Connect with us

    LATEST NEWS

    ಗರ್ಲ್ಸ್… ನಿಮ್ಮ ಕೃತಕ ಆಭರಣ ಕಪ್ಪಾಗೋದು ಯಾಕೆ ಗೊತ್ತಾ ??

    Published

    on

    ಹುಡುಗಿಯರು ನೈಜ್ಯ ಆಭರಗಿಂತಲೂ ಕೃತಕ ಆಭರಣಗಳನ್ನು ಧರಿಸಲು ಇಷ್ಟಪಡುತ್ತಾರೆ. ಆದರೆ ದೀರ್ಘಕಾಲದವರೆಗೆ ಕೃತಕ ಆಭರಣಗಳನ್ನು ಧರಿಸುವುದರಿಂದ ಅದರ ಬಣ್ಣವು ಕಪ್ಪಾಗುತ್ತದೆ. ಕೃತಕ ಆಭರಣಗಳು ಕಪ್ಪು ಬಣ್ಣಕ್ಕೆ ತಿರುಗಿದ್ದರೆ ಅದನ್ನು ಮತ್ತೆ ಹೊಸದಾಗಿ ಪರಿವರ್ತಿಸಲು ಕೆಲವು ಸುಲಭ ಉಪಾಯಗಳನ್ನು ಒಂದೊಂದಾಗಿ ನೋಡೋಣ.

    1. ಅಡಿಗೆ ಸೋಡಾ ಮತ್ತು ನೀರು

    ಕೃತಕ ಆಭರಣಗಳನ್ನು ಹೊಸದಾಗಿ ಕಾಣುವಂತೆ ಮಾಡಲು ಅಡಿಗೆ ಸೋಡಾ ಮತ್ತು ನೀರನ್ನು ಬಳಸಬಹುದು. ಒಂದು ಸಣ್ಣ ಬಟ್ಟಲಿನಲ್ಲಿ ಅಡಿಗೆ ಸೋಡಾವನ್ನು ತೆಗೆದುಕೊಂಡು, ಅದಕ್ಕೆ ಸ್ವಲ್ಪ ನೀರು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಬೇಕು. ಹಳೆಯ ಟೂತ್ ಬ್ರಷ್ ಅಥವಾ ಮೃದುವಾದ ಬಟ್ಟೆಯ ಸಹಾಯದಿಂದ, ಈ ಪೇಸ್ಟ್ ಅನ್ನು ಹಾಕಿ ಆಭರಣದ ಮೇಲೆ ನಿಧಾನವಾಗಿ ಉಜ್ಜಿಕೊಂಡು ಸ್ವಲ್ಪ ಸಮಯದ ನಂತರ ಆಭರಣವನ್ನು ಶುದ್ಧ ನೀರಿನಿಂದ ತೊಳೆಯಬೇಕು. ಬಳಕ ವ್ಯತ್ಯಾಸವನ್ನು ಕಾಣಬಹುದು.

    2. ವಿನೆಗರ್ ಮತ್ತು ನೀರು

    ವಿನೆಗರ್ ಮತ್ತು ನೀರನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ಪೇಸ್ಟ್ ತಯಾರಿಸಬೇಕು. ಈ ಪೇಸ್ಟ್ ಅನ್ನು ಹಳೆಯ ಟೂತ್ ಬ್ರಷ್ ಮೇಲೆ ಹಚ್ಚಿ 5 ರಿಂದ 10 ನಿಮಿಷಗಳ ಕಾಲ ಉಜ್ಜಬೇಕು. ಇದರ ನಂತರ ಅದನ್ನು ಶುದ್ಧ ನೀರಿನಿಂದ ತೊಳೆಯಬೇಕು. ನೀರಿನಿಂದ ತೊಳೆದ ನಂತರ, ಶುದ್ಧವಾದ ಬಟ್ಟೆಯ ಸಹಾಯದಿಂದ ಆಭರಣವನ್ನು ಒರೆಸಿ. ಸರಿಯಾಗಿ ಸ್ವಚ್ಛಗೊಳಿಸಿದ ನಂತರ ವ್ಯತ್ಯಾಸವನ್ನು ಗಮನಿಸಬಹುದು.

    3. ಹಳೆಯ ಹಳೆಯ ಟೂತ್ ಬ್ರಶ್‌ ಮತ್ತು ಟೂತ್‌ಪೇಸ್ಟ್

    ಟೂತ್ ಬ್ರಶ್‌ಗೆ ಸ್ವಲ್ಪ ಟೂತ್‌ಪೇಸ್ಟ್ ಹಚ್ಚಿ ಮತ್ತು ಅದನ್ನು ಆಭರಣದ ಮೇಲೆ ನಿಧಾನವಾಗಿ ಉಜ್ಜಿಕೊಂಡು, ಸ್ವಲ್ಪ ಸಮಯದ ನಂತರ ಆಭರಣವನ್ನು ಶುದ್ಧ ನೀರಿನಿಂದ ತೊಳೆಯಬೇಕು. ಶುಭ್ರವಾದ ಬಟ್ಟೆಯನ್ನು ತೆಗೆದುಕೊಂಡು ಆಭರಣವನ್ನು ಚೆನ್ನಾಗಿ ಒರೆಸಬೇಕು.

    4. ಪಾತ್ರೆ ತೊಳೆಯುವ ದ್ರವ

    ಪಾತ್ರೆ ತೊಳೆಯುವ ದ್ರವವನ್ನು ಸಹ ಬಳಸಬಹುದು. ಮೃದುವಾದ ಬಟ್ಟೆಯನ್ನು ಪಾತ್ರೆ ತೊಳೆಯುವ ದ್ರವದಲ್ಲಿ ಅದ್ದಿ ನಂತರ ಆಭರಣಗಳ ಮೇಲೆ ಲಘುವಾಗಿ ಉಜ್ಜಬೇಕು. ಹೀಗೆ ಮಾಡುವುದರಿಂದ ಆಭರಣಗಳ ಕಪ್ಪುಕಲೆ ನಿವಾರಣೆಯಾಗಿ ಹೊಸದರಂತೆ ಆಗುತ್ತದೆ.

    ಕೃತಕ ಆಭರಣಗಳನ್ನು ಸ್ವಚ್ಛಗೊಳಿಸುವಾಗ ಕೆಲವು ವಿಷಯಗಳನ್ನು ಪ್ರಮುಖವಾಗಿ ನೆನಪಿನಲ್ಲಿಟ್ಟುಕೊಳ್ಳಬೇಕು. ಯಾವಾಗಲೂ ಒದ್ದೆಯಾದ ಬ್ರಷ್ ಬಳಸಬೇಕು, ಕಠಿಣ ರಾಸಾಯನಿಕಗಳನ್ನು ತಪ್ಪಿಸಿ, ಮೃದುವಾದ ಬಟ್ಟೆಯನ್ನು ಬಳಸಬೇಕು. ಆಭರಣಗಳನ್ನು ಅತಿಯಾಗಿ ಉಜ್ಜಬಾರದು. ಈ ಎಲ್ಲಾ ಸಲಹೆಗಳ ಸಹಾಯದಿಂದ ಕೃತಕ ಆಭರಣಗಳ ಕಪ್ಪು ಬಣ್ಣವನ್ನು ಸುಲಭವಾಗಿ ತೆಗೆದುಹಾಕಬಹುದು ಮತ್ತು ಹೊಸದನ್ನು ಮಾಡಬಹುದು

    LATEST NEWS

    ವಾಮಚಾರಕ್ಕೆ ಇಟ್ಟ ತೆಂಗಿನಕಾಯಿ ಸೇವಿಸಿದ ಕಾಲೇಜು ಉಪನ್ಯಾಸಕ ; ಮುಂದೇನಾಯ್ತು ಗೊತ್ತಾ ??

    Published

    on

    ಮಂಗಳೂರು/ರಾಯಚೂರು: ವಾಮಾಚಾರಕ್ಕೆ ಬಳಸಿದ್ದ ತೆಂಗಿನಕಾಯಿಯನ್ನು ಉಪನ್ಯಾಸಕರೊಬ್ಬರು ತಿಂದ ಘಟನೆ ರಾಯಚೂರು ಪಟ್ಟಣದ ಮುದಗಲ್ಲ ರಸ್ತೆಯಲ್ಲಿನ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.
    ವಾಮಾಚಾರಕ್ಕೆ ಬಳಸುವ ವಸ್ತುಗಳನ್ನು ನೋಡಿ ಭಯಪಡುವ ಈ ಕಾಲದಲ್ಲಿ ಉಪನ್ಯಾಸಕರೊಬ್ಬರು ಅದನ್ನು ತಿಂದು ಬಳಿಕ ಮೌಢ್ಯತೆ ಬಗೆಗೆ ಜಾಗೃತಿ ಮೂಡಿಸಿದರು.


    ಅಶೋಕ ಸರಕಾರಿ ಕಾಲೇಜಿನ ಗೇಟಿಯಲ್ಲಿ ಯಾರೋ ತೆಂಗಿನಕಾಯಿ, ನಿಂಬೆ ಹಣ್ಣು, ಕುಂಕುಮವನ್ನಿಟ್ಟು ಹೋಗಿದ್ದರು. ಕಾಲೇಜಿನ ಸಮಯದಲ್ಲಿ ಅಲ್ಲಿಗೆ ಬಂದ ಉಪನ್ಯಾಸಕರು ಅದನ್ನು ನೋಡಿ ನಿಂಬೆಹಣ್ಣು ಕತ್ತರಿಸಿದ್ದು, ಅದರ ರಸ ಸವಿದರು. ತೆಂಗಿನಕಾಯಿ ಹೊಡೆದು ಎಲ್ಲಾ ಉಪನ್ಯಾಸಕ ಹಾಗೂ ಪ್ರಾಂಶುಪಾಲರು ತಿಂದು ಮೌಢ್ಯತೆಯ ಕುರಿತು ಜನರಲ್ಲಿ ಜಾಗೃತಿಯನ್ನು ಮೂಡಿಸಿದ್ದಾರೆ.

     

    ಇದನ್ನೂ ಓದಿ : ಬಸ್ ಹತ್ತುವಾಗ ಕಾಲು ಜಾರಿ ಬಿದ್ದು ವಿದ್ಯಾರ್ಥಿ ಸ್ಥಳದಲ್ಲೇ ಸಾ*ವು!

     

    ಇಂತಹ ಪ್ರಕರಣಗಳು ಮುದಗಪ್ಪ ರಸ್ತೆಗಳಲ್ಲಿ ಹೆಚ್ಚಾಗಿದೆ. ಮುಂಜಾನೆ ವಾಯುವಿಹಾರಕ್ಕೆಂದು ತೆರಳುವ ಜನರು ಯುವಕರು ಇಂತಹ ವಾಮಾಚಾರ ಪರಿಕರಗಳು ಎಲ್ಲೆಡೆ ಬಿದ್ದಿರುವುದನ್ನು ನೋಡಿ ಭಯಗೊಳ್ಳುತ್ತಾರೆ. ಇಂತಹ ಕೃತ್ಯ ದಿನೇ ದಿನೇ ಹೆಚ್ಚುತ್ತಿದೆ.
    ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Continue Reading

    LATEST NEWS

    ಸಹೋದರನ ಜೊತೆಯಲ್ಲೇ ಸಂಬಂ*ಧ …! ಜೀ*ವಾಂತ್ಯಗೊಳಿಸಿದ ಪತಿ..!

    Published

    on

    ಮಂಗಳೂರು/ ಅಹಮದಾಬಾದ್‌ : ತನ್ನ ಪತ್ನಿ ಆಕೆಯ ಒಡಹುಟ್ಟಿದ ಸಹೋದರನ ಜೊತೆಯಲ್ಲಿ ಇರಬಾರದ ಪರಿಸ್ಥಿತಿಯಲ್ಲಿ ಇದ್ದುದ್ದನ್ನು ಕಂಡ ಪತಿಯೊಬ್ಬ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾನೆ. ಅಹಮದಾಬಾದ್‌ನಲ್ಲಿ ಈ ಘಟನೆ ನಡೆದಿದ್ದು, ಈ ಘಟನೆ ಇಡೀ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ.

    ಅಹಮದಾಬಾದ್‌ನ ಡೋಲ್ಕಾ ಎಂಬಲ್ಲಿ ಈ ಘಟನೆ ನಡೆದಿದ್ದು, 35 ವರ್ಷದ ವ್ಯಕ್ತಿ ಜೀವಾಂ*ತ್ಯ ಮಾಡಿಕೊಂಡಿದ್ದಾನೆ. ಈ ವೇಳೆ ಆತ ತನ್ನ ಕೊನೆಯ ಪತ್ರ ಬರೆದಿಟ್ಟಿದ್ದು, ಅದರಲ್ಲಿ ತನ್ನ ಪತ್ನಿಗೆ ಮತ್ತು ಆಕೆಯ ಸಹೋದರನಿಗೂ ನಡುವೆ ಇರುವ ಸಂಬಂಧ ಬಿಡಿಸಿಟ್ಟಿದ್ದಾನೆ.

    ಪತಿ – ಪತ್ನಿ ಪ್ರತ್ಯೇಕವಾಗಿ ವಾಸವಾಗಿದ್ದರೂ ಆಗಾಗ ಸಹೋದರ ಬಂದು ಹೋಗುತ್ತಿದ್ದ. ಆದ್ರೆ ,ಒಡಹುಟ್ಟಿದ ಸಹೋದರನಾಗಿರುವ ಕಾರಣ ಯಾವುದೇ ಅನುಮಾನ ಬಂದಿರಲಿಲ್ಲ. ಆದ್ರೆ, ಮೂರು ತಿಂಗಳ ಹಿಂದೆ ಅಚಾನಕ್ ಆಗಿ ಮನೆಗೆ ಬಂದಾಗ ಪತ್ನಿ ತನ್ನದೇ ಸಹೋದರನ ತೆಕ್ಕೆಯಲ್ಲಿರುವುದನ್ನು ಪತಿ ಕಣ್ಣಾರೆ ಕಂಡಿದ್ದಾನೆ.  ಈ ವೇಳೆ ಸಹೋದರನ ಜೊತೆ ಸೇರಿ ಪತ್ನಿ  ತನಗೆ ಹ*ಲ್ಲೆ ನಡೆಸಿ ಜೀ*ವ ಬೆ*ದರಿಕೆ ಹಾಕಿದ್ದಾಗಿ ಬರೆದಿದ್ದಾನೆ.

    ಇದನ್ನೂ ಓದಿ : ಪ್ರೇಯಸಿಯ ತಾಯಿಗಾಗಿ ಚಿನ್ನ ಕದ್ದಿದ್ದ  ಡ್ಯಾನ್ಸ್ ಮಾಸ್ಟರ್‌ ಅರೆಸ್ಟ್‌

    ಮೂರು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಈ ಘಟನೆಯ ಬಳಿಕವೂ ಅವರಿಬ್ಬರು ಯಾವುದೇ ಅಂಜಿಕೆ ಇಲ್ಲದೆ ತಮ್ಮ ಅ*ನೈತಿಕ ಸಂಬಂಧ ಮುಂದುವರೆಸಿದ್ದು, ಇದರಿಂದ ಬೇಸತ್ತು ಆತ್ಮಹ*ತ್ಯೆ ಮಾಡಿಕೊಂಡಿರುವುದಾಗಿ ಡೆತ್ ನೋಟ್‌ನಲ್ಲಿ ಬರೆದಿದ್ದಾನೆ. ಈ ಘಟನೆ ನಂಬಲಸಾಧ್ಯವಾಗಿದ್ದು ಒಡಹುಟ್ಟಿದವರ ಈ ಅ*ನೈತಿಕ ಸಂಬಂಧದಿಂದ ಇಡೀ ಸಮಾಜ ತಲೆತಗ್ಗಿಸುವಂತಾಗಿದೆ. ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

     

    Continue Reading

    LATEST NEWS

    ಬಂಪರ್ ಆಫರ್ ! 1444 ರೂ.ಗೆ ವಿಮಾನ ಪ್ರಯಾಣ…!

    Published

    on

    ಬಸ್ ಟಿಕೆಟ್ ದರದಲ್ಲಿ ವಿಮಾನ ಟಿಕೆಟ್ ನೀಡುವ ಬಂಪರ್ ಆಫರ್ ಅನ್ನು ಏರ್ ಇಂಡಿಯಾ ಘೋಷಿಸಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಫ್ಲಾಶ್ ಸೇಲ್ ಆರಂಭಿಸಲಾಗಿದೆ. ಈ ವಿಶೇಷ ಮಾರಾಟದ ಬುಕಿಂಗ್ ಈಗಾಗಲೇ ಪ್ರಾರಂಭವಾಗಿದೆ. ಈ ಸೇಲ್​​ ಮೂಲಕ ಟಿಕೆಟ್ ಬುಕ್ ಮಾಡುವವರಿಗೆ ರೂ.1444ಕ್ಕೆ ವಿಮಾನ ಪ್ರಯಾಣ ಮಾತ್ರವಲ್ಲ ಮುಂದಿನ ವರ್ಷ ಏಪ್ರಿಲ್‌ವರೆಗೆ ಯಾವುದೇ ಸಮಯದಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೋಸ್ ಮಾರಾಟದ ಟಿಕೆಟ್‌ಗಳ ಬುಕಿಂಗ್ ಪ್ರಕ್ರಿಯೆ ಪ್ರಾರಂಭವಾಗಿದೆ.

    ಈ ಫ್ಲ್ಯಾಶ್ ಸೇಲ್ ನಲ್ಲಿ ನವೆಂಬರ್ 13ರವರೆಗೆ ವಿಮಾನ ಟಿಕೆಟ್ ಬುಕ್ ಮಾಡಲು ಏರ್ ಇಂಡಿಯಾ ಅವಕಾಶ ಕಲ್ಪಿಸಿದೆ. ಈ ವಿಶೇಷ ಮಾರಾಟದ ಮೂಲಕ ನೀವು ಟಿಕೆಟ್‌ಗಳನ್ನು ಬುಕ್ ಮಾಡಬಹುದು ಮತ್ತು ಈ ತಿಂಗಳ 19 ರಿಂದ ಮುಂದಿನ ವರ್ಷ ಏಪ್ರಿಲ್ 30 ರವರೆಗೆ ಯಾವುದೇ ಸಮಯದಲ್ಲಿ ಪ್ರಯಾಣಿಸಬಹುದು.

    ಸಮಯವು ಆರು ತಿಂಗಳವರೆಗೆ ಇರುತ್ತದೆ. ಈ ಚಳಿಗಾಲದಲ್ಲಿ ಹಾಗೂ ಮುಂದಿನ ಬೇಸಿಗೆಯಲ್ಲಿ ಪ್ರವಾಸ ಮಾಡಲು ಬಯಸುವವರಿಗೆ ಇದು ಉತ್ತಮ ಅವಕಾಶವಾಗಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಲೈಟ್ ದರಗಳ ಭಾಗವಾಗಿ, ಎಕ್ಸ್‌ಪ್ರೆಸ್ ಲೈಟ್ ಮೂಲಕ ವಿಮಾನ ಪ್ರಯಾಣವು ವಿಶೇಷ ರಿಯಾಯಿತಿಗಳೊಂದಿಗೆ ರೂ.1444 ಆಗಿರುತ್ತದೆ. ಅಲ್ಲದೆ, ನೀವು ಕೆಲವು ಮಾರ್ಗಗಳಲ್ಲಿ ಎಕ್ಸ್‌ಪ್ರೆಸ್ ಮೌಲ್ಯದ ಕೊಡುಗೆಯ ಮೂಲಕ ರೂ.1599 ಕ್ಕೆ ಟಿಕೆಟ್‌ಗಳನ್ನು ಪಡೆಯಬಹುದು.

    airindiaexpress.com ನಲ್ಲಿ ಲಾಗ್ ಇನ್ ಮಾಡುವವರಿಗೆ ಶೂನ್ಯ ಅನುಕೂಲಕರ ಶುಲ್ಕವನ್ನು ಏರ್ ಇಂಡಿಯಾ ಘೋಷಿಸಿದೆ. ಸಾಮಾನು ಸರಂಜಾಮುಗಳಿಗೂ ವಿಶೇಷ ಶುಲ್ಕ ವಿಧಿಸಲಾಗುತ್ತದೆ. ಎಕ್ಸ್‌ಪ್ರೆಸ್ ಲೈಟ್ ದರಗಳಲ್ಲಿ 3 ಕೆಜಿಯವರೆಗಿನ ಹೆಚ್ಚುವರಿ ಲಗೇಜ್ ಭತ್ಯೆಯನ್ನು ಸಾಗಿಸಬಹುದು. 15 ಕೆಜಿಗಿಂತ ಹೆಚ್ಚು ಇದ್ದರೆ ರೂ. 1000 ಪಾವತಿಸಬೇಕು.

    Continue Reading

    LATEST NEWS

    Trending