Friday, August 12, 2022

ತನ್ನ ಬಾಯ್‌ಫ್ರೆಂಡ್‌ ಜೊತೆ ಫ್ರೆಂಡ್‌ಶಿಪ್‌ನಲ್ಲಿದ್ದುದನ್ನು ಸಹಿಸದೇ ಆಕೆಯ ಮೇಲೆ ಗ್ಯಾಂಗ್‌ ರೇಪ್‌ ಮಾಡಿಸಿದ ಯುವತಿ..!

ಹೈದರಾಬಾದ್​: ತನ್ನ ಪ್ರಿಯಕರ ಇನ್ನೊಬ್ಬಳ ಜತೆ ಫ್ರೆಂಡ್‌ಶಿಪ್‌ ಮಾಡಿದ್ದನ್ನು ಸಹಿಸದ ಯುವತಿಯೊಬ್ಬಳು ಸುಪಾರಿ ಕೊಟ್ಟು ಆಕೆಯ ಮೇಲೆ ಗ್ಯಾಂಗ್​ರೇಪ್​ ಮಾಡಿಸಿರುವ ಭಯಾನಕ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.


ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಗಾಯತ್ರಿ ಹಾಗೂ ಇತರರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಗಾಯತ್ರಿ ತನ್ನ ಗೆಳೆಯನ ಜತೆ ಲಿವ್​ ಇನ್ ರಿಲೇಷನ್‌ಶಿಪ್‌​ನಲ್ಲಿ ಇದ್ದಳು. ಗೆಳೆಯ ಯುಪಿಎಸ್​ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು, ಈ ಸಂಬಂಧ ಕೋಚಿಂಗ್​ ಸೆಂಟರ್​ಗೆ ಹೋಗುತ್ತಿದ್ದ.

ಆಗ ಅಲ್ಲಿಯೇ ಯುವತಿಯೊಬ್ಬಳು ಕೋಚಿಂಗ್​ಗೆ ಬರುತ್ತಿದ್ದಳು. ಇವರಿಬ್ಬರ ಮೇಲೆ ಗಾಯತ್ರಿಗೆ ಅನುಮಾನ ಶುರುವಾಗಿದೆ.

ತನ್ನ ಪ್ರಿಯಕರ ಆಕೆಯ ಜತೆ ಸಂಬಂಧ ಹೊಂದಿದ್ದಾನೆ ಎಂದು ಅನ್ನಿಸಿದೆ. ಅವರಿಬ್ಬರೂ ಅಭ್ಯಾಸಕ್ಕೆಂದು ಒಟ್ಟಿಗೇ ಸಿಗುತ್ತಿದ್ದುದರಿಂದ ಈಕೆಗೆ ಅವರ ಮೇಲೆ ಅನುಮಾನ ಹೆಚ್ಚಾಗಿದೆ.

ಇದಕ್ಕೆ ಪುಷ್ಟಿ ಕೊಡಲು ಎಂಬಂತೆ ಅವರಿಬ್ಬರ ನಡುವೆ ವಾಟ್ಸ್​ಆ್ಯಪ್​ನಲ್ಲಿ ನಡೆಯುತ್ತಿರುವ ಸಂಭಾಷಣೆಗಳಿಂದ ಈಕೆಗೆ ಮತ್ತಷ್ಟು ಸಂಶಯ ಶುರುವಾಗಿದೆ.

ಇದೇ ಕಾರಣಕ್ಕೆ ಮೇ.26 ರಂದು ಐವರಿಗೆ ಹಣವನ್ನು ಕೊಟ್ಟು ಆ ಯುವತಿಯನ್ನು ಅತ್ಯಾಚಾರ ಮಾಡುವಂತೆ ಹೇಳಿದ್ದಾಳೆ.

ಆ ಯುವತಿಯನ್ನು ಮನೆಗೆ ಕರೆಸಿಕೊಂಡ ಗಾಯತ್ರಿ ಆಕೆಯ ಜತೆ ಮಾತನಾಡುವಂತೆ ಮಾಡಿದ್ದಾಳೆ. ಕೊನೆಗೆ ಮನೆ ಬಾಗಿಲನ್ನು ಹಾಕಿದ್ದಾಳೆ.

ಅಲ್ಲಿ ಸುಪಾರಿ ಪಡೆದುಕೊಂಡಿದ್ದ ವಿಷ್ಣುವರ್ಧನ್, ಮನೋಜ್, ಮಸ್ತಾನ್, ಮುಜಾಹಿದ್ ಮತ್ತು ಮೌಲಾ ಅಲಿ ಆಕೆಗಾಗಿ ಕಾಯುತ್ತಿದ್ದರು. ಎಲ್ಲರೂ ಸೇರಿ ಗ್ಯಾಂಗ್​ರೇಪ್​ ಮಾಡಿದ್ದಾರೆ.

LEAVE A REPLY

Please enter your comment!
Please enter your name here

Hot Topics

ದುಬೈನಿಂದ ಬಂದಿಳಿದ ಓರ್ವನ ನಿಕ್ಕರ್‌ನಲ್ಲಿತ್ತು 43 ಲಕ್ಷದ ಚಿನ್ನ: ಮತ್ತೋರ್ವನಲ್ಲಿ 5 ಲಕ್ಷ ರೂ ಮೌಲ್ಯದ ಫಾರಿನ್‌ ಕರೆನ್ಸಿ..!

ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ ಹಾಗೂ ವಿದೇಶಿ ಕರೆನ್ಸಿ ಸಾಗಾಟ ಪ್ರಕರಣಗಳು ನಡೆದಿವೆದುಬೈಯಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಮೂಲಕ ಮಂಗಳೂರಿಗೆ ಬಂದಿಳಿದ ಕಾಸರಗೋಡಿನ ಪ್ರಯಾಣಿಕರೊಬ್ಬರು ಒಳ...

ಶರತ್ ಮಡಿವಾಳ ಹತ್ಯೆಗೆ 5 ವರ್ಷ : ಇನ್ನೂ ಸಿಕ್ಕಿಲ್ಲ ಓರ್ವ ಆರೋಪಿ- ಅರೆಸ್ಟಾದವರೆಲ್ಲರೂ ರಿಲೀಸ್..!

ವಿಶೇಷ ವರದಿಮಂಗಳೂರು: ರಾಜ್ಯದಲ್ಲೇ ಸಂಚಲನ ಮೂಡಿಸಿದ್ದ ಹಾಗೂ ರಾಜ್ಯ ರಾಜಕೀಯ ಇತಿಹಾಸದಲ್ಲಿ ಹಲವರನ್ನು ಮನೆಗೆ ಕಳುಹಿಸಿ ಮತ್ತೆ ಕೆಲವರನ್ನು ವಿಧಾನಸಭೆಯ ಮೊಗಸಾಲೆಗೆ ಕಳುಹಿಸಿದ್ದ ಬಂಟ್ವಾಳ ಶರತ್ ಮಡಿವಾಳ ಕೊಲೆ ಪ್ರಕರಣ ನಡೆದು ಐದು...

ಮಂಗಳೂರು ಪಾಲಿಕೆಯ ಸದಸ್ಯ ಎ.ಸಿ ವಿನಯ್ ರಾಜ್‌ಗೆ ಪುತ್ರ ವಿಯೋಗ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ ಹಾಗೂ ವಿಪಕ್ಷ ನಾಯಕ ಎ.ಸಿ ವಿನಯ್ ರಾಜ್ ಅವರ ಪುತ್ರ ರಾಹುಲ್ ವಿನಯರಾಜ್ ಅಲ್ಪಕಾಲದ ಅನಾರೋಗ್ಯದಿಂದ ನಿನ್ನೆ ನಿಧನರಾಗಿದ್ದಾರೆ.ಇಂದು ಸಂಜೆ ಮಂಗಳೂರಿನ ಜೆಪ್ಪುವಿನಲ್ಲಿರುವ ಸಂತ. ಆಂತೋನಿ...