ಬೆಳ್ತಂಗಡಿ: ದಿನಸಿ ಅಂಗಡಿಯಲ್ಲಿ ಅಕ್ರಮವಾಗಿ ಶೇಖರಿಸಿಟ್ಟ 14 ಕ್ವಿಂಟಾಲ್ ಗೂ ಅಧಿಕ ಅನ್ನಭಾಗ್ಯ ಪಡಿತರವನ್ನು ತಹಶೀಲ್ದಾರ್ ಸಮ್ಮುಖದಲ್ಲಿ ನಿನ್ನೆ ವಶಕ್ಕೆ ಪಡೆಯಲಾಗಿದೆ.
ದ.ಕ ಜಿಲ್ಲೆಯ ಬೆಳ್ತಂಗಡಿಯ ಗೇರುಕಟ್ಟೆ ಸಮೀಪದ ಟ್ರೇಡರ್ಸ್ ಒಂದರಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು,
ವಾಹನದಲ್ಲಿ ಸಾಗಾಟಕ್ಕೆ ಮಾಡಲು ಯತ್ನಿಸುತ್ತಿದ್ದ ವೇಳೆ ಪಡಿತರವನ್ನು ವಶಕ್ಕೆ ಪಡೆಯಲಾಗಿದೆ. ಜಪ್ತಿ ವೇಳೆ 14 ಕ್ವಿಂಟಾಲ್ ಗೂ ಅಧಿಕ ಪಡಿತರ ಕಂಡುಬಂದಿದೆ.
ಈ ಕುರಿತು ತಹಶೀಲ್ದಾರ್ ಮಹೇಶ್ ಜೆ, ಆಹಾರ ನಿರೀಕ್ಷಕರಾದ ವಿಶ್ವ, ಕಂದಾಯ ನಿರೀಕ್ಷಕ ಪಾವಡಪ್ಪ ದೊಡ್ಡಮನಿ ಸ್ಥಳದಲ್ಲಿದ್ದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಬೆಳ್ತಂಗಡಿ ಎಸ್.ಐ. ನಂದಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.