ಡೆಹ್ರಾಡೂನ್: ಉತ್ತರಾಖಂಡದಲ್ಲಿರುವ ಪ್ರಸಿದ್ಧ ಚಾರ್ ಧಾಮ್ ಯಾತ್ರೆಗೆ ಬಂದ ಯಾತ್ರಾರ್ಥಿಗಳು ಪ್ಲಾಸ್ಟಿಕ್ ಸೇರಿದಂತೆ ಹಲವು ತ್ಯಾಜ್ಯಗಳ ರಾಶಿಯಿಂದ ತುಂಬಿಹೋಗಿದ್ದು, ಈ ಬಗ್ಗೆ ಎಎನ್‌ಐ ಟ್ವೀಟ್ ಮಾಡಿದೆ.
ಎರಡು ವರ್ಷಗಳ ಕೊರೋನಾ ವಿರಾಮದ ನಂತರ ಯಾತ್ರಾರ್ಥಿಗಳಿಗೆ ಈ ಬಾರಿ ಮತ್ತೆ ತೆರೆಯಲಾದ ಚಾರ್ ಧಾಮ್‌ಗೆ ಲಕ್ಷಾಂತರ ಭಕ್ತರು ಭೇಟಿ ನೀಡಿದ್ದರು.
ಇಲ್ಲಿಗೆ ಭೇಟಿ ನೀಡಿದ ಯಾತ್ರಿಕರು ಡೇರೆಯಲ್ಲಿ ವಾಸ್ತವ್ಯ ಹೂಡುವ ವೇಳೆ ಪ್ಲಾಸ್ಟಿಕ್ ವಸ್ತುಗಳಾದ ಬ್ಯಾಗ್, ಬಾಟಲ್ ಗಳು ಹಾಗೂ ಇತರೆ ತ್ಯಾಜ್ಯಗಳನ್ನು ಬಿಸಾಡಿದ್ದಾರೆ.
“ಕೇದಾರನಾಥದಂತಹ ಸೂಕ್ಷ್ಮ ಸ್ಥಳದಲ್ಲಿ ಪ್ಲಾಸ್ಟಿಕ್ ಕಸದ ರಾಶಿ ನಮ್ಮ ಪರಿಸರಕ್ಕೆ ಅಪಾಯಕಾರಿಯಾಗಿದೆ. ಇದು ಭೂಕುಸಿತಕ್ಕೆ ಕಾರಣವಾಗುವ ಸವೆತಕ್ಕೆ ಕಾರಣವಾಗುತ್ತದೆ.
ನಾವು 2013 ರ ದುರಂತವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಹಾಗೂ ಜಾಗರೂಕರಾಗಿರಬೇಕು’’ ಎಂದು ಗರ್ವಾಲ್ ಸೆಂಟ್ರಲ್ ಯೂನಿವರ್ಸಿಟಿಯ ಭೌಗೋಳಿಕ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಎಸ್.ನೇಗಿ ಹೇಳಿಕೆ ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.