತ ಬಾಲಕಿ ಅಂಜಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿ ವಿದ್ಯಾರ್ಥಿನಿ. ತಂದೆ ರಾಮಕೃಷ್ಣ ದೂರಿನ ಮೇರೆಗೆ ಎಸ್‌ಎಸ್‌ಐ ನಾಗುಲ್ಮೀರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Continue Reading

    DAKSHINA KANNADA

    ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ

    Published

    on

    ಚಾರ್ಮಾಡಿ: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿದು ಟ್ರಾಫಿಕ್ ಜಾಮ್ ಆದ ಘಟನೆ ನಿನ್ನೆ ತಡರಾತ್ರಿ ಸಂಭವಿಸಿದೆ.

    ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯ ಚಾರ್ಮಾಡಿಘಾಟ್‌ನ 10ನೇ ತಿರುವಿನಲ್ಲಿ ಗುಡ್ಡ ಕುಸಿದಿದ್ದು ಚಾರ್ಮಾಡಿ ಘಾಟ್​ನಿಂದ ಕೊಟ್ಟಿಗೆಹಾರದವರೆಗೂ ವಾಹನಗಳು ನಿಂತಲ್ಲೇ ನಿಂತಿದ್ದವು. ಬಳಿಕ ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯಾಚರಣೆ ನಡೆಸಲಾಯ್ತು.

    ಅತ್ತ ಮಂಗಳೂರಿಗೆ ತೆರಳುವವರನ್ನು ಪೊಲೀಸರು ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲೇ ವಾಹನಗಳನ್ನು ತಡೆದು ವಾಪಸ್ ಕಳಿಸಿದ್ದಾರೆ. ಅತ್ತ ಉಜಿರೆ ಬಳಿಯೂ ಚಾರ್ಮಾಡಿ ಘಾಟ್ ಪ್ರವೇಶ ನಿರ್ಬಂಧಿಸಲಾಗಿತ್ತು.

    Continue Reading

    LATEST NEWS

    Trending