ಬಂಟ್ವಾಳ: ವಿವಾಹಿತ ಮಹಿಳೆಯೊಬ್ಬಳ ಮೇಲೆ ನಡುರಸ್ತೆಯಲ್ಲೇ ಆಟೋ ಚಾಲಕನೊಬ್ಬ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ಮಹಿಳೆ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಮಹಿಳೆಯ ಸ್ಕೂಟಿ
ಬಂಟ್ವಾಳ ತಾಲೂಕಿನ ಪುತ್ತೂರು-ಮಂಗಳೂರು ರಸ್ತೆಯ ಮಾಣಿಯ ನೇರಳಕಟ್ಟೆಯ ಜನಪ್ರಿಯ ಹೋಟೇಲ್ ಬಳಿ ಇಂದು ಸಂಜೆ ಶಕುಂತಾಳ ಪರಿಚಯಸ್ಥ ಆಟೋರಿಕ್ಷಾದವನ ಜೊತೆ ತನ್ನ ಸ್ಕೂಟಿ ನಿಲ್ಲಿಸಿ ಮಾತನಾಡುತ್ತಿದ್ದಳು.
ಈ ವೇಳೆ ಯಾವುದೋ ವಿಚಾರಕ್ಕೆ ಜಗಳ ನಡೆದು ಗಲಾಟೆ ತಾರಕಕ್ಕೇರಿ ಆಟೋ ಚಾಲಕ ಈಕೆಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ರಿಕ್ಷಾದೊಂದಿಗೆ ಪರಾರಿಯಾಗಿದ್ದಾನೆ.
ತಕ್ಷಣವೇ ಆಕೆಯನ್ನು ಸ್ಥಳೀಯರು ಆಸ್ಪತ್ರೆಗೆ ಕೊಂಡೊಯ್ದುರೂ ದಾರಿ ಮಧ್ಯೆ ತೀವ್ರ ರಕ್ತಸ್ರಾವದಿಂದ ಆಕೆ ಮೃತಪಟ್ಟಿದ್ದಾಳೆ. ಸದ್ಯ ಆಟೋ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಶಕುಂತಳಾ ತನ್ನ ಗಂಡನೊಂದಿಗೆ ಪುತ್ತೂರಿನಲ್ಲಿ ಕ್ಯಾಂಟಿನ್ ನಡೆಸುತ್ತಿದ್ದಾಳೆ ಎಂದು ತಿಳಿದು ಬಂದಿದೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ.