DAKSHINA KANNADA
ನಾಡಿನೆಲ್ಲೆಡೆ ಗಣೇಶ ಚತುರ್ಥಿ ಸಂಭ್ರಮ-ಪಾರ್ವತಿ ಸುತನ ಗಣೇಶನಿಗೆ ಆನೆ ಮೊಗ ಬಂದ ರೋಚಕ ಕಥೆ
ಇಂದು ನಾಡಿನೆಲ್ಲೆಡೆ ಗಣೇಶ ಚತುರ್ಥಿಯ ಸಂಭ್ರಮ ಮನೆ ಮಾಡಿದೆ.
ಮಂಗಳೂರು: ಇಂದು ನಾಡಿನೆಲ್ಲೆಡೆ ಗಣೇಶ ಚತುರ್ಥಿಯ ಸಂಭ್ರಮ ಮನೆ ಮಾಡಿದೆ.
ಈ ಹಬ್ಬವು ಭಗವಾನ್ ಶಿವ ಮತ್ತು ಪಾರ್ವತಿ ದೇವಿಯ ಮಗನಾದ ಭಾದ್ರಪದ ಮಾಸದ ಶುಕ್ಲ ಪಕ್ಷದಲ್ಲಿ ಜನಿಸಿದ ಭಗವಾನ್ ಗಣೇಶನ ಜನ್ಮ ದಿನವನ್ನಾಗಿ ಆಚರಣೆ ಮಾಡಲಾಗ್ತಾ ಇದೆ.
ಇತಿಹಾಸಕಾರರ ಪ್ರಕಾರ ಗಣೇಶನು ಪಾರ್ವತಿ ದೇವಿಯ ಸೃಷ್ಟಿ ಎಂದು ನಂಬಲಾಗಿದೆ.
ಭಗವಾನ್ ಶಿವನ ಅನುಪಸ್ಥಿತಿಯಲ್ಲಿ, ಪಾರ್ವತಿ ದೇವಿಯು ತನ್ನ ಮೈಯಲ್ಲಿದ್ದ ಶ್ರೀಗಂಧದಿಂದ ಗಣೇಶನನ್ನು ಸೃಷ್ಟಿಸುತ್ತಾಳೆ.
ಮತ್ತು ತಾನು ಸ್ನಾನಕ್ಕೆಂದು ಹೋಗುವಾಗ ಗಣೇಶನನ್ನು ಕಾವಲಿಗಾಗಿ ನಿಲ್ಲಿಸಿ ಹೋಗುತ್ತಾಳೆ.
ಆದರ್ಶ ಮಗುವಾಗಿ ಗಣೇಶನು ತನ್ನ ತಾಯಿಯ ಸೂಚನೆಗಳನ್ನು ಅನುಸರಿಸಿ ಯಾರನ್ನೂ ಮನೆಗೆ ಬಿಡಲಿಲ್ಲ.
ಶಿವನ ಅರಿವಿಲ್ಲದಿದ್ದರೂ, ಅವನು ಬರುವಾಗ ಅವನನ್ನು ಮನೆಯೊಳಗೆ ಪ್ರವೇಶಿಸದಂತೆ ತಡೆಯುತ್ತಾನೆ.
ಇದು ಇವರಿಬ್ಬರ ನಡುವೆ ಯುದ್ಧಕ್ಕೆ ಕಾರಣವಾಗುತ್ತದೆ. ಕೋಪಗೊಂಡ ಶಿವ ಅವನ ತಲೆಯನ್ನು ಕತ್ತರಿಸುತ್ತಾನೆ.
ಇದನ್ನು ತಿಳಿದ ಪಾರ್ವತಿಯು ಕ್ರುದ್ಧಳಾಗಿ ಕಾಳಿ ದೇವತೆಯ ರೂಪ ತಾಳುತ್ತಾಳೆ.
ಜಗತ್ತನ್ನು ಕೊನೆಗೊಳಿಸುವುದಾಗಿ ಹೇಳುತ್ತಾಳೆ.
ದೇವರು ಮತ್ತು ದೇವತೆಗಳು ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಲು ಕಾಳಿ ದೇವಿಯ ಕೋಪವನ್ನು ಶಾಂತಗೊಳಿಸಲು ಶಿವನನ್ನು ಪ್ರಾರ್ಥಿಸಿದರು.
ಭಗವಾನ್ ಶಿವನು ಅಂತಿಮವಾಗಿ ಒಂದು ಪರಿಹಾರವನ್ನು ಕಂಡುಹಿಡಿದನು.
ಯಾರು ಉತ್ತರ ದಿಕ್ಕಿಗೆ ತಲೆಯನ್ನಿಟ್ಟು ಮಲಗಿರುತ್ತಾರೋ ಅವರ ತಲೆಯನ್ನು ಕಡಿದು ತರುವಂತೆ ತನ್ನ ಎಲ್ಲಾ ಅನುಯಾಯಿಗಳಿಗೆ ಆದೇಶಿಸುತ್ತಾನೆ.
ಅನುಯಾಯಿಗಳು ಕೆಲ ಸಮಯಗಳವರೆಗೆ ಹುಡುಕಿದ ನಂತರ ಅವರಿಗೆ ಆನೆ ಮರಿಯು ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗಿರುವುದು ಕಾಣಿಸಿತು.
ಶಿವನ ಅನುಯಾಯಿಗಳು ಅದನ್ನು ಕತ್ತರಿಸಿ ತಂದು ಶಿವನಿಗೆ ನೀಡುತ್ತಾರೆ. ಶಿವನು ಅದನ್ನು ಗಣೇಶನ ದೇಹಕ್ಕೆ ಜೋಡಿಸಿ ಅವನನ್ನು ಜೀವಂತಗೊಳಿಸಿದ ಎಂದು ಹೇಳಲಾಗುತ್ತದೆ.
ನಂತರ ಯಾವುದೇ ಆಚರಣೆ, ಸಮಾರಂಭ ಅಥವಾ ಪೂಜೆಯ ಪ್ರಾರಂಭದ ಮೊದಲು ಪೂಜಿಸಲಾಗುತ್ತದೆ ಎಂದು ಶಿವ ವರ ನೀಡುತ್ತಾನೆ ಎನ್ನುವ ಮಾಹಿತಿ ಪುರಾಣಗಳಲ್ಲಿ ಇದೆ.
ಈ ನಿಟ್ಟಿನಲ್ಲಿ ಕೆಲವು ಭಕ್ತರು ಮನೆಯಲ್ಲಿ ಈ ಹಬ್ಬವನ್ನು ಆಚರಿಸಿದರೆ ಇನ್ನು ಕೆಲವರು ಗಣೇಶನನ್ನು ಪೂಜಿಸಲು ಪೆಂಡಲ್ಗಳಿಗೆ ಹೋಗುತ್ತಾರೆ.
ಪ್ರಸಾದಕ್ಕಾಗಿ ನಾವು ಭಗವಾನ್ ಗಣೇಶನಿಗೆ, ಅವನ ನೆಚ್ಚಿನ ಮೋದಕ, ಕಡಲೆ ಪ್ರಸಾದ, ಲಡ್ಡುಗಳನ್ನು ನೀಡುತ್ತೇವೆ.
ಭಗವಾನ್ ಗಣೇಶನನ್ನು ಎಲ್ಲಾ ದೇವರುಗಳಲ್ಲಿ ಮೊದಲು ಪೂಜಿಸಲಾಗುತ್ತದೆ.
ಪೂಜೆಯ ಸಮಯದಲ್ಲಿ, ಭಕ್ತರು ಗಣೇಶನಿಗೆ ಪ್ರಿಯವಾದ ಸಿಹಿತಿಂಡಿಗಳಲ್ಲಿ ಒಂದಾದ ಮೋದಕವನ್ನು ಅರ್ಪಿಸುತ್ತಾರೆ ಮತ್ತು ಇತರರಿಗೆ ಪ್ರಸಾದವಾಗಿ ಅದನ್ನು ಹಂಚುತ್ತಾರೆ.
DAKSHINA KANNADA
ದ.ಕ.ಜಿಲ್ಲೆಯ 9 ಗ್ರಾಮಗಳು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ
ಮಂಗಳೂರು: ದ.ಕ.ಜಿಲ್ಲೆಯ 9 ತಾಲೂಕಿನ 9 ಗ್ರಾಮಗಳು 2022-23ನೆ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಯಾಗಿದೆ.
ಅಕ್ಟೋಬರ್ 2ರ ಗಾಂಧಿಜಯಂತಿ ದಿನದಂದು ರಾಜ್ಯ ವಿಧಾನಸೌಧದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಯನ್ನು ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.
ಮಂಗಳೂರು ತಾಲೂಕಿನ ಉಳಾಯಿಬೆಟ್ಟು, ಉಳ್ಳಾಲ ತಾಲೂಕಿನ ಬೆಳ್ಮ, ಮುಲ್ಕಿ ತಾಲೂಕಿನ ಕೆಮ್ರಾಲ್, ಮೂಡುಬಿದಿರೆ ತಾಲೂಕಿನ ಪುತ್ತಿಗೆ, ಬಂಟ್ವಾಳ ತಾಲೂಕಿನ ಅಮ್ಮುಂಜೆ, ಪುತ್ತೂರು ತಾಲೂಕಿನ ಉಪ್ಪಿನಂಗಡಿ, ಕಡಬ ತಾಲೂಕಿನ ಸವಣೂರು, ಬೆಳ್ತಂಗಡಿ ತಾಲೂಕಿನ ಬಳಂಜ, ಸುಳ್ಯ ತಾಲೂಕಿನ ಮರ್ಕಂಜ ಗ್ರಾಮಗಳು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿವೆ.
DAKSHINA KANNADA
Mangaluru: ಶಿಬರೂರು ಕೊಡಮಣಿತ್ತಾಯ ದೇಗುಲದ ಶಿಲಾನ್ಯಾಸ ಕಾರ್ಯಕ್ರಮ
ಮಂಗಳೂರು: ಕಟೀಲು ಮತ್ತು ಶಿಬರೂರು ಕ್ಷೇತ್ರಕ್ಕೆ ಅವಿನಾಭಾವ ಸಂಬಂಧವಿದೆ, ಇಂತಹ ಶಿಬರೂರು ಕ್ಷೇತ್ರದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವುದು ಅಭಿನಂದನೀಯ ಎಂದು ಕಟೀಲು ದೇವಳದ ಪ್ರಧಾನ ಅರ್ಚಕ ವೆಂಕಟರಮಣ ಆಸ್ರಣ್ಣ ಹೇಳಿದರು.
ಅವರು ಶ್ರೀ ಕೊಡಮಣಿತ್ತಾಯ ಕ್ಷೇತ್ರ ಶಿಬರೂರು ಇಲ್ಲಿನ ಮೇಲಿನ ಸಾನದ ಚಾವಡಿ, ಸುತ್ತುಪೌಳಿಯ ಪುನರ್ ನಿರ್ಮಾಣ ಹಾಗೂ ಅಭಿವೃದ್ದಿ ಕಾರ್ಯಕ್ರಮಗಳ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಾಚನ ನೀಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೋಜಾಂಲ ಗುತ್ತು ಪ್ರಭಾಕರ ಶೆಟ್ಟಿ ಮಾತನಾಡಿ ಕಳೆದ 12 ವರ್ಷದ ಹಿಂದೆ ನಡೆದ ಬ್ರಹ್ಮಕಲಶೋತ್ಸವದಲ್ಲಿಯೂ ಭಕ್ತರು ಸಂಪೂರ್ಣ ಸಹಕಾರ ನೀಡಿದ್ದು, ಇದೀಗ ಜೀರ್ಣೋದ್ದಾರ ಕಾರ್ಯ ನಡೆಯುತ್ತಿದ್ದು, ಭಕ್ತರು ಸಂಪೂರ್ಣ ಸಹಕಾರ ನೀಡುತ್ತಾರೆ ಎಂದರು.
ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವೇದವ್ಯಾಸ ತಂತ್ರಿಗಳ ನೇತ್ರತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭ ಕಟೀಲು ಕಮಲಾದೇವಿ ಪ್ರಸಾದ್ ಆಸ್ರಣ್ಣ, ಹರಿನಾರಾಯಣ ಆಸ್ರಣ್ಣ, ಶ್ರೀಕರ ಆಸ್ರಣ್ಣ, ಮಾಜಿ ಶಾಸಕ ಅಭಯಚಂದ್ರ ಜೈನ್, ಧರ್ಮಧರ್ಶಿ ಹರಿಕೃಷ್ಣ ಪುನರೂರು, ಕೊಡೆತ್ತೂರು ವೇದವ್ಯಾಸ ಉಡುಪ, ಗುತ್ತಿನಾರ್ ಲಕ್ಷೀನಾರಾಯಣ ರಾವ್ ಕೈಯೂರುಗುತ್ತು ಉದ್ಯಮಿ ರಘನಾಥ ಸೋಮಯಾಜಿ, ಸೂರಿಂಜೆ ಪಂಚಾಯತ್ ಅಧ್ಯಕ್ಷೆ ಗೀತಾ ಎಸ್ ಶೆಟ್ಟಿ, ಮಾಜಿ ಸಚಿವ ನಾಗರಾಜ ಶೆಟ್ಟಿ, ಕೆ ಭುವನಾಭಿರಾಮ ಉಡುಪ, ಶಿಬರೂರುಗುತ್ತು ರಾಮಚಂದ್ರ ಶೆಟ್ಟಿ, ರಾಧಕೃಷ್ಣ ಶೆಟ್ಟಿ ಸೂರತ್, ಅಶೋಕ್ ಶೆಟ್ಟಿ ಬಜಾಲ್ ಬೀಡು, ಶಿಬರೂರುಗುತ್ತು ಕಿಶೋರ್ ಶೆಟ್ಟಿ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಪೊನ್ನಗಿರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಖೇಶ್ ಶೆಟ್ಟಿ , ಉಮೇಶ್ ಗುತ್ತಿನಾರ್ ಶಿಬರೂರು ಗುತ್ತು, ಸುಧಾಕರ ಶೇಣವ ದೇಂದೊಟ್ಟು ಗುತ್ತು, ಪಡುಮನೆ ಶಿವಾನಂದ ಶೆಟ್ಟಿ, ತುಕಾಮ ಶೆಟ್ಟಿಪರ್ಲಬೈಲ್, ಜಿತೇಂದ್ರ ಶೆಟ್ಟಿ ಕೊರ್ಯಾರಗುತ್ತು, ಸದಾಶಿವ ಶೆಟ್ಟಿ ಅಶ್ವತ್ತಡಿ ಉದ್ಯಮಿ ಕಿರಣ್ ಶೆಟ್ಟಿ, ಎಸ್ ಡಿ.ಸಿ.ಸಿ ಬ್ಯಾಂಕ್ ನಿರ್ದೆಶಕ ವಿನಯಕುಮಾರ್ ಸೂರಿಂಜೆ, ಶಿಬರೂರು ಲಕ್ಷೀಜನಾರ್ಥನ ಮಠದ ಅರ್ಚಕ ಲಕ್ಷೀನಾರಾಯಣ ಆಚಾರ್ಯ, ಕ್ಷೇತ್ರದ ಅರ್ಚಕ ಕುಟ್ಟಿಮೂಲ್ಯ, ಶಂಭು ಮುಕಾಲ್ದಿ ಅತ್ತೂರು, ಜಯರಾಮ ಮುಕಾಲ್ದಿ ಕೊಡೆತ್ತೂರು, ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು, ದೊಡ್ಡಯ್ಯ ಮೂಲ್ಯ ಕಟೀಲು, ಯಾದವ ಕೋಟ್ಯಾನ್ ಪೆರ್ಮುದೆ, ಶ್ಯಾಮಲಾ ಪಿ ಶೆಟ್ಟಿ ಶಿಬರೂರುಗುತ್ತು, ಉಷಾ ಯು ಶೆಟ್ಟಿ ಶಿಬರೂರುಗುತ್ತು, ಉದ್ಯಮಿ ನಿತ್ಯಾನಂದ ಶೆಟ್ಟಿ, ವಕೀಲರಾದ ರವಿ ಕೋಟ್ಯಾನ್, ಸಿ.ಎ ಉದಯಕುಮಾರ್ , ಸುರೇಶ್ ಶೆಟ್ಟಿ ಅಡು, ದೇವದಾಸ್ ಅಳ್ವ ಬೆಳ್ಳಿಬೆಟ್ಟುಗುತ್ತು, ಮುರ ಸದಾಶಿವ ಶೆಟ್ಟಿ, ಕಾಂತಪ್ಪ ಸಾಲಿಯಾನ್, ದಾಮೋಧರ ಶೆಟ್ಟಿ ಶಿಬರೂರುಗುತ್ತು, ಚರಣ್ ಶೆಟ್ಟಿ ಅತ್ತೂರು, ಪ್ರಸನ್ನ ಶೆಟ್ಟಿ ಅತ್ತೂರುಗುತ್ತು, ಮಾಲಾಡಿ ಅಜಿತ್ ಕುಮಾರ್ ರೈ, ಯುವಕ ಮಂಡಲದ ಅಧ್ಯಕ್ಷ ಗಿರೀಶ್ ಶೆಟ್ಟಿ ತಿಬಾರ್, ಮಹಿಳಾ ಮಂಡಳಿಯ ಅಧ್ಯಕ್ಷೆ ಸುಪ್ರಜಾ ಸುಬ್ರಹ್ಮಣ್ಯಪ್ರಸಾದ್, ಪ್ರದ್ಯುಮ್ನ ರಾವ್ ಶಿಬರೂರು , ಸುಮನ್ ಶೆಟ್ಟಿ, ಸುಧಾಕರ ಶೆಟ್ಟಿ ಶಿಬರೂರುಗುತ್ತು, ಸುಧಾಕರ ಶಿಬರೂರು, ಸುರೇಶ್ ಶೆಟ್ಟಿ ಪುಚ್ಚಾಡಿ ಸುಬ್ರಮಣ್ಯಪ್ರಸಾದ್ ಪ್ರಸ್ತಾವನೆಗೈದರು.
ಮಧುಕರ ಅಮೀನ್ ಸ್ವಾಗತಿಸಿ, ಸುರೇಂದ್ರ ಶೆಟ್ಟಿ ಧನ್ಯವಾದ ಸಮರ್ಪಿಸಿದರು.
ಸಾಯಿನಾಥ ಶೆಟ್ಟಿ, ಅನಂತ ರಾಮ ಆಚಾರ್ಯ ಮೂಡುಮನೆ ನಿರೂಪಿಸಿದರು.
DAKSHINA KANNADA
Ullala: ಬಾವಿಗೆ ಹಾರಿ ಟೆಂಪೋ ಚಾಲಕ ಜೀವಾಂತ್ಯ..!
ಉಳ್ಳಾಲ: ಟೆಂಪೋ ಚಾಲಕ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ಹೊರವಲಯದ ಉಳ್ಳಾಲದ ತೊಕ್ಕೊಟ್ಟು ಒಳಪೇಟೆಯ ಸಂತ ಸೆಬೆಸ್ತಿಯನ್ನರ ಚರ್ಚ್ ಬಳಿ ಸೆ.27ರಂದು ನಡೆದಿದೆ.
ತೊಕ್ಕೊಟ್ಟು, ಕೃಷ್ಣ ನಗರ ಲಚ್ಚಿಲ್ ನಿವಾಸಿ 62 ವರ್ಷದ ನಾಗೇಶ್ (62) ಆತ್ಮ ಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ.
ನಾಗೇಶ್ ಅವರು ಗೂಡ್ಸ್ ಆಟೋ ಟೆಂಪೊ ಚಲಾಯಿಸುತ್ತಿದ್ದರು.
ಟೆಂಪೋವನ್ನು ಒಳಪೇಟೆಯ ಚರ್ಚ್ ಮುಂಭಾಗದ ಗಣೇಶ್ ಭವನ ಹೊಟೇಲು ಮಾಲಕರ ಮನೆಯಂಗಳದಲ್ಲೇ ದಿನನಿತ್ಯವೂ ರಾತ್ರಿ ನಿಲ್ಲಿಸುತ್ತಿದ್ದರು.
ಇಂದು ಬೆಳಿಗ್ಗೆ ನಾಗೇಶ್ ಅವರು ಟೆಂಪೋ ತೆಗೆಯದೆ ನಾಪತ್ತೆಯಾಗಿದ್ದು, ಸಂಪರ್ಕಕ್ಕೆ ಸಿಕ್ಕಿರಲಿಲ್ಲ.
ಟೆಂಪೋ ಸೀಟ್ ನಲ್ಲಿ ನಾಗೇಶ್ ಅವರ ಮೊಬೈಲ್, ನಗದು, ಫೋಟೊ, ಚಪ್ಪಲಿ ದೊರಕಿದ್ದು, ಅನುಮಾನಗೊಂಡ ಮನೆ ಮಂದಿ, ಸ್ಥಳೀಯರು ಬಾವಿಯಲ್ಲಿ ಹುಡುಕಾಟ ನಡೆಸಿದ್ದಾರೆ.
ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಬಾವಿಯಲ್ಲಿ ನಾಗೇಶ್ ಅವರ ದೇಹವಿರುವುದು ಖಾತ್ರಿ ಪಡಿಸಿ ಮೃತ ದೇಹವನ್ನ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿತ್ತು.
ಮರಣೋತ್ತರ ಪರೀಕ್ಷೆಯ ಬಳಿಕ ಅವರ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಯಿತು.
ನಾಗೇಶ್ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಅವರು ತೊಕ್ಕೊಟ್ಟು ನಿತ್ಯಾನಂದ ಯುವಕ ಮಂಡಲದ ಮಾಜಿ ಅಧ್ಯಕ್ಷರಾಗಿದ್ದರು ಎಂದು ತಿಳಿದು ಬಂದಿದೆ.
ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
- DAKSHINA KANNADA7 days ago
Ullala: 25 ಕೋಟಿ ರೂ. ಲಾಟರಿ ಒಲಿದಿದೆ ಎಂಬ ಲಿಂಕ್ ಕಳುಹಿಸಿ ಮೋಜಿನಾಟ..!
- FILM6 days ago
ಕುರೂಪಿಯಾದ ಹಾಲಿವುಡ್ ನಟಿ ಆ್ಯಮಿ ಜಾಕ್ಸನ್..!
- DAKSHINA KANNADA6 days ago
ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ರಾಂಬೋ ಸರ್ಕಸ್- ಜನರನ್ನು ಬೆರಗುಗೊಳಿಸುವ ವಿಸ್ಮಯ ಪ್ರದರ್ಶನ..!
- FILM6 days ago
Film: ಹಂದಿ ಮಾಂಸ ಸೇವಿಸಿದ ಟಿಕ್ಟಾಕ್ ಸ್ಟಾರ್ಗೆ 2 ವರ್ಷ ಜೈಲು ಶಿಕ್ಷೆ..!